ಪ್ರಾರ್ಥನೆ : ದೇವರನ್ನು ಪ್ರಸನ್ನಗೊಳಿಸಲು ಸುಲಭವಾದ ಮಾರ್ಗ !

ದೇವರಿಗೆ ಶರಣಾಗಿ ಇಚ್ಛಿತ ವಿಷಯವನ್ನು ತಳಮಳದಿಂದ ಯಾಚಿಸುವುದನ್ನೇ ‘ಪ್ರಾರ್ಥನೆ’ ಎನ್ನುತ್ತಾರೆ. ಪ್ರಾರ್ಥನೆ ಮಾಡುವುದರಿಂದ ದೇವರ ಆಶೀರ್ವಾದ, ಶಕ್ತಿ ಮತ್ತು ಚೈತನ್ಯಗಳ ಲಾಭವಾಗುತ್ತದೆ. ಪ್ರಾರ್ಥನೆಯಿಂದ ಚಿಂತೆಯು ಕಡಿಮೆಯಾಗಿ ದೇವರ ಮೇಲಿನ ಶ್ರದ್ಧೆಯು ಹೆಚ್ಚಾಗುತ್ತದೆ ಮತ್ತು ಮನಸ್ಸು ಏಕಾಗ್ರವಾಗುತ್ತದೆ.

ಪ್ರತಿದಿನ ಮಾಡಬೇಕಾದ ಕೆಲವು ಪ್ರಾರ್ಥನೆಗಳು

೧. ಸ್ನಾನದ ಮೊದಲು ಮಾಡಬೇಕಾದ ಪ್ರಾರ್ಥನೆ
‘ಹೇ ಜಲದೇವತೆ, ನಿನ್ನ ಪವಿತ್ರವಾದ ಜಲದಿಂದ ನನ್ನ ಶರೀರವು ಶುದ್ಧವಾಗುವುದರೊಂದಿಗೆ ಅಂತಃಕರಣವು ನಿರ್ಮಲವಾಗಲಿ ಮತ್ತು ನಿನ್ನ ಚೈತನ್ಯವು ಸಿಗಲಿ.’ಸ್ನಾನದ ಸಮಯದಲ್ಲಿ ಪಠಿಸುವಂತಹ ಶ್ಲೋಕಗಳನ್ನು ಓದಿ

೨. ಅಧ್ಯಯನದ ಮೊದಲು ಮಾಡಬೇಕಾದ ಪ್ರಾರ್ಥನೆ
‘ಹೇ ವಿಘ್ನಹರ್ತಾ ಮತ್ತು ಬುದ್ಧಿದಾತಾ ಶ್ರೀ ಗಣೇಶ, ನನ್ನ ಅಧ್ಯಯನದಲ್ಲಿ ಬರುವ ಅಡಚಣೆಗಳು ದೂರವಾಗಲಿ. ನನ್ನ ಅಧ್ಯಯನವು ಉತ್ತಮವಾಗಿ ಆಗಲು ನೀನು ನನಗೆ ಸದ್ಬುದ್ಧಿ ಮತ್ತು ಶಕ್ತಿಯನ್ನು ನೀಡು.’ಶ್ರೀ ಗಣಪತೀ ಸ್ತೋತ್ರ ಓದಿ

೩. ಆಹಾರವನ್ನು ಸ್ವೀಕರಿಸುವ ಮೊದಲು ಮಾಡಬೇಕಾದ ಪ್ರಾರ್ಥನೆ
‘ಹೇ ಅನ್ನಪೂರ್ಣಾಮಾತೆ, ಈ ಆಹಾರವನ್ನು ನಿನ್ನ ಚರಣಗಳಲ್ಲಿ ಅರ್ಪಿಸಿ ನಿನ್ನ ‘ಪ್ರಸಾದ’ ಎಂಬ ಭಾವದಿಂದ ನಾನು ಸ್ವೀಕರಿಸುತ್ತೇನೆ. ಈ ಪ್ರಸಾದದಿಂದ ನನಗೆ ಶಕ್ತಿ ಮತ್ತು ಚೈತನ್ಯವು ಸಿಗಲಿ.’