ಮಕ್ಕಳೇ, ಸುಸಂಸ್ಕಾರಗಳ ನಿರ್ಮಿತಿಗೆ ನೀವೇನು ಮಾಡುವಿರಿ?

ಸಂಸ್ಕಾರವೆಂದರೆ ದೋಷವನ್ನು ನಿವಾರಿಸಿ ಒಳ್ಳೆಯ ಗುಣಗಳನ್ನು ವೃದ್ಧಿಸುವುದು. ಇವುಗಳ ಬಗ್ಗೆ ನಾವು ಇಂದು ತಿಳಿದುಕೊಳ್ಳುವವರಿದ್ದೇವೆ. ನಮ್ಮಲ್ಲಿನ ದುರ್ಗುಣಗಳನ್ನು ನಿವಾರಿಸಿ ಸದ್ಗುಣ, ಸುಸಂಸ್ಕಾರಗಳನ್ನು ವೃದ್ಧಿಸಲು ಯಾವ ಪ್ರಯತ್ನಗಳನ್ನು ಮಾಡಬೇಕು, ‘ಸ್ವಭಾವದೋಷವನ್ನು ಹೇಗೆ ನಿವಾರಿಸಿ’, ಎಂಬ ಬಗ್ಗೆ ಪ್ರಾಥಮಿಕ ಮಾಹಿತಿಯನ್ನು ತಿಳಿದುಕೊಳ್ಳೋಣ.

ಹಂತ ೧

ಎಷ್ಟು ಜನರಿಗೆ ‘ನನ್ನಲ್ಲಿ ದೋಷವೇ ಇಲ್ಲ’ ಎಂದೆನಿಸುತ್ತದೆ, ನಮ್ಮ ಶಾಲೆಯಲ್ಲಿ, ನೆರೆಹೊರೆಯಲ್ಲಿ, ಅಕ್ಕಪಕ್ಕದವರಲ್ಲಿ ಒಂದೂ ದೋಷವಿಲ್ಲದವರು ಯಾರಾದರೂ ಇದ್ದಾರೇನು? ಯಾರೂ ಇಲ್ಲ. ಕೇವಲ ಈಶ್ವರ ನಲ್ಲಿ ಮಾತ್ರ ಯಾವುದೇ ದೋಷವಿಲ್ಲ, ಏಕೆಂದರೆ ಅವನು ಸರ್ವಗುಣ ಸಂಪನ್ನನಾಗಿದ್ದಾನೆ. ಪ್ರತಿಯೊಬ್ಬರಲ್ಲಿ ಒಂದಲ್ಲವೊಂದು ದೋಷ ಇದ್ದೇ ಇರುತ್ತದೆ. ‘ನನ್ನಲ್ಲಿ ದೋಷವೇ ಇಲ್ಲ’ ಅಥವಾ ‘ನಾನು ತಪ್ಪನ್ನೇ ಮಾಡುವುದಿಲ್ಲ’, ಹೀಗೆ ಹೇಳಿದರೆ ನಮ್ಮೊಳಗಿನ ದೋಷಗಳು ಹಾಗೆಯೇ ಉಳಿಯುತ್ತವೆ. ಅದರಿಂದ ನಮಗೆ ಹಾನಿಯಾಗುತ್ತದೆ, ಆದುದರಿಂದ ತಪ್ಪನ್ನು ಒಪ್ಪಿಕೊಳ್ಳುವುದು ಮತ್ತು ಅದು ತನಗೆ ಒಪ್ಪಿಗೆಯಾಗುವುದು ದೋಷ ನಿರ್ಮೂಲನೆಯ ಮೊದಲನೇ ಹಂತವಾಗಿದೆ.

ಹಂತ ೨

ಎರಡನೇ ಹಂತವೆಂದರೆ ದಿನವಿಡೀ ತನ್ನಿಂದ ನಡೆದ ತಪ್ಪುಗಳ ನೋಂದಣಿ ಮಾಡಿಡುವುದು ಮತ್ತು ಆ ತಪ್ಪುಗಳ ಹಿಂದಿನ ಸ್ವಭಾವದೋಷವನ್ನು ಬರೆಯುವುದು. ಸಾಮಾನ್ಯವಾಗಿ ವಿದ್ಯಾರ್ಥಿಗಳಿಗೆ ಹಾನಿಕರವಾದ ಕೆಲವು ದೋಷಗಳನ್ನು ನಾವು ನೋಡೋಣ. ಈ ದೋಷಗಳ ಬಗ್ಗೆ ನಡೆಯುವ ಪ್ರಸಂಗ ಅಥವಾ ಆ ಸಂದರ್ಭದಲ್ಲಿ ಆಗುವ ತಪ್ಪುಗಳನ್ನು ನೀವು ಹೇಳಬೇಕು. ದೋಷಗಳನ್ನು ತೊಲಗಿಸಲು ನಮ್ಮಲ್ಲಿ ಗುಣಗಳನ್ನು ಹೆಚ್ಚಿಸಬೇಕಾಗಿದೆ. ಇದನ್ನು ಮುಂದಿನ ಕೋಷ್ಟಕದಲ್ಲಿ ನೀಡಲಾಗಿದೆ.

ಆಲಸ್ಯ

ಈಗ ನಾವು ‘ಆಲಸ್ಯ’ ಎಂಬ ದೋಷದ ಬಗ್ಗೆ ನೋಡೋಣ. ಆಲಸ್ಯ ದೋಷದಿಂದ ನಮ್ಮಿಂದ ಯಾವ ಯಾವ ತಪ್ಪುಗಳಾಗುತ್ತವೆ ಎಂದು ಯಾರಾದರೂ ಹೇಳಬಹುದೇನು? ಬೆಳಗ್ಗೆ ತಡವಾಗಿ ಏಳುವುದು, ಅಧ್ಯಯನ ಮಾಡದಿರುವುದು ಈ ತಪ್ಪುಗಳಿಂದ ನಮಗೆ ಲಾಭವಾಗುತ್ತದೆಯೋ ಅಥವಾ ಹಾನಿಯಾಗುತ್ತದೆಯೋ? ಬೆಳಗ್ಗೆ ತಡವಾಗಿ ಏಳುವುದರಿಂದ ಮುಂದಿನ ಕೆಲಸ ಮಾಡಲು ತಡವಾಗುತ್ತದೆ. ಶಾಲೆ ಹೋಗಲು ತಡವಾಗುತ್ತಿರುವುದರಿಂದ ನಮಗೆ ಕಿರಿಕಿರಿಯಾಗುತ್ತದೆ. ಈಗ ಈ ದೋಷ ತೊಲಗಿಸಲು ನಮಗೆ ಯಾವ ಗುಣವನ್ನು ಹೆಚ್ಚಿಸಬೇಕು? ‘ತತ್ಪರತೆ’ ‘ನಾನು ಬೆಳಗ್ಗೆ ತತ್ಪರತೆಯಿಂದ ಏಳುವೆನು, ಅಧ್ಯಯನಕ್ಕೆ ತತ್ಪರತೆಯಿಂದ ಕುಳಿತು ಕೊಳ್ಳುವೆನು’, ಎಂದು ಮನಸ್ಸಿಗೆ ಹೇಳಬೇಕು.

ಸುಳ್ಳು ಮಾತನಾಡುವುದು

ಈ ದೋಷದಿಂದ ನಮಗೆ ಎಲ್ಲಕ್ಕಿಂತ ಹೆಚ್ಚುನಷ್ಟವಾಗುತ್ತದೆ. ಇದಕ್ಕೆ ‘ಅಪ್ರಾಮಾಣಿಕತೆ’, ಎಂದೂ ಹೇಳುತ್ತಾರೆ. ಸುಳ್ಳು ಮಾತನಾಡುವುದರಿಂದ ನಮ್ಮ ವಿಶ್ವಾಸಾರ್ಹತೆ ಕಡಿಮೆಯಾಗುತ್ತದೆ ಮತ್ತು ಜನರು ನಮ್ಮ ಮಾತನ್ನು ನಂಬುವುದಿಲ್ಲ. ನಾವು ಜನರ ವಿಶ್ವಾಸವನ್ನು ಗಳಿಸಬೇಕಾದರೆ ಸತ್ಯವನ್ನೇ ಮಾತನಾಡಬೇಕು.

ಇತರರ ತಪ್ಪುಗಳನ್ನು ನೋಡುವುದು

ಇದರಿಂದ ನಮಗೆ ಇತರರ ಬಗ್ಗೆ ಸಿಟ್ಟು, ದ್ವೇಷ ನಿರ್ಮಾಣವಾಗುತ್ತದೆ. ತದ್ವಿರುದ್ಧ ಅವರಲ್ಲಿನ ಗುಣಗಳನ್ನು ನೋಡುವುದರಿಂದ ನಮಗೆ ಅವರ ಬಗ್ಗೆ ಪ್ರೀತಿ ನಿರ್ಮಾಣವಾಗುತ್ತದೆ. ಇತರರ ದೋಷವನ್ನು ನೋಡುವುದರಿಂದ ನಮಗೆ ಏನೂ ಲಾಭವಾಗುವುದಿಲ್ಲ. ಅದಕ್ಕಿಂತ ನಮ್ಮ ತಪ್ಪುಗಳ ಕಡೆಗೆ ಗಮನ ಕೊಟ್ಟರೆ ನಮ್ಮ ತಪ್ಪು ಮತ್ತು ದೋಷಗಳಿಂದ ಆಗುವ ಹಾನಿಯನ್ನು ತಡೆಯಬಹುದು.

ಕೆಳಗೆ ನೀಡಿದ ಕೆಲವು ದೋಷಗಳಲ್ಲಿ ನಿಮ್ಮಿಂದಲೂ ಇಂತಹ ತಪ್ಪುಗಳಾಗುತ್ತಿದ್ದರೆ ಅದನ್ನು ಹೇಗೆ ಬರೆಯಬೇಕು, ಎಂದು ತಿಳಿಸಲಾಗಿದೆ.

೧.ಬೆಳಗ್ಗೆ ತಡವಾಗಿ ಏಳುವುದು. ದೋಷ-ಆಲಸ್ಯ

೨.ತರಗತಿಯಲ್ಲಿ ಮಿತ್ರರೊಂದಿಗೆ ಜಗಳವಾಡುವುದು. ದೋಷ-ಜಗಳಗಂಟ.

೩.ತಾಯಿಯು ‘ಅಂಗಡಿಯಿಂದ ಸಕ್ಕರೆ ಯನ್ನು ತಂದು ಕೊಡು’, ಎಂದು ಹೇಳಿದಾಗ ಅವಳ ಮಾತನ್ನು ಕೇಳಲಿಲ್ಲ. ದೋಷ-ಕೇಳುವ ವೃತ್ತಿಯಿಲ್ಲದಿರುವುದು.

೪.ತರಗತಿಯಲ್ಲಿ ವಹಿಯನ್ನು ಮರೆತು ಬಂದೆನು.ದೋಷ-ಮರೆಗುಳಿತನ

೫.ಊಟದಲ್ಲಿ ಸೊಪ್ಪಿನಪಲ್ಯವನ್ನು ತಿನ್ನಲಿಲ್ಲ. ದೋಷ-ಇಷ್ಟಾನಿಷ್ಟ

೬.ಸ್ನಾನಗೃಹದಿಂದ ಹೊರಗೆ ಬರುವಾಗ ದೀಪವನ್ನು ಆರಿಸಲಿಲ್ಲ. ದೋಷ- ಮರೆಗುಳಿತನ

೭.ಸ್ನಾನದ ಸಮಯದಲ್ಲಿ ನೀರನ್ನು ಹೆಚ್ಚು ಉಪಯೋಗಿಸಿದುದರಿಂದ ಅದನ್ನು ಅನಾವಶ್ಯಕವಾಗಿ ಕೆಳಗೆ ಚೆಲ್ಲಿದೆನು. ದೋಷ -ಮಿತವ್ಯಯದ ಅಭಾವ

೮.ಶಾಲೆಯಿಂದ ಬಂದನಂತರ ಸಮವಸ್ತ್ರವನ್ನು ಕೂಡಲೇ ತೆಗೆಯಲಿಲ್ಲ. ದೋಷ-ಮುಂದೂಡುವಿಕೆ
ಹೀಗೆ ಪ್ರತಿದಿನ ನಿಮ್ಮಿಂದ ನಡೆಯುವ ತಪ್ಪುಗಳನ್ನು ಬರೆದು ಅದರ ಹಿಂದಿನ ದೋಷಗಳನ್ನು ಹುಡುಕಿ ಬರೆಯಬೇಕು.

ದೋಷವನ್ನು ತೊಲಗಿಸುವ ಮೊದಲನೇ ಹಂತವೆಂದರೆ ತಪ್ಪುಗಳನ್ನು ಒಪ್ಪಿಕೊಳ್ಳುವುದು ಮತ್ತು ಎರಡನೇ ಹಂತವೆಂದರೆ ಆ ತಪ್ಪುಗಳನ್ನು ನೋಂದಾಯಿಸಿಕೊಳ್ಳುವುದು. ಇದನ್ನು ನಾವು ನಿಯಮಿತವಾಗಿ ಮಾಡಬೇಕು. ಸದ್ಯ ನಾವು ನಮ್ಮಿಂದಾಗುವ ತಪ್ಪುಗಳನ್ನು ನೋಂದಾಯಿಸಿ, ನಂತರ ಅದು ಯಾವ ದೋಷದಿಂದ ಆಯಿತು, ಎಂದು ಬರೆಯಲು ಪ್ರಯತ್ನಿಸೋಣ.

Leave a Comment