ವಿದ್ಯಾದೇವತೆ ಶ್ರೀ ಸರಸ್ವತೀದೇವಿ

ಶ್ರೀ ಸರಸ್ವತೀ ದೇವಿಯು ವಿದ್ಯೆ ಹಾಗೂ ಕಲೆಯ ದೇವಿಯಾಗಿದ್ದಾಳೆ. ಅವಳ ಭಾವಪೂರ್ಣ ಉಪಾಸನೆಯಿಂದ ಉಪಾಸಕನ ಬುದ್ಧಿಯು ಸಾತ್ತ್ವಿಕವಾಗುವುದರಿಂದ ಅವನಿಗೆ ವಿವಿಧ ಪ್ರಕಾರದ ಕಲೆ ಹಾಗೂ ಜ್ಞಾನದ ಪ್ರಾಪ್ತಿಯಾಗುತ್ತದೆ. ಬುದ್ಧಿಯಿಂದ ಗ್ರಹಣವಾದುದ್ದನ್ನು ಶಬ್ಧಬದ್ಧವನ್ನಾಗಿಸುವುದು ಶ್ರೀ ಸರಸ್ವತೀ ದೇವಿಯ ಕಾರ್ಯವಾಗಿದೆ. ಶ್ರೀ ಸರಸ್ವತೀ ದೇವಿಯನ್ನು ಸಂತ ಜ್ಞಾನೇಶ್ವರರು ’ಅಭಿನವ ವಾಗ್ವಿಲಾಸಿನಿ’ ಎಂದು ಹಾಗೂ ಶ್ರೀ ಸಮರ್ಥ ರಾಮದಾಸ್ವಾಮಿಗಳು ’ಶಬ್ಧಮೂಲ ವಾಗ್ದೇವತೆ’ ಎಂದು ಬಿರುದಾಂಕಿಸಿದ್ದಾರೆ.

ಸರಸ್ವತೀ ದೇವಿಯನ್ನು ಶಾರದಾ ಎಂದೂ ಕರೆಯಲಾಗುತ್ತದೆ. ಶಾರದಾ ಎಂದರೆ ಜ್ಞಾನಕ್ಕೆ ಆಧಾರ ನೀಡುವವಳು. ಈ ದೇವಿಯ ಸೀರೆಯು ಕೆಂಪು ಗುಲಾಬಿ ಬಣ್ಣದ್ದಾಗಿರುತ್ತದೆ. ವಿದ್ಯೆ ಪಡೆಯಲು ಶ್ರೀ ಸರಸ್ವತಿ ದೇವಿಯ ಉಪಾಸನೆ ಹಾಗೂ ಪ್ರಾರ್ಥನೆಯು ಅವಶ್ಯಕವಾಗಿರುತ್ತದೆ.

ಶ್ರೀ ಸರಸ್ವತಿದೇವಿಗೆ ಮಾಡುವ ಪ್ರಾರ್ಥನೆ

ನಮಸ್ತೇ ಶಾರದೆದೇವಿ ವೀಣಾಪುಸ್ತಕಧಾರಿಣಿ |
ವಿದ್ಯಾರಂಭ ಕರಿಷ್ಯಾಮಿ ಪ್ರಸನ್ನಾ ಭವ ಸರ್ವದಾ ||

ಅರ್ಥ : ಕೈಯಲ್ಲಿ ವೀಣೆ ಹಾಗೂ ಗ್ರಂಥವನ್ನು ಹಿಡಿದಿರುವ ಹೇ ಸರಸ್ವತೀ ದೇವಿ ನಿನಗೆ ವಂದಿಸಿ ಅಧ್ಯಯನ ಮಾಡಲು ಪ್ರಾರಂಭಿಸುತ್ತಿದ್ದೇನೆ. ನೀನು ನಮ್ಮ ಮೇಲೆ ಯಾವಾಗಲೂ ಪ್ರಸನ್ನವಾಗಿರು.

ಆಧಾರ : ದೈನಿಕ ಸನಾತನ ಪ್ರಭಾತ