ಪಾಲಕರು

ವ್ಯಾಖ್ಯೆ

ಪಾ : ಪಾವಿತ್ರ್ಯದ ಪಾಲನೆ ಮಾಡಿ ತನ್ನ ಮೇಲೆ ಅವಲಂಬಿಸಿರುವ ಘಟಕಗಳ ಪಾಲನೆ ಮಾಡುವವನು
ಲ : ಲಕ್ಷಭೇದಿ ವಿಚಾರದಿಂದ ತನ್ನ ಕರ್ತವ್ಯಗಳನ್ನು ಕಟ್ಟುನಿಟ್ಟಾಗಿ ಪೂರ್ಣಗೊಳಿಸುವವನು
ಕ : ಕಲ್ಪವೃಕ್ಷದಂತೆ ತನ್ನ ಮಗುವಿಗೆ ಆಧಾರ ನೀಡಿ ಕರ್ತತ್ವವುಳ್ಳವನಾಗಿ ತಯಾರಿಸುವವನು

ವೈಶಿಷ್ಟ್ಯಗಳು

ಅ. ಪಾಲಕನು ಮಗುವಿನ ಜೀವನದಲ್ಲಿನ ಮೊದಲ ಸ್ನೇಹಿತ
ಆ. ಪಾಲಕ ಎಂದರೆ ಮಗುವಿನ ಜೀವನದಲ್ಲಿನ ಪ್ರತಿಯೊಂದು ಸುಖ-ದುಃಖಗಳಿಗೆ ಕಾರಣವಾಗಿರುವ ಏಕೈಕ ಘಟಕ (ಉದಾ: ಸಂತ ಜ್ಞಾನೇಶ್ವರರ ತಂದೆ-ತಾಯಿ, ಜಿಜಾಮಾತೆ)

ಹಿಂದಿನ ಆದರ್ಶ ಪಾಲಕರು

ಸ್ತ್ರೀಯರು ಜಿಜಾಬಾಯಿಯಂತೆ ತಮ್ಮ ಮಕ್ಕಳನ್ನು ತಯಾರಿಸಬೇಕು ! : ಸ್ತ್ರೀಯರು ಜಿಜಾಬಾಯಿಯಂತೆ ಮಕ್ಕಳಲ್ಲಿ ಉತ್ತಮ ಸಂಸ್ಕಾರಗಳನ್ನು ಮೂಡಿಸಬೇಕು, ಆಗಲೇ ಮಕ್ಕಳು ಸುಸಂಸ್ಕಾರವಂತರಾಗುತ್ತಾರೆ. ಎಲ್ಲ ಸ್ತ್ರೀಯರು ಜೀಜಾಬಾಯಿಯು ರಾಷ್ಟ್ರ ಮತ್ತು ಧರ್ಮದ ಬಗೆಗಿನ ಔಷಧಿಯನ್ನು ನೀಡಿ ಶಿವಾಜಿಯನ್ನು ತಯಾರಿಸಿದಂತೆ ತಮ್ಮ ಮಗುವಿನೆಡೆಗೆ ಗಮನ, ಸಮಯ ನೀಡಿ ಅವರನ್ನು ತಯಾರಿಸಬೇಕು. ಅದಕ್ಕಾಗಿ ಅವರು ತಮ್ಮ ಮಕ್ಕಳಿಗೆ ಸಮಯ ನೀಡಿ ಪ್ರಯತ್ನಿಸಬೇಕು.

ಕಾಲಾನುಸಾರ ಪಾಲಕರಲ್ಲಿ ಆಗುವ ಪರಿವರ್ತನೆಗಳು

೧ ವೈಚಾರಿಕ
೨. ಬೌದ್ಧಿಕ
೩. ಸಾಮಾಜಿಕ

ಸಂಸ್ಕಾರಗಳಿಗಿಂತ ಉದ್ಯೋಗಕ್ಕೆ ಪ್ರಾಧಾನ್ಯತೆ ನೀಡುವ ಪಾಲಕರು

ಇತ್ತೀಚಿಗೆ ಪಾಲಕರು ‘ನಮಗೆ ನಮ್ಮ ಉದ್ಯೋಗದಿಂದ ಸಮಯ ಸಿಗುವುದಿಲ್ಲ, ಮಕ್ಕಳಿಗೆ ಸಮಯ ಎಲ್ಲಿಂದ ನೀಡುವುದು?’ ಎಂದು ಹೇಳುತ್ತಾರೆ. ನಾವೇ ನಮ್ಮ ಅವಶ್ಯಕತೆಗಳನ್ನು ಹೆಚ್ಚಿಸುತ್ತೇವೆ. ಅನಂತರ ಹೆಚ್ಚು ಹಣದ ಆವಶ್ಯಕತೆಯೆನಿಸುತ್ತದೆ. ಅದುದರಿಂದ ಮನೆಯಲ್ಲಿನ ತಂದೆ-ತಾಯಿ ಇಬ್ಬರೂ ಉದ್ಯೋಗ ಮಾಡುತ್ತಾರೆ.

೧. ಮಕ್ಕಳನ್ನು ಶಿಶುಪಾಲನಾ ಕೇಂದ್ರಗಳಿಗೆ ಸೇರಿಸುವುದು: ಇಂದು ಹೆಚ್ಚಿನ ಪಾಲಕರು ಉದ್ಯೋಗಕ್ಕಾಗಿ ಹೊರಗೆ ಹೋಗುವಾಗ, ತಮ್ಮ ಮಕ್ಕಳನ್ನು ಶಿಶುಪಾಲನ ಕೇಂದ್ರಗಳಲ್ಲಿ ಬಿಡುತ್ತಾರೆ. ಪರಿಣಾಮವಾಗಿ ಮಕ್ಕಳಿಗೆ ತಂದೆ-ತಾಯಿಯ ಅತಿ ಕಡಿಮೆ ಸಹವಾಸ ಲಭಿಸುತ್ತದೆ.

೨. ಮಕ್ಕಳಿಗೆ ಅಧ್ಯಯನವರ್ಗಕ್ಕೆ (Tuition) ಕಳುಹಿಸುವುದು: ಹಣದ ಆಧಾರದಲ್ಲಿ ಅಧ್ಯಯನದಂತಹ ಮಾಧ್ಯಮಗಳಿಂದ ಮಕ್ಕಳ ಬಗ್ಗೆ ದುರ್ಲಕ್ಷ ಮಾಡುತ್ತಾರೆ. ಹಣದ ಬಲದಿಂದ ಮಕ್ಕಳಲ್ಲಿ ಸದ್ಗುಣಗಳು ಬರಲಾರವು.

೨ ಅ. ಅಧ್ಯಯನವರ್ಗಕ್ಕೆ ಕಳುಹಿಸುವುದರಿಂದ ಆಗುವ ದುಷ್ಪರಿಣಾಮಗಳು

ತಂದೆ-ತಾಯಿಯರ ಬಗ್ಗೆ ಪ್ರೀತಿ ಅನಿಸದಿರುವುದು: ಅಧ್ಯಯನದಿಂದ ಮಕ್ಕಳಿಗೆ ಒಳ್ಳೆಯ ಅಂಕಗಳು ದೊರಕುವವು; ಆದರೆ ಅವರಲ್ಲಿ ಒಳ್ಳೆಯ ಸಂಸ್ಕಾರಗಳು ನಿರ್ಮಾಣವಾಗಲಾರವು ಹಾಗೂ ಅವರ ಭಾವನಿಕ ಹಸಿವೂ ನೀಗುವುದಿಲ್ಲ. ಅದುದರಿಂದಲೇ ಮಕ್ಕಳಿಗೆ ತಂದೆ-ತಾಯಿಯ ಬಗ್ಗೆ ಪ್ರೀತಿ ಅನಿಸುವುದಿಲ್ಲ. ದೇಶ ಮತ್ತು ಧರ್ಮದ ಬಗ್ಗೆ ಪ್ರೀತಿ ಅಂಕುರಿಸುವುದಂತು ದೂರದ ಮಾತಾಗಿದೆ !

ಮಕ್ಕಳಿಗೆ ಸಮಯ ನೀಡದಿರುವ ಪಾಲಕರು

ಕೆಲವು ಪಾಲಕರು ಆವಶ್ಯಕತೆಯೆಂದು ಮತ್ತು ಕೆಲವರು ಕೇವಲ ಸಮಯ ಕಳೆಯಲು ಉದ್ಯೋಗ ಮಾಡುತ್ತಿರುವುದು ಕಂಡುಬರುತ್ತದೆ. ಇತ್ತೀಚಿನ ಕೆಲವು ಪಾಲಕರು ಪಾರ್ಟಿ ಹಾಗೂ ಮನೋರಂಜನೆಯ ಇತರ ಸಾಧನಗಳಲ್ಲಿ ಮಗ್ನರಾಗಿರುತ್ತಾರೆ. ಮಕ್ಕಳ ವಿಚಾರ ಕೇಳಿಕೊಳ್ಳಲೂ ಯಾರು ಇರುವುದಿಲ್ಲ. ಮಕ್ಕಳಿಗೆ ಪ್ರೀತಿ ಬೇಕಾಗಿರುತ್ತದೆ, ತಂದೆ-ತಾಯಿಯರು ಬೇಕಾಗಿರುತ್ತಾರೆ.

ಮಕ್ಕಳಿಗೆ ಸಮಯ ನೀಡದಿರುವುದರಿಂದ ಆಗುವ ದುಷ್ಪರಿಣಾಮಗಳು

೧. ಮಾನಸಿಕ ದೃಷ್ಟಿಯಿಂದ ದುರ್ಬಲರಾಗುವುದು: ಇಂದು ಮಕ್ಕಳ ಸಮಸ್ಯೆಗಳನ್ನು ಕೇಳಿಕೊಳ್ಳಲು ಪಾಲಕರಿಗೂ ಸಮಯವಿಲ್ಲ, ಶಿಕ್ಷಕರಿಗೂ ಇಲ್ಲ. ಹಾಗಾದರೆ ಅವರು ಯಾರಿಗೆ ಹೇಳಬೇಕು ? ಕೆಲವೊಮ್ಮೆ ಸಮಯದ ಅಭಾವದಿಂದ ಮತ್ತು ಕೆಲವು ಬಾರಿ ಇದರ ಅರಿವೇ ಇರದಿರುವುದರಿಂದ ಮಕ್ಕಳಿಗೆ ಪಾಲಕರ ಸಹವಾಸ ದೊರೆಯುವುದಿಲ್ಲ. ಮಾನಸಿಕ ಹೋಯ್ದಾಟವು ಅವರ ಮನಸ್ಸನ್ನು ದುರ್ಬಲಗೊಳಿಸುತ್ತದೆ. ಅದರಿಂದಾಗಿ ಅವರಿಗೆ ಕಿರಿಕಿರಿಯಾಗುವುದು, ಮಾನಸಿಕ ದೃಷ್ಟಿಯಲ್ಲಿ ದಣಿಯುವುದು ಮತ್ತು ಅಧ್ಯಯನದಲ್ಲಿ ಹಿಂದುಳಿಯುವುದಂತಹ ದುಷ್ಪರಿಣಾಮಗಳು ಕಂಡುಬರುತ್ತವೆ. ಇಂತಹ ಸಮಯದಲ್ಲಿ ಪಾಲಕರು 'ಕೋಚಿಂಗ್ ಕ್ಲಾಸ್'ಗೆ ಕಳುಹಿಸುವ ಉಪಾಯವನ್ನು ಕಂಡು ಹಿಡಿಯುತ್ತಾರೆ.

೨. ರಾಷ್ಟ್ರಕ್ಕೆ ಬಲಶಾಲಿ ಪೀಳಿಗೆ ಸಿಗದಿರುವುದು: ಮಕ್ಕಳು ಮಾನಸಿಕ ದೃಷ್ಟಿಯಲ್ಲಿ ದುರ್ಬಲರಾಗಿದ್ದರಿಂದ ಸಕ್ಷಮ ಪೀಳಿಗೆ ದೊರೆಯುವುದಿಲ್ಲ.

ಪಾಲಕರಲ್ಲಿ ಶಿಕ್ಷಣದ ಬಗ್ಗೆ ಇರುವ ತಪ್ಪು ದೃಷ್ಟಿಕೊನ

ಅ. ಸಂಸ್ಕಾರಕ್ಕಿಂತಲೂ ಪರೀಕ್ಷೆಯಲ್ಲಿ ದೊರೆಯುವ ಅಂಕಗಳು ಮಹತ್ವದ್ದು ಎಂದು ಅನಿಸುವುದು: ಸದ್ಯದ ಪಾಲಕರ ದೃಷ್ಟಿಯಲ್ಲಿ ಶಿಕ್ಷಣದ ಮಹತ್ವ ಮಕ್ಕಳಿಗೆ ದೊರೆಯುವ ಅಂಕಗಳಿಗೆ ಸೀಮಿತವಾಗಿದೆ. ಅವರ ದೃಷ್ಟಿಯಲ್ಲಿ ಶಿಕ್ಷಣದಿಂದ ಮಕ್ಕಳ ವರ್ತನೆಯಲ್ಲಿ ಆಗುವ ಬದಲಾವಣೆ ಮತ್ತು ಅವರಲ್ಲಿ ಆಗುವ ಒಳ್ಳೆಯ ಸಂಸ್ಕಾರಗಳಿಗಿಂತ ಅವರಿಗೆ ದೊರೆಯುವ ಅಂಕಗಳೇ ಮಹತ್ವದ್ದಾಗಿರುತ್ತವೆ. ಈ ದೃಷ್ಟಿಕೋನವೇ ತಪ್ಪಾಗಿರುತ್ತದೆ ಮತ್ತು ಅದನ್ನು ಬದಲಾಯಿಸಬೇಕು. ‘ಶಿಕ್ಷಣವೆಂದರೆ ಸುಸಂಸ್ಕಾರಗಳ ಸಂವರ್ಧನೆ ಮತ್ತು ವಿಕಾಸ’, ಶಿಕ್ಷಣವೆಂದರೆ 'ಮನುಷ್ಯರಾಗಿ ಜೀವಿಸಲು ಕಲಿಯುವುದು’ ಎಂಬ ದೃಷ್ಟಿಕೊನವನ್ನೇ ಇಂದಿನ ಪಾಲಕರು ಮರೆತಿದ್ದಾರೆ. ಅವರು ‘ನನ್ನ ಮಗನು ಡಾಕ್ಟರ ಅಥವಾ ಅಭಿಯಂತನಾಗಬೇಕು. ಅವನು ಬಹಳ ಹಣ ಗಳಿಸಬೇಕು’ ಎಂದೇ ಇಚ್ಛಿಸುತ್ತಾರೆ. ‘ನನ್ನ ಮಗನು ಮೊದಲು ಮನುಷ್ಯನೆಂದು ಜೀವಿಸಲು ಕಲಿಯಬೇಕು, ಅವನ ಮೇಲೆ ಸುಸಂಸ್ಕಾರಗಳಾಗಬೇಕು’ ಎಂದು ಪಾಲಕರಿಗೆ ಅನಿಸುವುದಿಲ್ಲ. ಇದರಿಂದಾಗಿ ಹೇಗೆ ಪಾಲಕರು ಮಕ್ಕಳ ಪರೀಕ್ಷೆಯ ಅಂಕಗಳ (ಮಾರ್ಕಗಳ) ವರದಿಯನ್ನು ತೆಗೆದುಕೊಳ್ಳುತ್ತಾರೆಯೋ ಅಂತೆಯೇ ಮಕ್ಕಳ ಉತ್ತಮ ಗುಣಗಳ ವರದಿಯನ್ನು ತೆಗೆದುಕೊಳ್ಳಲು ಆಗುವುದಿಲ್ಲ. ಬದಲಾಗಿ ಮಕ್ಕಳಿಗೂ ಪರೀಕ್ಷೆಯಲ್ಲಿ ದೊರೆಯುವ ಅಂಕಗಳೇ ಮಹತ್ವದ್ದೆನಿಸುತ್ತವೆ.

ಹೆಚ್ಚು ಅಂಕ, ಅಂಕಗಳ ಸ್ಪರ್ಧೆ, ಹಣ, ಕರಿಯರ್
ಇವೇ ಜೀವನದ ತತ್ತ್ವಜ್ಞಾನವಾಗಿರುವುದು

ಭಾರತವನ್ನು ಆಳಿದ ಆಂಗ್ಲರು ರಾಷ್ಟ್ರಾಭಿಮಾನಿ ಮತ್ತು ಧರ್ಮಾಭಿಮಾನಿ ನಾಗರಿಕರನ್ನು ತಯಾರು ಮಾಡುವ ಉಜ್ವಲ ‘ಗುರುಕುಲ ಶಿಕ್ಷಣಪದ್ಧತಿಯನ್ನು’ ನಾಶಗೊಳಿಸಿದರು. ಅಂದಿನಿಂದ ಧರ್ಮಾಭಿಮಾನಿ ಹಿಂದೂಗಳನ್ನು ನಿರ್ಮಿಸುವ ಮುಖ್ಯ ಆಕರವೇ ನಿಂತು ಹೋಯಿತು. ಸ್ವಾತಂತ್ರ್ಯೋತ್ತರ ಕಾಲದಲ್ಲಿ ಭಾರತದಲ್ಲಿ ಆಂಗ್ಲ ಶಿಕ್ಷಣದ ಪ್ರಭಾವವು ಬೆಳೆಯುತ್ತಾ ಹೋಯಿತು ಹಾಗೂ ಬಹುತಾಂಶ ಸಮಾಜವು ಅವರ ಮಕ್ಕಳಿಗೆ ಆಂಗ್ಲ ಶಿಕ್ಷಣ ನೀಡುವ ಸ್ಪರ್ಧೆಗೆ ಇಳಿಯಿತು. (ಸದ್ಯದ ಪಾಲಕರ ಜೀವನದ ತತ್ತ್ವಜ್ಞಾನವೇ ಪಾಶ್ಚಾತ್ಯ ಸಂಸ್ಕೃತಿಯ ಮೇಲೆ ಆಧರಿಸಿದ್ದು, ಭೋಗವಾದಿಯಾಗಿದೆ. ಇದರಿಂದಾಗಿ ಅವರಿಂದ ಮಕ್ಕಳ ಮೇಲೆಯೂ ಅದೇ ವಿಚಾರ ಮತ್ತು ಕೃತಿಗಳ ಸಂಸ್ಕಾರವಾಗುತ್ತವೆ. ಹೆಚ್ಚು ಅಂಕ, ಅಂಕಗಳ ಸ್ಪರ್ಧೆ, ಅವರ ಪ್ರತಿಯೊಂದು ವಿಷಯದ ಸ್ಪರ್ಧೆ, ಹಣ, ಅದಕ್ಕಾಗಿ ಕರಿಯರ ಇದು ಪಾಲಕರ ಮಕ್ಕಳ ಆಯುಷ್ಯದೆಡೆಗೆ ನೋಡುವ ದೃಷ್ಟಿಕೊನವಾಗಿದೆ. ಪಾಶ್ಚಾತ್ಯ ಸಂಸ್ಕೃತಿಯ ಆಕ್ರಮಣ ಹಾಗೂ ಸ್ವಸಂಸ್ಕೃತಿಯಿಂದ ವಿಮುಖರಾಗಿರುವುದರಿಂದ, ಇಂದಿನ ಮುದ್ದಿನ ಮಕ್ಕಳು ‘ಕೇಳುವುದಿಲ್ಲ’ ಎಂಬ ಚಿತ್ರಣ ಎಲ್ಲೆಡೆ ಕಂಡುಬರುತ್ತದೆ. ಅದಕ್ಕಾಗಿ ಪಾಲಕರು ತಮ್ಮ ಮಕ್ಕಳನ್ನು ಆದಷ್ಟು ಇತರ ಕಲೆಗಳ ಮತ್ತು ಕೋಚಿಂಗ್ ವರ್ಗಕ್ಕೆ ಸೇರಿಸಿ ಅವರನ್ನು ಬಿಡುವಿಲ್ಲದಂತೆ ಇಡಲು ಕಾತುರರಾಗಿರುತ್ತಾರೆ. ಬಹಳಷ್ಟು ಸುಶಿಕ್ಷಿತ ಪಾಲಕರಿಗೆ ಮಕ್ಕಳಲ್ಲಿ ಸುಸಂಸ್ಕಾರವಾಗಬೇಕು ಎಂದು ಮನಃಪೂರ್ವಕವಾಗಿ ಅನಿಸುತ್ತದೆ. ಆದರೆ ಇಂತಹ ಸ್ಥಿತಿಯಲ್ಲಿ ನಿಖರವಾಗಿ ಏನು ಮಾಡಬೇಕು ಎಂಬುದು ಅವರಿಗೂ ತಿಳಿಯುವುದಿಲ್ಲ. ಆದುದರಿಂದಲೇ ಆಂಗ್ಲರು ತೋರಿಸಿದ ಭೋಗವಾದದೆಡೆಗೆ ಒಯ್ಯುವ ಪೀಳಿಗೆಯನ್ನು ತಯಾರಿಸುವ ಹೊಣೆಗಾರಿಕೆಯನ್ನು ಇಂದಿನ ಪಾಲಕರು ಅಂಗೀಕರಿಸಿದ್ದಾರೆ ಎಂದು ಅನಿಸುತ್ತದೆ.

ಕೇವಲ ಉಚ್ಚಶಿಕ್ಷಣ ಎಂಬ ಇಳಿಜಾರಿನತ್ತ ಪಯಣಿಸುತ್ತಿರುವ ಭಾರತೀಯ ಶಿಕ್ಷಣ ಪದ್ಧತಿ !

ಪ್ರಾಚೀನ ಕಾಲದಲ್ಲಿನ ಗುರುಕುಲ ಶಿಕ್ಷಣಪದ್ಧತಿಯಲ್ಲಿ ರಾಷ್ಟ್ರಾಭಿಮಾನಿ ಪೀಳಿಗೆಯನ್ನು ತಯಾರಿಸುವ ಶಕ್ತಿಯಿರುವುದು: ಪ್ರಾಚೀನ ಕಾಲದಲ್ಲಿ ‘ಗುರುಕುಲ ಶಿಕ್ಷಣಪದ್ಧತಿ’ಯೇ ಭಾರತದ ನಿಜವಾದ ಪರಿಚಯವಾಗಿತ್ತು. ಆಂಗ್ಲರಿಗೆ ಆ ಪದ್ಧತಿಯಲ್ಲಿ ಧರ್ಮಧುರಂದರ ಹಾಗೂ ರಾಷ್ಟ್ರಾಭಿಮಾನಿ ಪೀಳಿಗೆಯನ್ನು ತಯಾರಿಸುವ ಬಲವಿರುವುದರ ನಿಖರತೆಯು ಮನವರಿಕೆಯಾಗಿದ್ದರಿಂದಲೇ ಅವರು ಮೆಕಾಲೆಯನ್ನು ಭಾರತಕ್ಕೆ ತಂದು ‘ಗುರುಕುಲ ಶಿಕ್ಷಣಪದ್ಧತಿ’ಯನ್ನು ತುಳಿದರು. ಮೆಕಾಲೆಯು ಬಿತ್ತಿದ ಆಂಗ್ಲ ಶಿಕ್ಷಣದ ವಿಷಯುಕ್ತ ಬೀಜವು ಇಂದು ದೊಡ್ಡ ವೃಕ್ಷವಾಗಿದೆ. ಇಂದಿನ ಯುವಕರಿಗೆ ಅನೇಕ ಮೂಲಭೂತ ಪ್ರಶ್ನೆಗಳ ಉತ್ತರಗಳನ್ನೂ ನೀಡಲಾಗುವುದಿಲ್ಲ, ದುರ್ದೈವದಿಂದ ಈ ಸತ್ಯವನ್ನು ಜೀರ್ಣಿಸಿಕೊಳ್ಳಬೇಕಾಗಿದೆ !

Leave a Comment