Menu Close

Sign Petition : ಹಿಂದೂಗಳನ್ನು ಹಿಂಸಕರೆಂದು ಹೇಳುವ ಕಾಂಗ್ರೆಸ್ ನ ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ರದ್ದುಪಡಿಸಿ !

ಧರ್ಮಪ್ರೇಮಿ ಹಿಂದೂಗಳು ಈ ಆನ್ಲೈನ್ ಪಿಟಿಷನ್ ಮೂಲಕ

ರಾಹುಲ್ ಗಾಂಧಿಯ ಲೋಕಸಭಾ
ಸದಸ್ಯತ್ವ ರದ್ದು ಪಡಿಸಲು ರಾಷ್ಟ್ರಪತಿಗಳಿಗೆ
ಆಗ್ರಹಿಸುತ್ತಿದ್ದಾರೆ.

ಇತ್ತೀಚೆಗೆ ಸಂಸತ್ತಿನಲ್ಲಿ ನಡೆದ ಒಂದು ಚರ್ಚೆಯಲ್ಲಿ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹಿಂದೂ ಸಮುದಾಯದ ವಿರುದ್ಧ ಮಾಡಿದ ಆಕ್ಷೇಪಾರ್ಹ ಟೀಕೆಯಿಂದ ನಮಗೆ ಮತ್ತು ಕೋಟ್ಯಾಂತರ ಹಿಂದುಗಳಿಗೆ ತೀವ್ರ ಆಘಾತವಾಗಿದೆ. ಅವರು ಹಿಂದೂಗಳನ್ನು ಹಿಂಸಕರು, ಸುಳ್ಳರು ಮತ್ತು ದ್ವೇಷ ಹರಡುವವರೆಂದು ಹೇಳಿದ್ದಾರೆ. ಈ ಹೇಳಿಕೆಯಿಂದ ನಮ್ಮ ಜೊತೆಗೆ ದೇಶದಲ್ಲಿನ ಕೋಟ್ಯಾಂತರ ಹಿಂದುಗಳ ಭಾವನೆಗಳಿಗೆ ನೋವುಂಟಾಗಿದೆ. ಹಾಗಾಗಿ ದೇಶಾದ್ಯಂತದ ಹಿಂದುಗಳಲ್ಲಿ ಆಕ್ರೋಶದ ಅಲೆ ಭುಗಿಲೆದ್ದಿದೆ. ಈ ಹೇಳಿಕೆ ಲೋಕಸಭೆಯ ಟಿವಿ ಚಾನಲ್ ಮೂಲಕ ನೇರಪ್ರಸಾರವಾದ ಕಾರಣ ವಿಶ್ವಾದ್ಯಂತ ಇರುವ ಜನರವರೆಗೆ ತಲುಪಿದೆ. ಇದರಿಂದ ಸಹಿಷ್ಣು ಹಿಂದೂ ಸಮಾಜದ ಅಪಮಾನವಾಗಿದೆ.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅಥವಾ ಅವರ ಪಕ್ಷದ ಮೂಲಕ ಈ ರೀತಿಯ ಹೇಳಿಕೆ ನೀಡುವುದು ಮೊದಲ ಬಾರಿಯೇನಲ್ಲ. ಈ ಹಿಂದೆಯೂ ಕಾಂಗ್ರೆಸ್ ಕೇಸರಿ ಭಯೋತ್ಪಾದನೆ ಎಂದು ಹೇಳಿ ಹಿಂದೂ ಭಯೋತ್ಪಾದನೆಯ ಪರಿಕಲ್ಪನೆಯನ್ನು ಹರಡುವ ಪ್ರಯತ್ನ ಮಾಡಿತ್ತು. ಕಾಂಗ್ರೆಸ್ ಯಾವಾಗಲೂ ಹಿಂದೂ ಸಮಾಜವನ್ನು ನಿಂಧಿಸುವ ಪ್ರಯತ್ನ ಮಾಡುತ್ತಾ ಬಂದಿದೆ. ರಾಹುಲ್ ಗಾಂಧಿ ಇವರು ದೇವಸ್ಥಾನಕ್ಕೆ ಹೋಗುವುದು ಮತ್ತು ಕೈಗೆ ಪವಿತ್ರಧಾರ ಕಟ್ಟುವುದು ಇದೆಲ್ಲವೂ ಕೇವಲ ವಂಚನೆಯಾಗಿದೆ ಎಂದು ಈಗ ಸಾಬೀತಾಗಿದೆ.

1990 ರ ದಶಕದಲ್ಲಿನ ಕಾಶ್ಮೀರಿ ಹಿಂದುಗಳನ್ನು ಕಾಶ್ಮೀರದಿಂದ ಯಾರು ಓಡಿಸಿದರು ? ಇದನ್ನು ರಾಹುಲ ಗಾಂಧಿ ಹೇಳುವರೇ? ‘ಸರ್ ತನ್ ಸೆ ಜುದಾ’ ಈ ಫತ್ವಾ ಹೊರಡಿಸಿ ದೇಶಾದ್ಯಂತ ಹಿಂದೂಗಳ ಹತ್ಯೆಗಳನ್ನು ಮಾಡಿದವರು ಯಾರು ? ಇದನ್ನು ರಾಹುಲ್ ಗಾಂಧಿ ಎಂದಾದರು ಹೇಳುವರೆ ? ವರ್ಷದಲ್ಲಿ ಶ್ರೀ ರಾಮನವಮಿ, ಹನುಮಾನ ಜಯಂತಿ, ನವರಾತ್ರಿ, ಮಹಾಶಿವರಾತ್ರಿ, ಹಿಂದೂಗಳ ಹೊಸ ವರ್ಷ ಮುಂತಾದ ಹಿಂದೂ ಹಬ್ಬ ಉತ್ಸವಗಳ ಸಮಯದಲ್ಲಿ ಕಲ್ಲು ತೂರಾಟ ಮಾಡುವವರು, ಹಿಂದೂಗಳ ಹತ್ಯೆ ಮಾಡುವವರು, ದೇವತೆಗಳ ಮೂರ್ತಿಗಳನ್ನು ಧ್ವಂಸಗೊಳಿಸುವವರು ಯಾರು ? ಇದರ ಬಗ್ಗೆ ರಾಹುಲ್ ಗಾಂಧಿ ಏಕೆ ಮಾತನಾಡುವುದಿಲ್ಲ ? ಸಂಪೂರ್ಣ ಜಗತ್ತು ಜಿಹಾದಿ ಭಯೋತ್ಪಾದನೆಯಿಂದ ಪೀಡಿತವಾಗಿದೆ, ಲಕ್ಷಾಂತರ ಜನರು ಇದರಲ್ಲಿ ಸಾವನ್ನಪ್ಪಿದ್ದಾರೆ, ಆದರೆ ಈ ಭಯೋತ್ಪಾದನೆಯ ಬಣ್ಣ ಯಾವುದು, ಇದನ್ನು ರಾಹುಲ್ ಗಾಂಧಿ ಎಂದೂ ಹೇಳುವುದಿಲ್ಲ.

ಎಲ್ಲಕ್ಕಿಂತ ಪ್ರಾಚೀನ ಹಿಂದೂ ಧರ್ಮ ಸಹಿಷ್ಣುತೆಯಿಂದಾಗಿ ಇತರ ಪಂಥದವರ ಹಾಗೆ ಎಂದೂ ಸಾಮ್ರಾಜ್ಯ ವಿಸ್ತಾರ ಅಥವಾ ಮತಾಂತರಕ್ಕಾಗಿ ಯಾರ ಮೇಲೆಯೂ ದಾಳಿ ನಡೆಸಿಲ್ಲ. ತದ್ವಿರುದ್ಧ ವೈಶ್ವಿಕ ಹಿಂದೂ ಸಮಾಜ ಇಂದು ಸಾರ್ವತ್ರಿಕ ಶಾಂತಿ ಮತ್ತು ಕಲ್ಯಾಣದ ವಿಚಾರಧಾರೆಯ ಪ್ರತೀಕವಾಗಿದೆ. ‘ವಸುದೈವ ಕುಟುಂಬಕಮ್’ ಈ ಸಂಪೂರ್ಣ ಜಗತ್ತು ಒಂದು ಪರಿವಾರವಾಗಿದೆ. ಈ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಈ ಸಮಾಜವನ್ನು ಹಿಂಸಾತ್ಮಕ, ಸುಳ್ಳುಗಾರರು, ದ್ವೇಷ ಹರಡುವವರು ಎಂದು ಭಯೋತ್ಪಾದನೆಯ ರೂಪದಲ್ಲಿ ಹಣೆಪಟ್ಟಿ ಹಚ್ಚುವುದೆಂದರೆ ನಮ್ಮ ಧರ್ಮದ ಪ್ರತಿಮೆಯನ್ನು ಹಾಳು ಮಾಡುವ ಪ್ರಯತ್ನವಾಗಿದೆ.

ಓರ್ವ ರಾಷ್ಟ್ರೀಯ ಮಟ್ಟದ ನಾಯಕ ಈ ರೀತಿ ಹೇಳಿಕೆ ನೀಡುವುದು ಬಹಳ ಅಯೋಗ್ಯ ಮತ್ತು ಸಮಾಜದಲ್ಲಿ ಬಿರುಕು ಮೂಡಿಸುವುದಾಗಿದೆ. ಜೊತೆಗೆ ಹಿಂದೂ ಸಮಾಜದ ವಿರುದ್ಧ ದೇಶಾದ್ಯಂತ ತಿರಸ್ಕಾರ ಮತ್ತು ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಇಂತಹ ಆಘಾತಕಾರಿ ಹೇಳಿಕೆಯಿಂದ ದೇಶದಲ್ಲಿನ ಐಕ್ಯತೆಗೆ ಹಾನಿ ಉಂಟಾಗಿದೆ. ದೇಶದಲ್ಲಿನ ಸಾಮರಸ್ಯ ಮತ್ತು ಶಾಂತಿಗೆ ಭಂಗವಾಗಿದೆ. ಇದರ ಬಗ್ಗೆ ರಾಹುಲ್ ಗಾಂಧಿಯವರ ಸ್ಪಷ್ಟೀಕರಣ ಒಪ್ಪಲು ಸಾಧ್ಯವಿಲ್ಲ. ಆದಕಾರಣ ಅವರು ಹಿಂದೂ ಜನಾಂಗದ ಸಾರ್ವಜನಿಕ ಮತ್ತು ಶರತ್ತು ರಹಿತ ಕ್ಷಮೆಯಾಚಿಸಬೇಕು.

ಜೊತೆಗೆ ಲೋಕಸಭೆಯಲ್ಲಿ ಲೋಕಸಭಾ ಸದಸ್ಯತ್ವದ ಶಪಥ ಗ್ರಹಣ ಸಮಯದಲ್ಲಿ ಎಲ್ಲರ ಜೊತೆಗೆ ಸಮಭಾವನೆಯಿಂದ ವ್ಯವಹರಿಸುವುದರ ಕುರಿತು ಶಪಥ ಗ್ರಹಣ ಮಾಡಲಾಗುತ್ತದೆ.ರಾಹುಲ್ ಗಾಂಧಿ ಇವರು ಇದರ ಉಲ್ಲಂಘನೆ ಮಾಡಿದ್ದಾರೆ. ಆದಕಾರಣ ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅತ್ಯಾವಶ್ಯಕವಾಗಿದೆ. ನಮ್ಮ ಬೇಡಿಕೆ ಏನೆಂದರೆ, ರಾಹುಲ್ ಗಾಂಧಿಯವರ ಲೋಕಸಭಾ ಸದಸ್ಯತ್ವ ತಕ್ಷಣ ರದ್ದುಪಡಿಸಬೇಕು. ಅವರ ವಿರುದ್ಧ ಆರೋಪಪತ್ರ ದಾಖಲಿಸಿ ಕಾನೂನು ರೀತಿ ಕ್ರಮ ಕೈಗೊಳ್ಳಬೇಕು.ಸಮಾಜದಲ್ಲಿ ಭೇದಭಾವ ಮತ್ತು ದ್ವೇಷಪಸರಿಸುವ ಇಂತಹ ಜನರಿಗೆ ಚುನಾವಣೆಗೆ ಸ್ಪರ್ಧಿಸದೆ ಇರುವಂತೆ ಶಾಶ್ವತ ನಿಷೇಧ ಹೇರಬೇಕು.


ಸಂಸತ್ತಿನಲ್ಲಿ ಹಿಂದೂಗಳನ್ನು ಹಿಂಸಾತ್ಮಕ ಎಂದು ಹೇಳುವ ಕಾಂಗ್ರೆಸ್ಸಿನ ರಾಹುಲ್ ಗಾಂಧಿ ಇವರನ್ನು ಖಂಡಿಸುತ್ತೇವೆ !- ಹಿಂದೂ ಜನಜಾಗೃತಿ ಸಮಿತಿ

1st July 2024

ಇಂದು ಸಂಸತ್ತಿನಲ್ಲಿ ರಾಹುಲ್ ಗಾಂಧಿ ಇವರು ಹಿಂದುಗಳನ್ನು ಹಿಂಸಾತ್ಮಕ ರೀತಿಯಲ್ಲಿ ಚಿತ್ರಿಸುವ ಪ್ರಯತ್ನ ಮಾಡಿದ್ದಾರೆ, ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನಾವು ಇದನ್ನು ಖಂಡಿಸುತ್ತೇವೆ ಮತ್ತು ನಿಷೇಧಿಸುತ್ತೇವೆ. ಇದು ಅವರ ಮೊದಲನೆಯ ಪ್ರಯತ್ನವೇನಲ್ಲ; ಈ ಹಿಂದೆಯೂ ಕಾಂಗ್ರೆಸ್ಸಿನಿಂದ ಕೇಸರಿ ಭಯೋತ್ಪಾದನೆ ಎಂದು ಭಯೋತ್ಪಾದನೆಯ ಪರಿಕಲ್ಪನೆಯನ್ನು ಪ್ರಸ್ತುತಪಡಿಸುವ ಪ್ರಯತ್ನ ನಡೆದಿತ್ತು. ಕಾಂಗ್ರೆಸ್ ಯಾವಾಗಲು ವೈಶ್ವಿಕಮಟ್ಟದಲ್ಲಿ ಹಿಂದೂ ಜನಾಂಗವನ್ನು ಕಳಂಕಿತಗೊಳಿಸುವ ಪ್ರಯತ್ನ ಮಾಡುತ್ತಿದೆ. ರಾಹುಲ್ ಗಾಂಧಿ ದೇವಸ್ಥಾನಕ್ಕೆ ಹೋಗುವುದು ಮತ್ತು ಪವಿತ್ರ ದಾರವನ್ನು ಕಟ್ಟಿಕೊಳ್ಳದು ವಂಚನೆಯಾಗಿದೆ. ಸ್ವತಃ ಮಹಾತ್ಮ ಗಾಂಧಿ ಇವರು ತಮ್ಮನ್ನು ಚಾತುರ್ವರ್ಣ ಎಂದು ನಂಬುವ ಹಿಂದೂ ರೂಪದಲ್ಲಿ ಪ್ರಸ್ತುತಪಡಿಸಿದ್ದರು, ಎಂದು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ವಕ್ತಾರರಾದ ಶ್ರೀ. ರಮೇಶ ಶಿಂದೆ ಹೇಳಿದ್ದಾರೆ.

1990ರ ದಶಕದಲ್ಲಿ ಕಾಶ್ಮೀರಿ ಹಿಂದುಗಳನ್ನು ಕಾಶ್ಮೀರದಿಂದ ಯಾರು ಓಡಿಸಿದರು? ಇದನ್ನು ರಾಹುಲ್ ಗಾಂಧಿ ಹೇಳುವರೇ ? ಯಾವ ಜನಾಂಗದವರು ಅವರನ್ನು ಸ್ಥಳಾಂತರಿಸಿದರು ? ಕಾಶ್ಮೀರಿ ಹಿಂದುಗಳು ಯಾವ ದೌರ್ಜನ್ಯವನ್ನು ಎದುರಿಸಿದ್ದಾರೆ, ಅದರಲ್ಲಿನ ಎಷ್ಟು ಸ್ಥಳಾಂತರ ಕಾಶ್ಮೀರಿ ಹಿಂದುಗಳು AK 47 ಅಂತಹ ಶಸ್ತ್ರ ಉಪಯೋಗಿಸಿದರು ? ಇದರ ಬಗ್ಗೆ ಅವರ ನಿಲುವು ಸ್ಪಷ್ಟಪಡಿಸಬೇಕು.

ವೈಶ್ವಿಕ ಮಟ್ಟದಲ್ಲಿ ಹಿಂದೂ ಸಮಾಜವನ್ನು ಇಂದು ಸಾರ್ವಭೌಮ ಶಾಂತಿ ಮತ್ತು ಕಲ್ಯಾಣದ ವಿಚಾರಧಾರೆಗಾಗಿ ಗುರುತಿಸುತ್ತಾರೆ. ವಸುದೈವ ಕುಟುಂಬಕಮ್, ಈ ಸಂಪೂರ್ಣ ಜಗತ್ತು ಒಂದು ಪರಿವಾರ ಈ ಸಿದ್ಧಾಂತವನ್ನು ಪ್ರತಿನಿಧಿಸುತ್ತದೆ. ಈ ಸಮಾಜವನ್ನು ಹಿಂಸಾತ್ಮಕ ಅಥವಾ ಭಯೋತ್ಪಾದಕರ ರೂಪದಲ್ಲಿ ಹಣೆಪಟ್ಟಿ ಹಚ್ಚಿ ಅವರ ಪ್ರತಿಮೆಯನ್ನು ಹಾಳು ಮಾಡುವ ಪ್ರಯತ್ನವಾಗಿದೆ. ವಾಸ್ತವದಲ್ಲಿ ಇಂತಹ ಹೇಳಿಕೆ ನೀಡುವ ಸಮಯದಲ್ಲಿ ಅವರಿಗೆ ನಾಚಿಕೆ ಅನಿಸಬೇಕು. ಎಲ್ಲಾ ಕಾಂಗ್ರೆಸ್ ನಾಯಕರು ಹಿಂದುಗಳ ಕುರಿತು ತಮ್ಮ ನಿಲುವನ್ನು ಸ್ಪಷ್ಟಪಡಿಸಬೇಕು ಎಂದೂ ಶ್ರೀ. ರಮೇಶ ಶಿಂದೆ ಹೇಳಿದ್ದಾರೆ.

Related News