Menu Close

ಹಿಂದೂ ಧರ್ಮದ ಅಡಿಪಾಯ ದೇವಸ್ಥಾನಗಳು

ಹಿಂದೂ ಧರ್ಮದ ಅಡಿಪಾಯ ದೇವಸ್ಥಾನಗಳು

ಹಿಂದೂ ದೇವಾಲಯಗಳು ಸಂಪ್ರದಾಯ, ಪರಂಪರೆ ಮತ್ತು ಅವುಗಳಿಗೆ ಸಂಬಂಧಿಸಿರುವ ಸಂಸ್ಕೃತಿಗಳನ್ನು ಜೀವಂತ ಉಳಿಸುವ ಸಂಸ್ಥೆಗಳಾಗಿವೆ

ವ್ಯಕ್ತಿ ಮತ್ತು ಪರಿಸರದ ಶುದ್ಧಿಗಾಗಿ ಆವಶ್ಯಕವಿರುವ ಸಕಾರಾತ್ಮಕ ಆಧ್ಯಾತ್ಮಿಕ ಶಕ್ತಿಯ ಸಂರಕ್ಷಣೆ, ವೃದ್ಧಿ ಮತ್ತು ಪಸರಿಸುವ ಕಾರ್ಯ ದೇವಾಲಯಗಳು ಮಾಡುತ್ತವೆ

ಹಿಂದೂ ದೇವಾಲಯಗಳು ವಾಸ್ತವದಲ್ಲಿ ಆಧ್ಯಾತ್ಮಿಕ, ಮಾನಸಿಕ ಮತ್ತು ಸಾಂಪ್ರದಾಯಿಕ ಬೆಂಬಲದ ಕೇಂದ್ರಗಳಾಗಿದ್ದು, ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯ ಮಾಡುತ್ತವೆ

ಹಿಂದೂ ದೇವಾಲಯಗಳು ಕೇವಲ ಪೂಜಾ ಸ್ಥಳ ಅಥವಾ ಜನಸಮೂಹ ಸೇರುವ ಸ್ಥಾನಗಳಲ್ಲ. ಅವು  ಹಿಂದೂ ಸಂಸ್ಕೃತಿಯನ್ನು ಸಂರಕ್ಷಿಸಿ ಪೋಷಿಸುವಲ್ಲಿ ಅಸಾಧಾರಣ ಪಾತ್ರವನ್ನು ವಹಿಸುತ್ತವೆ. ಹಿಂದೆ ಹಿಂದೂ ಸಮುದಾಯವು ದೇವಾಲಯಗಳನ್ನು ಬೆಂಬಲಿಸಿತ್ತು ಮತ್ತು ದೇವಾಲಯಗಳು ವಾಣಿಜ್ಯ, ಕಲೆ, ಸಂಸ್ಕೃತಿ ಮತ್ತು ಶಿಕ್ಷಣವನ್ನು ಪೋಷಿಸಿದವು. ದಾಳಿಕಾರ ಜಿಹಾದಿಗಳು ಇದನ್ನು ಅರಿತು ನಮ್ಮ ದೇವಾಲಯಗಳನ್ನು ಸುಟ್ಟು ಭಸ್ಮ ಮಾಡಿದವು. ಧೂರ್ತ ಬ್ರಿಟಿಷರು ಇದನ್ನು ಅರಿತು ನಮ್ಮ ದೇವಾಲಯಗಳನ್ನು ಬಲವಂತವಾಗಿ ನಿಯಂತ್ರಿಸಲು ಪ್ರಾರಂಭಿಸಿದರು. ಸ್ವಾತಂತ್ರ್ಯದ ನಂತರದ ಭಾರತದಲ್ಲಿ ಹಿಂದೂ ದೇವಾಲಯಗಳು ‘ಸೆಕ್ಯುಲರ್’ ಸರ್ಕಾರಗಳಿಗಾಗಿ ಹಣ ಪೂರೈಸುವ ಸಾಧನಗಳಾಗಿ ಮಾರ್ಪಟ್ಟವು. ದೇವಾಲಯಗಳ ಸಂಪತ್ತನ್ನು ಲೂಟಿ ಮಾಡಲಾಯಿತು, ಭೂಮಿಯನ್ನು ಕಬಳಿಸಿ ಮಾರಾಟ ಮಾಡಲಾಯಿತು. ದೇವಾಲಯಗಳು ಸ್ವಾಯತ್ತತೆ ಕಳೆದುಕೊಂಡ ಕಾರಣ ಹಿಂದೂ ಸಮುದಾಯ ದೇವಾಲಯಗಳಿಂದ ದೂರವಾಯಿತು, ಇದರ ಪರಿಣಾಮವಾಗಿ ನೈತಿಕತೆ ಕುಸಿಯಿತು ಮತ್ತು ಹಿಂದುಗಳು ಮತಾಂತರಿತರಾದರು.

ಮುಕ್ತಿಗಾಗಿ ಕಾಯುತ್ತಿರುವ ದೇವಾಲಯಗಳು !

ದೇವಸ್ಥಾನಗಳ ರಕ್ಷಣೆಗಾಗಿ ಹಿಂದೂ ಜನಜಾಗೃತಿ ಸಮಿತಿ ನಿರಂತರ ಹೋರಾಟ ನಡೆಸುತ್ತಿದೆ. ಸಮಿತಿಯು ದೇವಾಲಯಗಳಲ್ಲಿ ಬೃಹತ್ ಪ್ರಮಾಣದ ಭ್ರಷ್ಟಾಚಾರವನ್ನು ಬಯಲಿಗೆಳೆದಿದೆ, ದುರ್ವ್ಯವಹಾರ ತಡೆದಿದೆ, ದೇವಾಲಯಗಳಲ್ಲಿ ವಸ್ತ್ರ ಸಂಹಿತೆ (ಡ್ರೆಸ್ ಕೋಡ್) ಜಾರಿಗೆ ಒತ್ತಾಯಿಸಿದೆ. ಈಗ ಹಿಂದೂ ದೇವಾಲಯಗಳನ್ನು ಮುಕ್ತಗೊಳಿಸುವ ಈ ಆಂದೋಲನದಲ್ಲಿ ಪಾಲ್ಗೊಳ್ಳುವಂತೆ ನಿಮಗೆ ಕರೆ ನೀಡುತ್ತಿದ್ದೇವೆ…

 

Laws

Laws like the Places of Worship Act 1991, state level Endowment acts ensure that Hindus don’t have control over their temples

Government

State governments treat Hindu temples as cash cows and use temple fund donations for purposes other than Hindu welfare

Judiciary

Hindu temple traditions are sacred and inviolable, but the judiciary regularly dictates changes in centuries old traditions

Fanatics

Hindu temples continue to be the prime target of religious fanatics, who either encroach on temple land or destroy temple property with impunity

ಸರಕಾರದ ಸ್ವಾಧೀನಕ್ಕೊಳಗಾದ ಹಿಂದೂ ದೇವಾಲಯಗಳ ಸ್ಥಿತಿ

ತುಳಜಾಭವಾನಿ ದೇವಸ್ಥಾನ ಸಮಿತಿ ಹಗರಣ

ತುಳಜಾಪುರ ದೇವಸ್ಥಾನ ಸಮಿತಿಯ ಒಡೆತನದಲ್ಲಿದ್ದ ಅಮೃತವಾಡಿಯಲ್ಲಿ 3568 ಎಕರೆ ಭೂಮಿಯಲ್ಲಿ 265 ಎಕರೆ ಭೂಮಿ 77 ವ್ಯಕ್ತಿಗಳ ಹೆಸರಲ್ಲಿ ಕಾನೂನುಬಾಹಿರವಾಗಿ ಹಸ್ತಾಂತರಿಸಲಾಗಿದೆ.

ತಮಿಳುನಾಡು ದೇವಸ್ಥಾನದ 47,000 ಎಕರೆ ಭೂಮಿ ಕಣ್ಮರೆ

ಸರಕಾರಿ ದಾಖಲೆಗಳಿಗನುಸಾರ, ತಮಿಳುನಾಡಿನಲ್ಲಿ 1984-85 ರಲ್ಲಿ ದೇವಸ್ಥಾನಗಳ ಒಡೆತನದಲ್ಲಿ 5.25 ಲಕ್ಷ ಎಕರೆ ಜಮೀನು ಇತ್ತು. ಆದರೆ 2019-20 ರಲ್ಲಿ 4.78 ಲಕ್ಷ ಎಕರೆ ಮಾತ್ರ ಉಳಿದಿದೆ.

ತಿರುಪತಿಯಲ್ಲಿ ತಿಮ್ಮಪ್ಪನಿಗೆ ಸೇರಿದ ಆಭರಣಗಳು ಕಣ್ಮರೆ

ಆಡಿಟ್ ನಲ್ಲಿ ತಿರುಪತಿ ತಿರುಮಲ ದೇವಾಲಯದ ನೆಲಮಾಳಿಗೆಗಳಿಂದ ಚಿನ್ನ ಬೆಳ್ಳಿಯ ಆಭರಣಗಳು, ಹಾರ, ನಾಣ್ಯಗಳು, ಕಿರೀಟ ಇತ್ಯಾದಿ ಲಕ್ಷಾಂತರ ಮೌಲ್ಯದ ವಸ್ತುಗಳು, ಆಭರಣಗಳು ಕಣ್ಮರೆಯಾಗಿದ್ದು ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ದೇವಸ್ಥಾನಗಳ 625 ಎಕರೆ ಜಮೀನು ಅತಿಕ್ರಮಣ

ಕರ್ನಾಟಕ ಮುಜರಾಯಿ ಇಲಾಖೆಗೆ ಸೇರಿರುವ 5700 ಕ್ಕಿಂತ ಹೆಚ್ಚು ದೇವಾಲಯಗಳ ಸರ್ವೆಯಲ್ಲಿ ಸುಮಾರು 625 ಎಕರೆ ಭೂಮಿ ಕಬಳಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪಂಡರಾಪುರದ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣ

ಪಂಡರಾಪುರದ ಶ್ರೀ ವಿಠಲ ರುಕ್ಮಿಣಿ  ದೇವಸ್ಥಾನದಲ್ಲಿ ಸರಕಾರ ನೇಮಿಸಿದ ಸಮಿತಿಯಿಂದ ಧನದ ದುರುಪಯೋಗ ಮಾಡಲಾಯಿತು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಹಗರಣ

ಮಂತ್ರಿಗಳ ಒಡೆತನದ ಕಂಪನಿಗಳೊಂದಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು. ಈ ಹಗರಣ ನ್ಯಾಯಲಯದಲ್ಲಿ ಇರುವಾಗಲೇ ಟ್ರಸ್ಟಿಗಳು ದುಬಾರಿ ಹೋಟೆಲ್ ಗಳಲ್ಲಿ ಬೈಠಕ್ ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು.

ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ ಹಗರಣ

ಸರಕಾರದಿಂದ ನೇಮಿಸಿದ ಸಮಿತಿಯಿಂದ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ, ಜ್ಯೋತಿಬಾ ದೇವಸ್ಥಾನದಂತಹ, 3067 ದೇವಸ್ಥಾನಗಳ ನಿರ್ವಹಣೆ ಮತ್ತು ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ಭಾರಿ ಹಗರಣಗಳು

ಶಿರಡಿ ಸಾಯಿ ಸಂಸ್ಥಾನ ಟ್ರಸ್ಟ್ ಹಗರಣ

2015 ರಲ್ಲಿ ನಾಸಿಕ್‌ನಲ್ಲಿ ನಡೆದ ಕುಂಭಮೇಳದಲ್ಲಿ ಭದ್ರತೆಯನ್ನು ಒದಗಿಸಲು ಟ್ರಸ್ಟ್ ಪೊಲೀಸರಿಗೆ ಹೆಚ್ಚಿನ ಬೆಲೆಗೆ ಕೆಲವು ವಸ್ತುಗಳನ್ನು ಖರೀದಿಸಿದ್ದು, ಇದರಲ್ಲಿ 66,55,997 ರೂ. ಅವ್ಯವಹಾರ ನಡೆಯಿತು.

ಸರಕಾರದ ಸ್ವಾಧೀನಕ್ಕೊಳಗಾದ ಹಿಂದೂ ದೇವಾಲಯಗಳ ಸ್ಥಿತಿ

ತುಳಜಾಭವಾನಿ ದೇವಸ್ಥಾನ ಸಮಿತಿ ಹಗರಣ

ತುಳಜಾಪುರ ದೇವಸ್ಥಾನ ಸಮಿತಿಯ ಒಡೆತನದಲ್ಲಿದ್ದ ಅಮೃತವಾಡಿಯಲ್ಲಿ 3568 ಎಕರೆ ಭೂಮಿಯಲ್ಲಿ 265 ಎಕರೆ ಭೂಮಿ 77 ವ್ಯಕ್ತಿಗಳ ಹೆಸರಲ್ಲಿ ಕಾನೂನುಬಾಹಿರವಾಗಿ ಹಸ್ತಾಂತರಿಸಲಾಗಿದೆ.

ತಮಿಳುನಾಡು ದೇವಸ್ಥಾನದ 47,000 ಎಕರೆ ಭೂಮಿ ಕಣ್ಮರೆ

ಸರಕಾರಿ ದಾಖಲೆಗಳಿಗನುಸಾರ, ತಮಿಳುನಾಡಿನಲ್ಲಿ 1984-85 ರಲ್ಲಿ ದೇವಸ್ಥಾನಗಳ ಒಡೆತನದಲ್ಲಿ 5.25 ಲಕ್ಷ ಎಕರೆ ಜಮೀನು ಇತ್ತು. ಆದರೆ 2019-20 ರಲ್ಲಿ 4.78 ಲಕ್ಷ ಎಕರೆ ಮಾತ್ರ ಉಳಿದಿದೆ.

ತಿರುಪತಿಯಲ್ಲಿ ತಿಮ್ಮಪ್ಪನಿಗೆ ಸೇರಿದ ಆಭರಣಗಳು ಕಣ್ಮರೆ

ಆಡಿಟ್ ನಲ್ಲಿ ತಿರುಪತಿ ತಿರುಮಲ ದೇವಾಲಯದ ನೆಲಮಾಳಿಗೆಗಳಿಂದ ಚಿನ್ನ ಬೆಳ್ಳಿಯ ಆಭರಣಗಳು, ಹಾರ, ನಾಣ್ಯಗಳು, ಕಿರೀಟ ಇತ್ಯಾದಿ ಲಕ್ಷಾಂತರ ಮೌಲ್ಯದ ವಸ್ತುಗಳು, ಆಭರಣಗಳು ಕಣ್ಮರೆಯಾಗಿದ್ದು ಬೆಳಕಿಗೆ ಬಂದಿದೆ.

ಕರ್ನಾಟಕದಲ್ಲಿ ದೇವಸ್ಥಾನಗಳ 625 ಎಕರೆ ಜಮೀನು ಅತಿಕ್ರಮಣ

ಕರ್ನಾಟಕ ಮುಜರಾಯಿ ಇಲಾಖೆಗೆ ಸೇರಿರುವ 5700 ಕ್ಕಿಂತ ಹೆಚ್ಚು ದೇವಾಲಯಗಳ ಸರ್ವೆಯಲ್ಲಿ ಸುಮಾರು 625 ಎಕರೆ ಭೂಮಿ ಕಬಳಿಸಲಾಗಿದೆ ಎಂಬುದು ಬೆಳಕಿಗೆ ಬಂದಿದೆ.

ಮಹಾರಾಷ್ಟ್ರದ ಪಂಡರಾಪುರದ ಶ್ರೀ ವಿಠಲ ರುಕ್ಮಿಣಿ ದೇವಸ್ಥಾನದಲ್ಲಿ ಕೋಟ್ಯಂತರ ರೂಪಾಯಿಗಳ ಹಗರಣ

ಪಂಡರಾಪುರದ ಶ್ರೀ ವಿಠಲ ರುಕ್ಮಿಣಿ  ದೇವಸ್ಥಾನದಲ್ಲಿ ಸರಕಾರ ನೇಮಿಸಿದ ಸಮಿತಿಯಿಂದ ಧನದ ದುರುಪಯೋಗ ಮಾಡಲಾಯಿತು.

ಶ್ರೀ ಸಿದ್ಧಿವಿನಾಯಕ ದೇವಸ್ಥಾನ ಟ್ರಸ್ಟ್ ಹಗರಣ

ಮಂತ್ರಿಗಳ ಒಡೆತನದ ಕಂಪನಿಗಳೊಂದಿಗೆ ಕೋಟ್ಯಂತರ ರೂಪಾಯಿಗಳ ವಹಿವಾಟು. ಈ ಹಗರಣ ನ್ಯಾಯಲಯದಲ್ಲಿ ಇರುವಾಗಲೇ ಟ್ರಸ್ಟಿಗಳು ದುಬಾರಿ ಹೋಟೆಲ್ ಗಳಲ್ಲಿ ಬೈಠಕ್ ಗಳಿಗಾಗಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿದರು.

ಪಶ್ಚಿಮ ಮಹಾರಾಷ್ಟ್ರ ದೇವಸ್ಥಾನ ಸಮಿತಿ ಹಗರಣ

ಸರಕಾರದಿಂದ ನೇಮಿಸಿದ ಸಮಿತಿಯಿಂದ ಕೊಲ್ಲಾಪುರ ಮಹಾಲಕ್ಷ್ಮಿ ದೇವಸ್ಥಾನ, ಜ್ಯೋತಿಬಾ ದೇವಸ್ಥಾನದಂತಹ, 3067 ದೇವಸ್ಥಾನಗಳ ನಿರ್ವಹಣೆ ಮತ್ತು ಕಾರ್ಯನಿರ್ವಹಣೆಯಲ್ಲಿ ಹಣಕಾಸಿನ ಭಾರಿ ಹಗರಣಗಳು

ಶಿರಡಿ ಸಾಯಿ ಸಂಸ್ಥಾನ ಟ್ರಸ್ಟ್ ಹಗರಣ

2015 ರಲ್ಲಿ ನಾಸಿಕ್‌ನಲ್ಲಿ ನಡೆದ ಕುಂಭಮೇಳದಲ್ಲಿ ಭದ್ರತೆಯನ್ನು ಒದಗಿಸಲು ಟ್ರಸ್ಟ್ ಪೊಲೀಸರಿಗೆ ಹೆಚ್ಚಿನ ಬೆಲೆಗೆ ಕೆಲವು ವಸ್ತುಗಳನ್ನು ಖರೀದಿಸಿದ್ದು, ಇದರಲ್ಲಿ 66,55,997 ರೂ. ಅವ್ಯವಹಾರ ನಡೆಯಿತು.

ಹಿಂದೂ ದೇವಾಲಯಗಳನ್ನು ಏಕೆ ಮುಕ್ತಗೊಳಿಸಬೇಕು

ನಿರ್ವಹಣೆಯ ಮೇಲೆ ಸರಕಾರದ ನಿಯಂತ್ರಣ

ಆದಾಯದ ಮೇಲೆ ತೆರಿಗೆ (ಟ್ಯಾಕ್ಸ್)

ಆಸ್ತಿಯ ಮೇಲೆ ಸರಕಾರದ ನಿಯಂತ್ರಣ

ಪದ್ಧತಿ-ಪರಂಪರೆಗಳ ಮೇಲೆ ಹಿಡಿತ

ಅಂಗಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ

ಹಿಂದೂ ದೇವಾಲಯಗಳನ್ನು ಏಕೆ ಮುಕ್ತಗೊಳಿಸಬೇಕು ?

ನಿರ್ವಹಣೆಯ ಮೇಲೆ ಸರಕಾರದ ನಿಯಂತ್ರಣ

ಆದಾಯದ ಮೇಲೆ ತೆರಿಗೆ (ಟ್ಯಾಕ್ಸ್)

ಆಸ್ತಿಯ ಮೇಲೆ ಸರಕಾರದ ನಿಯಂತ್ರಣ

ಪದ್ಧತಿ-ಪರಂಪರೆಗಳ ಮೇಲೆ ಹಿಡಿತ

ಅಂಗಸಂಸ್ಥೆಗಳ ಮೇಲೆ ಸರ್ಕಾರದ ನಿಯಂತ್ರಣ

ಹಿಂದೂ ದೇವಾಲಯಗಳು ಸ್ವಾಯತ್ತತೆ ಕಳೆದುಕೊಳ್ಳುವುದರಿಂದಾಗುವ ಹಾನಿ

1

ದೇವಾಲಯದ ಸ್ಥಿರಾಸ್ತಿಯು ದೇವಾಲಯಕ್ಕೆ ಆದಾಯವನ್ನು ತರುವಂತಾಗಿರಬೇಕು. ಆದರೆ ಇಂದು ಭೂಮಿಯ ಮೌಲ್ಯದ 0.0005% ಕ್ಕಿಂತ ಕಡಿಮೆ ಮೊತ್ತ ಬಾಡಿಗೆಯೆಂದು  ಸಂಗ್ರಹಿಸಲಾಗುತ್ತದೆ. ಇದರಿಂದ ದೇವಾಲಯಗಳ ಆಸ್ತಿಯ ಭಾರೀ ಅಪಮೌಲ್ಯವಾಗುತ್ತದೆ.

2

ದೇವಾಲಯದ ಭೂಮಿಯನ್ನು ಧಾರ್ಮಿಕ ಉದ್ದೇಶಗಳಿಗಾಗಿ ದಾನ ಮಾಡಲಾಗುತ್ತದೆ. ಸರಕಾರದ ನಿರಾಸಕ್ತಿಯಿಂದಾಗಿ ಈ ಭೂಮಿ ಅತಿಕ್ರಮಣಕ್ಕೊಳಪಟ್ಟಿದೆ. ಇದುವರೆಗಿನ ಸರಕಾರಗಳೂ ಈ ಭೂಮಿಗೆ ಸೂಕ್ತ ಬೆಲೆ ಪಾವತಿಸದೇ ಬಳಕೆ ಮಾಡಿಕೊಳ್ಳುತ್ತಿವೆ.

3

ಹಿಂದೂಗಳು ದಾನ ನೀಡಿದ ಹಣವನ್ನು ಹಿಂದೂಗಳ ಶ್ರೇಯೋಭಿವೃದ್ಧಿಗೆ ಮತ್ತು ಧರ್ಮಪ್ರಚಾರ-ಪ್ರಸಾರಕ್ಕೆ ಬಳಸುವ ಬದಲು ಸರಕಾರ ನಡೆಸುವ ‘ಅಭಿವೃದ್ಧಿ ಮತ್ತು ನಿರ್ಮಾಣ’ ಯೋಜನೆಗಳಿಗೆ ಖರ್ಚು ಮಾಡಲಾಗುತ್ತದೆ.

4

ದೇವಾಲಯದ ಆದಾಯದ ಮೇಲೆ ನಿಯಂತ್ರಣವಿಟ್ಟುಕೊಳ್ಳುವುದಲ್ಲದೆ ಸರಕಾರವು ಅದರ ಮೇಲೆ ತೆರಿಗೆಯೂ (tax) ವಿಧಿಸುತ್ತದೆ. ಈ ಹಣ ಕಡಿಮೆ ಬಳಕೆಯಾಗುತ್ತದೆ ಮತ್ತು ಕೊನೆಗೆ ಸರ್ಕಾರದ ಬೊಕ್ಕಸಕ್ಕೆ ಸೇರುತ್ತದೆ.

5

ಸ್ಥಳೀಯ ರಾಜಕಾರಣಿಗಳ ಸಹಕಾರದಿಂದ ದೇವಾಲಯದ ಅಧಿಕಾರಿಗಳು ಕೆಲವೊಮ್ಮೆ ಹುಂಡಿಯಿಂದ ನಗದು, ಚಿನ್ನ ಅಥವಾ ಬೆಳ್ಳಿಯಂತಹ ಕಾಣಿಕೆಗಳನ್ನು ದಾನದ ದಾಖಲಾತಿಯ ಮುನ್ನವೇ ತೆಗೆಯುತ್ತಾರೆ.

6

ಸರಕಾರವು ದೇವಾಲಯದ ಟ್ರಸ್ಟ್‌ಗಳ ಮೇಲೆ ಭ್ರಷ್ಟಾಚಾರದ ಆರೋಪ ಹೊರಿಸಿ, ಮುಜರಾಯಿ ಕಾಯ್ದೆಯಡಿ ಕೇವಲ ಹಿಂದೂ ದೇವಾಲಯಗಳನ್ನು ಸ್ವಾದೀನ ಕ್ರಮಕ್ಕೆ ಗುರಿಯಾಗಿಸುವುದು, 25 ರಿಂದ 30 ನೇ ವಿಧಿಗಳನ್ನು ಉಲ್ಲಂಘನೆಯಾಗಿದೆ

ಹಿಂದೂ ದೇವಾಲಯಗಳ ಸಂಪತ್ತಿರುವುದು ಇವುಗಳಿಗಾಗಿ…

ದೇವಾಲಯಗಳು ಶಿಕ್ಷಣ, ವಾಣಿಜ್ಯ, ಕಲೆ, ಸಂಸ್ಕೃತಿ, ಆಧ್ಯಾತ್ಮಿಕತೆಯ ಕೇಂದ್ರಗಳಾಗಿದ್ದವು. ಆದರೆ ದೇವಸ್ಥಾನಗಳು ತಮ್ಮ ಗಳಿಕೆಯಿಂದ ವಂಚಿತರಾದ ದಿನದಿಂದ ಅವೆಲ್ಲವೂ ಅಧೋಗತಿಗೆ ಹೋಗತೊಡಗಿದವು. ಇದರ ಪರಿಣಾಮವಾಗಿ ಸನಾತನ ಹಿಂದೂ ಧಾರ್ಮಿಕ ಸಂಸ್ಕೃತಿಯ ಅವನತಿಯಾಯಿತು. ಸನಾತನ ಧರ್ಮದ ವೈಭವವನ್ನು ಮರುಸ್ಥಾಪಿಸಲು ನಾವು ಹಿಂದೂ ದೇವಾಲಯಗಳನ್ನು ಹಿಂದೂ ನಾಗರಿಕತೆಯ ಕೇಂದ್ರವಾಗಿ ಮರುಸ್ಥಾಪಿಸಬೇಕಾಗಿದೆ. ಆದ್ದರಿಂದ ದೇವಾಲಯದ ಹಣವನ್ನು ಹಿಂದೂ ಧರ್ಮದ ಅಧ್ಯಯನ, ಸಂರಕ್ಷಣೆ ಮತ್ತು ಪ್ರಚಾರಕ್ಕಾಗಿ ಮಾತ್ರ ಬಳಸಬೇಕು.

ಗೋಶಾಲೆಗಳ ನಿರ್ಮಾಣ

ಸ್ವದೇಶಿ ಗೋತಳಿಗಳ ರಕ್ಷಣೆಗಾಗಿ

ಗುರುಕುಲದ ಆರಂಭ

ಮುಂದಿನ ಪೀಳಿಗೆಗೆ ಹಿಂದೂ ಧರ್ಮದ ಶಿಕ್ಷಣ ನೀಡಲು

ದೇವಾಲಯಗಳ ಜೀರ್ಣೋದ್ಧಾರ

ಪ್ರಾಚೀನ ದೇವಾಲಯಗಳ ಜೀರ್ಣೋದ್ಧಾರ ಮತ್ತು ನಿರ್ವಹಣೆಗಾಗಿ

ಯಜ್ಞ ಸಂಸ್ಕೃತಿ

ಧಾರ್ಮಿಕ ಯಜ್ಞ ಸಂಸ್ಕೃತಿಯ ಪ್ರಾಮುಖ್ಯತೆಯನ್ನು ಮರುಸ್ಥಾಪಿಸಲು

ವೇದ ಪಾಠಶಾಲೆ 

ನಮ್ಮ ಧಾರ್ಮಿಕ ಗ್ರಂಥಗಳ ಆಧಾರದ ಮೇಲೆ ಜನರಿಗೆ ಮಾರ್ಗದರ್ಶನ ನೀಡುವ ವೈದಿಕ ವಿದ್ವಾಂಸರಿಗೆ ಶಿಕ್ಷಣ ನೀಡಲು

ಧರ್ಮಶಿಕ್ಷಣ

ಸ್ವಧರ್ಮದ ಬಗ್ಗೆ ಅಭಿಮಾನ ಮೂಡಿಸುವಂತಹ ಧರ್ಮಶಿಕ್ಷಣ ನೀಡಲು

ದೇವಸ್ಥಾನಗಳ ರಕ್ಷಣೆಗೆ ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನ

ಶ್ರೀ ತುಳಜಾಭವಾನಿ ದೇವಸ್ಥಾನದಲ್ಲಿ ನಡೆದ 8 ಕೋಟಿ ಹಗರಣದ ತನಿಖೆಯನ್ನು ಸರ್ಕಾರ ಸ್ಥಗಿತಗೊಳಿಸಿತ್ತು. ಈ ನಿರ್ಧಾರವನ್ನು ಹಿಂಪಡೆಯುವಂತೆ ಆಗ್ರಹಿಸಿ ಸಮಿತಿ ಪ್ರತಿಭಟನೆ ನಡೆಸಿತು.

ಸಮಿತಿಯು ‘ಮಹಾರಾಷ್ಟ್ರ ಮಂದಿರ-ನ್ಯಾಸ ಪರಿಷತ್’ ಆಯೋಜಿಸಿದ್ದು, 300 ದೇವಾಲಯಗಳ ಧರ್ಮದರ್ಶಿಗಳು, ಅರ್ಚಕರು, ಲೆಕ್ಕ ಪರಿಶೋಧಕರು ಮತ್ತು ವಕೀಲರು ದೇವಾಲಯಗಳನ್ನು ಸಂರಕ್ಷಿಸಲು ಪ್ರತಿಜ್ಞೆ ಮಾಡಿದರು.

ಸಮಿತಿಯು ದೇವಾಲಯಗಳಲ್ಲಿ ವಸ್ತ್ರ ಸಂಹಿತೆ ಜಾರಿಗೊಳಿಸುವ ಅಭಿಯಾನವನ್ನು ಆರಂಭಿಸಿತು. ಇದರ ಪರಿಣಾಮವಾಗಿ ಮಹಾರಾಷ್ಟ್ರದಾದ್ಯಂತ 131 ಕ್ಕೂ ಹೆಚ್ಚು ದೇವಾಲಯಗಳು ಇಲ್ಲಿಯವರೆಗೆ ವಸ್ತ್ರ ಸಂಹಿತೆಯನ್ನು ಜಾರಿಗೆ ತಂದಿವೆ.

Hindu Rashtra Jagruti Andolan organised across India to demand central government to immediately pass the Anti-Love Jihad law

Memorandum submitted to Govt officials at various places to implement effective measures in the context of the gruesome problem of ‘Love Jihad’

Successful Online campaigns launched against advt. of Tanishq Jewellery and TV serial ‘Begum Jaan’ which promoted love jihad

ಶೇರ್ ಮಾಡಿ ಮತ್ತು ಜಾಗೃತಿ ಮೂಡಿಸಿ

ಹಿಂದೂಗಳ ಬೇಡಿಕೆಗಳೇನಿರಬೇಕು ?

1

ಸರಕಾರದ ಅಧೀನದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸುವ ಮೂಲಕ ಸರಕಾರ ನ್ಯಾಯಾಲಯದ ಆದೇಶವನ್ನು ಪಾಲಿಸಬೇಕು

2

ದೇವಸ್ಥಾನದ ಆಸ್ತಿಯನ್ನು ಸರಕಾರಿ ಯೋಜನೆಗಳಿಗೆ ಬಳಸುವುದಿಲ್ಲ ಎಂದು ಸರಕಾರ ಘೋಷಿಸಬೇಕು

3

ಐತಿಹಾಸಿಕ ದೃಷ್ಟಿಯಿಂದ ಮಹತ್ವಪೂರ್ಣ ದೇವಾಲಯಗಳ ಜೀರ್ಣೋದ್ಧಾರಕ್ಕೆ ಸರಕಾರವು ಬಜೆಟ್‌ನಲ್ಲಿ ಹಣ ಮೀಸಲಿಡಬೇಕು

4

ಯಾತ್ರಾಸ್ಥಳ ಹಾಗೂ ಕೋಟೆಗಳಲ್ಲಿರುವ ದೇವಾಲಯಗಳ ಮೇಲಿನ ಅತಿಕ್ರಮಣವನ್ನು ಸರ್ವೆ ನಡೆಸಿ ಕೂಡಲೇ ತೆರವುಗೊಳಿಸಬೇಕು

5

ದೇವಸ್ಥಾನದ ಅರ್ಚಕರ ಆದಾಯ ತೀರಾ ಕಡಿಮೆ ಇರುವುದರಿಂದ ಸರಕಾರ ಮಾಸಿಕ ಭತ್ಯೆ ನೀಡಬೇಕು

6

ದೇವಸ್ಥಾನದ ಪರಿಸರದಲ್ಲಿ ಮದ್ಯ, ಮಾಂಸ ಮಾರಾಟ ಮಾಡದಂತೆ ಸರಕಾರ ಅಧಿಸೂಚನೆ ಹೊರಡಿಸಬೇಕು

7

ಸೂಕ್ತ ದಾಖಲೆಗಳು ಲಭ್ಯವಿದ್ದಾಗ ‘ಸಿ’ ಶ್ರೇಣಿಯ ದೇವಾಲಯಗಳನ್ನು ತಕ್ಷಣವೇ ‘ಬಿ’ ಶ್ರೇಣಿಗೆ ವರ್ಗೀಕರಿಸಬೇಕು

8

ಸರಕಾರಿ ಉದ್ದೇಶಕ್ಕಾಗಿ ದೇಣಿಗೆ ನೀಡಲು ದತ್ತಿ ಆಯುಕ್ತರು ದೇವಸ್ಥಾನಗಳಿಗೆ ಆದೇಶ ಕಳುಹಿಸಬಾರದು

9

ದೇವಸ್ಥಾನದ ಹಣವನ್ನು ಧಾರ್ಮಿಕ ಉದ್ದೇಶಕ್ಕೆ ಮಾತ್ರ ಬಳಸುವಂತೆ ಸರಕಾರ ಆದೇಶ ಹೊರಡಿಸಬೇಕು

ನೀವೇನು ಮಾಡಬಹುದು ?

ಧರ್ಮದರ್ಶಿಗಳು

ತಮ್ಮ ದೇವಸ್ಥಾನಗಳಲ್ಲಿ ಹೀಗೆ ಮಾಡಿ..

ಧರ್ಮಶಿಕ್ಷಣ ನೀಡುವ  ಪೋಸ್ಟರ್‌ಗಳನ್ನು ಪ್ರದರ್ಶಿಸಿ
ಧರ್ಮಶಿಕ್ಷಣ ವರ್ಗ ಮತ್ತು ಬಾಲಸಂಸ್ಕಾರ ವರ್ಗಗಳನ್ನು ಆಯೋಜಿಸಿ
ದೇವಸ್ಥಾನದಲ್ಲಿ ದರ್ಶನಕ್ಕಾಗಿ ವಸ್ತ್ರ ಸಂಹಿತೆ ಜಾರಿಗೊಳಿಸಿ
ದೇವಸ್ಥಾನಗಳ ಪರಿಸರದಲ್ಲಿ ಆರ್ಕೆಸ್ಟ್ರಾದಂತಹ ಮನೋರಂಜನೆಯ ಕಾರ್ಯಕ್ರಮಗಳಿಗೆ ಅನುಮತಿ ನೀಡಬೇಡಿ
ದೇವಸ್ಥಾನಗಳ ಸುತ್ತಮುತ್ತಲಿನ ಪ್ರದೇಶದಲ್ಲಿ ಮದ್ಯ ಮಾರಾಟ, ಜೂಜು ಇತ್ಯಾದಿಗಳನ್ನು ಪ್ರತಿಬಂಧಿಸಿ
ವಿನಮ್ರ, ಶಿಸ್ತಿನ ಮತ್ತು ವ್ಯಸನ ಮುಕ್ತ ಪುರೋಹಿತರನ್ನು ಮಾತ್ರ ನೇಮಿಸಿ

ಧರ್ಮನಿಷ್ಠ ಹಿಂದೂ

ತಮ್ಮ ಧರ್ಮಸೇವೆಯೆಂದು ಹೀಗೆ  ಮಾಡಿ..

ಅಭಿಮಾನದಿಂದ ದೇವಸ್ಥಾನಗಳ ರಕ್ಷಣೆಗೆ ಇತರರು ಮುಂಬರುವಂತೆ ಧಾರ್ಮಿಕ ಉಪಕ್ರಮಗಳನ್ನು ಆಯೋಜಿಸಿ
ದೇವಾಲಯಗಳಲ್ಲಿ ನಿಯಮಿತವಾಗಿ ಸ್ವಚ್ಛತೆ ಮತ್ತು ನಿರ್ವಹಣೆ ಕಾರ್ಯಗಳಲ್ಲಿ ಭಾಗವಹಿಸಿ
ದೇವಸ್ಥಾನಗಳ ಮೇಲಿರುವ ಸರಕಾರದ ನಿಯಂತ್ರಣವನ್ನು ತೆಗೆದುಹಾಕಲು ಸರಕಾರದ ಮೇಲೆ ಒತ್ತಡ ಹೇರಿ
ದೇವಾಲಯಗಳಲ್ಲಿ ಭ್ರಷ್ಟಾಚಾರವನ್ನು ಬಹಿರಂಗಪಡಿಸಲು ಮಾಹಿತಿ ಹಕ್ಕು ಕಾಯ್ದೆಯನ್ನು (ಆರ್‌.ಟಿ.ಐ.) ಬಳಸಿ
ದೇವಾಲಯಗಳ ಆಧ್ಯಾತ್ಮಿಕ ಮಹತ್ವದ ಬಗ್ಗೆ ಭಕ್ತರಲ್ಲಿ ಜಾಗೃತಿ ಹೆಚ್ಚಿಸಿ
ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರಾಚೀನ ದೇವಾಲಯಗಳ ಇತಿಹಾಸ ಮತ್ತು ಅವುಗಳ ಪರಂಪರೆಯನ್ನು ತಿಳಿಸಿ

ವೀಡಿಯೊ

ಪ್ರಖರ ಹಿಂದುತ್ವನಿಷ್ಠರ ವಿಚಾರಗಳನ್ನು ಕೇಳಿ

ವಿಷ್ಣು ಶಂಕರ್ ಜೈನ್, ವಕೀಲರು, ಸುಪ್ರೀಂ ಕೋರ್ಟ್
ರಮೇಶ್ ಟಿ. ಆರ್, ತಮಿಳುನಾಡು
ಡಾ. ಎನ್. ರಮೇಶ್ ಹಾಸನ, ಸಂಜೀವನಿ ಆಸ್ಪತ್ರೆ, ಕರ್ನಾಟಕ
ಶ್ರೀಹರಿ ಅಂಬೇಕರ್, ಕನಿಫ್ನಾಥ್ (ಕನ್ಹೋಬಾ) ದೇವಸ್ಥಾನ, ಮಹಾರಾಷ್ಟ್ರ
ಅನುಪ್ ಜೈಸ್ವಾಲ್, ಕಾರ್ಯದರ್ಶಿ, ದೇವಸ್ಥಾನ ಸೇವಾ ಸಮಿತಿ, ಮಹಾರಾಷ್ಟ್ರ
ಕಿಶೋರ್ ಗಂಗಣೆ, ಮಹಾರಾಷ್ಟ್ರ ಟೆಂಪಲ್ ಫೆಡರೇಶನ್, ಮಹಾರಾಷ್ಟ್ರ

ಸಂಬಂಧಿತ ಲೇಖನಗಳು

ದೇವಸ್ಥಾನಗಳ ಸಂರಕ್ಷಣೆಗಾಗಿ ಜಾತಿ ಭೇದ ಮರೆತು ಎಲ್ಲರೂ ಒಂದಾಗಬೇಕಾಗಿದೆ ! – ಶ್ರೀ ಆದಿ ಶಂಕರಾಚಾರ್ಯ ಶಾರದಾ ಲಕ್ಷ್ಮೀನರಸಿಂಹ ಪೀಠಮ್, ದಿವ್ಯಕ್ಷೇತ್ರ ಹರಿಹರಪುರದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿ

Read More