Menu Close

ಗುರುಪೂರ್ಣಿಮೆ 2024

ದ್ವಾಪರಯುಗದಲ್ಲಿ ಜಗದ್ಗುರು ಭಗವಾನ್ ಶ್ರೀಕೃಷ್ಣನು ಶಿಷ್ಯ ಅರ್ಜುನನಿಗೆ ಅಮೂಲ್ಯ ಮಾರ್ಗದರ್ಶನ ನೀಡಿ, ಧರ್ಮದ ಪುರ್ನಸ್ಥಾಪನೆ ಮಾಡಿದರು. ಅದೇ ರೀತಿ ಕಲಿಯುಗದಲ್ಲಿ ನಾವೂ ಶ್ರೀಗುರುಗಳ ಮಾರ್ಗದರ್ಶನದಲ್ಲಿ ಪ್ರಯತ್ನಿಸಬೇಕಾಗಿದೆ. ಗುರುಕೃಪೆಯನ್ನು ಪಡೆಯಲು, ಶ್ರೀಗುರುಗಳ ಧರ್ಮಸಂಸ್ಥಾಪನೆಯ ಅರ್ಥಾತ್ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯದಲ್ಲಿ ನಾವೂ ಯೋಗದಾನ ನೀಡಬೇಕಿದೆ. ಈ ಕುರಿತು ವಿವರವಾಗಿ ಚರ್ಚಿಸಲು ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಗುರುಪೂರ್ಣಿಮಾ ಮಹೋತ್ಸವಗಳನ್ನು ಆಯೋಜಿಸಿದೆ. ಈ ಮಹೋತ್ಸವದಲ್ಲಿ  ಭಾಗವಹಿಸುವ ಮೂಲಕ ಶ್ರೀಗುರುಗಳಿಗೆ ನಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸೋಣ. ತಮ್ಮ ಕ್ಷೇತ್ರದಲ್ಲಿ ಆಯೋಜಿಸಲಾಗಿರುವ ಗುರುಪೂರ್ಣಿಮಾ ಮಹೋತ್ಸವದಲ್ಲಿ ತಪ್ಪದೇ ಪಾಲ್ಗೊಳ್ಳಿ !

ನೇರಪ್ರಸಾರ ವೀಕ್ಷಿಸಿ !

ಜುಲೈ 21, ಸಂಜೆ 4.30 ಕ್ಕೆ ಪ್ರಾರಂಭವಾಗುವುದು…

July 3, 2023, 7.30PM

July 3, 2023, 7.30PM

July 3, 2023, 7.00PM

July 3, 2023, 8.00PM

ಕಾರ್ಯಕ್ರಮದ ಸ್ವರೂಪ

ವ್ಯಾಖ್ಯಾನ :  ಆನಂದಪ್ರಾಪ್ತಿಗಾಗಿ ಸಾಧನೆ ಮತ್ತು ರಾಮರಾಜ್ಯ !
ಸ್ವಸಂರಕ್ಷಣಾ ಪ್ರಶಿಕ್ಷಣ ವರ್ಗದ ಪ್ರಾತ್ಯಕ್ಷಿಕೆ
ಸಾತ್ತ್ವಿಕ ಗ್ರಂಥ ಹಾಗೂ ಉತ್ಪಾದನೆಗಳ ಪ್ರದರ್ಶನ
ರಾಷ್ಟ್ರ ಮತ್ತು ಧರ್ಮದ ಬಗ್ಗೆ ಗಣ್ಯರ ಮೌಲ್ಯಯುತ ವಿಚಾರಗಳು
ರಾಷ್ಟ್ರ ಮತ್ತು ಧರ್ಮದ ಕುರಿತು ಜಾಗೃತಿ ಮೂಡಿಸುವ ಫಲಕಗಳ ಪ್ರದರ್ಶನ

ರಾಜ್ಯದಾದ್ಯಂತ ಆಯೋಜಿಸಲಾಗಿರುವ ಕಾರ್ಯಕ್ರಮಗಳ ವಿವರ

ಸಮಾಜದಲ್ಲಿ ಧರ್ಮಜಾಗೃತಿ ಮೂಡಿಸಲು ಸಮರ್ಪಿತ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ಈ ಗುರುಕಾರ್ಯ ಅಂದರೆ ದೈವೀಕಾರ್ಯ ನಿರಂತರವಾಗಿ ನಡೆಯುತ್ತಿದೆ. ಆದ್ದರಿಂದ ಜಿಜ್ಞಾಸುಗಳು, ಹಿತೈಷಿಗಳು ಧರ್ಮಪ್ರಸಾರ ಕಾರ್ಯವನ್ನು ಮಾಡಿ ಜೊತೆಗೆ ಧರ್ಮಕಾರ್ಯಕ್ಕಾಗಿ ಧನಸಹಾಯ ಮಾಡಿ, ಈ ಮೂಲಕ ಆಧ್ಯಾತ್ಮಿಕ ಸ್ತರದಲ್ಲಿ ಗುರುಪೂರ್ಣಿಮೆಯ ಲಾಭ ಪಡೆಯಿರಿ. 

 ಗುರುಪೂರ್ಣಿಮೆಯ ಅಧಿಕ ಲಾಭ ಪಡೆಯಲು ಮಾಡಬೇಕಾದ ಪ್ರಯತ್ನಗಳು

ಗುರುಮಂತ್ರದ ಅಥವಾ ಕುಲದೇವತೆಯ ನಾಮಜಪವನ್ನು ಹೆಚ್ಚೆಚ್ಚು ಮಾಡಿ !
ಗುರುಪೂರ್ಣಿಮಾ ಮಹೋತ್ಸವದಲ್ಲಿ ಭಾಗವಹಿಸುವ ಮೂಲಕ ಸಾಧ್ಯವಾದಷ್ಟು ಸತ್ಸೇವೆಯನ್ನು ಮಾಡಿ !
ಸೇವೆಯ ಮೂಲಕ ಪ್ರತಿಯೊಂದು ಕಾರ್ಯವು ಭಾವಪೂರ್ಣ ಮತ್ತು ಪರಿಪೂರ್ಣವಾಗಲು ಪ್ರಾರ್ಥನೆ ಮತ್ತು ಕೃತಜ್ಞತೆ ಸಲ್ಲಿಸಿ !
ಗುರುಕೃಪೆಯನ್ನು ಪಡೆಯಲು ಆವಶ್ಯಕವಿರುವ ಗುಣಗಳು, ತೀವ್ರ ಮುಮುಕ್ಷುತ್ವ ಅರ್ಥಾತ್ ಗುರುಪ್ರಾಪ್ತಿಗಾಗಿ ತೀವ್ರ ತವಕ, ಆಜ್ಞಾಪಾಲನೆ, ಶ್ರದ್ಧೆ  ಮತ್ತು  ಗುರುಗಳನ್ನು ಪಡೆಯಲು ಬಲವಾದ ಇಚ್ಛಾಶಕ್ತಿ ಹೆಚ್ಚಿಸಿ ! 
ಗುರುಕಾರ್ಯಕ್ಕಾಗಿ ಧನದ ಅರ್ಪಣೆ ಮಾಡಿ !
ಗುರುವಿಗೆ ನಮ್ಮ ಸರ್ವಸ್ವವನ್ನು ಅರ್ಪಿಸುವುದೇ ನಿಜವಾದ ಗುರುದಕ್ಷಿಣೆಯಾಗಿದೆ, ಇದನ್ನು ಗಮನದಲ್ಲಿಟ್ಟುಕೊಂಡು, ಅದೇ ರೀತಿ ಕೃತಿ ಮಾಡಲು ಪ್ರಯತ್ನಿಸಿ !
ಕಾಲಾನುಸಾರ ಸರಿಯಾದ ಸಾಧನೆ ಮಾಡುವ ಮೂಲಕ ಜೀವನವನ್ನು ಸಾರ್ಥಕಗೊಳಿಸಿ !

ಗುರುಪೂರ್ಣಿಮೆ ನಿಮಿತ್ತ ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯ ಮಾಡಲು ದೃಢ ಸಂಕಲ್ಪ ಮಾಡಿ !

ಯಾವ ರೀತಿ ರಾತ್ರಿಯ ನಂತರ ಸೂರ್ಯೋದಯವನ್ನು ತಡೆಯಲು ಯಾರಿಂದಲೂ ಸಾಧ್ಯವಿಲ್ಲವೋ ಅದೇ ರೀತಿ ಕಾಲಮಹಿಮೆಗನುಸಾರ ನಡೆಯುವ ಧರ್ಮಾಧಿಷ್ಠಿತ  ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಯಾರೂ ತಡೆಯಲು ಸಾಧ್ಯವಿಲ್ಲ. ಹಿಂದೂ ರಾಷ್ಟ್ರ ಬಂದೇ ಬರುತ್ತದೆ, ಅದು ಶಿಲೆಯ ಮೇಲಿನ ಕೆತ್ತನೆಯಾಗಿದೆ. ಈ ಕುರಿತು ಅನೇಕ ಸಂತರು ಹೇಳಿದ್ದಾರೆ. ಕಾಲವೂ ಅದೇ ದಿಕ್ಕಿನಲ್ಲಿ ಸಾಗುತ್ತಿದೆ. ಆದ್ದರಿಂದ, ಈ ಅವಧಿಯಲ್ಲಿ ನಾವು ಹಿಂದೂ ರಾಷ್ಟ್ರದ ಸ್ಥಾಪನೆಗೆ ಶ್ರಮಿಸಿದರೆ, ಕಾಲಾನುಸಾರ ಧರ್ಮಕಾರ್ಯವಾಗಿ ಆ ಮೂಲಕ ನಮ್ಮ ಸಾಧನೆಯಾಗುವುದು. ಆದ್ದರಿಂದ ಈ ವರ್ಷದ ಗುರುಪೂರ್ಣಿಮೆಯಂದು ಹಿಂದೂ ರಾಷ್ಟ್ರ ಸ್ಥಾಪನೆಯ ಕಾರ್ಯವನ್ನು ಮಾಡಲು ನಿರ್ಧರಿಸಿರಿ.