Menu Close

ಮೇವಾತ್, ದೆಹಲಿ ಮತ್ತು ಮಣಿಪುರದ ಹಿಂಸಾಚಾರದಲ್ಲಿ ಹಿಂದೂಗಳ ಹತ್ಯೆ ಖಂಡಿಸಿ ತುಮಕೂರಿನಲ್ಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ !

ಹಿಂದೂಗಳ ಮೇಲೆ ಹಲ್ಲೆ ಹಾಗೂ ರಾಷ್ಟ್ರೀಯ ಸಂಪತ್ತನ್ನು ಹಾನಿಗೊಳಿಸಿದ ಪ್ರಕರಣದಲ್ಲಿ ಗಲಭೆಕೋರರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಿ ! – ಶ್ರೀ. ಶಶಿಧರ್ ಆಚಾರ್ಯ

ತುಮಕೂರು : ನ್ಯಾಯಾಲಯದ ತೀರ್ಪನ್ನು ವಿರೋಧಿಸುವ ನೆಪದಲ್ಲಿ ಮಣಿಪುರದಲ್ಲಿ ಕುಕಿ (ಕ್ರೈಸ್ತ) ಸಮುದಾಯದಿಂದ ಮಣಿಪುರದ ಮೂಲ ನಿವಾಸಿಗಳಾದ ಮೈತೆಯಿ ಸಮುದಾಯದ ಮೇಲೆ ಹಿಂಸಾಚಾರ ನಡೆಯುತ್ತಿದೆ. ಈ ಗಲಭೆಯಲ್ಲಿ 141 ಜನರ ಹತ್ಯೆಯಾಗಿದ್ದು, ಅನೇಕ ಹಿಂದೂಗಳ ದೇವಸ್ಥಾನ ಮತ್ತು ಮನೆಗಳನ್ನು ಸುಟ್ಟು ಹಾಕಲಾಗಿದೆ ಹಾಗೂ ಹಲವಾರು ಗ್ರಾಮಗಳ ಮೈತೇಯಿ ಸಮುದಾಯದವರು ಪಲಾಯನ ಮಾಡುತ್ತಿದ್ದಾರೆ. ಇದು ಅತ್ಯಂತ ಗಂಭೀರ ಸಮಸ್ಯೆಯಾಗಿದ್ದು, ವಿದೇಶಿ ಶಕ್ತಿಗಳ ಕೈವಾಡದಿಂದ ಅಲ್ಲಿನ ಹಿಂದೂಗಳ ನರಮೇದ ಮಾಡುವ ಷಡ್ಯಂತ್ರ್ಯ ನಡೆಯುತ್ತಿದೆ. ಇನ್ನು ದೆಹಲಿಯಲ್ಲಿ ಮೊಹರಂ ಮೆರವಣಿಗೆಯ ಸಂದರ್ಭದಲ್ಲಿ ಆಯೋಜನಾಬದ್ಧವಾಗಿ ಚಿಕ್ಕ ಮಕ್ಕಳ ಮೂಲಕ ಹಿಂದೂಗಳ ಮೇಲೆ ಹಲ್ಲೆ ನಡೆಸಲಾಯಿತು. ಈ ಎಲ್ಲ ಗಲಭೆಗಳಲ್ಲಿ ಭಾಗಿಯಾದ ಗಲಭೆಕೋರರ ಮೇಲೆ ಕಠಿಣ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿ ತುಮಕೂರಿನಲ್ಲಿ ದಿನಾಂಕ 17 ಆಗಸ್ಟ್ 2023 ಗುರುವಾರದಂದು ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನ ನಡೆಯಿತು. ಈ ವೇಳೆ ವಿಶ್ವ ಹಿಂದೂ ಪರಿಷತ್, ಭಜರಂಗದಳ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಶಿಧರ ಆಚಾರ್ಯ, ಶ್ರೀ. ವೆಂಕಟೇಶ್, ಶ್ರೀ. ಅರುಣ್ ಗೌಡ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ. ಶಶಿಧರ ಆಚಾರ್ಯ ಇವರು, ಹರಿಯಾಣ ರಾಜ್ಯದ ಮೇವಾತ್‌ನಲ್ಲಿ 31 ಜುಲೈ 2023 ರಂದು, ಭಗವಾನ್ ಶಂಕರನ ಅಭಿಷೇಕಕ್ಕೆಂದು ಹೋದ ಸಾವಿರಾರು ಹಿಂದೂಗಳ ಮೇಲೆ ಕ್ರೂರವಾಗಿ ಹಲ್ಲೆ ನಡೆಸಲಾಯಿತು. ಸಾವಿರಾರು ದಂಗೆಕೋರರು ಕಲ್ಲು, ಕತ್ತಿ, ಬಂದೂಕು, ಪೆಟ್ರೋಲ್ ಬಾಂಬ್‌ಗಳಿಂದ ಹಿಂದೂಗಳ ಮೇಲೆ ಆಕ್ರಮಣ ನಡೆಸಿದರು. ಈ ದಾಳಿಯಲ್ಲಿ ಇಬ್ಬರು ಪೊಲೀಸರು ಸೇರಿದಂತೆ 7 ಹಿಂದೂಗಳನ್ನು ಅಮಾನುಷವಾಗಿ ಹತ್ಯೆ ಮಾಡಲಾಗಿದೆ. ಪುರುಷರೊಂದಿಗೆ ಅನೇಕ ಮಹಿಳೆಯರು ನಾಪತ್ತೆಯಾಗಿದ್ದಾರೆ ಮತ್ತು ಅನೇಕ ಮಹಿಳೆಯರು ಅತ್ಯಾಚಾರಕ್ಕೊಳಗಾಗಿದ್ದಾರೆ ಎಂದು ಸ್ಥಳೀಯರು ಹೇಳುತ್ತಾರೆ. ಆದ್ದರಿಂದ ಈ ಗಲಭೆಗಳು ಮತ್ತು ಹಿಂಸಾಚಾರದಿಂದ ಉಂಟಾದ ಆಸ್ತಿಪಾಸ್ತಿಗಳ ಹಾನಿಗೆ ಗಲಭೆಕೋರರ ಎಲ್ಲಾ ಆಸ್ತಿಗಳನ್ನು ಮುಟ್ಟುಗೋಲು ಹಾಕಿ ಅವರ ಮೇಲೆ ‘ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆ’ (ಯುಎಪಿಎ), ‘ಸಂಘಟಿತ ಅಪರಾಧ’, ‘ರಾಷ್ಟ್ರೀಯ ಭದ್ರತಾ ಕಾಯ್ದೆ’ ಮುಂತಾದ ವಿವಿಧ ಕಠಿಣ ಕಾನೂನುಗಳ ಅಡಿಯಲ್ಲಿ ಅಪರಾಧಗಳನ್ನು ದಾಖಲಿಸಬೇಕು ಎಂದು ಆಗ್ರಹಿಸಿದರು.

ಹಿಂದೂ ರಾಷ್ಟ್ರ-ಜಾಗೃತಿ ಆಂದೋಲನದ ಮೂಲಕ ಸರಕಾರಕ್ಕೆ ಇನ್ನೂ ಕೆಲವು ಬೇಡಿಕೆಗಳನ್ನು ಇಡಲಾಗಿದೆ :

1. ಈ ಹಿಂಸಾಚಾರಕ್ಕೆ ಕಾರಣವಾದ ಮತ್ತು ಗುಂಪನ್ನು ಪ್ರಚೋದಿಸಿದ ಧಾರ್ಮಿಕ ಮುಖಂಡರು, ಧರ್ಮಗುರುಗಳು, ಧಾರ್ಮಿಕ ಸಂಘಟನೆಗಳು ಮತ್ತು ರಾಜಕೀಯ ಮುಖಂಡರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.
2. ಈ ಹಿಂಸಾಚಾರಕ್ಕೆ ವಿದೇಶದಿಂದ ಧನಸಹಾಯ ಅಥವಾ ಶಸ್ತ್ರಾಸ್ತ್ರ ಪೂರೈಕೆಯಾಗಿದೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು.
3. ಈ ಪೂರ್ವಯೋಜಿತ ಗಲಭೆ ಅಥವಾ ಹಿಂಸಾಚಾರವನ್ನು ತಡೆಯುವಲ್ಲಿ ಪೊಲೀಸ್-ಆಡಳಿತಾತ್ಮಕ ಅಧಿಕಾರಿಗಳ ಸಂಪೂರ್ಣ ವೈಫಲ್ಯದ ಬಗ್ಗೆ, ಅವರ ವಿರುದ್ಧ ಸಮಗ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳಬೇಕು.
4. ಗಲಭೆಯಲ್ಲಿ ಪ್ರಾಣ ಕಳೆದುಕೊಂಡ ಹಿಂದೂಗಳಿಗೆ ತಲಾ 10 ಲಕ್ಷ ರೂಪಾಯಿಗಳ ಪರಿಹಾರ ನೀಡಬೇಕು, ಅವರ ಕುಟುಂಬದ ಸದಸ್ಯರಿಗೆ ಸರಕಾರಿ ನೌಕರಿ ನೀಡಬೇಕು. ಅಲ್ಲದೆ ಸಂತ್ರಸ್ತರ ಕುಟುಂಬದ ಮಕ್ಕಳ ಶಿಕ್ಷಣದ ಖರ್ಚನ್ನು ಸರಕಾರವೇ ಭರಿಸಬೇಕು.

 

Related News