ಶ್ರೀ. ರಮೇಶ ಶಿಂದೆ
ನವರಾತ್ರಿ ಉತ್ಸವ ಮಂಡಳಿಗಳು ಮತ್ತು ಗರಬಾ ಆಯೋಜಕರಿಗೆ, ಹಿಂದೂ ಜನಜಾಗೃತಿ ಸಮಿತಿ ಕರೆ !
ನವರಾತ್ರಿ ಉತ್ಸವ ಆರಂಭವಾಗುತ್ತಿದೆ. ಆದಿಶಕ್ತಿಯನ್ನು ಆರಾಧಿಸುವ ಉತ್ಸವ; ಆದರೆ ಇದೆ ವೇಳೆ ಲವ್ ಜಿಹಾದಿಗಳು ಸ್ತ್ರೀ ಶಕ್ತಿಯ ಮೇಲೆ ಆಘಾತವೆಸಗುತ್ತಾರೆ. ತಮ್ಮ ನಿಜ ಪರಿಚಯ ಮರೆಮಾಚಿ ಹಿಂದು ಹೆಸರು ಇಟ್ಟುಕೊಂಡು, ಕೈಗೆ ಕೆಂಪು ದಾರಗಳನ್ನು ಕಟ್ಟಿ ಲವ್ ಜಿಹಾದಿಗಳು ಗರಬಾ ಪೆಂಡಾಲಿಗೆ ನುಸುಳುತ್ತಾರೆ. ಆದ್ದರಿಂದ ಈ ಸಮಯದಲ್ಲಿ ಹಿಂದೂ ಯುವತಿಯರು, ಮಹಿಳೆಯರು ಲವ್ ಜಿಹಾದಿಗೆ ಬಲಿಯಾಗುವ ಘಟನೆಗಳು ಬೃಹತ್ ಪ್ರಮಾಣದಲ್ಲಿ ಬೆಳಕಿಗೆ ಬಂದಿವೆ. ಈ ಹಿನ್ನೆಲೆಯಲ್ಲಿ ಹಿಂದೂ ಯುವತಿಯರ ಮತ್ತು ಮಹಿಳೆಯರ ಸುರಕ್ಷತೆಗಾಗಿ ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡಲು ಹಿಂದುಯೇತರರಿಗೆ ಗರಬಾದಲ್ಲಿ ಪ್ರವೇಶ ನಿಷೇಧಿಸಬೇಕು ಮತ್ತು ಇದರ ಬಗ್ಗೆ ಗರಬಾ ಪೆಂಡಾಲಿನ ಬಳಿ ದೊಡ್ಡ ಫಲಕ ಅಳವಡಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿ ನವರಾತ್ರಿ ಉತ್ಸವ ಮಂಡಳಿಗಳಿಗೆ ಮತ್ತು ಗರಬಾ ಆಯೋಜಕರಿಗೆ ಕರೆ ನೀಡಿದೆ.
ಜಾರ್ಖಂಡ್‌ನ ವಿಶೇಷ ಸಿಬಿಐ ನ್ಯಾಯಾಲಯವು ರಾಷ್ಟ್ರೀಯ ಶೂಟರ್ ತಾರಾ ಸಹದೇವ್ ಅವರನ್ನು ಇತ್ತೀಚೆಗೆ ಹಿಂದೂ ಎಂದು ಮದುವೆಯಾದ ರಾಕಿಬುಲ್ ಹಸನ್‌ಗೆ ಜೀವಾವಧಿ ಶಿಕ್ಷೆ ವಿಧಿಸಿದೆ ಮತ್ತು ಇಸ್ಲಾಂಗೆ ಮತಾಂತರಗೊಳ್ಳಲು ಒತ್ತಾಯಿಸಿದ ರಾಕಿಬುಲ್ ಹಸನ್ ತಾಯಿಗೆ 10 ವರ್ಷಗಳ ಶಿಕ್ಷೆ ವಿಧಿಸಲಾಗಿದೆ. ಈ ಪ್ರಕರಣದಿಂದ ‘ಲವ್ ಜಿಹಾದ್’ ಮತ್ತೊಮ್ಮೆ ಕಾನೂನಾತ್ಮಕವಾಗಿ ಸಾಬೀತಾಗಿದೆ. ಕಳೆದ ಕೆಲವು ವರ್ಷಗಳಲ್ಲಿ, ಹಿಂದೂ ಹುಡುಗಿಯರನ್ನು ಸುಳ್ಳು ಪ್ರೀತಿಯ ಬಲೆಗೆ ಸಿಲುಕಿಸಿ ಮತಾಂತರಗೊಳಿಸಲಾಗಿದೆ, ಆದರೆ ಅದನ್ನು ವಿರೋಧಿಸಿದ ಅನೇಕ ಶ್ರದ್ಧಾ ವಾಲ್ಕರ್ ಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ‘ಲವ್ ಜಿಹಾದ್’ ಬಗ್ಗೆ ಕೇವಲ ಹಿಂದೂ ಸಂಘಟನೆಗಳಷ್ಟೇ ಅಲ್ಲದೆ ಅನೇಕ ಕ್ರೈಸ್ತ ಸಂಘಟನೆಗಳು ಮತ್ತು ಕ್ರೈಸ್ತ ಧರ್ಮ ಗುರುಗಳು ಕೂಡ ಖಂಡಿಸಿದ್ದಾರೆ. ಜೊತೆಗೆ ಕೇರಳದಲ್ಲಿನ ಕಮ್ಯುನಿಸ್ಟ್ ಪಕ್ಷದ ಇಬ್ಬರು ಮಾಜಿ ಮುಖ್ಯಮಂತ್ರಿ ಓಮಾನ್ ಚಂಡಿ ಮತ್ತು ವಿ ಎಸ್ ಅಚ್ಚತಾನಂದನ್ ಇವರು ಕೂಡ ಲವ್ ಜಿಹಾದಿನ ಭಯಾನಕತೆ ಒಪ್ಪಿದ್ದಾರೆ. ಇದರಿಂದ ದೇಶದಲ್ಲಿನ ಗುಜರಾತ್, ಉತ್ತರಾಖಂಡ, ಹಿಮಾಚಲ್ ಪ್ರದೇಶ್, ಹರಿಯಾಣ, ಉತ್ತರಪ್ರದೇಶ, ಮಧ್ಯಪ್ರದೇಶ ಈ ಆರು ರಾಜ್ಯಗಳಲ್ಲಿ ಲವ್ ಜಿಹಾದ್ ವಿರೋಧಿ ಕಾನೂನು ರೂಪಿಸಲಾಗಿದ್ದು ಮಹಾರಾಷ್ಟ್ರ ಮತ್ತು ಗೋವಾ ಮುಂತಾದ ರಾಜ್ಯಗಳಲ್ಲಿ ಈ ಕಾನೂನು ರೂಪಿಸುವ ಮಾರ್ಗದಲ್ಲಿ ಇವೆ. ಹಿಂದೂ ಸಮಾಜ ಕೂಡ ತಮ್ಮ ಹೆಣ್ಣು ಮಕ್ಕಳು ಮಹಿಳೆಯರ ರಕ್ಷಣೆಗಾಗಿ ಜಾಗೃತವಾಗಿ ಮತ್ತು ಸಂಘಟಿತರಾಗುವ ಅತ್ಯಂತ ಅವಶ್ಯಕತೆ ಇದೆ. ಕೇವಲ ನವರಾತ್ರಿ ಅಲ್ಲದೆ, 365 ದಿನಗಳೂ ಹಿಂದುಗಳು ಲವ್ ಜಿಹಾದದಿಂದ ಸತರ್ಕವಾಗಿರುವುದು ಅವಶ್ಯಕವಾಗಿದೆ ಎಂದು ಸಮಿತಿ ಹೇಳಿದೆ.