ಸನಾತನ ಧರ್ಮದ ಕುರಿತು ದ್ವೇಷ ಭಾಷಣ ಮಾಡಿರುವ ಪ್ರಕರಣದಲ್ಲಿ ದಾದರ್ ಪೊಲೀಸ್ ಠಾಣೆಯಲ್ಲಿ ದೂರು !
ಸನಾತನ ಧರ್ಮದ ಬಗ್ಗೆ ಆಕ್ಷೇಪಾರ್ಹ ಹಾಗೂ ದ್ವೇಷಪೂರ್ಣ ಹೇಳಿಕೆ ನೀಡಿ ಹಿಂದೂಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಮಾಡಿರುವ ಪ್ರಕರಣದಲ್ಲಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡು ಡಿಎಂಕೆ ಸಂಸದ ಎ. ರಾಜಾ, ರಾಷ್ಟ್ರವಾದಿ ಕಾಂಗ್ರೆಸ್ ಶಾಸಕ ಜಿತೇಂದ್ರ ಆವ್ಹಾಡ್ ಮತ್ತು ಪತ್ರಕರ್ತ ನಿಖಿಲ್ ವಾಗಳೆ ವಿರುದ್ಧ ‘ಹೇಟ್ ಸ್ಪೀಚ್’ (‘ದ್ವೇಷಪೂರ್ಣ ಹೇಳಿಕೆ’) ಮಾಡಿದ್ದಕ್ಕಾಗಿ ದೂರು ದಾಖಲಿಸುವಂತೆ ಹಿಂದುತ್ವನಿಷ್ಠರು ಒತ್ತಾಯಿಸಿದ್ದಾರೆ. ಹಿಂದುತ್ವನಿಷ್ಠರು ಮುಂಬಯಿ, ದಾದರನ ಶಿವಾಜಿ ಪಾರ್ಕ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದ್ರಮುಕ ಪಕ್ಷದ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್, ತಮಿಳುನಾಡು ದ್ರಮುಕ ಸಂಸದ ಎ. ರಾಜಾ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಶಾಸಕ ಜಿತೇಂದ್ರ ಆವ್ಹಾಡ ಇವರು ಸನಾತನ ಧರ್ಮವನ್ನು ಡೆಂಗ್ಯೂ, ಮಲೇರಿಯಾ, ಕರೋನಾ, ಏಡ್ಸ್, ಕುಷ್ಠರೋಗ ಮುಂತಾದ ರೋಗಗಳಿಗೆ ಹೋಲಿಸಿ ಅದನ್ನು ನಷ್ಟಗೊಳಿಸುವ ಬಗ್ಗೆ ಮಾತನಾಡಿದ್ದಾರೆ. ಇವರೊಂದಿಗೆ ಪತ್ರಕರ್ತ ನಿಖಿಲ್ ವಾಗಳೆ ಕೂಡ ಇತ್ತೀಚೆಗೆ ಫೇಸ್‌ಬುಕ್‌ನಲ್ಲಿ ದ್ವೇಷಪೂರಿತ ಪೋಸ್ಟ್ ಮಾಡಿ “ಉದಯನಿಧಿ ಸ್ಟಾಲಿನ್ ಅವರ ಮಾತನ್ನು ನಾನು ಒಪ್ಪುತ್ತೇನೆ” ಸನಾತನ ಧರ್ಮ ರೋಗಕ್ಕೆ ಸಮಾನವಾಗಿದೆ’’ ಎಂದು ಹೇಳಿದ್ದರು. ರಾಷ್ಟ್ರೀಯವಾದಿ ಕಾಂಗ್ರೆಸ್ ಶಾಸಕ ಜಿತೇಂದ್ರ ಆವ್ಹಾಡ ಕೂಡ ಆಕ್ಷೇಪಾರ್ಹ ಹೇಳಿಕೆ ನೀಡಿದ್ದಾರೆ. ಅವರು “ಸನಾತನ ಧರ್ಮ, ಈ ದೇಶಕ್ಕೆ ತಗುಲಿದ ಗೆದ್ದಲು(ಗೆಜ್ಜಲು)’’ ಎಂದು ಹೇಳಿದರು. ಯಾವುದೇ ಧರ್ಮವನ್ನು ಈ ರೀತಿ ನಿಂಧನೀಯ, ಅಪಮಾನಕರ ಭಾಷಣಗಳ ಮೂಲಕ ಆಘಾತವುಂಟು ಮಾಡುವುದು ಕಲಂ 153 (ಎ), 153 (ಬಿ), 295 (ಎ), 298, 505 ಮತ್ತು ಐಟಿ ಕಾನೂನಿನ ಪ್ರಕಾರ ಅಪರಾಧವಾಗಿದೆಯೆಂದು ದೂರಿನಲ್ಲಿ ತಿಳಿಸಲಾಗಿದ್ದು, ಹಿಂದೂ ಧರ್ಮದ ಬಗ್ಗೆ ದ್ವೇಷಪೂರ್ಣ ಹೇಳಿಕೆ ನೀಡುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದ್ದಾರೆ. ಈ ಕುರಿತು ದಾದರ್ ಶಿವಾಜಿ ಪಾರ್ಕ್ ಪೊಲೀಸರು ಘಟನೆಯನ್ನು ಖಚಿತಪಡಿಸಿದ್ದು, ಮುಂದಿನ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ. ಈ ದೂರಿನಲ್ಲಿ ಒಂದು ವೇಳೆ ಪೊಲೀಸರು ಸೂಕ್ತ ಕ್ರಮ ಕೈಗೊಳ್ಳದಿದ್ದರೆ, ಈ ಪ್ರಕರಣದಲ್ಲಿ ಸರ್ವೋಚ್ಛ ನ್ಯಾಯಾಲಯದ ಅಪಮಾನವೆಂದು ಪರಿಗಣಿಸಿ ಅರ್ಜಿ ಸಲ್ಲಿಸಲಾಗುವುದು ಎಂಬ ಎಚ್ಚರಿಕೆಯನ್ನೂ ನೀಡಲಾಗಿದೆ.
ಈ ದೂರನ್ನು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕರ್ತ ಚಂದ್ರಕಾಂತ ಭರ್ದಿಕೆ, ಅವರೊಂದಿಗೆ ಹಿಂದುತ್ವನಿಷ್ಠ ಕಾರ್ಯಕರ್ತ ಸರ್ವಶ್ರೀ ಪ್ರಭಾಕರ ಭೋಸಲೆ, ಪ್ರಸನ್ನ ದೇವರೂಖಕರ, ಹಿತೇಂದ್ರ ಪಾಗಧರೆ, ರಾಹುಲ ಭುಜಬಲ, ಅಶೋಕ ಸೋನಾವಣೆ, ಆಶಿಶ ಪಾಂಡೇಯ, ದಿನೇಶ ಖಾನವಿಲಕರ, ಸಾಗರ್ ಚೋಪದಾರ, ನ್ಯಾಯವಾದಿ ಸುರಭಿ ಸಾವಂತ ಇನ್ನೂ ಹಲವರು ಒಟ್ಟು ಸೇರಿ ನೀಡಿದ್ದಾರೆ. ‘ಹೇಟ್ ಸ್ಪೀಚ್ ‘ ವಿಚಾರದಲ್ಲಿ 2023 ರ ಏಪ್ರಿಲ್ 28ರಂದು ಸರ್ವೋಚ್ಚ ನ್ಯಾಯಾಲಯದ ನ್ಯಾಯಮೂರ್ತಿ ಕೆ. ಎಂ. ಜೋಸೆಫ್ ಮತ್ತು ನ್ಯಾಯಮೂರ್ತಿ ಬಿ.ವಿ. ನಾಗರತ್ನ ಅವರು ಸಮಾಜದಲ್ಲಿ ದ್ವೇಷ ಹರಡುವಂತಹ ಹೇಳಿಕೆಗಳನ್ನು ನೀಡಿ ಸಮಾಜದಲ್ಲಿ ವಿವಾದ ನಿರ್ಮಾಣ ಮಾಡುವವರ ವಿರುದ್ಧ ಯಾರಾದರೂ ದೂರು ದಾಖಲಿಸುವ ಬಗ್ಗೆ ದಾರಿ ಕಾಯದೆ ಸರಕಾರವೇ ಸ್ವತಃ ಅಪರಾಧವನ್ನು ದಾಖಲಿಸಬೇಕು ಎಂದು ಆದೇಶಿಸಿದ್ದಾರೆ. ಅವರು ಮುಂದುವರಿಸಿ, ಒಂದು ವೇಳೆ ದೂರು ದಾಖಲಿಸುವಲ್ಲಿ ವಿಳಂಬ ಮಾಡಿದರೆ ಸರ್ವೋಚ್ಚ ನ್ಯಾಯಾಲಯದ ನಿಂಧನೆಯೆಂದು ಪರಿಗಣಿಸಲಾಗುವುದು ಎಂದೂ ಹೇಳಿದ್ದಾರೆ.