ಕಲಬುರ್ಗಿಯಲ್ಲಿ ಎರಡು ದಿನಗಳ ಪ್ರಾಂತೀಯ ಹಿಂದೂ ರಾಷ್ಟ್ರ ಅಧಿವೇಶನದಲ್ಲಿ ಕರೆ !
ದೀಪ ಪ್ರಜ್ವಲನೆ ಮಾಡುತ್ತಿರುವ (ಎಡದಿಂದ) ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಶ್ರೀ. ಲಿಂಗರಾಜ್ ಅಪ್ಪ, ಕಲಬುಗಿ೯ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ. ರವಿ ಲಾತೂರಕರ, ಬಿದರಿನ ಸಿದ್ಧಾರೂಢ ಮಠದ ಮಾತಾಜಿ ಅಮೃತಾನಂದಮಾಯಿ, ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ
ಕಲಬುರ್ಗಿ : ಪ್ರಾಂತ್ಯದಲ್ಲಿ ಅನೇಕ ಹಿಂದುತ್ವನಿಷ್ಠ ಸಂಘಟನೆಗಳು ಧರ್ಮರಕ್ಷಣೆಗಾಗಿ ಕಾರ್ಯ ಮಾಡುತ್ತಿದ್ದು ಎಲ್ಲ ಸಂಘಟನೆಗಳಲ್ಲಿ ಏಕತೆ ನಿರ್ಮಾಣ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಯ ಸಂಕಲ್ಪದೊಂದಿಗೆ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ನವೆಂಬರ 25 ಮತ್ತು 26, 2023 ರಂದು ಈ ಎರಡು ದಿನಗಳ ಕಾಲಾವಧಿಯಲ್ಲಿ ಕಲಬುರ್ಗಿಯಲ್ಲಿ ಪ್ರಾಂತೀಯ ಹಿಂದೂ ರಾಷ್ಟ್ರದ ಅಧಿವೇಶನವನ್ನು ಆಯೋಜನೆ ಮಾಡಲಾಗಿತ್ತು. ವಿಶ್ವ ಹಿಂದೂ ಪರಿಷತ್ತಿನ ಉತ್ತರ ಪ್ರಾಂತದ ಉಪಾಧ್ಯಕ್ಷರಾದ ಶ್ರೀ. ಲಿಂಗರಾಜ ಅಪ್ಪ, ಕಲ್ಬುರ್ಗಿ ಜಿಲ್ಲೆಯ ಬ್ರಾಹ್ಮಣ ಸಮಾಜದ ಅಧ್ಯಕ್ಷರಾದ ಶ್ರೀ. ರವಿ ಲಾತೂರಕರ, ಬೀದರನ ಸಚ್ಚಿದಾನಂದ ಆಶ್ರಮ ಸಿದ್ಧಾರೂಢ ಮಠದ ಮಾತಾಜಿ ಅಮೃತಾನಂದಮಯಿ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಉದ್ಘಾಟನೆ ಮಾಡಿದರು.
ಮಾತಾಜಿ ಅಮೃತಾನಂದಮಯಿ ಮಾತನಾಡಿ ನಮ್ಮ ಶ್ರೇಷ್ಠ ಸನಾತನ ಹಿಂದೂ ಧರ್ಮವನ್ನು ದುರ್ಬಲಗೊಳಿಸಲೆಂದೆ ಧರ್ಮಚರಣೆಯನ್ನು ಹೇಳಿಕೊಡದ ಕಾನ್ವೆಂಟ್ ಶಾಲೆಗಳನ್ನು ಬ್ರಿಟಿಷರು ಪ್ರಾರಂಭ ಮಾಡಿದರು. ಇಂದು ಕಾನ್ವೆಂಟ್ ಶಾಲೆಗಳ ಪರಿಣಾಮದಿಂದ ಸಮಾಜವು ಧರ್ಮಚರಣೆಯನ್ನು ಮರೆತಿದೆ ಮತ್ತು ದುಃಖದಲ್ಲಿ ಮುಳುಗುತ್ತಿದೆ. ಇದನ್ನು ಅರ್ಥ ಮಾಡಿಕೊಂಡು ನಾವೆಲ್ಲರೂ ಮಕ್ಕಳ ಮೇಲೆ ಧರ್ಮದ ಸಂಸ್ಕಾರ ಮಾಡುವ ದೃಷ್ಟಿಯಿಂದ ಕಾರ್ಯ ಮಾಡಬೇಕಿದೆ ಈ ಮೂಲಕ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಬುನಾದಿಯನ್ನು ಹಾಕೋಣ ಎಂದರು. ಜೊತೆಗೆ ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ತಾವು ಪ್ರತಿ ದಿನ ಪ್ರಾರ್ಥನೆಯನ್ನು ಮಾಡುತ್ತಿರುವುದಾಗಿ ತಿಳಿಸಿದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಗುರುಪ್ರಸಾದ್ ಗೌಡ ಮಾತನಾಡಿ ಇಂದು ದೇಶದ ಹಲವು ರಾಜ್ಯಗಳಲ್ಲಿ ಹಿಂದೂಗಳು ಅಲ್ಪ ಸಂಖ್ಯಾತರಗಿದ್ದಾರೆ. ಲವ್ ಜಿಹಾದ್ ಕೂಡ ವ್ಯಾಪಕ ಪ್ರಮಾಣದಲ್ಲಿ ನಡೆಯುತ್ತಿದೆ. ಜಿಹಾದಿ ಸಂಘಟನೆಗಳು 2047 ರಲ್ಲಿ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ತಯಾರಿಯಲ್ಲಿವೆ, ಆದರೆ ಹಿಂದೂ ಸಮಾಜವು ಇದನ್ನು ಎದುರಿಸಲು ಸಕ್ಷಮ ಇದೆಯೇ, ಇದನ್ನು ನಾವೆಲ್ಲರೂ ಅರ್ಥ ಮಾಡಿಕೊಂಡು ಈಗ ನಾವೆಲ್ಲರೂ ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಘೋಷಣೆ ಮಾಡುವ ಬೇಡಿಕೆ ಇಡಬೇಕಿದೆ, ಅದಕ್ಕಾಗಿ ನಾವೆಲ್ಲ ಹಿಂದೂ ಸಂಘಟನೆಗಳು ಒಟ್ಟಾಗಿ ಪ್ರಯತ್ನಿಸಬೇಕು ಎಂದು ಕರೆ ನೀಡಿದರು.
ಎರಡು ದಿನಗಳು ನಡೆಯಲಿರುವ ಈ ಅಧಿವೇಶನದಲ್ಲಿ ಬೀದರ, ಕಲ್ಬುರ್ಗಿ, ಯಾದಗಿರಿ ಮತ್ತು ವಿಜಯಪುರ ಜಿಲ್ಲೆಗಳಿಂದ ಹಿಂದೂ ಸಂಘಟನೆಗಳ ಪ್ರಮುಖರು, ಹಿಂದುತ್ಯನಿಷ್ಟರು, ಸಮಾಜದ ಮುಖಂಡರು, ಹಿಂದುತ್ವನಿಷ್ಠ ವಕೀಲರು ಇನ್ನು ಹಲವರು ಉಪಸ್ಥಿತರಿದ್ದಾರೆ. ಈ ಅಧಿವೇಶನದ ಮೂಲಕ ಮುಂದಿನ ದಿನಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ನಿಟ್ಟಿನಲ್ಲಿ ಸಂಘಟನೆಗಳು ಒಟ್ಟಾಗಿ ಮಾಡಲಿರುವ ಕಾರ್ಯಗಳ ಯೋಜನೆ ರೂಪುಗೊಳ್ಳಲಿದೆ.