ದೀಪ ಪ್ರಜ್ವಲನೆ ಮಾಡುತ್ತಿರುವ (ಎಡದಿಂದ) ಅಜಾದ್ ಸೇನೆಯ ಅಧ್ಯಕ್ಷ ಶ್ರೀ. ಗಜೇಂದ್ರ ಸಿಂಗ್ , ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಶ್ರೀ. ಶರತ್ ಕುಮಾರ್
ರಾಮನಗರ : ಇಂದು ಲವ್ ಜಿಹಾದ್ ಮೂಲಕ ಭಾರತವನ್ನು ಇಸ್ಲಾಮಿಕ್ ರಾಷ್ಟ್ರ ಮಾಡುವ ಪ್ರಯತ್ನ ನಡೆಯುತ್ತಿದೆ. ಅಕ್ಟೋಬರ್ 2022 ರಂದು ಕರ್ನಾಟಕದ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗದಲ್ಲಿ ಶಾಹಿನ್ ಗ್ಯಾಂಗ್ ಎನ್ನುವ ಮುಸ್ಲಿಂ ಯುವತಿಯರ ಗುಂಪು ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ಮತ್ತು ಪಾಪ್ಯುಲರ್ ಆಫ್ ಇಂಡಿಯಾ ಅಡಿಯಲ್ಲಿ ತರಬೇತಿ ಪಡೆದು ಕಾಲೇಜುಗಳಲ್ಲಿ ಹಿಂದೂ ಯುವತಿಯರನ್ನು ಮುಸಲ್ಮಾನ್ ಯುವಕರಿಗೆ ಪರಿಚಯ ಮಾಡಿಸಿ, ಅವರನ್ನು ಲವ್ ಜಿಹಾದ್‌ಗೆ ಬೀಳುವ ಹಾಗೆ ಪ್ರಚೋಧನೆ ಮಾಡಿ, ಅವರನ್ನು ಇಸ್ಲಾಂಗೆ ಮತಾಂತರ ಮಾಡುವ ಪ್ರಕರಣಗಳು ನಡೆಯುತ್ತಿರುವ ಬಗ್ಗೆ ರಾಷ್ಟ್ರೀಯ ತನಿಖಾ ದಳ, ಸ್ಥಳೀಯ ಪೊಲೀಸರು ತನಿಖಾ ವರದಿಯಲ್ಲಿ ತಿಳಿಸಿರುತ್ತಾರೆ. ಈ ರೀತಿಯಲ್ಲಿ ಹಿಂದೂ ಯುವತಿಯರನ್ನು ಇಸ್ಲಾಮಗ ಗೆ ಮತಾಂತರ ಮಾಡುವ ವ್ಯವಸ್ಥಿತವಾದ ಜಾಲ ನಡೆಯುತ್ತಿದೆ` ಎಂದು ಅಜಾದ್ ಸೇನೆಯ ಅಧ್ಯಕ್ಷ ಶ್ರೀ. ಗಜೇಂದ್ರ ಸಿಂಗ್ ಅವರು ಆರೋಪಿಸಿದರು. ಅವರು ಚನ್ನಪಟ್ಟಣದಲ್ಲಿ ಕೋಟೆ ಮಾರಮ್ಮ ದೇವಸ್ಥಾನದ ಬಳಿ ಜೈನ ಭವನದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಶ್ರೀ. ಶರತ್ ಕುಮಾರ್ ಸೇರಿದಂತೆ 150 ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.
ಅವರು ಮುಂದೆ ಮಾತನಾಡಿ, ‘ಕೇವಲ ಕರ್ನಾಟಕ ಮಾತ್ರವಲ್ಲ. 2006 ರಲ್ಲಿ 2,667 ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ ಎಂದು ಕೇರಳದ ಅಂದಿನ ಮುಖ್ಯಮಂತ್ರಿ ಉಮನ್ ಚಾಂಡಿ ಅವರು ವಿದಾನ ಸಭೆಯಲ್ಲಿ ತಿಳಿಸಿದ್ದರು. ಅಲ್ಲದೆ, 2009 ಮತ್ತು 2012 ರ ನಡುವೆ 2,195 ಹಿಂದೂ ಹುಡುಗಿಯರನ್ನು ಇಸ್ಲಾಂಗೆ ಮತಾಂತರಿಸಲಾಗಿದೆ. ಒಟ್ಟಾರೆ 2009 ರಿಂದ ಇಲ್ಲಿಯ ವರೆಗೆ 32,000 ಯುವತಿಯರನ್ನು ಲವ್ ಜಿಹಾದ್ ಮೂಲಕ ಮತಾಂತರ ಮಾಡಲಾಗಿದೆ. ಹಿಂದೂ ಯುವತಿಯರು ಲವ್ ಜಿಹಾದ್ ನ ಭೀಕರತೆಯನ್ನು ಅರಿತು ಹಿಂದೂ ಧರ್ಮದ ಆಚರಣೆ ಮಾಡಲು ಕಲಿಯಬೇಕು, ಲವ್ ಜಿಹಾದ್ ಘಟನೆಯ ಬಗ್ಗೆ ಅರಿವು ಮೂಡಿಸಬೇಕು` ಎಂದು ಕರೆ ನೀಡಿದರು.
ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಮಾತನಾಡಿ, ‘ಭಾರತದ ಸಂವಿಧಾನದಲ್ಲಿ ಪ್ರತಿಯೊಬ್ಬ ನಾಗರೀಕರಿಗೆ ಸಮಾನತೆ, ಬಂಧುತ್ವ ಮತ್ತು ನ್ಯಾಯ ಸಿಗುವುದು ಎಂದು ಹೇಳಲಾಗಿದೆ; ಆದರೆ ನಮ್ಮ ದೇಶದಲ್ಲಿ ಯಾವಾಗಲೂ ಹಿಂದೂಗಳ ಕುರಿತು ಭೇದಭಾವ ಮಾಡಲಾಗುತ್ತದೆ. ಭಾರತದಲ್ಲಿ ಅಲ್ಪಸಂಖ್ಯಾತ ಪಂಥದವರಿಗೆ ವಿಶೇಷ ಸಂರಕ್ಷಣೆ ನೀಡಲಾಗಿದೆ. ಇದರಿಂದ ಭಾರತದಲ್ಲಿ ಅಲ್ಪಸಂಖ್ಯಾತರ ವಿರುದ್ಧ ಏನಾದರೂ ಆದರೆ ಅವರಿಗೆ ‘ಅಲ್ಪಸಂಖ್ಯಾತ ಆಯೋಗ ಇರುತ್ತದೆ. ಅಲ್ಪಸಂಖ್ಯಾತರ ಅಭಿವೃದ್ಧಿಗಾಗಿ ಸ್ವತಂತ್ರ ಅಲ್ಪಸಂಖ್ಯಾತ ಅಭಿವೃದ್ಧಿ ಸಚಿವಾಲಯ ಇದೆ; ಆದರೆ ಬಹುಸಂಖ್ಯಾತ ಹಿಂದೂಗಳಿಗೆ ಯಾವುದೇ ರಾಜಕೀಯ ಸಂರಕ್ಷಣೆ ಇಲ್ಲದೇ ಇರುವುದರಿಂದ ಅವರಿಗೆ ‘ಬಹುಸಂಖ್ಯಾ ಆಯೋಗ’ ಇಲ್ಲ, ಅಥವಾ ಬಹುಸಂಖ್ಯಾತ ಅಭಿವೃದ್ಧಿ ಸಚಿವಾಲಯವು ಸಹ ಇಲ್ಲ. ಇದು ಅನ್ಯಾಯವಲ್ಲವೇ ? ಇದು ಸಮಾನತೆಯೇ ? ಆದ್ದರಿಂದ ನಮಗೆ ಎಲ್ಲರಿಗೂ ಸಮಾನತೆಯಿಂದ ನೋಡುವ ಹಿಂದೂ ರಾಷ್ಟ್ರ ಬೇಕಾಗಿದೆ.
⛳ Hindu Rashtra Jagruti Sabha
organised by @HinduJagrutiOrg
successfully in Channapatna, Ramnagar Dt. Karnataka !More than 150 devout Hindus participated in the Sabha
⛳ Click for more information about the Sabha : https://t.co/awwsthmVu0
📲 7204082609#Hindutva@sgn_hjs pic.twitter.com/hBmNvkxSEi
— HJS Karnataka (@HJSKarnataka) November 26, 2023
ಈಗಾಗಲೇ ಅನೇಕ ಸಂತ ಮಹಾತ್ಮರು ಭಾರತದಲ್ಲಿ ಶೀಘ್ರ ಹಿಂದೂ ರಾಷ್ಟ್ರದ ಉದಯವಾಗಲಿದೆ ಎಂದು ತಮ್ಮ ಭವಿಶ್ಯವಾಣಿಯಲ್ಲಿ ನುಡಿದಿದ್ದಾರೆ, ಅದರಂತೆ 2025 ರ ಯುಗಾದಿಗೆ ನಾವು ಭಾರತದಲ್ಲಿ ‘ಹಿಂದೂ ರಾಷ್ಟ್ರ’ದ ಧ್ವಜವನ್ನು ಸ್ಥಾಪಿಸಲು ಈಶ್ವರನ ಸಂಕಲ್ಪನೆಯ ಕಾರ್ಯದಲ್ಲಿ ಯಥಾಶಕ್ತಿ ಎಲ್ಲವನ್ನೂ ದಾನ ಮಾಡಲು ದೃಢನಿಶ್ಚಯವನ್ನು ಮಾಡಿಕೊಳ್ಳಬೇಕು` ಎಂದರು.