‘ ಹಿಂದೂ ಜನಜಾಗೃತಿ ಸಮಿತಿಯಿಂದ ಬಿಸಿಸಿಐ’ಗೆ ಮನವಿ !
ಇಂದಿಗೂ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯಗಳು ಮುಂದುವರೆದಿರುವಾಗ ಬಾಂಗ್ಲಾದೇಶ ಮತ್ತು ಭಾರತದ ನಡುವೆ ಕ್ರಿಕೆಟ್ ಪಂದ್ಯಗಳನ್ನು ಆಯೋಜಿಸುವುದು ಹಿಂದೂಗಳ ಗಾಯಕ್ಕೆ ಉಪ್ಪು ಸವರುವ ಸಂತಾಪಜನಕ ಕ್ರಮವಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ನಿಲ್ಲುವವರೆಗೂ ಭಾರತ-ಬಾಂಗ್ಲಾದೇಶದ ಎಲ್ಲಾ ಕ್ರಿಕೆಟ್ ಪಂದ್ಯಗಳನ್ನು ಮತ್ತು ಬಾಂಗ್ಲಾ ಕಲಾವಿದರ ಎಲ್ಲಾ ಕಾರ್ಯಕ್ರಮಗಳನ್ನು ರದ್ದುಗೊಳಿಸುವಂತೆ ಹಿಂದೂ ಜನಜಾಗೃತಿ ಸಮಿತಿಯು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿಯ ವಿಶೇಷ ಕಾರ್ಯಕಾರಿ ಅಧಿಕಾರಿಗಳಿಗೆ ಮನವಿ ಮಾಡಿದೆ. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ನ್ಯಾಯವಾದಿ ಅನೀಶ ಪರಳಕರ, ಮಾನವ ಸೇವಾ ಪ್ರತಿಷ್ಠಾನದ ಶ್ರೀ. ವಿನಾಯಕ ಶಿಂದೆ, ಧರ್ಮಪ್ರೇಮಿ ನ್ಯಾಯವಾದಿ ರಾಹುಲ್ ಪಾಟಕರ್, ಶ್ರೀ. ರವೀಂದ್ರ ದಾಸಾರಿ, ಶ್ರೀ ಸಂದೀಪ ತುಳಸಕರ ಇವರು ಉಪಸ್ಥಿತರಿದ್ದರು. ಈ ಮನವಿಯ ಪ್ರತಿಯನ್ನು ಮಾನ್ಯ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರಿಗೆ, ಕೇಂದ್ರ ಕ್ರೀಡಾ ಸಚಿವ ಮತ್ತು ವಿದೇಶಾಂಗ ಸಚಿವರಿಗೂ ನೀಡಲಾಗಿದೆ.
BOYCOTT INDIA-BANGLADESH CRICKET MATCHES
🚨Until atrocities against Hindus in Bangladesh STOP
🏏❌ Cricket can wait
Hindu lives can't! 🚫✊🏻 @HinduJagrutiOrg demands action from @BCCI#IndVsBan #IndvsBangladesh#IDFCFirstBankTestSeries#BoycottBangladeshCricket
📞 7738233333 pic.twitter.com/UkoNBsKbPB
— HJS Karnataka (@HJSKarnataka) September 21, 2024
जब तक बांग्लादेश में हिन्दुओं पर हो रहे अत्याचार बंद नहीं हो जाते, भारत-बांगलादेश क्रिकेट सिरीज रद्द करें ! @HinduJagrutiOrg की @BCCI से मांग !@KreatelyMedia @abhijitmajumder @tathagata2 #BoycottBangladeshCricket #Cancel_Bangladesh_Series#INDvsBAN #Hindu #BangladeshiHindus pic.twitter.com/s68ReeWdyF
— 🚩 Ramesh Shinde 🇮🇳 (@Ramesh_hjs) September 18, 2024
ಈ ಮನವಿಯಲ್ಲಿ, ಬಾಂಗ್ಲಾದೇಶದ ವಿರುದ್ಧ ಭಾರತದ ಎರಡು ಟೆಸ್ಟ್ ಕ್ರಿಕೆಟ್ ಪಂದ್ಯಗಳು ಮತ್ತು ಮೂರು ಟಿ 20 ಪಂದ್ಯಗಳನ್ನು ಭಾರತದಲ್ಲಿ ಸೆಪ್ಟೆಂಬರ್ 19 ರಿಂದ ಅಕ್ಟೋಬರ್ 12, 2024 ರವರೆಗೆ ಆಯೋಜಿಸಲಾಗಿದೆ. ಈ ಕ್ರಿಕೆಟ್ ಪಂದ್ಯಗಳು ಚೆನ್ನೈ, ಕಾನ್ಪುರ, ಗ್ವಾಲಿಯರ್, ದೆಹಲಿ ಮತ್ತು ಹೈದರಾಬಾದ್‌ನಲ್ಲಿ ನಡೆಯಲಿವೆ. ಮತ್ತೊಂದೆಡೆ, ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಲ್ಲಿಯವರೆಗೆ 230 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಇಲ್ಲಿ ಹಿಂದೂ ಸಮುದಾಯ ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದ್ದಾರೆ. ಇತ್ತೀಚೆಗೆ, ಹಿಂದೂ ಯುವಕ, ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹೊಸಕಿ ಹಾಕಿದೆ. ಈ ರೀತಿ ಬಾಂಗ್ಲಾದೇಶದಲ್ಲಿ ಹಿಂದೂಗಳ ಮೇಲೆ ದಾಳಿ, ಅವರ ಅಮಾನುಷ ಹತ್ಯೆ ರಾಜಾರೋಷವಾಗಿ ನಡೆಯುತ್ತಿವೆ.
जब तक बांग्लादेश में हिन्दुओं पर हो रहे अत्याचार बंद नहीं हो जाते, भारत-बांग्लादेश क्रिकेट मैच रद्द करें ! – @Ramesh_hjs
19 सितंबर से आरंभ होनेवाली भारत-बांगलादेश क्रिकेट सिरीज रद्द करें ! – हिन्दू जनजागृति समिति की @BCCI से मांग !#Cancel_Bangladesh_Series #INDvsBAN pic.twitter.com/pstaAoIRUk
— HinduJagrutiOrg (@HinduJagrutiOrg) September 17, 2024
. @Hindujagruti has sent a formal statement to @BCCI stating its demands.
'Cancel India-Bangladesh cricket matches until atrocities on #Hindus in Bangladesh cease'. – @Ramesh_hjshttps://t.co/6Z8ZGe5k8b#Cancel_Bangladesh_Series #INDvsBAN@BalwantPathak @SG_HJS pic.twitter.com/Yt8YZIWXTB
— HJS Mumbai (@HJSMumbai) September 16, 2024
ಮುಸ್ಲಿಂ ಸಮುದಾಯದ ಮೇಲಿನ ಯಾವುದೇ ದಾಳಿಯನ್ನು ಇತರ ಮುಸ್ಲಿಂ ರಾಷ್ಟ್ರಗಳು ಬಲವಾಗಿ ವಿರೋಧಿಸುವಂತೆ, ಹಿಂದೂಗಳ ಮೇಲಿನ ದಾಳಿಯ ವಿರುದ್ಧ ಭಾರತವು ಅದೇ ನಿಲುವನ್ನು ತೆಗೆದುಕೊಳ್ಳಬೇಕು. ಬಾಂಗ್ಲಾದೇಶದಲ್ಲಿ ಅಲ್ಲಿನ ಕಟ್ಟರವಾದಿ ಜಿಹಾದಿಗಳು ಹಿಂದೂಗಳನ್ನು ರಾಜಾರೋಷವಾಗಿ ಕೊಲ್ಲುತ್ತಾರೆ, ಹಿಂದೂ ಮನೆಗಳನ್ನು ಸುಡುತ್ತಾರೆ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಾರೆ, ಭೂಮಿಯನ್ನು ಕಬಳಿಸುತ್ತಾರೆ, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಾರೆ ಹೀಗಿರುವಾಗ ನಾವು ಅವರೊಂದಿಗೆ ಕ್ರಿಕೆಟ್ ಪಂದ್ಯಗಳನ್ನು ಆಡಬೇಕೇ ? ಇದನ್ನು ನಾವು ಎಂದಿಗೂ ಸಹಿಸುವುದಿಲ್ಲ ಎಂದು ಸಮಿತಿ ಹೇಳಿದೆ.