ಛತ್ತೀಸ್ಗಡ ರಾಜ್ಯದಲ್ಲೂ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧ ಹೇರಲು ಪ್ರಯತ್ನಿಸುವರು !- ವಿಜಯ ಶರ್ಮಾ, ಉಪಮುಖ್ಯಮಂತ್ರಿ, ಛತ್ತೀಸ್ಗಢ ರಾಜ್ಯ
ಛತ್ತೀಸ್ಗಡ ರಾಜ್ಯದ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರಿಗೆ ಕಾನೂನಬಾಹಿರ ಹಲಾಲ ಉತ್ಪಾದನೆಗಳ ಮೇಲೆ ನಿಷೇಧ ಹೇರಲು ಮನವಿ ಮತ್ತು ಹಲಾಲ್ ಜಿಹಾದ್ ಈ ಪುಸ್ತಕ ಉಡುಗೊರೆಯಾಗಿ ನೀಡುತ್ತಿರುವ ಹಿಂದುತ್ವನಿಷ್ಠ ಸಂಘಟನೆ
ರಾಯಪುರ – ಆಹಾರ ಪದಾರ್ಥ ಮತ್ತು ಉತ್ಪಾದನೆಗಳಿಗೆ ಪ್ರಮಾಣ ಪತ್ರ ನೀಡುವ ಅಧಿಕಾರ ಕೇವಲ ಸರಕಾರಕ್ಕೆ ಇದೆ. ಖಾಸಗಿ ಸಂಸ್ಥೆಗಳಿಗಲ್ಲ, ಹೀಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇವರು ಇತ್ತೀಚಿಗೆ ಸ್ಪಷ್ಟಪಡಿಸಿದ್ದಾರೆ. ಹೀಗಿರುವಾಗಲೂ ಕೆಲವು ಖಾಸಗಿ ಮುಸಲ್ಮಾನ ಸಂಸ್ಥೆ ಕಾನೂನ ಬಾಹಿರವಾಗಿ ಹಲಾಲ್ ಪ್ರಮಾಣ ಪತ್ರ ನೀಡಿ ಬೃಹತ್ ಪ್ರಮಾಣದಲ್ಲಿ ವ್ಯಾಪಾರಿಗಳನ್ನು ಲೂಟಿ ಮಾಡುತ್ತಿದ್ದಾರೆ. ಈ ಕಾನೂನುಬಾಹಿರ ಹಾಲಾಲ್ ಪ್ರಮಾಣಪತ್ರ ಮತ್ತು ಹಲಾಲ್ ಉತ್ಪಾದನೆಗಳನ್ನು ಉತ್ತರಪ್ರದೇಶ ಸರಕಾರ ನಿಷೇಧಿಸಿದೆ. ಹಾಗೆ ಛತ್ತೀಸ್ಗಡ ರಾಜ್ಯದಲ್ಲಿಯೂ ನಿಷೇಧ ಹೇರಬೇಕೆಂದು ಹಿಂದುತ್ವನಿಷ್ಠ ಸಂಘಟನೆಗಳಿಂದ ಛತ್ತಿಸ್ಗಢದ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮಾ ಮತ್ತು ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರನ್ನು ಪ್ರತ್ಯಕ್ಷ ಭೇಟಿ ಮಾಡಲಾಯಿತು. ಈ ಸಮಯದಲ್ಲಿ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮ ಇವರು, ಈ ವಿಷಯ ಗಂಭೀರವಾಗಿದೆ, ಈ ಪ್ರಕಾರಗಳ ಮೇಲೆ ಇಂದೇ ನಿಷೇಧ ಹೇರಬೇಕೆಂದು ಅನಿಸುತ್ತದೆ; ಬರುವ ವಾರಗಳಲ್ಲಿ ಹಲಾಲ್ ಉತ್ಪಾದನೆಗಳ ಮೇಲೆ ನಿಷೇಧ ತರಲು ಪ್ರಯತ್ನ ಮಾಡುವೆವು ಎಂದು ಹೇಳಿದರು. ಮುಖ್ಯಮಂತ್ರಿಗಳ ಜೊತೆ ಚರ್ಚಿಸುತ್ತೇನೆ. ಸರಕಾರ ಇದರ ಬಗ್ಗೆ ಗಂಭೀರವಾಗಿ ಕ್ರಮ ಕೈಗೊಳ್ಳುವುದು. ಹಾಗೂ ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರು ವಿಚಾರಣೆ ನಡೆಸಿ ಕ್ರಮ ಕೈಗೊಳ್ಳಲಾಗುವುದೆಂದು ಪ್ರತಿನಿಧಿ ಮಂಡಳಕ್ಕೆ ಆಶ್ವಾಸನೆ ನೀಡಿದರು.
ಈ ಪ್ರತಿನಿಧಿ ಮಂಡಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮಹಾರಾಷ್ಟ್ರ ಮತ್ತು ಛತ್ತೀಸ್ಗಡ ಸಂಘಟಕ ಶ್ರೀ. ಸುನಿಲ ಘನವಟ, ಭಜರಂಗದಳದ ಶ್ರೀ. ಅಂಕಿತ ದ್ವಿವೇದಿ, ಮಿಷನ್ ಸನಾತನದ ಶ್ರೀ. ಮದನ ಮೋಹನ ಉಪಾಧ್ಯಾಯ, ಶ್ರೀ. ನೀಲಕಂಠ ಮಹಾದೇವ ಸಂಸ್ಥಾನದ ಪಂಡಿತ ನೀಲಕಂಠ ತ್ರಿಪಾಠಿ, ಕಿನ್ನರ್ ಅಖಾಡಾದ ಸಾಧ್ವಿ ಸೌಮ್ಯ, ಛತ್ತೀಸ್ಗಡದಲ್ಲಿನ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಮಂಗೇಶ ಖಂಗನ ಮತ್ತು ಶ್ರೀ. ಹೇಮಂತ ಕಾನಸಕರ ಇವರು ಸಹಭಾಗಿ ಆಗಿದ್ದರು. ಈ ಸಮಯದಲ್ಲಿ ಹಲಾಲ್ ಪ್ರಮಾಣ ಪತ್ರದ ಕಾನೂನ ಬಾಹಿರ ಪ್ರಕಾರಗಳ ವಿಷಯವಾಗಿ ದಾಖಲೆ ಮತ್ತು ಸಾಕ್ಷಿಗಳು ಒದಗಿಸಲಾಯಿತು. ಹಾಗೂ ಉಪಮುಖ್ಯಮಂತ್ರಿಗಳಿಗೆ ಹಲಾಲ್ ಜಿಹಾದ್ ವಿಷಯದ ಕುರಿತು ಒಂದು ಭಯಾವಹ ವಾಸ್ತವ ತೋರಿಸುವ ಕಿರುಚಿತ್ರ ತೋರಿಸಲಾಯಿತು. ಈ ಸಮಯದಲ್ಲಿ ಇಬ್ಬರೂ ಸಚಿವರಿಗೆ ಮನವಿ ಮತ್ತು ಹಲಾಲ ಜಿಹಾದ್ ಪುಸ್ತಕ ಉಡುಗೊರೆಯಾಗಿ ನೀಡಲಾಯಿತು.
ಛತ್ತಿಸ್ಗಢ ರಾಜ್ಯದ ಉಪಮುಖ್ಯಮಂತ್ರಿ ಶ್ರೀ. ವಿಜಯಶರ್ಮ ಇವರಿಗೆ ಹಲಾಲ ಉತ್ಪಾದನೆಗಳ ಮೇಲೆ ನಿಷೇಧ ಹೇರಲು ಮನವಿ ಮತ್ತು ಹಲಾಲ ಜಿಹಾದ್ ಈ ಪುಸ್ತಕ ಉಡುಗೊರೆಯಾಗಿ ನೀಡುವಾಗ, ಹಾಗೂ ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮ ಇವರ ಸಹಿತ ಬೈಠಕಿನಲ್ಲಿ ಕಾನೂನ ಬಾಹಿರ ಹಲಾಲ ಉತ್ಪಾದನೆ ಮತ್ತು ಹಲಾಲ ಪ್ರಮಾಣ ಪತ್ರದ ಮಾಹಿತಿ ನೀಡುತ್ತಿರುವ ಶ್ರೀ. ಸುನಿಲ್ ಘನವಟ ಮತ್ತು ಇತರ ಹಿಂದುತ್ವ ನಿಷ್ಠ ಸಂಘಟನೆ
ಹಾಲು, ಸಕ್ಕರೆ, ಬೇಕರಿ ಉತ್ಪಾದನೆಗಳು, ಕುರುಕಲು ತಿನಸುಗಳು, ರೆಡಿ ಟು ಈಟ್, ಅಡಿಗೆ ಎಣ್ಣೆ, ಔಷಧಿ, ವೈದ್ಯಕೀಯ ಉಪಕರಣಗಳು ಮತ್ತು ಸೌಂದರ್ಯ ಪ್ರಸಾದನಗಳು ಮತ್ತು ಇತರೆ ಉತ್ಪಾದನೆಗಳ ಕವರ್ ಮೇಲೆ ಹಲಾಲ್ ಸರ್ಟಿಫೈಡ್ ಮುದ್ರೆ ಒತ್ತುವ ಕಾನೂನರೀತಿಯ ವ್ಯವಸ್ಥೆ ಇಲ್ಲ, ಹಾಗೂ ಔಷಧ ಮತ್ತು ಸೌಂದರ್ಯ ಪ್ರಸಾದನ ಕಾನೂನು, ೧೯೪೦ ಮತ್ತು ಸಂಬಂಧಿತ ನಿಯಮಗಳಲ್ಲಿ ಹಲಾಲ ಪ್ರಮಾಣ ಪತ್ರಕ್ಕಾಗಿ ಯಾವುದೇ ವ್ಯವಸ್ಥೆ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಯಾವುದೇ ಔಷಧಿಗಳು, ವೈದ್ಯಕೀಯ ಉಪಕರಣಗಳು ಅಥವಾ ಕಾಸ್ಮೆಟಿಕ್ ಕವರ್ಗಳ ಮೇಲೆ ಹಲಾಲ ಪ್ರಮಾಣ ಪತ್ರದ ಸಂಬಂಧಿತ ಯಾವುದೇ ತಥ್ಯ ಪ್ರತ್ಯಕ್ಷ ಅಥವಾ ಪರೋಕ್ಷವಾಗಿ ನಮ್ಮೂಧಿಸಿದರೆ ಅದು ಒಂದು ದಂಡನೀಯ ಅಪರಾಧವಾಗಿದೆ. ಭಾರತೀಯ ಆಹಾರ ಸುರಕ್ಷಾ ಮತ್ತು ಮಾನಕ ಪ್ರಾಧೀಕರಣ (FSSA) ಇವರಿಗೆ ಆಹಾರ ಪದಾರ್ಥಗಳ ಮಾನದಂಡ ನಿಶ್ಚಯಿಸಿ ಮತ್ತು ಪ್ರಮಾಣ ಪತ್ರ ನೀಡುವ ಅಧಿಕಾರ ನೀಡಲಾಗಿದೆ. ಹಲಾಲ್ ಪ್ರಮಾಣಪತ್ರ ಈ ಆಹಾರ ಪದಾರ್ಥದ ಗುಣಮಟ್ಟದ ಬಗ್ಗೆ ಸಂದೇಹ ನಿರ್ಮಾಣ ಮಾಡಿ ಸರಕಾರಿ ನಿಯಮಗಳನ್ನು ಉಲ್ಲಂಘಿಸುತ್ತಿದೆ. ಹೀಗೆ ಶ್ರೀ. ಸುನಿಲ ಘನವಾಟ ಇವರು ಉಪಮುಖ್ಯಮಂತ್ರಿ ಶ್ರೀ. ವಿಜಯ ಶರ್ಮ ಮತ್ತು ಮುಖ್ಯಮಂತ್ರಿ ಶ್ರೀ. ವಿಷ್ಣುದೇವ ಸಾಯ ಇವರಿಗೆ ಮಾಹಿತಿ ನೀಡಿದರು.