Menu Close

ಬೆಂಗಳೂರು ಸೇರಿದಂತೆ ರಾಜ್ಯದ 20 ಕ್ಕೂ ಹೆಚ್ಚಿನ ಜಿಲ್ಲೆಗಳ 150 ಕ್ಕೂ ಹೆಚ್ಚು ದೇವಸ್ಥಾನಗಳ ಸ್ವಚ್ಛತಾ ಅಭಿಯಾನ ಸಂಪನ್ನ !

ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಲೋಕಾರ್ಪಣೆ ನಿಮಿತ್ತ ರಾಜ್ಯಾದ್ಯಂತ ಹಿಂದೂ ಜನಜಾಗೃತಿ ಸಮಿತಿಯ ಉಪಕ್ರಮ

ಬೆಂಗಳೂರು – ಜನವರಿ 22 ರಂದು ಅಯೋಧ್ಯೆಯ ಪವಿತ್ರ ಶ್ರೀ ರಾಮಜನ್ಮಭೂಮಿಯಲ್ಲಿ ಭಗವಾನ ಶ್ರೀರಾಮನು ಪುನಃ ಅವತರಿಸಿದ್ದಾನೆ. ಈ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಮೂಲಕ ದಿನಾಂಕ 15 ರಿಂದ 21 ಜನವರಿ 2024 ರ ಅವಧಿಯಲ್ಲಿ ದೇಶದಾದ್ಯಂತ ಸ್ಥಳೀಯ ದೇವಸ್ಥಾನಗಳಲ್ಲಿ ಸ್ವಚ್ಛತಾ ಅಭಿಯಾನವನ್ನು ಆಯೋಜಿಸಲಾಗಿತ್ತು. ಬೆಂಗಳೂರಿನ ಬೂದಿಗೆರೆ ಹಾಗೂ ಚಂದಾಪುರದಲ್ಲಿರುವ ಶ್ರೀ ರಾಮನ ದೇವಸ್ಥಾನಗಳು, ಯಲಹಂಕದ ಮಾರುತಿ ನಗರದ ಶ್ರೀ ಮಾರುತೇಶ್ವರ ದೇವಸ್ಥಾನ, ಶ್ರೀ ಅನ್ನಪೂರ್ಣೇಶ್ವರಿ ದೇವಸ್ಥಾನ, ಕೋಗಿಲು, ಶ್ರೀ ಗಾಯತ್ರಿ ಗಣಪತಿ ದೇವಸ್ಥಾನ, ಎಲೆಕ್ಟ್ರಾನಿಕ್ ಸಿಟಿಯ ಸಾಯಿಬಾಬಾ ದೇವಸ್ಥಾನ ಸೇರಿದಂತೆ ರಾಜ್ಯಾದ್ಯಂತ 20 ಕ್ಕೂ ಹೆಚ್ಚಿನ ಜಿಲ್ಲೆಗಳ 150 ಕ್ಕೂ ಹೆಚ್ಚು ದೇವಸ್ಥಾನಗಳ ಸ್ವಚ್ಚತೆ ಮಾಡಲಾಯಿತು. ಅದೇ ರೀತಿ ಹಲವು ದೇವಸ್ಥಾನಗಳಲ್ಲಿ `ರಾಮ ರಾಜ್ಯ’ – ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಪ್ರತಿಜ್ಞೆ ಮಾಡಲಾಯಿತು. ಸ್ಥಳೀಯ ರಾಮ ಭಕ್ತರು, ಧರ್ಮಪ್ರೆಮಿಗಳು, ಹಿಂದೂ ಬಾಂಧವರು ಈ ಅಭಿಯಾನದಲ್ಲಿ ಸಹಭಾಗಿಯಾಗಿದ್ದರು.

ಈ ವೇಳೆ ಪ್ರತಿಕ್ರಿಯಿಸಿರುವ ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ವಕ್ತಾರ ಶ್ರೀ. ಮೋಹನ್ ಗೌಡ, `ಲಕ್ಷಾಂತರ ಹಿಂದೂಗಳ ಬಲಿದಾನದ ನಂತರ ಅಯೋಧ್ಯೆಯಲ್ಲಿ ಭಗವಾನ ಶ್ರೀರಾಮನ ಭವ್ಯ ಮಂದಿರ ನಿರ್ಮಾಣವಾಗಿದ್ದು, ಇದು ಒಂದು ಐತಿಹಾಸಿಕ ಕ್ಷಣವಾಗಿದೆ. ಈ ಶ್ರೀ ರಾಮಜನ್ಮಭೂಮಿಯ ಮುಕ್ತಿಗಾಗಿ ಪ್ರಯತ್ನಿಸಿದವರ ಮತ್ತು ತಮ್ಮ ಪ್ರಾಣದ ಬಲಿದಾನ ಮಾಡಿದ ರಾಮಭಕ್ತರನ್ನು ಸಮಿತಿಯು ಕೃತಜ್ಞತಾ ಭಾವದಿಂದ ಸ್ಮರಿಸುತ್ತದೆ’ ಎಂದಿದ್ದಾರೆ.

Related News