Menu Close

ಮಂಗಳೂರಿನಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಂಪನ್ನ !

ದೇವಸ್ಥಾನಗಳ ರಕ್ಷಣೆಗಾಗಿ ಒಟ್ಟಾಗಿ ಹೋರಾಡುವುದು ಆವಶ್ಯಕ ! – ಶ್ರೀ. ಶ್ರೀಹರಿ ನಾರಾಯಣ ದಾಸ ಆಸ್ರಣ್ಣ, ಅರ್ಚಕರು, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನ

ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅರ್ಚಕರಾದ ಶ್ರೀ. ಶ್ರೀಹರಿ ನಾರಾಯಣ ದಾಸ ಆಸ್ರಣ್ಣ

ಮಂಗಳೂರು : ಹಿಂದೂ ಧರ್ಮವನ್ನು ಉಳಿಸುವಲ್ಲಿ ದೇವಸ್ಥಾನಗಳ ಮಹತ್ವ ಅಪಾರವಾಗಿದೆ. ದೇವಸ್ಥಾನಗಳ ವ್ಯವಸ್ಥಾಪನೆಯನ್ನು ಬ್ರಿಟಿಷರು ಸರಕಾರೀಕರಣಗೊಳಿಸಿ ಭಾವದಿಂದಲ್ಲ, ಶಾಸನದಿಂದ ಆಳಿದರು. ಶಾಸ್ತ್ರಕ್ಕನುಸಾರ ನಡೆಯುತ್ತಿದ್ದ ಶಾಸನವನ್ನು ನಾಶಗೊಳಿಸಿ ‘ಎಂಡೊಮೆಂಟ್ ಆಕ್ಟ್’ ಮೂಲಕ ಹಿಂದೂ ಧರ್ಮದ ಮೇಲೆ ಆಳ್ವಿಕೆ ಮಾಡತೊಡಗಿದರು. ಧಾರ್ಮಿಕ ಪೀಳಿಗೆಯ ಮಹತ್ವವನ್ನರಿತ ಬ್ರಿಟಿಷರು ಅದನ್ನೇ ನಾಶಗೊಳಿಸಿಬಿಟ್ಟರು. ಅದರ ಪರಿಣಾಮವನ್ನು ಇಂದು ಸಂಪೂರ್ಣ ಸಮಾಜವು ಅನುಭವಿಸಬೇಕಾಗಿದೆ. ನಾವು ಈಗ ಎಚ್ಚೆತ್ತುಗೊಳ್ಳದಿದ್ದರೆ ದೇವಸ್ಥಾನಗಳಲ್ಲಿ ನಮಾಜ ಮಾಡುವ ಪರಿಸ್ಥಿತಿ ಬಹುಬಹುದು. ನಮ್ಮ ಉಳಿಕೆಗಾಗಿ ಸಂಘಟನೆ ಬಹಳ ಮಹತ್ವದ್ದು.ಅದಕ್ಕಾಗಿಎಲ್ಲರೂ ಒಟ್ಟಾಗಿ ಹೋರಾಡೋಣ, ಎಂದು ಎಂದು ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಶ್ರೀ. ಶ್ರೀಹರಿ ನಾರಾಯಣ ದಾಸ ಆಸ್ರಣ್ಣ ಇವರು ಪ್ರತಿಪಾದಿಸಿದರು. ಅವರು ಜನವರಿ 26 ರಂದು ನಗರದ ಶ್ರೀನಿವಾಸ ಕಲ್ಯಾಣ ಮಂಟಪದಲ್ಲಿ ನಡೆದ ದಕ್ಷಿಣ ಕನ್ನಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ಈ ಪರಿಷತ್ತಿನಲ್ಲಿ ಸುಮಾರು 200 ರಷ್ಟು ಪ್ರತಿನಿಧಿಗಳು ಭಾಗವಹಿಸಿದ್ದರು.

ಸಂತರು ಮತ್ತು ಗಣ್ಯರ ಶುಭಹಸ್ತದಿಂದ ಉಧ್ಘಾಟನೆ !

ಈ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ರಾಮಕೃಷ್ಣ ಮಠದ ಅಧ್ಯಕ್ಷರಾದ ಸ್ವಾಮಿ ಜಿತಕಾಮಾನಂದರು, ತೆಂಕಕಾರಂದೂರು ಇಲ್ಲಿನ ಶ್ರೀವಿಷ್ಣು ಮೂರ್ತಿ ದೇವಸ್ಥಾನದ ಆಡಳಿತ ಮೊಕ್ತೇಸರರಾದ ಶ್ರೀ. ಕೆ. ಶ್ರೀಕೃಷ್ಣ ಸಂಪಿಗೆತಾಯ, ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ಅನುವಂಶಿಕ ಅರ್ಚಕರಾದ ಶ್ರೀ. ಶ್ರೀಹರಿ ನಾರಾಯಣ ದಾಸ ಆಸ್ರಣ್ಣ/‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಇವರು ದೀಪಪ್ರಜ್ವಲನೆಯನ್ನು ಮಾಡಿ ಉದ್ಘಾಟಿಸಿದರು. ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಮಾಡುವುದರೊಂದಿಗೆ ದೇವಸ್ಥಾನಗಳ ಹಿತದ ದೃಷ್ಟಿಯಿಂದ ದೇವಸ್ಥಾನಗಳ ಧರ್ಮದರ್ಶಿಗಳು, ವಿಶ್ವಸ್ಥರು, ಪುರೋಹಿತರು ಮುಂತಾದವರು ಪಾಲ್ಗೊಂಡಿದ್ದರು. ಈ ಪರಿಷತ್ತನ್ನು ಶ್ರೀವಿಷ್ಣು ಮೂರ್ತಿ ದೇವಸ್ಥಾನ (ತೆಂಕಕಾರಂದೂರು) ಶ್ರೀ ಗುಡ್ರಾಮಲ್ಲೇಶ್ವರ ದೇವಸ್ಥಾನ (ಗುಡ್ರಾದಿ, ರೇಖ್ಯ), ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ದೇವಸ್ಥಾನಗಳಿಂದ ಸಂಸ್ಕೃತಿ ರಕ್ಷಣೆಯೂ ಆಗಬೇಕು ! – ಜಿತಕಾಮನಂದಜಿ, ರಾಮಕೃಷ್ಣ ಮಠ, ಮಂಗಳೂರು

ದೇವಸ್ಥಾನಗಳು ಕೇವಲ ಪೂಜೆಗಾಗಿ ಸೀಮಿತವಾಗಿಡದೇ ಸಂಸ್ಕೃತಿ, ಕಲೆಯ ರಕ್ಷಣೆಯಾಗಬೇಕು. ದೇವಸ್ಥಾನಗಳಲ್ಲಿ ಧರ್ಮಪರಂಪರೆಯ ಶಿಕ್ಷಣ ನೀಡುವಂತಾಗಬೇಕು. ಅಂತಹ ಕಾರ್ಯಕ್ರಮಗಳ ಆಯೋಜನೆಯಾಗಬೇಕು, ಉದಾ. ಭಗವದ್ಗೀತೆi, ಭಜನೆ, ಬಾಲಕಾಶ್ರಮಗಳನ್ನು ನಡೆಸಿ ಅಲ್ಲಿ ತಬಲಾ, ವೇದಾಧ್ಯಯನ ಹೀಗೆ ಕಾರ್ಯಕ್ರಮಗಳನ್ನು ದೇವಸ್ಥಾನಗಳಿಂದ ಆಯೋಜಿಸಿ ಸಂಸ್ಕೃತಿ ಸಂರಕ್ಷಣೆಯಾಗಬೇಕು.ಅಲ್ಲದೇ ನಾನು ವಿನಂತಿಸುವುದೆಂದರೆ ಸುತ್ತಮುತ್ತಲಿನ ಜನರಿಗೆ ಧರ್ಮಶಿಕ್ಷಣದ ಕಾರ್ಯಕ್ರಮ ಆಯೋಜಿಸಬೇಕು.

ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಢವಾಗಿರುತ್ತದೆ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ

ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವತೆಗಳು ವಾಸ ಮಾಡುವ ಚೈತನ್ಯಮಯ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮದ ಆಧಾರ ಸ್ಥಂಬವಾಗಿದೆ. ದೇವಸ್ಥಾನಗಳು ಧರ್ಮದ ಪ್ರಾಣವಾಗಿದೆ ಮತ್ತು ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ರಾಷ್ಟ್ರವು ಸಮಾಜದ ಆತ್ಮವಾಗಿದೆ. ಹಾಗಾಗಿ ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಡವಾಗಿರುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ 100 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅಳವಡಿಸಲು ದೇವಸ್ಥಾನಗಳ ನಿರ್ಧಾರ – ಮೋಹನ ಗೌಡ


ದೇವಸ್ಥಾನಗಳು ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳು. ಇಂದು ದೇವಸ್ಥಾನಕ್ಕೆ ಭಕ್ತರು ಪಾಶ್ಚಾತ್ಯರ ಅಸಭ್ಯ ಉಡುಪು ಧರಿಸಿ ದೇವಸ್ಥಾನಗಳ ಒಳಗೆ ಬರುತ್ತಾರೆ. ಅದರಿಂದ ದೇವಸ್ಥಾನಗಳ ಪಾವಿತ್ರ್ಯ ನಷ್ಟವಾಗುತ್ತದೆ. ಅದಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಯ 100 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲು ಜಿಲ್ಲೆಯ ೧೦೦ ಕ್ಕೂ ಅಧಿಕ ವಿಶ್ವಸ್ಥರು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ. ಅದರ ಪ್ರಾರಂಭಿಕ ಹಂತದಲ್ಲಿ ವಸ್ತ್ರಸಂಹಿತೆಯ ಫಲಕವನ್ನು ದೇವಸ್ಥಾನಗಳಲ್ಲಿ ಅಳವಡಿಸುವುದು, ಭಕ್ತಾದಿಗಳಿಗೆ ವಸ್ತ್ರಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು,ಯಾರಾದರೂ ಅಸಭ್ಯ ಉಡುಪು ಧರಿಸಿ ಬಂದರೆ ಪರ್ಯಾಯ ಸಾತ್ತ್ವಿಕ ಉಡುಪು ನೀಡಲು ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡುವುದು,ಆರತಿ ಸಮಯದಲ್ಲಿ ವಸ್ತ್ರ ಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಹೀಗೆ ಹಂತಹಂತವಾಗಿ ವಸ್ತ್ರಸಂಹಿತೆಯನ್ನು ಅಳವಡಿಸಲಾಗುವುದು.

ದೇವಸ್ಥಾನಗಳ ಪಾವಿತ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯ ! – ಶ್ರೀ. ರಾಜಶೇಖರ ಹೆಬ್ಬಾರ

ದೇಹ ಮತ್ತು ಮನಸ್ಸನ್ನು ಶುದ್ಧೀಕರಿಸಿದರೆ ಮಾತ್ರ ಭಗವಂತನ ಅಸ್ತಿತ್ವದ ಅರಿವಾಗುತ್ತದೆ. ಪಂಚಜ್ಞಾನೇಂದ್ರಿಯಗಳು,ಪಂಚಕರ್ಮೇಂದ್ರಿಯಗಳು, ಮನಸ್ಸು, ಬುದ್ಧಿ, ಅಹಂಗಳನ್ನು ಶುದ್ಧೀಕರಿಸಿ ಅದನ್ನು ಈಶ್ವರನಿಗೆ ಅರ್ಪಿಸಬೇಕು. ಅದಕ್ಕಾಗಿ ದೇವಸ್ಥಾನಗಳು ಮಹತ್ವದ್ದಾಗಿವೆ ಮತ್ತು ಅವುಗಳ ಪಾವಿತ್ಯ ಕಾಪಾಡುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ಇದಕ್ಕಾಗಿ ಮಹತ್ವಪೂರ್ಣ ಹೆಜ್ಜೆ ಎಂದರೆ ಈ ದೇವಸ್ಥಾನದ ಮಹಾಸಂಘದ ಸ್ಥಾಪನೆ, ಇದರಲ್ಲಿ ನಮ್ಮನ್ನು ತೊಡಗಿಸಿಕೊಂಡು ಧರ್ಮಕರ್ತವ್ಯವನ್ನು ನಿಭಾಯಿಸೋಣ.

ಸಂಘಟನೆಯಿಂದ ಕಾರ್ಯದ ಜ್ವಾಲೆಯು ಕ್ರಾಂತಿಯ ರೂಪ ತಾಳಿ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸಲಿದೆ ! – ಚಂದ್ರ ಮೊಗೇರ, ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ದೇವಸ್ಥಾನಗಳ ನಿಧಿಯನ್ನು ಅನ್ಯಧರ್ಮೀಯರಿಗೆ ನೀಡುವುದು, ಸರಕಾರೀಕರಣವಾದ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಮಾಡದೇ ಇತರ ಧರ್ಮೀಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ಲೆಕ್ಕವನ್ನಿಡದಿರುವುದು,ಆಭರಣಗಳ ಕಳ್ಳತನ ಇವೆಲ್ಲವುಗಳ ವಿರುದ್ಧ ಮಹಾಸಂಘವು ಹೋರಾಡಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದ ಅವ್ಯವಹಾರವನ್ನು ಬಯಲಿಗೆಳೆಯಿತು. ದೇವಸ್ಥಾನಗಳನ್ನು ಅನಧಿಕೃತವೆಂದು ನೆಲಸಮಗೊಳಿಸುವುದು, ಮಸೀದಿಗಳನ್ನು ಮತ್ತು ಇಗರ್ಜಿಗಳನ್ನು ಬಿಟ್ಟುಬಿಡುವುದು ಇವೆಲ್ಲವುಗಳ ವಿರುದ್ಧ ಮಹಾಸಂಘವು ವಕೀಲರ ಮೂಲಕ ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧವಾಗಿ ಹೋರಾಡುತ್ತಿದೆ.ಸಂಘಟನೆಯಿಂದ ಕಾರ್ಯ ಬೇಗನೇ ಜ್ವಾಲೆಯು ಕ್ರಾಂತಿಯ ರೂಪ ತಾಳಿ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುತತದೆ.ಅದಕ್ಕಾಗಿ ನಿಮ್ಮೆಲ್ಲರ ಯೋಗದಾನ ಅವಶ್ಯವಾಗಿದೆ.
ಸಮಾರೋಪ ಸಮಾರಂಭದ ಮೊದಲು ಮಂದಿರ ಮಹಾಸಂಘದಿಂದ ಒಮ್ಮತದಿಂದ ಕೆಲವು ಠರಾವುಗಳನ್ನು ಮಂಡಿಸಲಾಯಿತು.

Related News