ಹಿಂದೂ ಧರ್ಮದ ಮೇಲಾಗುತ್ತಿರುವ ನಿರಂತರ ಆಘಾತ ಹಾಗೂ ಸಮಸ್ಯೆಗಳಿಗೆ ಪರಿಹಾರ ಹಿಂದೂ ರಾಷ್ಟ್ರದ ಸ್ಥಾಪನೆ ! – ಶ್ರೀ. ಶರತ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿ, ಬೆಂಗಳೂರು
ದೀಪ ಪ್ರಜ್ವಲನೆ ಮಾಡುತ್ತಿರುವ (ಎಡದಿಂದ) ಶ್ರೀ ಸತ್ಯ ಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷ ಶ್ರೀ. ಮುರಳಿ ಹಾಗೂ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್
ಬೆಂಗಳೂರು : ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲ್ಲೂಕಿನ ಬೂದಿಗೆರೆಯ ಶ್ರೀ ಶಿರಡಿ ಸಾಯಿಬಾಬಾ ಸೇವಾ ಕೇಂದ್ರದಲ್ಲಿ ಇಂದು ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಆಯೋಜಿಸಲಾಗಿತ್ತು. ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲಾ ಸಮನ್ವಯಕರಾದ ಶ್ರೀ. ಶರತ್ ಕುಮಾರ್ ಹಾಗೂ ಬೂದಿಗೆರೆಯ ಶ್ರೀ ಸತ್ಯಸಾಯಿ ಸೇವಾ ಟ್ರಸ್ಟ್ ಅಧ್ಯಕ್ಷರಾದ ಶ್ರೀ. ಮುರಳಿ ಇವರು ದೀಪ ಪ್ರಜ್ವಲನೆಯ ಮೂಲಕ ಸಭೆಯನ್ನು ಉದ್ಘಾಟಿಸಿದರು, 100ಕ್ಕೂ ಹೆಚ್ಚು ಹಿಂದೂ ಬಾಂಧವರು ಸಭೆಯಲ್ಲಿ ಉಪಸ್ಥಿತರಿದ್ದರು.
ಈ ವೇಳೆ ಮಾತನಾಡಿದ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶರತ್ ಕುಮಾರ್ ಇವರು, ಇಂದು ಹಿಂದೂ ರಾಷ್ಟ್ರದ ಬೇಡಿಕೆಯನ್ನು ಸಶಕ್ತವಾಗಿ ಮಾಡುವ ಅವಶ್ಯಕತೆಯಿದೆ. ಇದರ ಕಾರಣ ಈ ದೇಶದ ಪ್ರಾಣವಾಗಿರುವ ಸನಾತನ ಧರ್ಮದ ಮೂಲವನ್ನು ಕಿತ್ತೆಸೆಯಲು ಅನೇಕ ಜನರು ಶ್ರಮಿಸುತ್ತಿದ್ದಾರೆ, ಈಗ ಕೆಲವೇ ತಿಂಗಳಲ್ಲಿ ನಡೆಯಲಿರುವ ಲೋಕಸಭೆಯ ಚುನಾವಣೆಯಲ್ಲಿ ಆರಿಸಿ ಬರಲು ವಿವಿಧ ಆಶ್ವಾಸನೆಗಳನ್ನು ನೀಡಲಾಗುವುದು; ಆದರೆ ಈ ನಿಮಿತ್ತದಲ್ಲಿ ನಮಗೆ ಯಾವುದೇ ಆಶ್ವಾಸನೆ ಬೇಡ, ಬದಲಾಗಿ ಹಿಂದೂ ರಾಷ್ಟ್ರದ ನಕಾಶೆ ಬೇಕಾಗಿದೆ ! `ನಮಗೆ ಫ್ರೀ ವಿದ್ಯುತ್ ಬೇಡ, ಸಾಲ ಮನ್ನಾ ಬೇಡ, ನಮಗೆ ಕೇವಲ ಎಲ್ಲರ ಉದ್ಧಾರ ಮಾಡುವ ಹಿಂದೂ ರಾಷ್ಟ್ರ ಬೇಕು, ಭಾರತವನ್ನು ಸಂವಿಧಾನಾತ್ಮಕ ದೃಷ್ಟಿಯಲ್ಲಿ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಿರಿ, ದೇಶದಾದ್ಯಂತ ಗೋಹತ್ಯಾ ನಿರ್ಬಂಧ ಅನ್ವಯಗೊಳಿಸಿರಿ’, `ಲವ್ ಜಿಹಾದ್ ವಿರೋಧಿ ಕಾನೂನು ಮಾಡಿರಿ’, ‘ಮತಾಂತರ ನಿರ್ಬಂಧ, ಜನಸಂಖ್ಯಾ ನಿಯಂತ್ರಣ ಕಾನೂನು ಮಾಡಿರಿ’, `ಪರಕೀಯ ಆಕ್ರಮಣಕಾರರು ವಶಪಡಿಸಿಕೊಂಡಿರುವ ದೇವಸ್ಥಾನಗಳನ್ನು ತಕ್ಷಣ ಮುಕ್ತಗೊಳಿಸಿರಿ’, ‘ಸರಕಾರ ವಶಪಡಿಸಿಕೊಂಡಿರುವ ದೇವಸ್ಥಾನಗಳನ್ನು ಭಕ್ತರಿಗೆ ಒಪ್ಪಿಸಿರಿ’, ಇದು ಹಿಂದೂಗಳ ಒಮ್ಮತದ ಬೇಡಿಕೆಯಾಗಿದ್ದು ಇದಕ್ಕಾಗಿ ಯಾರು ಕಾರ್ಯ ಮಾಡುವರೋ, ಅವರಿಗೆ ಹಿಂದೂಗಳ ಬೆಂಬಲ ಸಿಗಬಹುದು ಎಂಬ ನಿಲುವನ್ನು ಹಿಂದೂಗಳು ಈಗ ತೋರಿಸಬೇಕಿದೆ, ಹಿಂದೂ ಧರ್ಮದ ಮೇಲಾಗುತ್ತಿರುವ ನಿರಂತರ ಆಘಾತ ಹಾಗೂ ಸಮಸ್ಯೆಗಳಿಗೆ ಹಿಂದೂ ರಾಷ್ಟ್ರದ ಸ್ಥಾಪನೆ’ಯೊಂದೇ ಪರಿಹಾರವಾಗಿದೆ ಎಂದಿದ್ದಾರೆ.
ಅವರು ಮುಂದೆ ಮಾತನಾಡಿ, ಹಿಂದೂ ಹುಡುಗಿಯರನ್ನು ‘ಲವ್ ಜಿಹಾದ್’ನ ಜಾಲದಲ್ಲಿ ಸಿಲಕದಂತೆ ತಡೆಯುವುದು ನಮ್ಮ ಕರ್ತವ್ಯವಾಗಿದೆ. ಈ ಷಡ್ಯಂತ್ರದ ವಿರುದ್ಧ ಕೇರಳ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಅನೇಕ ವಿಷಯಗಳನ್ನು ಬೆಳಕಿಗೆ ತಂದಿದ್ದಾರೆ. ಈ ಭಾರತ ವಿರೋಧಿ ಷಡ್ಯಂತ್ರದ ವಿರುದ್ಧ ಕಾನೂನು ಮಾಡಬೇಕೆಂದು ನಾವು ಆಗ್ರಹಿಸುತ್ತಿದ್ದೇವೆ, ‘ಕೇರಳ ಸ್ಟೋರಿ’ಯಂತಹ ‘ಕರ್ನಾಟಕ ಸ್ಟೋರಿ’ ಆಗುವವರೆಗೆ ನಾವು ಸುಮ್ಮನೆ ಕುಳಿತುಕೊಳ್ಳಬೇಕೇ ? ಕೇಂದ್ರ ಸರಕಾರ ಸಂಸತ್ತಿನಲ್ಲಿ ಸಾದರಪಡಿಸಿದ ಎನ್.ಸಿ.ಆರ್.ಬಿ. (ನ್ಯಾಶನಲ್ ಕ್ರೈಮ್ ರೆಕಾರ್ಡ್ ಬ್ಯುರೋದ) ವರದಿಗನುಸಾರ ದೇಶದಾದ್ಯಂತ ಕಳೆದ 3 ವರ್ಷಗಳಲ್ಲಿ 10 ಲಕ್ಷ ಹುಡುಗಿಯರು ಕಾಣೆಯಾದರೂ, ಶ್ರದ್ದಾ ವಾಲಕರಳ ಶರೀರದ 35 ತುಂಡುಗಳಾದರೂ ಇದುವರೆಗೆ ‘ಲವ್ ಜಿಹಾದ್ ವಿರೋಧಿ ಕಾನೂನು’ ಜಾರಿಯಾಗದಿರುವುದು ವಿಪರ್ಯಾಸ ! ನಮ್ಮ ಹಿಂದೂ ಹುಡುಗಿಯರ ರಕ್ಷಣೆಗಾಗಿ ನಾವೇ ಮುಂದಾಳತ್ವ ತೆಗೆದುಕೊಳ್ಳಬೇಕು ಎಂದು ಕರೆ ನೀಡಿದ್ದಾರೆ.
ಶ್ರೀ. ಮುರಳಿ ಮಾತನಾಡಿ, ಸನಾತನ ಧರ್ಮದ ಆಚರಣೆಗಳು ಕೇವಲ ಆಚರಣೆಯಾಗಿರದೇ ಆಧ್ಯಾತ್ಮಿಕ ವಿಜ್ಞಾನವೇ ಆಗಿದೆ, ಅದು ಸಾಮಾಜಿಕ ಭದ್ರತೆಯೂ ಆಗಿದ್ದು, ಇತ್ತೀಚಿನ ದಿನಗಳಲ್ಲಿ ಧರ್ಮಶಿಕ್ಷಣದ ಅಭಾವದಿಂದಾಗಿ ಹಿಂದೂ ಸಮಾಜವು ಈ ಆಚರಣೆಗಳನ್ನು ಮರೆತಂತಾಗಿದೆ, ಈ ಪರಿಸ್ಥಿತಿ ಬದಲಾಗಬೇಕು ಎಂಬ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿಯಿಂದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯ ಆಯೋಜಿಸಲಾಗುತ್ತಿದೆ` ಹಿಂದೂಗಳು ನಮ್ಮ ಧರ್ಮದಲ್ಲಿ ಹೇಳಿರುವಂತೆ ಧರ್ಮಾಚರಣೆಯನ್ನು ಮಾಡಬೇಕು’ ಎಂದರು.