ಮುಂಬರುವ ದಿನಗಳಲ್ಲಿ ಬೆಳಗಾವಿ ಜಿಲ್ಲಾ ಮಟ್ಟದ ಅಧಿವೇಶನ ಮಾಡಲು ನಿರ್ಣಯ !
ರಾಯಭಾಗ : ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಘಗಳ ಮಹಾಸಂಘದ ವತಿಯಿಂದ ಬೆಳಗಾವಿ ಜಿಲ್ಲಾ ಮಟ್ಟದಲ್ಲಿ ದೇವಸ್ಥಾನ ಅಧಿವೇಶನ ಮಾಡಲಾಗುವುದು ಮತ್ತು ದೇವಸ್ಥಾನಕ್ಕೆ ಸಂಬಂಧಿಸಿದ ವಿಷಯಗಳ ಕುರಿತು ಮಹತ್ವದ ನಿರ್ಣಯ ತೆಗೆಕೊಳ್ಳಲಾಗುವುದು ಎಂದು ದೇವಸ್ಥಾನ ಮಹಾಸಂಘದ ಸಂಯೋಜಕರಾದ ಶ್ರೀ. ಗುರುಪ್ರಸಾದ ಗೌಡ ತಿಳಿಸಿದರು. ಅವರು ದಿನಾಂಕ : 30-01-2024 ರಂದು ಚಿಂಚಲಿ ಗ್ರಾಮದ ಶ್ರೀಮತಿ. ಮಾಲಿನಿ ಪಾಟೀಲ ಭವನದಲ್ಲಿ ಆಯೋಜಿಸಿದ್ದ ದೇವಸ್ಥಾನದ ವಿಶ್ವಸ್ಥರ ಬೈಠಕ್ ನಲ್ಲಿ ಮಾತನಾಡುತ್ತಿದ್ದರು, ಕಾರ್ಯಕ್ರಮದಲ್ಲಿ ಸುಮಾರು 27 ವಿವಿಧ ದೇವಸ್ಥಾನಗಳ 145 ಅರ್ಚಕರು ಮತ್ತು ವಿಶ್ವಸ್ಥರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೇವಸ್ಥಾನಗಳ ಸರ್ಕಾರಿಕರಣ ವಿರುದ್ಧ ಮತ್ತು ಸರ್ಕಾರಿಕರಣಗೊಂಡ ದೇವಸ್ಥಾನಗಳನ್ನು ಮರಳಿ ಪಡೆಯಲು ಕಾನೂನು ಅಡಿಯಲ್ಲಿ ಹೋರಾಟ ಮಾಡುವುದರ ಕುರಿತು ಚರ್ಚಿಸಿ ಒಮ್ಮತದ ನಿರ್ಣಯ ತೆಗೆದುಕೊಂಡರು.
ಈ ಸಂದರ್ಭದಲ್ಲಿ ಶ್ರೀ ಮಾಯಕ್ಕಾ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ. ಜೆ. ಆರ್. ಜಾಧವ, ಶ್ರೀ. ಗಿರೀಶ್ ಪಾಟೀಲ ಮತ್ತಿತರ ದೇವಸ್ಥಾನದ ಸದಸ್ಯರು ಉಪಸ್ಥಿತರಿದ್ದರು.