Menu Close

ಹುಬ್ಬಳ್ಳಿಯಲ್ಲಿ ಧಾರವಾಡ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು ಸಂಪನ್ನ !

ಜಿಲ್ಲೆಯ 200 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿ ಮಾಡಲು ದೇವಸ್ಥಾನ ವಿಶ್ವಸ್ಥರ ನಿರ್ಧಾರ ! – ಶ್ರೀ. ಮೋಹನ ಗೌಡ

ದೀಪ ಪ್ರಜ್ವಲನೆ ಮಾಡುತ್ತಿರುವ (ಎಡದಿಂದ) ಸನಾತನ ಸಂಸ್ಥೆಯ ಧರ್ಮಪ್ರಚಾರಕ ಸಂತರಾದ ಪೂ.ರಮಾನಂದ ಗೌಡ, ಗಾಯತ್ರಿ ತಪೋವನ ದೇವಸ್ಥಾನದ ಶ್ರೀ.ವಿನಾಯಕ ಆಕಳವಾಡಿ, ಶ್ರೀ ರಾಜಣ್ಣ ಕೊರವಿ, ಶ್ರೀ.ಉದಯಕುಮಾರ ನಾಯ್ಕ ಹಾಗೂ ಶ್ರೀ.ಮೋಹನ ಗೌಡ

ಹುಬ್ಬಳ್ಳಿ: ಸನಾತನ ಧರ್ಮ ಉಳಿಯಬೇಕಾದರೆ ಮನೆಯಿಂದಲೇ ಮಕ್ಕಳಿಗೆ ಒಳ್ಳೆಯ ವಿಚಾರಗಳನ್ನು, ಸಂಸ್ಕೃತಿಯ ಪಾಠಗಳನ್ನು ಮಾಡುತ್ತಾ ಬನ್ನಿ, ಮುಂದೆ ಅವರು ನಮ್ಮ ಸನಾತನ ಧರ್ಮವನ್ನು ಪಾಲಿಸುತ್ತಾ ಹೋಗುತ್ತಾರೆ ಎಂದು ದೇವಸ್ಥಾನ ವಿಶ್ವಸ್ಥರಾದ ಶ್ರೀ. ವಿನಾಯಕ ಆಕಳವಾಡಿ ಹೇಳಿದರು, ಅವರು ಜನವರಿ 28 ರಂದು ನಗರದ ಶ್ರೀ ಪ್ರಮೋದಾತ್ಮ ಸಭಾಭವನದಲ್ಲಿ ನಡೆದ ಧಾರವಾಡ ಜಿಲ್ಲಾ ಮಟ್ಟದ ಮಂದಿರ ಅಧಿವೇಶನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.
ಈ ಪರಿಷತ್ತಿನಲ್ಲಿ ಸುಮಾರು 300 ದೇವಸ್ಥಾನ ಪ್ರತಿನಿಧಿಗಳು ಭಾಗವಹಿಸಿದ್ದರು.

ಸಂತರು ಮತ್ತು ಗಣ್ಯರ ಶುಭಹಸ್ತದಿಂದ ಉದ್ಘಾಟನೆ !

ಈ ಕಾರ್ಯಕ್ರಮವನ್ನು ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಶ್ರೀ ಗಾಯತ್ರಿ ತಪೋಭೂಮಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ವಿನಾಯಕ ಆಕಳವಾಡಿ, ಪಾಲಿಕೆ ಸದಸ್ಯರಾದ ಶ್ರೀ. ರಾಜಣ್ಣ ಕೊರವಿ, ಶ್ರೀ. ಉದಯಕುಮಾರ ನಾಯ್ಕ್ ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಇವರು ದೀಪಪ್ರಜ್ವಲನೆಯನ್ನು ಮಾಡಿ ಉದ್ಘಾಟಿಸಿದರು.

ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತ ಮಾಡುವುದರೊಂದಿಗೆ ದೇವಸ್ಥಾನಗಳ ಹಿತದ ದೃಷ್ಟಿಯಿಂದ ದೇವಸ್ಥಾನಗಳ ಧರ್ಮದರ್ಶಿಗಳು, ವಿಶ್ವಸ್ಥರು, ಪುರೋಹಿತರು ಮುಂತಾದವರು ಪಾಲ್ಗೊಂಡಿದ್ದರು. ಈ ಪರಿಷತ್ತನ್ನು ‘ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾಗಿತ್ತು.

ಶ್ರೀ. ರಾಜಣ್ಣ ಕೊರವಿ ಇವರು ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಾ, ದೇವಸ್ಥಾನದ ಮಹತ್ವವನ್ನು ನಮ್ಮ ಮುಂದಿನ ಪೀಳಿಗೆಗೆ ತಿಳಿಸಿಕೊಡಿಬೇಕಾಗಿದೆ, ಕಷ್ಟ ಬಂದಾಗ ಮಾತ್ರ ದೇವಸ್ಥಾನಕ್ಕೆ ಹೋಗುತ್ತೇವೆ, ದೇವರ ಹತ್ತಿರ ಪ್ರಾರ್ಥನೆ ಮಾಡುತ್ತೇವೆ, ಇಷ್ಟಕ್ಕೆ ಸೀಮಿತವಾಗದೆ ದೇವಸ್ಥಾನಗಳನ್ನು ಉಳಿಸಿಕೊಳ್ಳಲು ನಾವೆಲ್ಲ ಹಿಂದೂಗಳು ಒಂದು ಎಂದು ಒಗ್ಗಟಾಗಿ ಮುಂದೆ ಬರಬೇಕಾಗಿದೆ, ಈ ನಿಟ್ಟಿನಲ್ಲಿ ನಾವು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.

ದೇವಸ್ಥಾನವು ದೇವರು ವಾಸ ಮಾಡುವ ಚೈತನ್ಯದ ಕ್ಷೇತ್ರ, ದೇವಸ್ಥಾನಗಳು ಧರ್ಮದ ಕೇಂದ್ರವಾಗಿದೆ ! – ಪೂ. ರಮಾನಂದ ಗೌಡ, ಧರ್ಮಪ್ರಚಾರಕರು, ಸನಾತನ ಸಂಸ್ಥೆ.

ಸನಾತನ ಧರ್ಮದಲ್ಲಿ ದೇವಸ್ಥಾನಗಳು ಅತ್ಯಂತ ಪವಿತ್ರ ಸ್ಥಳಗಳು. ದೇವಸ್ಥಾನಗಳು ಎಂದರೆ ದೇವತೆಗಳು ವಾಸ ಮಾಡುವ ಚೈತನ್ಯಮಯ ಕ್ಷೇತ್ರವಾಗಿದೆ. ಇದು ಹಿಂದೂ ಧರ್ಮದ ಆಧಾರ ಸ್ಥಂಬವಾಗಿದೆ. ದೇವಸ್ಥಾನಗಳು ಧರ್ಮದ ಪ್ರಾಣವಾಗಿದೆ ಮತ್ತು ಧರ್ಮವು ರಾಷ್ಟ್ರದ ಪ್ರಾಣವಾಗಿದೆ. ರಾಷ್ಟ್ರವು ಸಮಾಜದ ಆತ್ಮವಾಗಿದೆ. ಹಾಗಾಗಿ ದೇವಸ್ಥಾನಗಳು ಸದೃಢವಾಗಿದ್ದರೆ, ಧರ್ಮ, ರಾಷ್ಟ್ರ ಮತ್ತು ಸಮಾಜವು ಸದೃಡವಾಗಿರುತ್ತದೆ ಎಂದು ಹೇಳಿದರು.

ಧಾರವಾಡ ಜಿಲ್ಲೆಯ 200 ಕ್ಕೂ ಅಧಿಕ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಅಳವಡಿಸಲು ದೇವಸ್ಥಾನಗಳ ನಿರ್ಧಾರ – ಶ್ರೀ. ಮೋಹನ ಗೌಡ.

ದೇವಸ್ಥಾನಗಳು ಹಿಂದೂ ಧರ್ಮದ ಪವಿತ್ರ ಕ್ಷೇತ್ರಗಳು, ಇಂದು ದೇವಸ್ಥಾನಕ್ಕೆ ಭಕ್ತರು ಪಾಶ್ಚಾತ್ಯರ ಅಸಭ್ಯ ಉಡುಪು ಧರಿಸಿ ದೇವಸ್ಥಾನಗಳ ಒಳಗೆ ಬರುತ್ತಾರೆ. ಅದರಿಂದ ದೇವಸ್ಥಾನಗಳ ಪಾವಿತ್ರ್ಯ ನಷ್ಟವಾಗುತ್ತದೆ.
ಅದಕ್ಕಾಗಿ ಧಾರವಾಡ ಜಿಲ್ಲೆಯ 200 ದೇವಸ್ಥಾನಗಳಲ್ಲಿ ವಸ್ತ್ರ ಸಂಹಿತೆಯನ್ನು ಕಡ್ಡಾಯ ಮಾಡಲು ಜಿಲ್ಲೆಯ 200 ಕ್ಕೂ ಅಧಿಕ ವಿಶ್ವಸ್ಥರು ಸ್ವಯಂಪ್ರೇರಿತರಾಗಿ ಒಪ್ಪಿದ್ದಾರೆ. ಅದರ ಪ್ರಾರಂಭಿಕ ಹಂತದಲ್ಲಿ ವಸ್ತ್ರಸಂಹಿತೆಯ ಫಲಕವನ್ನು ದೇವಸ್ಥಾನಗಳಲ್ಲಿ ಅಳವಡಿಸುವುದು, ಭಕ್ತಾದಿಗಳಿಗೆ ವಸ್ತ್ರಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು, ಯಾರಾದರೂ ಅಸಭ್ಯ ಉಡುಪು ಧರಿಸಿ ಬಂದರೆ ಪರ್ಯಾಯ ಸಾತ್ತ್ವಿಕ ಉಡುಪು ನೀಡಲು ದೇವಸ್ಥಾನಗಳಲ್ಲಿ ವ್ಯವಸ್ಥೆ ಮಾಡುವುದು, ಆರತಿ ಸಮಯದಲ್ಲಿ ವಸ್ತ್ರಸಂಹಿತೆಯ ಬಗ್ಗೆ ಜನಜಾಗೃತಿ ಮೂಡಿಸುವುದು ಹೀಗೆ ಹಂತಹಂತವಾಗಿ ವಸ್ತ್ರಸಂಹಿತೆಯನ್ನು ಅಳವಡಿಸಲಾಗುವುದು ಎಂದು ಹೇಳಿದರು.

ನಮ್ಮ ದೇವಸ್ಥಾನದ ಹಣ ದೇವಸ್ಥಾನದ
ಜೀರ್ಣೋದ್ಧಾರಕ್ಕೆ ಹೊರತು ಇತರ ಪಂಥೀಯರ ಜೀರ್ಣೋದ್ಧಾರಕ್ಕೆ ಅಲ್ಲ– ಶ್ರೀ. ಗುರುಪ್ರಸಾದಗೌಡ, ಸಮನ್ವಯಕರು.

ದೇವಸ್ಥಾನಗಳ ನಿಧಿಯನ್ನು ಅನ್ಯಧರ್ಮೀಯರಿಗೆ ನೀಡುವುದು, ಸರಕಾರೀಕರಣವಾದ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಸಹಾಯ ಮಾಡದೇ ಇತರ ಧರ್ಮೀಯರ ಪ್ರಾರ್ಥನಾ ಸ್ಥಳಕ್ಕೆ ನೀಡಲಾಗುತ್ತದೆ. ದೇವಸ್ಥಾನಗಳ ಜಮೀನನ್ನು ಕಬಳಿಸುವುದು, ಲೆಕ್ಕವನ್ನಿಡದಿರುವುದು,ಆಭರಣಗಳ ಕಳ್ಳತನ ಇವೆಲ್ಲವುಗಳ ವಿರುದ್ಧ ಮಹಾಸಂಘವು ಹೋರಾಡಿ ಕೊಲ್ಹಾಪುರದ ಮಹಾಲಕ್ಷ್ಮೀ ದೇವಸ್ಥಾನದ ಅವ್ಯವಹಾರವನ್ನು ಬಯಲಿಗೆಳೆಯಿತು. ದೇವಸ್ಥಾನಗಳನ್ನು ಅನಧಿಕೃತವೆಂದು ನೆಲಸಮಗೊಳಿಸುವುದು, ಮಸೀದಿಗಳನ್ನು ಮತ್ತು ಇಗರ್ಜಿಗಳನ್ನು ಬಿಟ್ಟುಬಿಡುವುದು ಇವೆಲ್ಲವುಗಳ ವಿರುದ್ಧ ಮಹಾಸಂಘವು ವಕೀಲರ ಮೂಲಕ ದೇವಸ್ಥಾನಗಳ ರಕ್ಷಣೆಗೆ ಕಟಿಬದ್ಧವಾಗಿ ಹೋರಾಡುತ್ತಿದೆ. ಸಂಘಟನೆಯಿಂದ ಕಾರ್ಯ ಬೇಗನೇ ಜ್ವಾಲೆಯು ಕ್ರಾಂತಿಯ ರೂಪ ತಾಳಿ ಎಲ್ಲ ದೇವಸ್ಥಾನಗಳನ್ನು ಸರಕಾರದಿಂದ ಮುಕ್ತಗೊಳಿಸುತ್ತದೆ. ಅದಕ್ಕಾಗಿ ನಿಮ್ಮೆಲ್ಲರ ಯೋಗದಾನ ಅವಶ್ಯವಾಗಿದೆ ಎಂದು ಹೇಳಿದರು.

ಸಮಾರೋಪ ಸಮಾರಂಭದ ಮೊದಲು ಮಂದಿರ ಮಹಾಸಂಘದಿಂದ ಒಮ್ಮತದಿಂದ ಕೆಲವು ಠರಾವುಗಳು ಮಂಡಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ರೀ. ಪರಶುರಾಮ ಹೋನಕೆರಿ, ಶ್ರೀ. ಭಾಸ್ಕರ ಜಿತುರಿ, ಶ್ರೀ. ವಿಲಾಸರಾವ್ ಕುಂಟೆ, ಶ್ರೀ. ಶಾಂತಣ್ಣ ಕಡಿವಾಳ, ಶ್ರೀ. ಅಶೋಕ ಭೋಜ,ಸೌ. ವಿದೂಲಾ ಹಳದೀಪುರ, ಶ್ರೀ. ನಾರಾಯಣ ಯಾಜಿ, ಶ್ರೀ. ದಯಾನಂದ ರಾವ್, ಶ್ರೀ. ಅಶೋಕ ಹೋಮಕಳಸೆ ಮತ್ತು ಇತರ ಪ್ರಮುಖರು ಉಪಸ್ಥಿತರಿದ್ದರು.

Related News