ದೇವಸ್ಥಾನಗಳ ಸರಕಾರೀಕರಣ, ದೇವಸ್ಥಾನಗಳ ಮೇಲಿನ ಆಘಾತ, ವಿವಿಧ ವಿಷಯಗಳ ಕುರಿತು ಚರ್ಚೆ ನಡೆಯಲಿದೆ !
ಪತ್ರಿಕಾ ಪರಿಷತ್ತಿನಲ್ಲಿ ಉಪಸ್ಥಿತ ವಕ್ತಾರರು
ಉಡುಪಿ : ದೇವಸ್ಥಾನಗಳು ಹಿಂದೂ ಧರ್ಮದ ಅತ್ಯಂತ ಪವಿತ್ರ ಕ್ಷೇತ್ರ, ದೇವಸ್ಥಾನಗಳಲ್ಲಿನ ದೈವಿ ಚೈತನ್ಯದಿಂದಾಗಿ ಆಧುನಿಕ ಕಾಲದಲ್ಲಿಯೂ ಸಮಾಜವು ದೇವಸ್ಥಾನಗಳ ಕಡೆಗೆ ಆಕರ್ಷಿತವಾಗುತ್ತಿದೆ. ಆದರೆ ಇತ್ತೀಚೆಗೆ ದೇವಸ್ಥಾನಗಳ ಮೇಲೆ ವಿವಿಧ ರೀತಿಯ ಆಕ್ರಮಣಗಳು ನಡೆಯುತ್ತಿವೆ. ಉದಾಹರಣೆಗೆ ದೇವಸ್ಥಾನಗಳ ಸರಕಾರಿಕರಣ, ದೈವಸ್ಥಾನಗಳನ್ನು ಅಪವಿತ್ರಗೊಳಿಸುವುದು, ಮೂರ್ತಿಭಂಜನ, ಅನಧಿಕೃತವೆಂದು ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ದೇವಸ್ಥಾನಗಳ ಜಮೀನುಗಳ ಲೂಟಿ, ದೇವನಿಧಿ ಅಪವ್ಯಯ, ಹೀಗೆ ಮುಂತಾದ ಸಮಸ್ಯೆಗಳು ಮುಗಿಲು ಮುಟ್ಟಿದೆ. ಅದಕ್ಕಾಗಿ ದೇವಸ್ಥಾನಗಳಲ್ಲಿನ ದೇವತಾತತ್ತ್ವವನ್ನು ಕಾಪಾಡಲು, ದೇವಸ್ಥಾನಗಳಲ್ಲಿ ಧರ್ಮಪ್ರಸಾರ ಮಾಡಲು, ದೇವಸ್ಥಾನಗಳಲ್ಲಿ ಭಕ್ತಾಧಿಗಳಿಗೆ ಮೂಲ ಸೌಕರ್ಯ ಕಲ್ಪಿಸಲು, ದೇವಸ್ಥಾನಗಳ ಸಂಘಟನೆ ಮಾಡಲು, ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆಯನ್ನು ಅಳವಡಿಸಲು ಹಿಂದೂ ಜನಜಾಗೃತಿ ಸಮಿತಿ ಮತ್ತು ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯುಕ್ತ ಆಶ್ರಯದಲ್ಲಿ ಫೆಬ್ರವರಿ 11, 2024 ರಂದು ಉಡುಪಿ ಕಿದಿಯೂರು ಹೋಟೆಲ್ ಬಳಿಯ ಮಾಧವ ಕೃಷ್ಣ ಸಭಾಭವನದಲ್ಲಿ ‘ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತು’ ಆಯೋಜಿಸಲಾಗಿದೆ. ಈ ಪರಿಷತ್ತಿನಲ್ಲಿ ಉಡುಪಿ ಜಿಲ್ಲೆಯಿಂದ 3೦೦ ಕ್ಕಿಂತ ಹೆಚ್ಚು ಆಮಂತ್ರಿತ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ಪುರೋಹಿತರು, ಪ್ರತಿನಿಧಿಗಳು, ದೇವಸ್ಥಾನಗಳ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು, ಧಾರ್ಮಿಕ ಚಿಂತಕರು, ಮುಂತಾದವರು ಪಾಲ್ಗೊಳ್ಳಲಿದ್ದಾರೆ, ಕರ್ನಾಟಕ ದೇವಸ್ಥಾನ ಮಹಾಸಂಘದ ಶ್ರೀ. ಚಂದ್ರ ಮೊಗವೀರ ಇವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು. ಈ ವೇಳೆ ಕೆರ್ವಾಸೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ರಮೇಶ ಕಾರ್ಣಿಕ್, ಅಂಬಾಗಿಲು ಪುತ್ತೂರಿನ ಶ್ರೀ ಲಕ್ಷ್ಮೀ ವೆಂಕಟೇಶ ದೇವಸ್ಥಾನದ ಸಹ ಮೊಕ್ತೇಸರರಾದ ಶ್ರೀ. ರಾಜೇಶ್ ಶೇಟ್, ಉಡುಪಿ ಜಿಲ್ಲಾ ಹಿಂದೂ ಜನಜಾಗೃತಿ ಸಮಿತಿ ಸೇವಕರಾದ ಶ್ರೀ. ವಿಶ್ವನಾಥ ನಾಯಕ್ ಮುಂತಾದವರು ಉಪಸ್ಥಿತರಿದ್ದರು.
ಶ್ರೀ. ಚಂದ್ರ ಮೊಗವೀರ ಇವರು ಮುಂದೆ ಮಾತನಾಡಿ, ಮಹಾಸಂಘವು ಕೇವಲ 6 ತಿಂಗಳುಗಳಲ್ಲಿ ದೇಶದಾದ್ಯಂತ 275 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ(ಡ್ರೆಸ್ ಕೋಡ್) ಜಾರಿಗೆ ತಂದಿದೆ ಮತ್ತು ಮಹಾಸಂಘದ ಅಭಿಯಾನದಿಂದ ಪ್ರೇರಿತಾರದ ಅನೇಕ ವಿಶ್ವಸ್ಥರು ತಮ್ಮ ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಗೊಳಿಸುತ್ತಿದ್ದಾರೆ ಎಂದರು.
ಈ ದೇವಸ್ಥಾನ ಪರಿಷತ್ತಿನಲ್ಲಿ ಗಣ್ಯರ ಮಾರ್ಗದರ್ಶನ, ದೇವಸ್ಥಾನಗಳಿಗೆ ಸಂಬಂಧಿಸಿದಂತೆ ಆಯ್ದ ವಿವಿಧ ವಿಷಯಗಳ ಚರ್ಚಾಕೂಟಗಳು ನಡೆಯಲಿವೆ. ಇದರಲ್ಲಿ ‘ದೇವಸ್ಥಾನಗಳನ್ನು ಸನಾತನ ಧರ್ಮಪ್ರಸಾರ ಕೇಂದ್ರಗಳನ್ನಾಗಿಸುವುದು’, ‘ದೇವಸ್ಥಾನಗಳನ್ನು ಸರಕಾರೀಕರಣದಿಂದ ಮುಕ್ತಮಾಡುವುದು’ ಅನಧಿಕೃತ ಹೆಸರಿನಲ್ಲಿ ದೇವಸ್ಥಾನಗಳನ್ನು ಧ್ವಂಸಗೊಳಿಸುವುದು, ಅನ್ಯಮತೀಯರಿಂದ ದೇವಸ್ಥಾನಗಳ ಭೂಮಿಯ ಅತಿಕ್ರಮಣ ಮತ್ತು ಸರಕಾರವು ದೇವಸ್ಥಾನಗಳನ್ನು ವಶಪಡಿಸಿಕೊಳ್ಳುವುದರ ವಿರುಧ್ಧ ಪರಿಹಾರೋಪಾಯ, ದೇವಸ್ಥಾನ ಮತ್ತು ತೀರ್ಥಕ್ಷೇತ್ರಗಳ ಪರಿಸರದಲ್ಲಿ ಮದ್ಯ-ಮಾಂಸ ಇವುಗಳ ನಿಷೇಧ; ದುರ್ಲಕ್ಷಿತ ದೇವಸ್ಥಾನಗಳ ಜೀರ್ಣೋದ್ಧಾರ ಮುಂತಾದ ವಿಷಯಗಳ ಮೇಲೆ ಚರ್ಚೆ ನಡೆಯಲಿದೆ. ಈ ಅಧಿವೇಶನವು ಕೇವಲ ಆಮಂತ್ರಿತರಿಗೆ ಮಾತ್ರ ಇದ್ದು ಅಧಿವೇಶನದಲ್ಲಿ ಪಾಲ್ಗೊಳ್ಳಲು 7204082668 ಈ ಮೊಬೈಲ್ ನಂಬರ್ ಗೆ ಸಂಪರ್ಕಿಸಬೇಕು ಎಂದು ದೇವಸ್ಥಾನ ಮಹಾಸಂಘವು ಕರೆ ನೀಡಿದೆ, ಎಂದು ಶ್ರೀ. ಚಂದ್ರ ಮೊಗವೀರ ಇವರು ಹೇಳಿದರು. ಶ್ರೀ. ರಮೇಶ್ ಕಾರಣಿಕ ಇವರು ಮಾತನಾಡಿ, ಹೇಗೆ ದೇಶದ ರಕ್ಷಣೆ ಕೇವಲ ದೇಶದ ಗಡಿಯನ್ನು ಕಾಪಾಡುವುರಿಂದ ಸಾಧ್ಯವೋ, ಇದೇ ರೀತಿ, ಈ ದೇಶದ ಸಂಸ್ಕೃತಿ ದೇವಸ್ಥಾನ ರಕ್ಷಣೆಯಿಂದ ಸಾಧ್ಯ. ಎಲ್ಲರೂ ಸಹ ಈ ಕಾರ್ಯದಲ್ಲಿ ಕೈ ಜೋಡಿಸಬೇಕೆಂದು ಕರೆ ನೀಡಿದರು.