Menu Close

ರಸ್ತೆ ಗುಂಡಿಗಳ ಕಾಮಗಾರಿ ತ್ವರಿತಗೊಳಿಸಿ ! – ಸುರಾಜ್ಯ ಅಭಿಯಾನ

ತ್ವರಿತ ಸ್ಪಂದನೆಗೆ ಸ್ವಾಗತ; ಕಾಮಗಾರಿ ವಿಳಂಬಕ್ಕೆ ಆತಂಕ

ಬೆಂಗಳೂರು (ಸೋಮವಾರ, ಫೆಬ್ರವರಿ 12) : ನಗರದ ರಸ್ತೆ ಗುಂಡಿಗಳನ್ನು ವಿಳಂಬ ಮಾಡದೇ ದುರಸ್ತಿಗೊಳಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿಯ ಅಂಗಸಂಸ್ಥೆಯಾದ ಸುರಾಜ್ಯ ಅಭಿಯಾನವು ಮನವಿ ಮಾಡಿದ್ದು, ಮನವಿಗೆ ಸ್ಪಂದಿಸಿರುವ ಬಿಬಿಎಂಪಿ ಗುಂಡಿಗಳ ದುರಸ್ತಿಗೆ ಮುಂದಾಗಿದೆ. ಬೆಂಗಳೂರಿನ ನಂದಿನಿ ಬಡಾವಣೆಯ 15ನೇ ಮುಖ್ಯರಸ್ತೆಯಲ್ಲಿ ಗುಂಡಿಗಳಿಂದಾಗಿ ವಾಹನ ಸಂಚಾರಕ್ಕೆ ಅಡ್ಡಿಯಾಗುತ್ತಿರುವ ಬಗ್ಗೆ ಸುರಾಜ್ಯ ಅಭಿಯಾನ ಎಕ್ಸ್ (ಟ್ವಿಟರ್) ಮೂಲಕ ಹಂಚಿಕೊಂಡು ಇದನ್ನು ತಕ್ಷಣ ದುರಸ್ತಿಪಡಿಸಬೇಕು, ಇಲ್ಲದಿದ್ದರೆ ಮುಂದೆ ದುರ್ಘಟನೆಗಳಿಗೆ ಆಹ್ವಾನಿಸಿದಂತಾಗಬಹುದು ಎಂದು ಬಿಬಿಎಂಪಿ ಹಾಗೂ ಬೆಂಗಳೂರು ಸಿಟಿಜನ್ ಹೆಲ್ಪ್ ಡೆಸ್ಕ್ ಗೆ ಮನವಿ ಮಾಡಿತ್ತು. ಮನವಿಗೆ ಸ್ಪಂದಿಸಿದ ಬಿಬಿಎಂಪಿ ರಸ್ತೆಯಲ್ಲಿ ದೊಡ್ಡ ಗುಂಡಿಗಳಿದ್ದ ಸ್ಥಳದಲ್ಲಿ ಬ್ಯಾರಿಕೇಡ್ ಗಳನ್ನು ಅಳವಡಿಸಿತ್ತು. ಸಾರ್ವಜನಿಕರ ಬೇಡಿಕೆಗೆ ಬಿಬಿಎಂಪಿ ಕೂಡಲೇ ಸ್ಪಂದಿಸಿದ್ದು ಸ್ವಾಗತಾರ್ಹವೇ; ಆದರೆ ಬ್ಯಾರಿಕೇಡ್ ಗಳನ್ನು ಹಾಕಿ 2 ದಿನಗಳಾದರೂ ಯಾವುದೇ ಕಾಮಗಾರಿ ಪ್ರಾರಂಭಿಸಿರಲಿಲ್ಲ, ಸ್ಥಳೀಯ ನಾಗರಿಕರು ಟ್ವಿಟರ್ ಮೂಲಕ ಪುನಃ ಬಿಬಿಎಂಪಿ ಗಮನಕ್ಕೆ ತಂದ ಮೇಲೆ ತಡವಾಗಿ ಕಾಮಗಾರಿ ಪ್ರಾರಂಭಿಸಲಾಗಿದೆ. ಪ್ರತಿಯೊಬ್ಬ ನಾಗರಿಕನ ಪ್ರಾಣವು ಅತ್ಯಮೂಲ್ಯವಾಗಿದ್ದು ಇಂತಹ ರಸ್ತೆ ಗುಂಡಿಗಳಿಂದ ಗಂಭೀರ ಗಾಯ ಅಥವಾ ಸಾವು ನೋವು ಸಂಭವಿಸುವ ಪ್ರಮಾಣಗಳು ಹೆಚ್ಚಿರುತ್ತವೆ. ಆದ್ದರಿಂದ ಬಿಬಿಎಂಪಿ ಇಂತಹ ವಿಷಯಗಳನ್ನು ಗಂಭೀರವಾಗಿ ಪರಿಗಣಿಸಿ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಸುರಾಜ್ಯ ಅಭಿಯಾನದ ಪ್ರಕಟಣೆಯಲ್ಲಿ ಆಗ್ರಹಿಸಲಾಗಿದೆ.

 

ಈ ಸಂದರ್ಭದಲ್ಲಿ ಸುರಾಜ್ಯ ಅಭಿಯಾನವು ಎಕ್ಸ್ (ಟ್ವಿಟರ್) ಮೂಲಕ ಮಾನ್ಯ ಮುಖ್ಯಮಂತ್ರಿಗಳಿಗೆ ಸಹ ಟ್ಯಾಗ್ ಮಾಡಿ ರಾಜ್ಯ ಕಾಂಗ್ರೆಸ್ ಸರಕಾರದ ಅವಧಿಯಲ್ಲಿ ರಸ್ತೆ ಗುಂಡಿಗಳ ದುರಸ್ತೀಕರಣಕ್ಕಾಗಿ ಖರ್ಚು ಮಾಡಲಾಗಿರುವ ಮೊತ್ತದ ಮಾಹಿತಿಯನ್ನು ಹಂಚಿಕೊಂಡು `ಹೀಗಿದ್ದರೂ ರಸ್ತೆಗಳ ಸ್ಥಿತಿ ಇಷ್ಟು ದಯನೀಯವಾಗಿದೆ’ ಎಂದು ತಿಳಿಸಿದೆ. ಸಾಮಾಜಿಕ ಕುಂದುಕೊರತೆಗಳ ವಿರುದ್ಧ ಧ್ವನಿಯೆತ್ತುವ ಕಾರ್ಯ ಮಾಡುತ್ತಿರುವ ಸುರಾಜ್ಯ ಅಭಿಯಾನವು ನಗರಪಾಲಿಕೆಗಳಲ್ಲಿನ ಭ್ರಷ್ಟಾಚಾರ, ಕಲಬೆರಕೆ ವಿರುದ್ಧ ಧ್ವನಿ ಎತ್ತಲು ಜನಜಾಗೃತಿ ಮುಂತಾದ ಸಮಸ್ಯೆಗಳನ್ನು ಕೈಗೆತ್ತಿಕೊಂಡಿದೆ. ಪೆಟ್ರೋಲ್ ಮತ್ತು ಆಹಾರ ಪದಾರ್ಥಗಳು, ತ್ಯಾಜ್ಯ ನಿರ್ವಹಣೆಗಾಗಿ ಆಸ್ಪತ್ರೆಗಳನ್ನು ಒತ್ತಾಯಿಸಲು ಚಾಲನೆ ಮತ್ತು ಮಾಲಿನ್ಯ ನಿಯಂತ್ರಣ ಮಂಡಳಿಗೆ ದೂರು ಸಲ್ಲಿಸುವುದು; ಸರಕಾರಿ ಆಸ್ಪತ್ರೆಗಳಿಗೆ ನೀಡಿದ ನಿಧಿಯ ಬಳಕೆಯಲ್ಲಿನ ಭ್ರಷ್ಟಾಚಾರದ ಬಗ್ಗೆ ಮಾಹಿತಿ ಪಡೆಯುವುದು; ಜಿಲ್ಲಾಧಿಕಾರಿಗಳ ಕಚೇರಿ ಇತ್ಯಾದಿಗಳಲ್ಲಿ ಡಿಜಿಟಲೀಕರಣದ ಹೆಸರಿನಲ್ಲಿ ಇತರ ಸಂಸ್ಥೆಗಳಿಗೆ ಟೆಂಡರ್ ನೀಡುವಲ್ಲಿನ ಅವ್ಯವಹಾರಗಳನ್ನು ಬಹಿರಂಗಪಡಿಸುವುದು ಮತ್ತು ನಕಲಿ ಆಧಾರ್ ಕಾರ್ಡ್ ಮತ್ತು ಇನ್ನೂ ಹೆಚ್ಚಿನ ಘಟನೆಗಳ ಬಗ್ಗೆ ಕೇಂದ್ರ ಗೃಹ ಸಚಿವರಿಗೆ ಮನವಿಗಳನ್ನು ಕಳುಹಿಸಿದೆ.

Related News