ಉದ್ಘಾಟನೆ ಮಾಡುತ್ತಿರುವ ಸಂತರು ಮತ್ತು ಗಣ್ಯರು
ಶಿವಮೊಗ್ಗ : ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿ ಸಂಯುಕ್ತ ಆಶ್ರಯದಲ್ಲಿ ಶಿವಮೊಗ್ಗದ ಬಿ. ಹೆಚ್ ರಸ್ತೆಯಲ್ಲಿರುವ ಬೆಕ್ಕಿನ ಕಲ್ಮಠದಲ್ಲಿ ದಿನಾಂಕ 03.03.2024 ರಂದು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತನ್ನು ಆಯೋಜಿಸಲಾಗಿತ್ತು. ಶೃಂಗೇರಿ ಮಹಾ ಸಂಸ್ಥಾನ ಕೂಡಲಿಯ ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು, ಕರ್ನಾಟಕ ರಾಜ್ಯ ಮುಜರಾಯಿ ಇಲಾಖೆ ಅರ್ಚಕರ ಸಂಘದ ಗೌರವಾಧ್ಯಕ್ಷರಾದ ಶ್ರೀ. ಶಂಕರಾನಂದ ಜೋಯಿಸ್, ಶ್ರೀ ಸತ್ಯಸಾಯಿ ಸೇವಾ ಸಂಸ್ಥೆಗಳ ರಾಜ್ಯ ಸಂಯೋಜಕರಾದ ಶ್ರೀ. ಪ್ರಭಾಕರ್ ಬೀರಯ್ಯ, ಶ್ರೀ. ಮೋಹನ ಗೌಡ ದೀಪ ಪ್ರಜ್ವಲನೆ ಮಾಡಿದರು. ವೇದಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಈ ಪರಿಷತ್ತಿಗೆ ಶಿವಮೊಗ್ಗ, ದಾವಣಗೇರೆ, ಚಿಕ್ಕಮಂಗಳೂರು ಜಿಲ್ಲೆಗಳ ವಿವಿದ ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು, ದೇವಸ್ಥಾನದ ಪದಾಧಿಕಾರಿಗಳು ಉಪಸ್ಥಿತರಿದ್ದರು.
ನಾವೆಲ್ಲರೂ ಸಂಘಟಿತರಾಗಿ ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಮುಕ್ತಗೊಳಿಸಬೇಕಿದೆ ! – ಪೂ. ಅಭಿನವ ಶಂಕರ ಭಾರತಿ ಮಹಾಸ್ವಾಮಿಗಳು
ಪೂಜ್ಯರು ಮಾತನಾಡಿ ಇವತ್ತಿನ ಕಾನೂನಿನಲ್ಲಿ ಶಿಕ್ಷಣ ಮಾದರಿ ಹಾಳಾಗಿದೆ, ಮೊದಲು ಕೋಲ್ಕತ್ತಾದಲ್ಲಿ ಪ್ರಾರಂಭವಾದ ಮೆಕಾಲೆ ಶಿಕ್ಷಣ ಇಡೀ ದೇಶಾದ್ಯಂತ ಹಬ್ಬಿ ಗುರುಕುಲ ಶಿಕ್ಷಣ ಪದ್ದತಿಯನ್ನು ನಾಶ ಮಾಡಿತು. ಇದರಿಂದಾಗಿ ದೇವಸ್ಥಾನಗಳು ಸರಕಾರದ ಹಿಡಿತಕ್ಕೆ ಸಿಲುಕಿ ದೇವಸ್ಥಾನದ ಸಂಸ್ಕೃತಿ ಕಳೆದು ಹೋಗಿದೆ. ನಾವೆಲ್ಲರೂ ಸಂಘಟಿತರಾಗಿ ಸರಕಾರದ ಹಿಡಿತದಲ್ಲಿರುವ ದೇವಸ್ಥಾನಗಳನ್ನು ಮುಕ್ತಿಗೊಳಿಸಬೇಕಿದೆ, ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಕಾರ್ಯಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ ಎಂದು ಆಶಿರ್ವಚನ ನೀಡಿದರು.
‘ಧಾರ್ಮಿಕ ದತ್ತಿ ವಿಧೇಯಕ 2024’ನ್ನು ಜಾರಿಗೊಳಿಸಿದರೆ ರಾಜ್ಯವ್ಯಾಪಿ ಆಂದೋಲನ ನಡೆಸುವೆವು ! – ಶ್ರೀ. ಮೋಹನ್ ಗೌಡ, ರಾಜ್ಯ ಸಂಯೋಜಕರು, ಕರ್ನಾಟಕ ದೇವಸ್ಥಾನ ಮಹಾಸಂಘ
ನಂತರ ಶ್ರೀ. ಮೋಹನ್ ಗೌಡ ಮಾತನಾಡಿ ಕರ್ನಾಟಕ ರಾಜ್ಯ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಅಡಿಯಲ್ಲಿ ಬರುವ ಶ್ರೀಮಂತ ದೇವಸ್ಥಾನಗಳ ಹಣವನ್ನು ಲೂಟಿಮಾಡಲು ಹೊಸ ಧಾರ್ಮಿಕ ದತ್ತಿ ಇಲಾಖೆಯ ತಿದ್ದಿಪಡಿ ಜಾರಿಗೆ ತಂದಿದ್ದು, ಅದರಲ್ಲಿ ಶ್ರೀಮಂತ ದೇವಸ್ಥಾನಗಳಿಂದ 10 ಶೇಕಡಾ ಹಣವನ್ನ ತೆರಿಗೆಯಾಗಿ ತೆಗೆದುಕೊಂಡು ಅದನ್ನು ಮತ್ಯಾವುದೋ ಸಮುದಾಯಕ್ಕೆ ನೀಡುವುದು ಅತ್ಯಂತ ಖಂಡನೀಯವಾಗಿದೆ, ಸರಕಾರ ಕೇವಲ ಹಿಂದೂ ದೇವಸ್ಥಾನಗಳ ಹಣವನ್ನು ಮಾತ್ರ ಸರಕಾರಿ ಯೋಜನೆಗಳಿಗೆ ಬಳಸುತ್ತಿರುವುದು ಖೇದನೀಯವಾಗಿದೆ, ಇತ್ತೀಚಿಗೆ ಕರ್ನಾಟಕ ಸರಕಾರ ತನ್ನ ಬಜೆಟ್ ನಲ್ಲಿ ವಕ್ಫ್ ಬೋರ್ಡ್ ಗೆ 100 ಕೊಟಿ ಅನುದಾನ ನೀಡಿದೆ, ಹಜ್ ಭವನಕ್ಕಾಗಿ 20 ಕೊಟಿ ಅನುದಾನ, ಅದೆ ರೀತಿಯಲ್ಲಿ ಕ್ರೈಸ್ತರ ಅಭಿವೃದ್ಧಿಗಾಗಿ 200 ಕೊಟಿ ಅನುದಾನ ನೀಡಿದೆ, ಆದರೆ ಹಿಂದೂ ದೇವಸ್ಥಾನಗಳ ಅಭಿವೃದ್ಧಿಗಾಗಿ ಯಾವುದೇ ರೀತಿ ಹಣವನ್ನ ನೀಡದಿರುವುದು ಬಹುಸಂಖ್ಯಾತ ಹಿಂದೂಗಳಿಗೆ ಮಾಡಿದ ಅನ್ಯಾಯವೇ ಆಗಿದೆ ಅದಲ್ಲದೆ ಕರ್ನಾಟಕ ಸರಕಾರ ವಕ್ಫ್ ಬೋರ್ಡ್ ನ ಜಮೀನಿನ ರಕ್ಷಣೆಗಾಗಿ 31 ಕೊಟಿ 54 ಲಕ್ಷ ಹಣ ಬಿಡುಗಡೆ ಮಾಡಿದೆ, ಆದರೆ ಇದೆ ಸರಕಾರ ಕರ್ನಾಟಕ ರಾಜ್ಯದಲ್ಲಿ 25 ಸಾವಿರ ಹಿಂದೂ ದೇವಸ್ಥಾನಗಳ ಜಮೀನು ಅತಿಕ್ರಮಣ ಮಾಡಿದೆ. ಸಾವಿರಾರು ಕೋಟಿ ರೂಪಾಯಿ ಮೌಲ್ಯದ ಜಮೀನುಗಳು ಖಾಸಗಿಯವರ ಪಾಲಾಗಿದೆ. ಆದರೆ ಈ ದೇವಸ್ಥಾನಗಳ ರಕ್ಷಣೆ, ಅಭಿವೃದ್ಧಿಗಾಗಿ ಯಾವುದೇ ಹಣ ಬಿಡುಗಡೆ ಮಾಡದಿರುವುದು ಅತ್ಯಂತ ಖಂಡನೀಯವಾಗಿದ್ದು, ಸರಕಾರವು ಮುಂದಿನ ಬಜೆಟ್ ನಲ್ಲಿ ದೇವಸ್ಥಾನಗಳಿಗೆ ಹಣವನ್ನು ಬಿಡುಗಡೆ ಮಾಡಬೇಕು ಎಂದು ಆಗ್ರಹ ಮಾಡಿದರು ಮತ್ತು ಕರ್ನಾಟಕ ಸರ್ಕಾರ ಹೊಸದಾಗಿ ತಂದಿರುವ ತಿದ್ದುಪಡಿ ರದ್ದು ಮಾಡಬೇಕು,ಇಲ್ಲದಿದ್ದರೆ ದೇವಸ್ಥಾನ ವಿರೋಧಿ ಮಸೂದೆ ವಿರುದ್ಧ ಸಮಸ್ತ ದೇವಸ್ಥಾನದ ವಿಶ್ವಸ್ಥರು ರಾಜ್ಯವ್ಯಾಪಿ ಹೋರಾಟ ಮಾಡುವುದಾಗಿ ಎಚ್ಚರಿಕೆ ನೀಡಿದರು.
ಉಪಸ್ಥಿತ ದೇವಸ್ಥಾನ ವಿಶ್ವಸ್ಥರು