ಕ್ರಮಕ್ಕೆ ಆಗ್ರಹಿಸಿ ಕರ್ನಾಟಕ ದೇವಸ್ಥಾನ – ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದಿಂದ ಮನವಿ !
ತುಮಕೂರು : 2 ದಿನಗಳ ಹಿಂದೆ ತುಮಕೂರು ಜಿಲ್ಲೆಯ ಗುಬ್ಬಿ ತಾಲ್ಲೂಕಿನ ನಿಟ್ಟೂರಿನ ಪುರದಲ್ಲಿ 800 ವರ್ಷದ ಪ್ರಾಚೀನ ಚೋಳರ ಕಾಲದ ಶ್ರೀ ಕಲ್ಲೇಶ್ವರ ಸ್ವಾಮಿ ದೇವಾಲಯದ ರಥಕ್ಕೆ ದುಷ್ಕರ್ಮಿಗಳು ಬೆಂಕಿ ಹಾಕಿ ಸುಟ್ಟು ಹಾಕಿದ್ದರು.
ಘಟನೆ ಕುರಿತು ಕೂಡಲೇ ಎಚ್ಚೆತ್ತ ಕರ್ನಾಟಕ ದೇವಸ್ಥಾನ ಮಹಸಂಘ ಕೃತ್ಯದ ಹಿಂದಿರುವ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ತುಮಕೂರು ಅಪರ ಜಿಲ್ಲಾಧಿಕಾರಿಗಳ ಮೂಲಕ ಜಿಲ್ಲಾಧಿಕಾರಿಗಳಿಗೆ ಮನವಿಯನ್ನು ಸಲ್ಲಿಸಲಾಯಿತು.
ಈ ವೇಳೆ ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸಂಯೋಜಕರಾದ ಶ್ರೀ. ಶಿವರಾಮ್, ವಿಶ್ವ ಹಿಂದೂ ಪರಿಷತ್ ನ ತುಮಕೂರು ಜಿಲ್ಲೆಯ ಕಾರ್ಯದರ್ಶಿಗಳಾದ ಶ್ರೀ. ಉದಯ್ ಕುಮಾರ್, ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸುಬ್ರಹ್ಮಣ್ಯಂ, ಶ್ರೀ. ವೆಂಕಟೇಶ್, ಸೌ. ಹೇಮಾ ಇವರು ಉಪಸ್ಥಿತರಿದ್ದರು.
ಇದು ಧಾರ್ಮಿಕ ದತ್ತಿ ಇಲಾಖೆಯ ಸಿ ಗ್ರೇಡ್ ದೇವಾಲಯವಾಗಿದ್ದು, ಇದರ ವಾರ್ಷಿಕ ಜಾತ್ರೆಯು ಮಾರ್ಚ್ ೨೦ ರಿಂದ ಪ್ರಾರಂಭ ಆಗಲಿಕ್ಕಿತ್ತು. ಊರಿನವರು ಜಾತ್ರೆಗೆ ತಯಾರಿ ನಡೆಸುವ ಮೊದಲೇ ಈ ಘಟನೆ ನಡೆದಿದೆ. ಈ ಘಟನೆಯ ಸಂಬಂಧ ಉತ್ತರ ಭಾರತದ ಓರ್ವ ವ್ಯಕ್ತಿಯನ್ನು ಬಂಧನ ಮಾಡಲಾಗಿದೆ. ಈ ಘಟನೆ ಅತ್ಯಂತ ಗಂಭೀರವಾಗಿದ್ದು, ಕೂಡಲೇ ಇದರ ಹಿಂದಿನ ಅಪರಾಧಿಗಳನ್ನು ಬಂಧನ ಮಾಡಬೇಕೆಂದು ಹಾಗೆಯೇ ದೇವಸ್ಥಾನದ ಜಾತ್ರೆಗೆ ಸುರಕ್ಷತೆ ನೀಡಬೇಕು’ ಎಂದು ದೇವಸ್ಥಾನಗಳ ಮಹಾಸಂಘವು ಆಗ್ರಹಿಸಿದೆ.