ಇದು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘಕ್ಕೆ ಲಭಿಸಿದ ಜಯ
ಕರ್ನಾಟಕ ದೇವಸ್ಥಾನ ಮಹಾಸಂಘವು ಈ ಮಸೂದೆ ಖಂಡಿಸಿ ರಾಜ್ಯಾದಾದ್ಯಂತ 15 ಕ್ಕೂ ಅಧಿಕ ಜಿಲ್ಲೆಗಳಲ್ಲಿ ಆಂದೋಲನ ನಡೆಸಿ ಮನವಿ ನೀಡಿತ್ತು !
ಜಿಲ್ಲಾಡಳಿತ ಕಛೇರಿ, ಶಿವಮೊಗ್ಗ
ಜಿಲ್ಲಾಡಳಿತ ಕಛೇರಿ, ದಕ್ಷಿಣ ಕನ್ನಡ
ಬೆಂಗಳೂರು : ಕೆಲವು ದಿನಗಳ ಹಿಂದೆ ಕರ್ನಾಟಕ ಸರಕಾರವು ಧಾರ್ಮಿಕ ದತ್ತಿ ಇಲಾಖೆಯ ಮಸೂದೆಗೆ ತಿದ್ದುಪಡಿ ತಂದಿದ್ದು, ಹೊಸ ತಿದ್ದುಪಡಿ ಮಸೂದೆಯ ಪ್ರಕಾರ ಬಿ ಗ್ರೇಡ್ ದೇವಸ್ಥಾನಗಳು 5% ಆದಾಯ ಮತ್ತು 1 ಕೋಟಿಗಿಂತ ಹೆಚ್ಚು ಆದಾಯ ತರುವ ಎ ಗ್ರೇಡ್ ದೇವಸ್ಥಾನಗಳು 10% ಶೇ ತೆರಿಗೆಯನ್ನು ಸರಕಾರದ ಕಾಮನ್ ಪೂಲ್ ಫಂಡ್ ಗೆ ನೀಡುವ ಬಗ್ಗೆ ತಿದ್ದುಪಡಿಯನ್ನು ತರಲಾಗಿತ್ತು. ಅಷ್ಟೇ ಅಲ್ಲದೇ ಎ ಗ್ರೇಡ್ ದೇವಾಲಯಗಳ ಮೂಲಭೂತ ಸೌಕರ್ಯದ ನೆಪದಲ್ಲಿ 9 ಜನರ ಜಿಲ್ಲಾ ಮಟ್ಟದ ಉನ್ನತ ಸಮಿತಿ ಮತ್ತು ರಾಜ್ಯ ಮಟ್ಟದ 14 ಜನರ ಸಮಿತಿ ರಚನೆ ಮಾಡಿತ್ತು.
ದಾವಣಗೆರೆ
ರಾಯಭಾಗ
ಈ ಕಾಯ್ದೆಯನ್ನು ಕರ್ನಾಟಕ ದೇವಸ್ಥಾನ ಮಹಾಸಂಘವು ತೀವ್ರವಾಗಿ ಖಂಡಿಸಿತ್ತು ಮತ್ತು ಈ ಕಾಯ್ದೆಯನ್ನು ರದ್ದುಗೊಳಿಸುವಂತೆ ರಾಜ್ಯದ 15 ಕ್ಕೂ ಅಧಿಕ ಜಿಲ್ಲೆಗಳ ಜಿಲ್ಲಾಧಿಕಾರಿಗಳ ಮೂಲಕ ಮಾನ್ಯ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಗಿತ್ತು. ಈ ಬೇಡಿಕೆಗೆ ಬುಧವಾರ ಮಾರ್ಚ್ 20 ರಂದು ಪ್ರತಿಕ್ರಿಯಿಸಿದ ಮಾನ್ಯ ರಾಜ್ಯಪಾಲರು ಈ ಪ್ರಸ್ತಾಪಿತ ಮಸೂದೆಯಲ್ಲಿ ಅನೇಕ ಅಂಶಗಳು ತಾರತಮ್ಯತೆಯಿಂದ ಕೂಡಿದೆ ಎಂದು ಹೇಳಿ ಅದನ್ನು ಸರಕಾರಕ್ಕೆ ವಾಪಾಸ್ ಕಳಿಸಿದ್ದಾರೆ. ಮಾನ್ಯ ರಾಜ್ಯಪಾಲರಾದ ತಾವರ್ ಚಂದ್ ಗೆಹಲೋಟ್ ಅವರ ಈ ಮಹತ್ವಪೂರ್ಣ ನಿರ್ಣಯವನ್ನು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ಸ್ವಾಗತಿಸುತ್ತದೆ ಮತ್ತು ಹಿಂದೂ ದೇವಸ್ಥಾನಗಳ ರಕ್ಷಣೆಗಾಗಿ ಮಹಾಸಂಘವು ಇದೇ ರೀತಿ ಸನ್ನದ್ಧವಾಗಿರುವುದು ಎಂದು ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ತಿಳಿಸಿದ್ದಾರೆ.
A protest was held by the Devasthan Mahasangh in Kodagu today against the proposed amendment to the Karnataka Hindu Religious Endowments Act 2024, which would allow recruitment of non-Hindis in temples and looting of funds of A & B grade temples.@RLR_BTM @HinduJagrutiOrg pic.twitter.com/s6gv5CKfcP
— 🚩Mohan gowda🇮🇳 (@Mohan_HJS) March 6, 2024
Success for efforts of Karnataka Devasthana-Matha mattu Dharmika Sansthegala Mahasangha and @HinduJagrutiOrg
Hon. Governor of Karnataka has returned the Temple Endowments (Amendment) Bill, 2024 back to the State Govt
Memorandum had been submitted at districts in this regard pic.twitter.com/3Ef7M9PjsY
— HJS Karnataka (@HJSKarnataka) March 20, 2024
ಕಾರಣ ನೀಡಿದ ರಾಜ್ಯಪಾಲರು
‘ಹೈಕೋರ್ಟ್‌ನ ಧಾರವಾಡ ಪೀಠವು ರಿಟ್ ಅರ್ಜಿ 3440/2005ರಲ್ಲಿ ಕರ್ನಾಟಕ ಹಿಂದೂ ಧಾರ್ಮಿಕ ಸಂಸ್ಥೆಗಳು ಮತ್ತು ಧರ್ಮಾದಾಯ ದತ್ತಿಗಳ ಕಾಯ್ದೆ –1997 ಮತ್ತು ಅದಕ್ಕೆ ತಂದಿರುವ ತಿದ್ದುಪಡಿಗಳನ್ನು ಈಗಾಗಲೇ ವಜಾ ಮಾಡಿದೆ. ಹೈಕೋರ್ಟ್ ನೀಡಿದ್ದ ಈ ತೀರ್ಪು ಪ್ರಶ್ನಿಸಿ ರಾಜ್ಯ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದೆ. ಹೈಕೋರ್ಟ್ ನೀಡಿದ್ದ ತೀರ್ಪಿಗೆ ಸುಪ್ರೀಂ ಕೋರ್ಟ್ ತಡೆಯಾಜ್ಞೆ ನೀಡಿದ್ದು, ಅಂತಿಮ ವಿಚಾರಣೆ ಬಾಕಿ ಇದೆ. ಈ ಹಂತದಲ್ಲಿ ತಿದ್ದುಪಡಿ ಮಾಡಬಹುದೇ ಎಂಬ ಬಗ್ಗೆ ಹೆಚ್ಚಿನ ಸ್ಪಷ್ಟೀಕರಣದ ಅಗತ್ಯವಿದೆ’ ಎಂದು ಉಲ್ಲೇಖಿಸಿರುವ ರಾಜ್ಯಪಾಲರು ಕಡತವನ್ನು ವಾಪಸ್ ಕಳುಹಿಸಿದ್ದಾರೆ.
ಸರ್ಕಾರಕ್ಕೆ ರಾಜ್ಯಪಾಲರ ಚಾಟಿ
ಈ ಬಗ್ಗೆ ಪ್ರತಿಕ್ರಿಯಿಸಿದ ಮಾನ್ಯ ರಾಜಪಾಲರು ‘ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಸಂಬಂಧಿಸಿ ತರಲಾದ ತಿದ್ದುಪಡಿಯನ್ನು ಇತರೆ ಧಾರ್ಮಿಕ ಸಂಸ್ಥೆಗಳನ್ನೂ ಸೇರಿಸಿಕೊಂಡು ಸರಕಾರ ಕಾಯ್ದೆ ರಚಿಸಬಹುದೇ ಎಂದು ಪ್ರಶ್ನಿಸಿದ್ದಾರೆ. ವಾಪಸ್ ಕಳುಹಿಸಿರುವ ಮಸೂದೆಗೆ ಸಂಬಂಧಿಸಿದ ಕಡತದಲ್ಲಿ ಈ ಕುರಿತು ಅವರು ಪ್ರಸ್ತಾಪಿಸಿದ್ದಾರೆ ಎನ್ನಲಾಗಿದೆ.