ಹಿಂದೂ ಜನಜಾಗೃತಿ ಸಮಿತಿಯಿಂದ ಕೇಂದ್ರ ಸರಕಾರಕ್ಕೆ ಮನವಿಯ ಮೂಲಕ ಆಗ್ರಹ !
ಬೆಂಗಳೂರಿನ ಜಿಲ್ಲಾಧಿಕಾರಿಗಳ ಕಛೇರಿಯಲ್ಲಿ ಮನವಿ ನೀಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ ನೀಲೇಶ್, ಶ್ರೀ. ದೇವೇಗೌಡ ಮತ್ತು ಶ್ರೀ. ವೆಂಕಟೇಶ ಮೂರ್ತಿ
ಬೆಂಗಳೂರು : ಹಿಂದೂ ದೇವಸ್ಥಾನದಲ್ಲಿ ಕೆಲಸ ಮಾಡಲು ಹೋಗುವುದು ಎಲ್ಲಕ್ಕಿಂತ ದೊಡ್ಡ ಮಹಾಪಾಪವಾಗಿದೆ, ಹಾಗೂ ದೇವಸ್ಥಾನ ಅಥವಾ ಚರ್ಚ್ ಗಳಿಗೆ ಹೋಗುವುದಕ್ಕಿಂತ ಸಾವಿರಾರು ಜನರನ್ನು ಕೊಲ್ಲುವ ಶಸ್ತ್ರಗಳ ತಯಾರಿಸುವ ಕಾರ್ಖಾನೆಗೆ ಹೋಗುವುದು ಹೆಚ್ಚು ಉತ್ತಮ. ದೇವಸ್ಥಾನ ಅಥವಾ ಚರ್ಚಗಳಲ್ಲಿ ಶಿರ್ಕ (ಮಹಾಪಾಪ) ಮಾಡಲಾಗುತ್ತದೆ. ಶಿರ್ಕ ಇದು ಇಸ್ಲಾಮಿನ ಪ್ರಕಾರ ಮಹಾ ಪಾಪವಾಗಿದೆ. ಅಲ್ಲಾಹ ಸ್ಪಷ್ಟವಾಗಿ ಹೇಳಿದ್ದಾನೆ, “ನಾನು ಯಾರನ್ನಾದರೂ ಕ್ಷಮಿಸಬಹುದು, ಆದರೆ ಶಿರ್ಕ ಮಾಡುವವರನ್ನು ಎಂದಿಗೂ ಕ್ಷಮಿಸುವುದಿಲ್ಲ.” ಈ ರೀತಿ ಅನೇಕ ಆಕ್ಷೇಪಾರ್ಹ ಹೇಳಿಕೆಗಳನ್ನು, ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್ ನ ಡಾ. ಜಾಕೀರ್ ನಾಯಕ್ ಇವನು ‘ಹುಡಾ ಟಿ.ವಿ.’ ಹೆಸರಿನ ಯುಟ್ಯೂಬ್ ಚಾನೆಲ್ ನ ಸಂದರ್ಶನದಲ್ಲಿ ಹೇಳಿದ್ದಾನೆ. ಇದರಿಂದ ಕೋಟ್ಯಾಂತರ ಹಿಂದೂಗಳ ಶ್ರದ್ಧಾಸ್ಥಾನವಾಗಿರುವ ಹಿಂದೂ ದೇವಸ್ಥಾನಗಳ ಬಗ್ಗೆ ಸಮಾಜದಲ್ಲಿ ಜಾತೀಯ ದ್ವೇಷ, ತಿರಸ್ಕಾರ ಮತ್ತು ಶತ್ರುತ್ವದ ಭಾವನೆ ಹಬ್ಬಿಸಿ ಭಯೋತ್ಪಾದನೆಗೆ ಪ್ರೋತ್ಸಾಹ ನೀಡುವ ದುಷ್ಕೃತ್ಯ ಮಾಡಿದ್ದಾನೆ. ಆದ್ದರಿಂದ ವಿಶ್ವ ಸಂಸ್ಥೆಯಲ್ಲಿ ಜಾಕೀರ್ ನಾಯಕ ಇವನನ್ನು ಅಂತರರಾಷ್ಟ್ರೀಯ ಭಯೋತ್ಪಾದಕನೆಂದು ಘೋಷಿಸಲು, ಹಾಗೂ ಅವನನ್ನು ಭಾರತಕ್ಕೆ ಒಪ್ಪಿಸುವುದಕ್ಕಾಗಿ ಮಲೇಶಿಯಾ ಸರಕಾರದ ಮೇಲೆ ಭಾರತ ಸರಕಾರ ಒತ್ತಡ ಹೇರಬೇಕೆಂದು ಹಿಂದೂ ಜನಜಾಗೃತಿ ಸಮಿತಿಯಿಂದ ಕೇಂದ್ರ ಗೃಹ ಸಚಿವರ ಬಳಿ ಮನವಿಯ ಮೂಲಕ ಆಗ್ರಹಿಸಲಾಗಿದೆ.
ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಬೆಂಗಳೂರಿನ ಅಪರ ಜಿಲ್ಲಾಧಿಕಾರಿಗಳಾದ ಟಿ. ಎನ್. ಕೃಷ್ಣಮೂರ್ತಿ ಹಾಗೂ ಮುಂಬಯಿ ಜಿಲ್ಲಾಧಿಕಾರಿಗಳ ಕಾರ್ಯಾಲಯದ ಮೂಲಕ ಕೇಂದ್ರ ಗೃಹ ಸಚಿವರಿಗೆ ಮನವಿಯನ್ನು ಸಲ್ಲಿಸಲಾಯಿತು. ಈ ಸಮಯದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನೀಲೇಶ್, ಶ್ರೀ. ಸತೀಶ ಸೋನಾರ ಇವರ ಜೊತೆಗೆ ಧರ್ಮಪ್ರೇಮಿ ಶ್ರೀ. ರವೀಂದ್ರ ದಾಸಾರಿ, ಸಂದೀಪ್ ತುಳಸಿಕರ, ಸುಶೀಲ ಭುಜಬಳ, ವಿಲಾಸ ನಿಕಮ ಮತ್ತು ಮನೀಷ ಸೈನಿ ಉಪಸ್ಥಿತರಿದ್ದರು.
ಮುಂಬೈ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಸತೀಶ್ ಸೋನಾರ ಇವರೊಂದಿಗೆ ಧರ್ಮಪ್ರೇಮಿಗಳು
ಕೇಂದ್ರ ಸರಕಾರದಿಂದ ಭಯೋತ್ಪಾದಕ ಸಂಘಟನೆ ಎಂದು ನಿಷೇದ ಹೇರಿದ ನಂತರವೂ ಜಾಕೀರ್ ನಾಯಕ್ ಮತ್ತು ಇಸ್ಲಾಮಿಕ ರಿಸರ್ಚ್ ಫೌಂಡೇಶನ್ ನ ಫೇಸ್ಬುಕ್, ಟ್ವಿಟರ್, instagram , ಮುಂತಾದ ಎಲ್ಲಾ ಸಾಮಾಜಿಕ ಜಾಲತಾಣದಲ್ಲಿನ ಅಕೌಂಟ್ ಮುಂದುವರೆದಿವೆ. ಅವುಗಳನ್ನು ತಕ್ಷಣ ನಿಲ್ಲಿಸಬೇಕು ಎಂದೂ ಈ ಮನವಿಯಲ್ಲಿ ಆಗ್ರಹಿಸಲಾಗಿದೆ.