Menu Close

ಕಾಶ್ಮೀರದಲ್ಲಿ ಮುಂದುವರಿದ ಹಿಂದೂಗಳ ನರಮೇಧ; ಈಗ ಬಂಗಾಳವೂ ಕಾಶ್ಮೀರದ ದಿಶೆಯಲ್ಲಿ!

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಎರಡನೇ ದಿನ !

ಎಡದಿಂದ ಶ್ರೀ ಅರ್ಜುನ ಸಂಪತ್, ಸ್ವಾಮಿ ಸದಾನಂದ ಮಹಾರಾಜ, ಸ್ವಾಮಿ ನಿರ್ಗುಣಾನಂದ ಪುರಿ ಮತ್ತು ಶ್ರೀ ವಿಠ್ಠಲ ಚೌಧರಿ

ಕಾಶ್ಮೀರದಿಂದ ಕಲಂ 370 ಅನ್ನು ತೆಗೆದು ಹಾಕಲಾಗಿದ್ದರೂ, ಇಂದಿಗೂ ಅಲ್ಲಿ `ಡೊಮಿಸಾಯಿಲ್ ಪ್ರಮಾಣಪತ್ರ’ದ ನಿಯಮದಿಂದಾಗಿ ಕಾಶ್ಮೀರದ ಹೊರಗಿನವರು ಯಾರೂ ಭೂಮಿಯನ್ನು ಖರೀದಿಸಲು ಸಾಧ್ಯವಿಲ್ಲ, ಏಕೆಂದರೆ ಕಾಶ್ಮೀರದಲ್ಲಿರುವ ಹಿಂದೂಗಳ ವಂಶನಾಶ ಇಂದಿಗೂ ನಿಂತಿಲ್ಲ. ಕಾಶ್ಮೀರದ ಬಗ್ಗೆ ಒಳ್ಳೆಯ ಚಿತ್ರಣಗಳನ್ನು ಮಾತ್ರ ಪ್ರವಾಸಿಗರ ಎದುರಿಗೆ ಪ್ರಸ್ತುತಪಡಿಸಲಾಗುತ್ತದೆ; ಅಲ್ಲಿನ ಭೀಕರ ಪರಿಸ್ಥಿತಿಯನ್ನು ಯಾರೂ ಮಂಡಿಸುತ್ತಿಲ್ಲ. ಒಂದು ವೇಳೆ ಭಾರತದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆಯಿದ್ದರೆ, ಕಾಶ್ಮೀರಿ ಹಿಂದೂಗಳ ವಂಶವನಾಶ ಆಗುತ್ತಿರುವುದನ್ನು ಏಕೆ ಯಾರೂ ಒಪ್ಪಿಕೊಳ್ಳುತ್ತಿಲ್ಲ? ಆದ್ದರಿಂದ ಕಾಶ್ಮೀರದಲ್ಲಿ ಪನೂನ್ ಕಾಶ್ಮೀರದ ಮೂಲಕ ಸನಾತನ ಧರ್ಮದ ಪ್ರಚಾರ ಯಾವಾಗ ಆರಂಭವಾಗುತ್ತದೆಯೋ ಆಗ ಅದು ಹಿಂದೂ ರಾಷ್ಟ್ರದ ಮೊದಲ ಹೆಜ್ಜೆಯಾಗಲಿದೆ ಎಂದು ದೆಹಲಿಯ ಪನೂನ ಕಾಶ್ಮೀರದ ಯುವ ಅಧ್ಯಕ್ಷ ವಿಠ್ಠಲ್ ಚೌಧರಿ ಹೇಳಿದರು. ಅವರು `ಕಾಶ್ಮೀರಿ ಹಿಂದೂಗಳು ಪುನರ್ವಸತಿ ಹೇಗೆ ಆಗಬಹುದು?’ ಎನ್ನುವ ವಿಷಯದ ಬಗ್ಗೆ ಮಾತನಾಡುತ್ತಿದ್ದರು. ಅವರು ` ಶ್ರೀರಾಮನಾಥ ದೇವಸ್ಥಾನ,’ ಫೋಂಡಾ, ಗೋವಾದ ` ` ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ ದ ಎರಡನೇ ದಿನದಂದು ಮಾತನಾಡುತ್ತಿದ್ದರು.

ಶ್ರೀ ವಿಠ್ಠಲ ಚೌಧರಿ, ದೆಹಲಿಯ ಪನೂನ ಕಾಶ್ಮೀರದ ಯುವ ಅಧ್ಯಕ್ಷ

ಸಾಮ್ಯವಾದಿಗಳ ಆಳ್ವಿಕೆಯಲ್ಲಿ ಬಂಗಾಳದ ಅಪಾರ ಹಾನಿ ! – ಸ್ವಾಮಿ ನಿರ್ಗುಣಾನಂದ ಪುರಿ, ಬಂಗಾಳ
ಸಾಮ್ಯವಾದಿಗಳ ಆಳ್ವಿಕೆಯಲ್ಲಿ ಬಂಗಾಳದಲ್ಲಿ ಭಾರತೀಯ ಪರಂಪರೆ ಮತ್ತು ಸಂಸ್ಕೃತಿಗೆ ತುಂಬಲಾರದ ಹಾನಿಯಾಗಿದೆ. ಈ ಅವಧಿಯಲ್ಲಿ ಹಿಂದೂ ಸಮಾಜದ ಸ್ಥಿತಿ ತೀರಾ ಹದಗೆಟ್ಟಿತು. ಹಿಂದೂಗಳು ದೇವಸ್ಥಾನಗಳಿಗೆ ಹೋಗುವುದನ್ನು ನಿಲ್ಲಿಸಿದರು. ಇಂದು ಬಂಗಾಳದಲ್ಲಿ ಅನೇಕ ಹಿಂದೂ ಗ್ರಾಮಗಳು ಖಾಲಿಯಾಗುತ್ತಿವೆ. ಅಲ್ಲಿನ ಆದಿವಾಸಿಗಳು, ಪರಿಶಿಷ್ಟ ಜಾತಿಗಳು ಮತ್ತು ಪಂಗಡಗಳನ್ನು ಹಿಂದೂ ಧರ್ಮದಿಂದ ದೂರಗೊಳಿಸಲಾಗುತ್ತಿದೆ. ಅವರಿಗೆ ಅವರು ಹಿಂದೂಗಳಲ್ಲ ಎಂದು ಹೇಳಲಾಗುತ್ತದೆ. ಹಿಂದೂ ಸಮಾಜವನ್ನು ವಿಭಜಿಸಲಾಗುತ್ತಿದೆ. ಇದಕ್ಕೆ ಪರಿಹಾರವೆಂದರೆ ನಮ್ಮ ಗ್ರಾಮಗಳು ಸ್ವಯಂ-ಸಂಪೂರ್ಣವಾಗಲು ಪ್ರಯತ್ನಿಸಬೇಕು. ಹಾಗೆಯೇ ಹಿಂದೂಗಳಿಗೆ ಧರ್ಮಶಿಕ್ಷಣವನ್ನು ನೀಡಿ ಹಿಂದೂ ಧರ್ಮ, ದೇವಸ್ಥಾನಗಳ ಬಗ್ಗೆ ಅವರ ಸಂವೇದನೆಶೀಲತೆಯನ್ನು ಹೆಚ್ಚಿಸಬೇಕು ಎಂದು ಬಂಗಾಲದ ‘ಇಂಟರ್‌ನ್ಯಾಷನಲ್ ವೇದಾಂತ ಸೊಸೈಟಿ’ಯ ಕೋಶಾಧ್ಯಕ್ಷ ಸ್ವಾಮಿ ನಿರ್ಗುಣಾನಂದ ಪುರಿಯವರು ಪ್ರತಿಪಾದಿಸಿದ್ದಾರೆ. ಅವರು ‘ಬಂಗಾಳ ರಾಜ್ಯದಲ್ಲಿ ಹಿಂದೂ ಸಂಘಟನೆ ಮತ್ತು ಸವಾಲುಗಳು’ ಈ ವಿಷಯದ ಬಗ್ಗೆ ಮಾತನಾಡುತ್ತಿದ್ದರು.

ಪ್ರತಿಯೊಂದು ದೇವಸ್ಥಾನದಲ್ಲಿ ಗೋಶಾಲೆ ತೆರೆದರೆ ಗೋವುಗಳ ರಕ್ಷಣೆಯಾಗುತ್ತದೆ ! – ಶೇಖರ ಮುಂದಡಾ, ಅಧ್ಯಕ್ಷರು, ಮಹಾರಾಷ್ಟ್ರ ಗೋ ಸೇವಾ ಆಯೋಗ
ಗೋವುಗಳನ್ನು ರಕ್ಷಿಸುವುದಿದ್ದರೆ, ಪ್ರತಿ ದೇವಸ್ಥಾನದಲ್ಲಿ ಗೋಶಾಲೆಯನ್ನು ಪ್ರಾರಂಭಿಸಬೇಕು, ಇಸ್ಕಾನ್ ಮಹಾರಾಷ್ಟ್ರದಲ್ಲಿ 2 ಗೋಶಾಲೆಗಳನ್ನು ಪ್ರಾರಂಭಿಸಿದೆ. ಇನ್ನು ಕೆಲವು ದೇವಸ್ಥಾನಗಳೊಂದಿಗೆ ಗೋಶಾಲೆ ಆರಂಭಿಸಲು ಮಾತುಕತೆ ನಡೆಸುತ್ತಿದ್ದೇವೆ. ಹೀಗೆ ಮಾಡಿದರೆ ಖಂಡಿತವಾಗಿಯೂ ಗೋವುಗಳ ರಕ್ಷಣೆಯಾಗುವುದು ಎಂದು ‘ಮಹಾರಾಷ್ಟ್ರ ಗೋ ಸೇವಾ ಆಯೋಗ’ದ ಅಧ್ಯಕ್ಷ ಶ್ರೀ. ಶೇಖರ್ ಮುಂದಡಾ ಇವರು ಪ್ರತಿಪಾದಿಸಿದರು. ಈ ಅಧಿವೇಶನದ ನೇರ ಪ್ರಸಾರವನ್ನು ಹಿಂದೂ ಜನಜಾಗೃತಿ ಸಮಿತಿಯ ಜಾಲತಾಣ HinduJagruti.org ಮೂಲಕ ಹಾಗೂ ‘ HinduJagruti’ ಈ ‘ಯೂಟ್ಯೂಬ್’ ಚಾನೆಲ್ ಮೂಲಕವೂ ಮಾಡಲಾಗುತ್ತದೆ.

ಅಧಿವೇಶನದಲ್ಲಿ ಸಹಭಾಗಿಯಾದ ಹಿಂದುತ್ವನಿಷ್ಠರು

Related News