Menu Close

ಪ್ಯಾಲೆಸ್ಟೈನ್ ಬೆಂಬಲಿಸಿದ ನಂತರ ಲೋಕಸಭೆಯಲ್ಲಿ ಗೂಂಡಾಗಿರಿ ಕಾಣಿಸಿದರೂ ಆಶ್ಚರ್ಯವಿಲ್ಲ ! – ಕರ್ನಲ್ ಆರ್.ಎಸ್.ಎನ್. ಸಿಂಗ್, ರಕ್ಷಣಾ ತಜ್ಞ, ದೆಹಲಿ

‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನ !

ಕರ್ನಲ್ ಆರ್.ಎಸ್.ಎನ್. ಸಿಂಗ್

ಭಾರತ-ವಿರೋಧಿ `ಇಕೋಸಿಸ್ಟಮ್’ನ ಪ್ರಾರಂಭ ಹೆಚ್ಚು ಚರ್ಚಿಸಲ್ಪಟ್ಟ `ತುಕಡೆ ತುಕಡೆ’ ಚಳುವಳಿಯೊಂದಿಗೆ ಪ್ರಾರಂಭವಾಯಿತು. ಈ ಚಳುವಳಿ ಹಿಂದೂಗಳ ಪ್ರತಿಕ್ರಿಯೆಯನ್ನು ಪರೀಕ್ಷಿಸಲು ಮಾಡಲಾಗಿತ್ತು. ಈ ಚಳುವಳಿಯನ್ನು ವಿರೋಧಿಸುವವರು ಎಷ್ಟು, ತಟಸ್ಥರು ಎಷ್ಟು ಮತ್ತು ಸಮರ್ಥಿಸುವವರು ಎಷ್ಟು ಜನರಿದ್ದಾರೆ, ಎನ್ನುವುದನ್ನು ಪರಿಶೀಲಿಸಲು ಈ ಚಳುವಳಿ ಒಂದು ಪರೀಕ್ಷೆಯಾಗಿತ್ತು. ಪ್ಯಾಲೆಸ್ಟೈನ್ ಅನ್ನು ಬೆಂಬಲಿಸುವ ಓವೈಸಿಯಂತಹ ಪ್ರತ್ಯೇಕತಾವಾದಿಗಳು ಸಂಸತ್ತಿನಲ್ಲಿ ಚುನಾಯಿತಗೊಂಡಿದ್ದಾರೆ. ಇದರಿಂದ ಇನ್ನು ಮುಂದಿನ ಕಾಲದಲ್ಲಿ ಲೋಕಸಭೆಯಲ್ಲಿ ಗೂಂಡಾಗಿರಿ ನಡೆದರೂ ಅಚ್ಚರಿ ಪಡಬೇಕಾಗಿಲ್ಲ. ಮುಸಲ್ಮಾನರಿಗೆ ಕುರಾನ್ ಮತ್ತು ಸಂವಿಧಾನ ಇವೆರಡರಲ್ಲಿ ಯಾವುದು ಶ್ರೇಷ್ಠ ? ಅಥವಾ ಕ್ರೈಸ್ತರಿಗೆ ಬೈಬಲ್ ಮತ್ತು ಸಂವಿಧಾನ ಇವೆರಡರಲ್ಲಿ ಯಾವುದು ಶ್ರೇಷ್ಠ? ಎಂದು ಕೇಳಿದರೆ, ಅದರ ಉತ್ತರ ಏನಿರಬಹುದು ಎನ್ನುವುದು ನಮಗೆ ತಿಳಿದಿದೆ. ನಾವು ‘ದೇಶ’ ಎಂದು ಯೋಚಿಸಿದಾಗ ಇದಕ್ಕಾಗಿ ರಚಿಸಲಾದ ಸಂವಿಧಾನವಿರುತ್ತದೆ; ಆದರೆ ನಾವು ` ರಾಷ್ಟ್ರ’ ಎಂದು ವಿಚಾರ ಮಾಡಿದಾಗ, ಅದಕ್ಕಾಗಿ ಲಿಖಿತ ಸಂವಿಧಾನದ ಆವಶ್ಯಕತೆಯಿರುವುದಿಲ್ಲ. ರಾಷ್ಟ್ರವು ಚಿರಂತನವಾಗಿರುತ್ತದೆ. ರಾಷ್ಟ್ರದ ಒಂದು ಮುಖ್ಯ ವಿಚಾರಧಾರೆಯಿರುತ್ತದೆ ಮತ್ತು ಭಾರತದ ಮುಖ್ಯ ವಿಚಾರಧಾರೆಯು ಕೈಲಾಶ ಪರ್ವತ, ಸಮುದ್ರ ಮಂಥನ ಹೀಗೆ ಸಂಸ್ಕೃತಿಯೊಂದಿಗೆ ಜೋಡಿಸಲ್ಪಟ್ಟಿದೆ. ಇದರಿಂದ ಹಿಂದೂಗಳಿಲ್ಲದೇ ಭಾರತ ರಾಷ್ಟ್ರವು ಸಾಧ್ಯವಿಲ್ಲ ಮತ್ತು ಭಾರತ ರಾಷ್ಟ್ರವಿಲ್ಲದೆ ಹಿಂದೂಗಳು ಸುರಕ್ಷಿತವಾಗಿಲ್ಲ ಎಂದು ರಕ್ಷಣಾ ತಜ್ಞ ಕರ್ನಲ್ ಆರ್.ಎಸ್.ಎನ್. ಸಿಂಗ್ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ನಾಲ್ಕನೇ ದಿನದಂದು ಪ್ರತಿಪಾದಿಸಿದರು. ಅವರು ‘ರಾಷ್ಟ್ರದ ಮೇಲೆ ದಾಳಿ ಮತ್ತು ದೇಶದ ಮೇಲೆ ಅಧಿಕಾರ’ ಈ ವಿಷಯದ ಕುರಿತು ಮಾತನಾಡುತ್ತಿದ್ದರು.

ಈ ಸಂದರ್ಭದಲ್ಲಿ ` ಆರ್ಟಿಫಿಶಿಯಲ ಇಂಟಲಿಜೆನ್ಸ (ಎ.ಐ.)’ ಸಂದರ್ಭದಲ್ಲಿ ಕರ್ನಾಟಕದ ‘ರಿಷಿಹುಡ್ ವಿದ್ಯಾಲಯ’ದ ಪ್ರೊಫೆಸರ್ ಕೆ. ಗೋಪಿನಾಥ್ ಅವರು ಮಾತನಾಡುತ್ತಾ, “ಎ.ಐ.ನಿಂದ ದೊರೆಯುವ ಮಾಹಿತಿಯು ಕೇವಲ `ಊಹೆ ‘ಮಾತ್ರವಾಗಿರುತ್ತದೆ. ಮೊದಲಿನಿಂದಲೂ ಯಾವ ಮಾಹಿತಿ ಲಭ್ಯವಿರುತ್ತದೆಯೋ, ಅದೇ ಮಾಹಿತಿಯನ್ನು ಕ್ರೋಢೀಕರಿಸಿ “ಎ.ಐ.” ನಲ್ಲಿ ಪ್ರಸಾರ ಮಾಡಲಾಗುತ್ತದೆ. ‘ಎ.ಐ.’ ನಲ್ಲಿ ಅಳವಡಿಸಲಾಗಿರುವ ಮಾಹಿತಿಯು ಒಂದು ವೇಳೆ ಹಿಂದೂವಿರೋಧಿಯಾಗಿದ್ದರೆ, ನಮಗೆ ಹಿಂದೂವಿರೋಧಿ ಉತ್ತರಗಳೇ ಸಿಗುತ್ತವೆ. ಆದ್ದರಿಂದ, ‘ಎ.ಐ.’ ನಂತಹ ತಂತ್ರಜ್ಞಾನವು ಸಮಸ್ಯೆಯಲ್ಲ. ಅದನ್ನು ಮುನ್ನಡೆಸುವವರು ಯಾರಾಗಿದ್ದಾರೆ? ಮತ್ತು ಅದಕ್ಕಾಗಿ ಮಾಹಿತಿಯನ್ನು ಪೂರೈಸುವವರು ಯಾರು? ಎನ್ನುವುದು ಆತಂಕದ ವಿಷಯವಾಗಿದೆ.’’

ಎಡದಿಂದ ಶ್ರೀ. ಚೇತನ್ ರಾಜಹಂಸ, ಪ್ರೊ. ಕೆ. ಗೋಪಿನಾಥ್, ಕರ್ನಲ್ ಆರ್.ಎಸ್.ಎನ್. ಸಿಂಗ್ ಮತ್ತು ಶ್ರೀ. ನೀರಜ್ ಅತ್ರಿ

‘ ಟ್ರಾನ್ಸ್ಜೆಂಡರ್’ನ ವೈಭವೀಕರಣ ಭಾರತಕ್ಕೆ ಅಪಾಯಕಾರಿ ! – ನೀರಜ ಅತ್ರಿ, ವಿವೇಕಾನಂದ ಕಾರ್ಯಕಾರಿ ಸಮಿತಿ, ಹರಿಯಾಣ

ಸ್ವಾಭಾವಿಕವಾಗಿ ನಪುಂಸಕರಾಗಿರುವುದು ಮತ್ತು ಶಸ್ತ್ರಚಿಕಿತ್ಸೆಯ ಮೂಲಕ ಲಿಂಗವನ್ನು ಬದಲಾಯಿಸುವುದು ಇದರಲ್ಲಿ ವ್ಯತ್ಯಾಸವಿದೆ. ಶಸ್ತ್ರಚಿಕಿತ್ಸೆಯ ಮೂಲಕ ಲಿಂಗವನ್ನು ಬದಲಾಯಿಸುವುದರಿಂದ ವ್ಯಕ್ತಿಯ ಮನಸ್ಸಿನಲ್ಲಿರುವ ಭಾವನೆಗಳನ್ನು ಬದಲಾಯಿಸಲು ಸಾಧ್ಯವಿಲ್ಲ. ಆದ್ದರಿಂದ, ಅಂತಹ ಲಿಂಗ ಬದಲಾಯಿಸಿದ ವ್ಯಕ್ತಿಯ ಜೀವನ ಮುಂದೆ ನರಕಮಯವಾಗುತ್ತದೆ; ಆದರೆ ಕೇವಲ ಪ್ರಪೊಗಂಡಾ ಮಾಡಿ ಇದನ್ನು ‘ಆಧುನಿಕತೆ’ ಯಾಗಿದೆಯೆಂದು ತೋರಿಸಲಾಗುತ್ತಿದೆ. ಒಮ್ಮೆ ಲಿಂಗ ಬದಲಾವಣೆ ಮಾಡಿದರೆ, ಪುನಃ ಶಸ್ತ್ರಚಿಕಿತ್ಸೆ ಮಾಡಿ ಅದನ್ನು ಮೂಲ ಸ್ವರೂಪಕ್ಕೆ ತರಲು ಸಾಧ್ಯವಿಲ್ಲ. ವಿದೇಶಗಳಲ್ಲಿ ಇದರಿಂದ ನೂರಾರು ಜನರ ಬದುಕು ಹಾಳಾಗಿದೆ. ಭಾರತದಲ್ಲಿಯೂ ಯುವ ಪೀಳಿಗೆಯು ಇದರ ಬಲಿಪಶುಗಳನ್ನಾಗಿಸುತ್ತಿದ್ದಾರೆ. ಚಲನಚಿತ್ರಗಳನ್ನು ಇಂತಹ ಪಾತ್ರಗಳನ್ನು ಉದ್ದೇಶಪೂರ್ವಕವಾಗಿ ತೋರಿಸಿ ಅದನ್ನು ವೈಭವೀರಣಗೊಳಿಸಲಾಗುತ್ತಿದೆ. ಈ ವಿಷಯದ ಕುರಿತು ಸಮಾಜದಲ್ಲಿ ಜಾಗೃತಿ ಮೂಡಿಸುವುದು ಆವಶ್ಯಕವಾಗಿದೆ.

ಅಧಿವೇಶನದಲ್ಲಿ ಸಹಭಾಗಿಯಾದ ಹಿಂದುತ್ವನಿಷ್ಠರು

Related News