‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘: ಪತ್ರಿಕಾಗೋಷ್ಠಿ !
ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವದಲ್ಲಿ ‘ದೇವಸ್ಥಾನ ಸಂಸ್ಕೃತಿ ಪರಿಷತ್ತು ‘
ಎಡದಿಂದ ಶ್ರೀ. ಗಿರೀಶ ಶಾ, ಶ್ರೀ. ಸುನಿಲ ಘನವಟ, ಪೂಜ್ಯ ಪವನ ಸಿನ್ಹಾ ,ನ್ಯಾಯವಾದಿ ವಿಷ್ಣು ಜೈನ್, ಶ್ರೀ. ಜಯೇಶ ಥಳಿ
ಹಿಂದಿನ ಕಾಂಗ್ರೆಸ್ ಸರಕಾರವು ವಕ್ಫ್ ಬೋರ್ಡ್ ಸ್ಥಾಪಿಸಿ ಮುಸ್ಲಿಮರ ಧಾರ್ಮಿಕ ಆಸ್ತಿ ಮತ್ತು ಭೂಮಿಯನ್ನು ರಕ್ಷಿಸಲು ವಿಶೇಷ ಕಾನೂನು ಅಧಿಕಾರವನ್ನು ನೀಡಿತೋ ಅದೇ ರೀತಿಯಲ್ಲಿ, ದೇಶಾದ್ಯಂತ ಲಕ್ಷಾಂತರ ಹಿಂದೂಗಳ ದೇವಸ್ಥಾನಗಳು, ಅದರ ಭೂಮಿ ಮತ್ತು ಆಸ್ತಿಯನ್ನು ರಕ್ಷಿಸಲು ವಕ್ಫ್ ಬೋರ್ಡ್‌ನಂತಹ ದೇವಸ್ಥಾನಗಳಿಗೆ ಎಲ್ಲಾ ಅಧಿಕಾರಗಳಿರುವ ‘ಹಿಂದೂ ಮಂದಿರ ಬೋರ್ಡ್’ ಸ್ಥಾಪಿಸಬೇಕು. ಅಲ್ಲದೆ, ಕೇವಲ ಹಿಂದೂ ದೇವಸ್ಥಾನಗಳನ್ನು ಸ್ವಾಧೀನಪಡಿಸಿಕೊಳ್ಳುವ 1951 ರ ‘ರಿಲಿಜಿಯಸ್ ಎಂಡೋವ್‌ಮೆಂಟ್ ಆಕ್ಟ್’ ರದ್ದುಪಡಿಸಬೇಕು ಮತ್ತು ಎಲ್ಲಾ ಹಿಂದೂ ದೇವಸ್ಥಾನಗಳನ್ನು ತಕ್ಷಣ ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಬೇಕು ಮತ್ತು ಭಕ್ತರ ನಿಯಂತ್ರಣಕ್ಕೆ ನೀಡಬೇಕು, ಎಂದು ‘ಕಾಶಿಯ ಜ್ಞಾನವಾಪಿ, ಮಥುರಾದಲ್ಲಿನ ಶ್ರೀಕೃಷ್ಣಭೂಮಿ’ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ಮೊಕದ್ದಮೆಯನ್ನು ಹೋರಾಡಿದ ‘ ಹಿಂದೂ ಫ್ರಂಟ್ ಫಾರ್ ಜಸ್ಟೀಸ್’ನ ವಕ್ತಾರ ಹಾಗೂ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣುಶಂಕರ್ ಜೈನ್ ಇವರು ‘ಮಂದಿರ ಸಂಸ್ಕೃತಿ ಪರಿಷತ್’ನ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಅವರು ಗೋವಾದ ಫೋಂಡಾದಲ್ಲಿನ ‘ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶ’ದ ನಿಮಿತ್ತ ಶ್ರೀ ವಿದ್ಯಾಧಿರಾಜ ಸಭಾಂಗಣದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು. ಈ ಸಂದರ್ಭದಲ್ಲಿ ದೇವಸ್ಥಾನಗಳ ಆರ್ಥಿಕ ನಿರ್ವಹಣೆಯ ಅಧ್ಯಯನಕಾರ ಹಾಗೂ ಮುಂಬಯಿನ ‘ಸಮಸ್ತ ಮಹಾಜನ ಸಂಘ’ದ ಅಧ್ಯಕ್ಷರಾದ ಶ್ರೀ. ಗಿರೀಶ ಶಾ, ‘ಮಹಾರಾಷ್ಟ್ರ ಮಂದಿರ ಮಹಾಸಂಘ’ದ ರಾಜ್ಯ ಸಮನ್ವಯಕ ಶ್ರೀ. ಸುನೀಲ್ ಘನವಟ ಮತ್ತು ‘ಗೋಮಾಂತಕ ಮಂದಿರ ಮಹಾಸಂಘ’ದ ರಾಜ್ಯ ಕಾರ್ಯದರ್ಶಿ ಶ್ರೀ. ಜಯೇಶ ಥಳಿ ಉತ್ತರ ಪ್ರದೇಶದ ಪವನ ಚಿಂತನ ಧಾರಾ ಆಶ್ರಮದ ಪೂಜ್ಯನೀಯ ಪವನ ಸಿನ್ಹಾ ಗುರುಜಿ ಉಪಸ್ಥಿತರಿದ್ದರು.
ಈ ವೇಳೆ ‘ ಮಹಾರಾಷ್ಟ್ರ ಮಂದಿರ ಮಹಾಸಂಘ’ದ ಶ್ರೀ. ಸುನಿಲ ಘನವಟ ಇವರು ಮಾತನಾಡಿ, ಈ ಹಿಂದೂ ಅಧಿವೇಶನದ ಮೂಲಕ ‘ದೇವಸ್ಥಾನ ಸಂಸ್ಕೃತಿ ಸಂರಕ್ಷಣಾ ಅಭಿಯಾನ’ವನ್ನು ಆರಂಭಿಸಲಾಗಿತ್ತು. ಇದರಲ್ಲಿ ಈಗ ದೇಶಾದ್ಯಂತ ಸುಮಾರು 14 ಸಾವಿರ ದೇವಸ್ಥಾನಗಳ ಸಂಘಟನೆಯಾಗಿದೆ. ಈ ಅಧಿವೇಶನದಲ್ಲಿ ದೇಶಾದ್ಯಂತ 275 ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಪಾಲ್ಗೊಂಡಿದ್ದರು. ಅಲ್ಲದೆ ದೇಶಾದ್ಯಂತ 710 ದೇವಸ್ಥಾನಗಳಲ್ಲಿ ವಸ್ತ್ರಸಂಹಿತೆ ಜಾರಿಯಾಗಿದೆ. ಈ ಅಭಿಯಾನವನ್ನು ಮತ್ತಷ್ಟು ವಿಸ್ತರಿಸಿ, ನಾವು ದೇವಸ್ಥಾನಗಳ ವಸ್ತ್ರ ಸಂಹಿತೆಯೊಂದಿಗೆ ದೇಶಾದ್ಯಂತ ‘ದೇವಸ್ಥಾನಗಳು ಮದ್ಯ-ಮಾಂಸ ಮುಕ್ತ’ ಅಭಿಯಾನವನ್ನು ಹಮ್ಮಿಕೊಳ್ಳುವವರಿದ್ದೇವೆ. ವಕ್ಫ್ ಮಂಡಳಿಯು ಮಹಾರಾಷ್ಟ್ರದ ಶ್ರೀ ಶನಿಶಿಂಗಣಾಪುರ ದೇವಸ್ಥಾನದ 19 ಎಕರೆ, ಬೀಡ್‌ನಲ್ಲಿರುವ ಶ್ರೀ ಕಂಕಾಲೇಶ್ವರ ದೇವಸ್ಥಾನದ 12.5 ಎಕರೆ, ತಮಿಳುನಾಡಿನ ತಿರುಚಿರಾಪಳ್ಳಿ ಗ್ರಾಮದ 1500 ವರ್ಷಗಳಷ್ಟು ಹಳೆಯದಾದ ಶ್ರೀಚಂದ್ರಶೇಖರ್ ಸ್ವಾಮಿ ದೇವಸ್ಥಾನ ಸೇರಿದಂತೆ ಸುಮಾರು 1200 ಎಕರೆ ಭೂಮಿಯನ್ನು ವಕ್ಫ್ ಮಂಡಳಿಯು ಹಕ್ಕು ಸಾಧಿಸಿದೆ. ಈ ರೀತಿ ಹಲವೆಡೆ ದೇವಸ್ಥಾನದ ಜಮೀನು ವಕ್ಫ್ ಕಬಳಿಸಿದೆ. ವಕ್ಫ್ ಬೋರ್ಡ್ ಒತ್ತುವರಿ ಮಾಡಿಕೊಂಡಿರುವ ದೇವಸ್ಥಾನಗಳ ಜಮೀನುಗಳನ್ನು ಕೂಡಲೇ ಪುನಃ ಹಸ್ತಾಂತರಿಸಲು ಸರಕಾರ ಆದೇಶ ಹೊರಡಿಸಬೇಕು ಎಂದು ಹೇಳಿದರು.
’ ಗೋಮಾಂತಕ ಮಂದಿರ ಮಹಾಸಂಘ’ದ ರಾಜ್ಯ ಕಾರ್ಯದರ್ಶಿ ಶ್ರೀ. ಜಯೆಶ ಥಳಿ ಇವರು ಮಾತನಾಡುತ್ತಾ, ಗೋವಾ ಸರ್ಕಾರವು ಸ್ಪಷ್ಟೀಕರಣ ನೀಡಿದ್ದರೂ, ಅದರ ಸರಕಾರಿ ಆದೇಶದಲ್ಲಿ ಧಾರ್ಮಿಕ ಸ್ಥಳಗಳು ಮತ್ತು ಶಾಲೆಗಳ 100 ಮೀಟರ್ ವ್ಯಾಪ್ತಿಯಲ್ಲಿ ಹೊಸ ಮದ್ಯದಂಗಡಿಗಳಿಗೆ ಅನುಮತಿ ನೀಡುವ ಬಗ್ಗೆ ಸ್ಪಷ್ಟವಾಗಿ ಆದೇಶ ನೀಡಿದೆ. ಆದ್ದರಿಂದ, ಇದನ್ನು ಗೋಮಾಂತಕ ದೇವಸ್ಥಾನ ಮಹಾಸಂಘವು ವಿರೋಧಿಸುತ್ತದೆ. ಸರಕಾರವು, ಪ್ರವಾಸೋದ್ಯಮ ದೃಷ್ಟಿಯಿಂದ ಅಪವಾದಾತ್ಮಕವಾಗಿ ನಿರ್ಧಾರ ಕೈಗೊಂಡಿದೆ ಎಂದು ಹೇಳಿದ್ದರೂ, ಇದು ಪ್ರವಾಸಿಗರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿರುವ ನಿರ್ಧಾರವಾಗಿದೆ. ನಾಳೆ ಜಾಮಾ ಮಸೀದಿ ಅಥವಾ ಹಳೇ ಗೋವಾ ಚರ್ಚ್‌ನ ಪಕ್ಕದಲ್ಲಿ ಶೇ.200 ರಷ್ಟು ಪರಿಷ್ಕೃತ ಶುಲ್ಕ ಪಾವತಿಸಿ ಮದ್ಯದಂಗಡಿ ತೆರೆಯುವಂತೆ ಒತ್ತಾಯಿಸಿದರೆ, ಸರಕಾರ ಪ್ರವಾಸೋದ್ಯಮದ ದೃಷ್ಟಿಯಿಂದ ವಿಚಾರ ಮಾಡಿ ಇದಕ್ಕೆ ಅನುಮತಿ ನೀಡುವುದೇ ? ಸರಕಾರ ಇದರ ಉತ್ತರ ನೀಡಬೇಕು. ವ್ಯಸನಗಳಿಂದಾಗಿ ಇಂದು ಪಂಜಾಬ್ ಅನ್ನು ‘ಉಡತಾ್ ಪಂಜಾಬ್’ ಎಂದು ಕರೆಯಲಾಗುತ್ತದೆ, ಅದೇ ರೀತಿ ಗೋವಾವನ್ನು ’ಉಡತಾ ಗೋವಾ’ ಮಾಡಬಯಸುತ್ತೀರಾ? ಆದ್ದರಿಂದ ಸರಕಾರ ಈ ಕಾನೂನನ್ನು ರದ್ದುಗೊಳಿಸಬೇಕು ಎಂದು ಆಗ್ರಹಿಸಿದರು.
ಈ ಸಮಯದಲ್ಲಿ ‘ದೇವಸ್ಥಾನದ ಆರ್ಥಿಕ ನಿರ್ವಹಣೆ’ ಕುರಿತು ಮಾತನಾಡುತ್ತಾ ಅಧ್ಯಯನಕಾರ ಶ್ರೀ. ಗಿರೀಶ ಶಾ ಇವರು, ದೇವಸ್ಥಾನಗಳ ಒಟ್ಟು ಆರ್ಥಿಕ ಆದಾಯದ ಶೇ.10 ರಷ್ಟು ನಿಧಿಯನ್ನು ಮಾತ್ರ ಪೂಜೆ ಮತ್ತು ನಿರ್ವಹಣೆಗೆ ಮೀಸಲಿಡಬೇಕು, ಉಳಿದ ಹಣವನ್ನು ದೇವಸ್ಥಾನಗಳ ಸಂವರ್ಧನೆ, ಜೀರ್ಣೋದ್ಧಾರ, ಸೌಲಭ್ಯಗಳು, ಸಣ್ಣ ದೇವಸ್ಥಾನಗಳಿಗೆ ಧನ ಸಹಾಯ ಹಾಗೂ ಅವನ್ನು ಸಮಾಜಕ್ಕೆ ಪೂರಕ ಮಾಡಲು ಬಳಸಬೇಕು ಎಂದು ಹೇಳಿದರು. ಅಲ್ಲದೆ, ದೇವಸ್ಥಾನದ ಆರ್ಥಿಕ ನಿರ್ವಹಣೆ, ಸುವ್ಯವಸ್ಥೆ ಮತ್ತು ಸಂವರ್ಧನೆಯ ವಿಷಯದಲ್ಲಿ ವಿವಿಧ ದೇವಸ್ಥಾನಗಳಿಗೆ ಮಾರ್ಗದರ್ಶನ ನೀಡಲಾಗುವುದು ಎಂದು ಹೇಳಿದರು.
ಉತ್ತರ ಪ್ರದೇಶದ ಪವನ್ ಚಿಂತನ್ ಧಾರಾ ಆಶ್ರಮದ ಪೂಜ್ಯ ಪವನ್ ಸಿನ್ಹಾ ಗುರೂಜಿ ಅವರು, ಜಾತ್ಯತೀತ ರಾಷ್ಟ್ರದ ಸರ್ಕಾರ ಕೇವಲ ಹಿಂದೂ ದೇವಾಲಯಗಳನ್ನು ಸ್ವಾಧೀನಪಡಿಸಿಕೊಳ್ಳುವುದು ಸೂಕ್ತವಲ್ಲ ಎಂದು ಹೇಳಿದರು. ಆದ್ದರಿಂದ ಸರಕಾರ ಎಲ್ಲ ದೇವಸ್ಥಾನಗಳನ್ನು ತನ್ನ ಹಿಡಿತದಿಂದ ಮುಕ್ತಗೊಳಿಸಬೇಕು ಎಂಬುದು ನಮ್ಮ ಆಗ್ರಹ. ಈ ಉದ್ದೇಶಕ್ಕಾಗಿ ನಾವು ದೇವಸ್ಥಾನದಿರ ಸಂಸ್ಕೃತಿ ಪರಿಷತ್ತು ಆಯೋಜಿಸಿದ್ದೇವೆ.