Menu Close

ಸರಕಾರಿಕರಣಗೊಂಡ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ !- ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದ ಐದನೇ ದಿನ !

ಶ್ರೀ. ಮೋಹನ ಗೌಡ, ಕರ್ನಾಟಕ ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಕರ್ನಾಟಕ ರಾಜ್ಯ ಸರಕಾರವು ಹಿಂದೂ ದೇವಸ್ಥಾನಗಳಿಗೆ ಮಾತ್ರ ಶೇ.10 ರಷ್ಟು ತೆರಿಗೆ ವಿಧಿಸುವ ಉದ್ದೇಶಿತ ತುಘಲಕಿ ಕಾಯ್ದೆಯನ್ನು ಸಂಪೂರ್ಣವಾಗಿ ರದ್ದುಗೊಳಿಸಬೇಕು; ಇಲ್ಲವಾದಲ್ಲಿ ಇದರ ವಿರುದ್ಧ ಹಿಂದೂಗಳು ಬೀದಿಗಿಳಿದು ತೀವ್ರ ಪ್ರತಿಭಟನೆ ನಡೆಸಬೇಕಾಗುತ್ತದೆ. ಅಲ್ಲದೆ ಹಿಂದೂ ದೇವಸ್ಥಾನಗಳ ನಿಧಿಯನ್ನು ಬೇರೆ ಯಾವುದೇ ಉದ್ದೇಶಕ್ಕೆ ಬಳಸದೆ ದೇವಸ್ಥಾನದ ಅಭಿವೃದ್ಧಿ, ಜೀರ್ಣೋದ್ಧಾರ, ಸಣ್ಣ ದೇವಸ್ಥಾನಗಳಿಗೆ ಆರ್ಥಿಕ ನೆರವು, ದೀಪ-ಬತ್ತಿಗಳಿಗೆ ಮಾತ್ರ ವಿನಿಯೋಗಿಸಬೇಕು. ಅಲ್ಲದೆ ಕರ್ನಾಟಕ ರಾಜ್ಯದಲ್ಲಿ ಸರಕಾರಿಕರಣಗೊಂಡಿರುವ ಎಲ್ಲಾ ಹಿಂದೂ ದೇವಸ್ಥಾನಗಳನ್ನು ಸರ್ಕಾರದ ನಿಯಂತ್ರಣದಿಂದ ಮುಕ್ತಗೊಳಿಸಿ ಪುನಃ ಭಕ್ತರಿಗೆ ಹಸ್ತಾಂತರಿಸಬೇಕು ಎಂದು ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಕರೆ ನೀಡಿದರು. ಅವರು ಅವರು ಫೋಂಡಾ. ಗೋವಾದಲ್ಲಿ ನಡೆಯುತ್ತಿರುವ ‘ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನ’ದಲ್ಲಿ ಮಾತನಾಡುತ್ತಿದ್ದರು, ಈ ಅಧಿವೇಶನದಲ್ಲಿ ತುಮಕೂರಿನ ಶ್ರೀ ಷ.ಬ್ರ.ವೀರಭದ್ರಶಿವಾಚಾರ್ಯ ಸ್ವಾಮೀಜಿ, ಶ್ರೀ ಮ.ನಿ.ಪ್ರ.ಸ್ವ. ಶ್ರೀ ಕಾರದ ವೀರಬಸವ ಸ್ವಾಮೀಜಿ, ಪರಮಪೂಜ್ಯ ಡಾ. ಹನುಮಂತನಾಥ ಸ್ವಾಮೀಜಿಯವರು ಮಾರ್ಗದರ್ಶನ ಮಾಡಿದರು.

ಶ್ರೀ ಷ. ಬ್ರ. ವೀರಭದ್ರಶಿವಾಚಾರ್ಯ ಸ್ವಾಮೀಜಿ ಪೀಠಾಧಿಪತಿಗಳು, ಬಾಳೆಹೊನ್ನೂರು ಶಾಖಾ ಮಠ, ಶ್ರೀ ಕ್ಷೇತ್ರ ಸಿದ್ದರಬೆಟ್ಟ, ತುಮಕೂರು ಜಿಲ್ಲೆ

ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ಚಿಂತನೆಯೂ ಇದೆ ! – ಶ್ರೀ ಷ.ಬ್ರ. ವೀರಭದ್ರಶಿವಾಚಾರ್ಯ ಸ್ವಾಮೀಜಿ, ಬಾಳೆಹೊನ್ನೂರು ಶಾಖಾ ಮಠ, ಶ್ರೀ ಕ್ಷೇತ್ರ ಸಿದ್ದರಬೆಟ್ಟ, ತುಮಕೂರು
`ಹಿಂದೂ ಧರ್ಮದ ವೈಭವವನ್ನು, ಸನಾತನದ ಪರಂಪರೆಯಲ್ಲಿರುವ ಆನಂದವನ್ನು ನಾವಷ್ಟೇ ಪಡೆಯುವಂತದ್ದಲ್ಲ ಅದನ್ನು ಇಡೀ ಜಗತ್ತಿನಾದ್ಯಂತ ಎಲ್ಲ ಜನರಿಗೆ ತಲುಪಿಸಬೇಕು. ಇದು ನಮ್ಮೆಲ್ಲ ಕರ್ತವ್ಯವಾಗಿದೆ. ಸನಾತನ ಧರ್ಮದಿಂದಲೇ ಶಾಂತಿ ಸಿಗುತ್ತದೆ, ಈ ಸನಾತನ ಹಿಂದು ಧರ್ಮವನ್ನು ನಾಶಗೊಳಿಸಲು ಕೆಲವು ಶಕ್ತಿಗಳು ಪ್ರಯತ್ನಿಸುತ್ತಿವೆ. ಅದನ್ನು ತಡೆಗಟ್ಟಲು ಎಲ್ಲ ಸಂತರು, ಹಿಂದುತ್ವನಿಷ್ಠ ಸಂಘಟನೆಗಳು ಮತ್ತು ಹಿಂದು ಧರ್ಮಪ್ರೇಮಿಗಳಿಗೆ ಪ್ರಯತ್ನಿಸಬೇಕಾಗಬಹುದು. ಅಂದರೆ ಮಾತ್ರ ನಮ್ಮ ಧರ್ಮವು ಉಳಿಯಲಿದೆ. ಹಿಂದು ಧರ್ಮಾಚರಣೆಯ ಹಿಂದೆ ಆಧ್ಯಾತ್ಮಿಕತೆಯೊಂದಿಗೆ ವೈಜ್ಞಾನಿಕ ಚಿಂತನೆಯೂ ಇದೆ.

ಶ್ರೀ.ಮ.ನಿ.ಪ್ರ.ಸ್ವ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶ್ರೀ ಕಾರದೇಶ್ವರಮಠ. ಶ್ರೀ ಶ್ವೇತಕಮಠಾಪುರಿ, ಜಂಗಮ ಸುಕ್ಷೇತ್ರ, ಬೆಳ್ಳಾವೆ, ತುಮಕೂರು.

ಹಿಂದೂ ರಾಷ್ಟ್ರ ವಿಶ್ವಮಟ್ಟಕ್ಕೆ ಕೊಂಡೊಯ್ಯಲು ಎಲ್ಲರೂ ಒಟ್ಟಾಗಿ ಕೆಲಸ ಮಾಡೋಣ ! – ಶ್ರೀ.ಮ.ನಿ.ಪ್ರ.ಸ್ವ ಶ್ರೀ ಕಾರದ ವೀರಬಸವ ಸ್ವಾಮೀಜಿ, ಶ್ರೀ ಕಾರದೇಶ್ವರಮಠ. ಶ್ರೀ ಶ್ವೇತಕಮಠಾಪುರಿ, ಜಂಗಮ ಸುಕ್ಷೇತ್ರ, ಬೆಳ್ಳಾವೆ, ತುಮಕೂರು.
ಭಾರತದ ಭೂಮಿ ಪವಿತ್ರ ರಾಷ್ಟ್ರ, ಹಿಂದೂ ರಾಷ್ಟ್ರ ಎನ್ನಲು ಕಾರಣವೆಂದರೆ ಮಣ್ಣನ್ನು ಕಂಡು, ನೀರನ್ನು ಕಂಡು, ಮನುಷ್ಯನನ್ನು ಕಂಡು, ಎಲ್ಲ ದೇವರು ಅಂತ ಪೂಜೆ ಮಾಡುವಂತಹ ಈ ಸನಾತನ ಧರ್ಮವು ಏಕೈಕ ಧರ್ಮವಾಗಿದೆ. ಆ ಸನಾತನ ಧರ್ಮವು ಭಾರತದ ಒಂದಕ್ಕೇ ಮೀಸಲಾಗದೇ ಇಡೀ ವಿಶ್ವಕ್ಕೆ ಮೀಸಲಾಗಬೇಕು. ಹಿಂದೂ ರಾಷ್ಟ್ರವನ್ನು ವಿಶ್ವಮಟ್ಟಕ್ಕೆ ತೆಗೆದುಕೊಂಡು ಹೋಗುವ ಕೆಲಸ ಮಾಡೋಣ.

ಪರಮಪೂಜ್ಯ ಡಾ. ಹನುಮಂತನಾಥ ಸ್ವಾಮೀಜಿ, ಕುಂಚಿಟಿಗರ ಮಹಾಸಂಸ್ಥಾನ ಮಠ, ಎಲೆರಾಂಪುರ, ಕೊರಟೆಗೆರೆ ತಾಲ್ಲೂಕು, ತುಮಕೂರು

ದೇಶ ಮುನ್ನಡೆಯ ಬೇಕಾದರೆ ಬಲಿಷ್ಠವಾದಂತಹ ರಾಷ್ಟ್ರವನ್ನು ಕಟ್ಟಬೇಕಾಗಿದೆ ! – ಪರಮಪೂಜ್ಯ ಡಾ. ಹನುಮಂತನಾಥ ಸ್ವಾಮೀಜಿ, ಕುಂಚಿಟಿಗರ ಮಹಾಸಂಸ್ಥಾನ ಮಠ, ಎಲೆರಾಂಪುರ, ಕೊರಟೆಗೆರೆ ತಾಲ್ಲೂಕು, ತುಮಕೂರು
ನಾವು ನಮ್ಮ ಧರ್ಮವನ್ನು ರಕ್ಷಣೆ ಮಾಡಿದರೆ ಧರ್ಮವು ನಮ್ಮನ್ನು ರಕ್ಷಣೆ ಮಾಡುತ್ತದೆ.‌ ನಾವು ನಮ್ಮ ಧಾರ್ಮಿಕ ಅಚಾರಗಳನ್ನು, ನೆಲೆಗಟ್ಟನ್ನು, ಸಂಘಟನೆಗಳನ್ನು ರಕ್ಷಿಸುವುದು ನಮ್ಮ ಸಮಾಜಕ್ಕೆ ಅತ್ಯವಶ್ಯಕವಾಗಿದೆ. ಈಗ ಧರ್ಮವನ್ನು ರಕ್ಷಿಸುವ ಕೆಲಸ ಆಗಬೇಕಾಗಿರುತ್ತದೆ. ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಧಾರ್ಮಿಕವಾಗಿ, ಈ ಸಮಾಜ, ದೇಶ ಮುನ್ನಡೆಯ ಬೇಕಾದರೆ ಬಲಿಷ್ಠವಾದಂತಹ ರಾಷ್ಟ್ರವನ್ನು ಕಟ್ಟಬೇಕಾಗಿದೆ. ಆ ಅಡಿಪಾಯ ಬಹಳ ಮುಖ್ಯವಾಗಿದೆ.

Related News