‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ : ಪತ್ರಿಕಾಗೋಷ್ಠಿ !
ಎಡದಿಂದ ಶ್ರೀ. ರಮೇಶ ಶಿಂದೆ , ನ್ಯಾಯವಾದಿ ವಿಷ್ಣು ಜೈನ್, ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾಸಿಂಹ, ಶ್ರೀ. ಜಯೇಶ ಥಳಿ
ಪಣಜಿ – ಇಂದು ಎಲ್ಲೆಡೆಯ ಚಿತ್ರವನ್ನು ನೋಡಿದರೆ ‘ಥೂಕ ಜಿಹಾದ್’,(ಉಗುಳು ಜಿಹಾದ್) ‘ಆಕಳ ಚರ್ಮದಿಂದ ತಯಾರಿಸಿದ ತುಪ್ಪದಿಂದ ಹಿಡಿದು ಪದಾರ್ಥಗಳು, ಖವಾ, ಪೇಢೆ ಇವುಗಳನ್ನು ಪ್ರಸಾದವೆಂದು ಬಹಿರಂಗವಾಗಿ ವಿತರಿಸಲಾಗುತ್ತಿದೆ. ಭಕ್ತರು ಭಕ್ತಿಭಾವದಿಂದ ದೇವರಿಗೆ ಅದನ್ನು ಅರ್ಪಿಸುತ್ತಾರೆ. ಇದು ಒಂದು ರೀತಿಯಲ್ಲಿ ಹಿಂದೂಗಳ ಧಾರ್ಮಿಕ ಶ್ರದ್ಧೆಗೆ ದೊಡ್ಡ ಪೆಟ್ಟಾಗಿದೆ. ಇಂದು ಅನೇಕ ತೀರ್ಥಕ್ಷೇತ್ರಗಳ ಸ್ಥಳಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹಿಂದುಯೇತರ ಅಂಗಡಿಕಾರರ ಪ್ರಸಾದದ, ಪೂಜಾಸಾಹಿತ್ಯಗಳ ಅಂಗಡಿಗಳು ಇರುತ್ತವೆ. ಅವರ ಬಳಿ ಇರುವ ಪ್ರಸಾದ ಮತ್ತು ಸಾಹಿತ್ಯಗಳೂ ಶುದ್ಧ ಮತ್ತು ಪವಿತ್ರ ಇರುತ್ತವೆ ಎಂದು ಹೇಳಲು ಬರುವುದಿಲ್ಲ. ಹೊರ ಊರಿನಿಂದ ಬಂದ ಭಕ್ತರಿಗೆ ಶುದ್ಧ ಪ್ರಸಾದ ಎಲ್ಲಿ ಸಿಗುತ್ತದೆ, ಎಂದು ಗೊತ್ತಿರುವುದಿಲ್ಲ. ಆದುದರಿಂದ ಸದ್ಯ ಕೇವಲ ಹಿಂದು ಅಂಗಡಿಕಾರರಿಗೆ ಪ್ರಸಾದಶುದ್ಧಿಗಾಗಿ ‘ಓಂ ಪ್ರಮಾಣಪತ್ರ’ವನ್ನು ವಿತರಿಸಲು ಆರಂಭಿಸಲಾಗಿದೆ. ಹಿಂದು ಅಂಗಡಿಕಾರರಿಗೆ ‘ಓಂ ಪ್ರಮಾಣಪತ್ರ’ವನ್ನು ಉಚಿತವಾಗಿ ನೀಡಲಾಗುತ್ತದೆ. ದೇಶದಾದ್ಯಂತ ದೇವಸ್ಥಾನಗಳ ಪರಿಸರದಲ್ಲಿನ ಹಿಂದು ಅಂಗಡಿಕಾರರು ‘ಓಂ ಪ್ರಮಾಣಪತ್ರ’ವನ್ನು ಅವಶ್ಯ ಪಡೆಯಬೇಕು, ಎಂದು ನಾನು ವಿನಂತಿಸುತ್ತೇನೆ, ಎಂಬ ಕರೆಯನ್ನು ತೆಲಂಗಾಣಾದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ. ಟಿ. ರಾಜಾಸಿಂಹ ಇವರು ನೀಡಿದರು. ಅವರು ಗೋವಾದ, ‘ವೈಶ್ವಿಕ ಹಿಂದು ರಾಷ್ಟ್ರ ಅಧಿವೇಶನ’ದ ನಿಮಿತ್ತ ಪಣಜಿಯಲ್ಲಿನ ‘ಝೆಟ್ ಸ್ಕ್ವೆರ್ ಬ್ಯಕ್ವೆಟ್ ಹಾಲ್’ನಲ್ಲಿನ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.
ಈ ಸಮಯದಲ್ಲಿ ಪತ್ರಿಕಾಗೋಷ್ಠಿಗೆ ಇಲ್ಲಿನ ‘ಕಾಶಿಯ ಜ್ಞಾನವಾಪಿ, ಮಥುರಾದ ಶ್ರೀಕೃಷ್ಣಭೂಮಿ’ ಮುಂತಾದ ಪ್ರಮುಖ ಹಿಂದೂ ದೇವಸ್ಥಾನಗಳ ಮೊಕದ್ದಮೆಗಳನ್ನು ಹೋರಾಡುವ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಶಂಕರ ಜೈನ್, ‘ಹಿಂದು ಜನಜಾಗೃತಿ ಸಮಿತಿ’ಯ ರಾಷ್ಟ್ರೀಯ ವಕ್ತಾರರಾದ ಶ್ರೀ ರಮೇಶ ಶಿಂದೆ ಮತ್ತು ‘ಗೋಮಂತಕ ದೇವಸ್ಥಾನ ಮಹಾಸಂಘ’ದ ರಾಜ್ಯ ಸಂಸದರು ಶ್ರೀ. ಜಯೇಶ ಥಳಿ ಇವರು ಉಪಸ್ಥಿತರಿದ್ದರು.
ಈ ಸಮಯದಲ್ಲಿ ಶ್ರೀ .ರಮೇಶ ಶಿಂದೆ ಇವರು, ಮುಸಲ್ಮಾನ್ ರ ಒತ್ತಡದಿಂದಾಗಿ ದೇಶದಲ್ಲಿ ‘ಹಲಾಲ್ ಸರ್ಟಿಫಿಕೆಟ್ ಅನ್ನು ಎಲ್ಲ ಉತ್ಪಾದನೆಗಳಿಗೆ ಕಡ್ಡಾಯ ಮಾಡಲಾಗುತ್ತಿದೆ. ಹಿಂದೂಗಳಿಗೂ ಹಲಾಲ್ ಪ್ರಮಾಣಿತ ಉತ್ಪಾದನೆಗಳನ್ನು ಪಡೆದುಕೊಳ್ಳಬೇಕಾಗುತ್ತಿದೆ. ತಮಿಳುನಾಡಿನ ದೇವಸ್ಥಾನಗಳಲ್ಲಿ ಹಲಾಲ್ ಪ್ರಮಾಣಿತ ಪದಾರ್ಥಗಳನ್ನು ಮಾರಲಾಗುತ್ತಿದೆ. ಇದು ಹಿಂದೂಗಳ ಧಾರ್ಮಿಕ ಹಕ್ಕುಗಳ ಮೇಲಿನ ಅತಿಕ್ರಮಣವಾಗಿದೆ. ದೇವರಿಗೆ ಅರ್ಪಿಸುವ ಪ್ರಸಾದವು ಶುದ್ಧ ಮತ್ತು ಸಾತ್ತ್ವಿಕವಾಗಿರಬೇಕು, ಇದು ಧರ್ಮಾಚರಣೆಯನ್ನು ಮಾಡುವ ಹಿಂದೂಗಳ ಹಕ್ಕಾಗಿದೆ. ಹಿಂದೂಗಳಿಗೆ ಶುದ್ಧ ಮತ್ತು ಉತ್ತಮ ಮಟ್ಟದ ಪ್ರಸಾದ ದೊರೆಯಲು ‘ಸ್ವಾತಂತ್ರ್ಯವೀರ ಸಾವರಕರ ರಾಷ್ಟ್ರೀಯ ಸ್ಮಾರಕ’ದ ಕಾರ್ಯಾಧ್ಯಕ್ಷ ಶ್ರೀ. ರಣಜೀತ ಸಾವರಕರ ಇವರ ‘ಓಂ ಪ್ರತಿಷ್ಠಾನ’ದ ವತಿಯಿಂದ ‘ಓಂ ಪ್ರಮಾಣಪತ್ರ (ಸರ್ಟಿಫಿಕೆಟ್) ಬಿಡುಗಡೆಯಾಗಿದೆ.ಮಹಾರಾಷ್ಟ್ರದಲ್ಲಿ ತ್ರ್ಯಂಬಕೇಶ್ವರದಲ್ಲಿನ ದೇವಸ್ಥಾನಗಳ ಪರಿಸರದಲ್ಲಿ ೧೦೦ ಪ್ರಸಾದ ಮಾರಾಟಗಾರರಿಗೆ ‘ಓಂ ಸರ್ಟಿಫಿಕೆಟ್’ ನೀಡಲಾಗಿದೆ. ಹಾಗೆಯೇ ಈ ಪ್ರಮಾಣಪತ್ರವನ್ನು ದೇಶದಾದ್ಯಂತದ ದೇವಸ್ಥಾನಗಳ ಪರಿಸರದಲ್ಲಿ ಅಂಗಡಿಕಾರರಿಗೆ ಅಳವಡಿಸಲು ಪ್ರಯತ್ನಿಸಲಾಗುವುದು.
ಭಾರತ ಸರಕಾರದ ಭೂಮಿಯನ್ನು ವಕ್ಫಗೆ ನೀಡುವುದು ಇದು ಕಾನೂನುಬಾಹಿರವಾಗಿರುವುದರಿಂದ ವಕ್ಫ್ ಬೋರ್ಡ್ಅನ್ನು ವಿಸರ್ಜಿಸಿ !
ಈ ಸಮಯದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿ ವಿಷ್ಣು ಜೈನ್ ಇವರು, ಹಿಂದೂಗಳ ಅನೇಕ ಪ್ರಾಚೀನ ದೇವಸ್ಥಾನಗಳು ಭಾರತೀಯ ಪುರಾತತ್ತ್ವ ಇಲಾಖೆ ನಿಯಂತ್ರಣದಲ್ಲಿವೆ; ಆದರೆ ಪುರಾತತ್ತ್ವ ಇಲಾಖೆಯ ದುರ್ಲಕ್ಷದಿಂದಾಗಿ ಈ ದೇವಸ್ಥಾನಗಳು ಜೀರ್ಣಗೊಂಡಿವೆ. ಆ ದೇವಸ್ಥಾನಗಳು ಜೀರ್ಣೋದ್ಧಾರವಾಗದೇ ಕೊನೆಯ ಹಂತದಲ್ಲಿವೆ. ವಾಸ್ತವದಲ್ಲಿ ಈ ದೇವಸ್ಥಾನಗಳು ಹಿಂದೂಗಳು ಅಮೂಲ್ಯ ಸಂಪತ್ತು ಆಗಿರುವುದರಿಂದ ಕೇಂದ್ರ ಸರಕಾರವು ಅವುಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರವನ್ನು ಮಾಡಬೇಕು, ಎಂದು ನಮ್ಮ ಬೇಡಿಕೆ ಇದೆ.
ದೇಶದ ವಿಭಜನೆಯಾದ ನಂತರ ಭಾರತದ ಅನೇಕ ಮುಸಲ್ಮಾನರು ತಮ್ಮ ಸಾವಿರಾರು ಎಕರೆ ಭೂಮಿ ಮತ್ತು ಸಂಪತ್ತು ಬಿಟ್ಟು ಪಾಕಿಸ್ತಾನಕ್ಕೆ ಹೋದರು. ಅವರ ಈ ಸಂಪತ್ತನ್ನು ಇವ್ಹ್ಯಕ್ಯು ಪ್ರಾಪರ್ಟಿ ಆಕ್ಟ್, 1950 ಕ್ಕನುಸಾರ ಕೇಂದ್ರ ಸರಕಾರವು ತನ್ನ ನಿಯಂತ್ರಣಕ್ಕೆ ತೆಗೆದುಕೊಳ್ಳಬೇಕಾಗಿತ್ತು; ಆದರೆ ಆಗಿನ ಕಾಂಗ್ರೆಸ್ ಸರಕಾರವು ಈ ಎಲ್ಲ ಸಂಪತ್ತನ್ನು ವಕ್ಫ್ಗೆ ನೀಡಿ ಅವರ ‘ವಕ್ಫ್ ಬೊರ್ಡ್’ ಸ್ಥಾಪಿಸಿತು. ಆದುದರಿಂದ ಅವರ ಈ ಕೃತಿ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ. ವಾಸ್ತವದಲ್ಲಿ ಆ ಭೂತಿ ಪಾಕಿಸ್ತಾನದಲ್ಲಿ ತಮ್ಮ ಸಂಪತ್ತನ್ನು ಬಿಟ್ಟು ಬಂದ ಹಿಂದೂಗಳಿಗೆ ನೀಡುವುದು ಆವಶ್ಯಕವಾಗಿತ್ತು; ಆದರೆ ಈಗ ‘ವಕ್ಫ್ ಬೊರ್ಡ್’ ಪ್ರಸ್ತುತ ಭೂಮತಿಯನ್ನು ಸರಕಾರ ಮತ್ತು ಖಾಸಗಿ ಜನರಿಗೆ ಬಾಡಿಗೆಯ ಕರಾರಿನ ಮೇಲೆ ನೀಡಿ ಕೋಟ್ಯಾಂತರ ರೂಪಾಯಿಗಳನ್ನು ಗಳಿಸುತ್ತಿದೆ, ಇದು ತಪ್ಪಾಗಿದೆ. ಸರಕಾರದ ಜಾಗವನ್ನು ಪಡೆದು ಅದೇ ಜಾಗಕ್ಕಾಗಿ ಸರಕಾರದಿಂದ ಬಾಡಿಗೆ ಪಡೆಯುವುದು ಇದು ಕಾನೂನುಬಾಹೀರವಾಗಿದೆ. ಆದುದರಿಮದ ಈ ವಕ್ಫ್ ಬೋರ್ಡ್ನ್ನು ವಿಸರ್ಜಿಸಬೇಕ, ಎಂದು ನ್ಯಾಯವಾದಿ ಜೈನ್ ಇವರು ಹೇಳಿದರು.
ಈ ಸಮಯದಲ್ಲಿ ‘ ಗೋಮಂತಕ ಮಂದಿರ ಮಹಾಸಂಘದ’ ಶ್ರೀ ಜಯೇಶ ಥಳಿ ಇವರು ಮುಂದೆ ಮಾತನಾಡುತ್ತಾ, ನಾವು ಮಂದಿರ ಮಹಾಸಂಘದ ವತಿಯಿಂದ ಗೋವಾದ ದೇವಸ್ಥಾನಗಳ ಜಾತ್ರೋತ್ಸವದಲ್ಲಿ ‘ಫಾಸ್ಟಫುಡ್’ ಮತ್ತು ಪ್ಲಾಸ್ಟಿಕ್ ಚೀಲಗಳ ವಿರುದ್ಧ ಅಭಿಯಾನವನ್ನು ನಡೆಸಿದ್ದೇವೆ. ಅದಕ್ಕೆ ಒಳ್ಳೆಯ ಬೆಂಬಲ ಸಿಕ್ಕಿದೆ. ಈಗ ನಾವು ಗೋವಾದಲ್ಲಿನ ಎಲ್ಲ ಮಂದಿರಗಳ ಪರಿಸರದಲ್ಲಿ ಹಿಂದು ಅಂಗಡಿಕಾರರಿಗೆ ‘ಓಂ ಸರ್ಟಿಫಿಕೆಟ್’ ಆರಂಭಿಸುವ ಬಗ್ಗೆ ಹೇಳಲಿದ್ದೇವೆ. ಇದರಿಂದ ಬರುವ ಭಕ್ತರಿಗೆ ಶುದ್ಧ ಸಾತ್ತ್ವಿಕ ಪ್ರಸಾದ ದೊರಕುವುದು.