‘ ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ ‘
ಟಿ. ರಾಜಾಸಿಂಹ, ಪ್ರಖರ ಹಿಂದುತ್ವನಿಷ್ಠ ಶಾಸಕರು
ಇಂದು, ಅನೇಕ ಸಾರ್ವಜನಿಕ ಪ್ರತಿನಿಧಿಗಳು ಚುನಾಯಿತರಾಗುವ ಮೊದಲು ಹಿಂದುತ್ವನಿಷ್ಠರಂತೆ ವರ್ತಿಸುತ್ತಾರೆ; ಆದರೆ ಅಧಿಕಾರದ ಕುರ್ಚಿ ಸಿಕ್ಕಿದ ತಕ್ಷಣ ಅವರು ಜಾತ್ಯಾತೀತರಾಗುತ್ತಾರೆ. ಇಂತಹ ಜನಪ್ರತಿನಿಧಿಗಳು ಹಿಂದೂರಾಷ್ಟ್ರಕ್ಕಾಗಿ ಅಥವಾ ಹಿಂದುತ್ವಕ್ಕಾಗಿ ಏನನ್ನೂ ಮಾಡುವುದಿಲ್ಲ. ಜಾತ್ಯತೀತ ನಾಯಕರು ಹಿಂದೂ ರಾಷ್ಟ್ರದ ಬೇಡಿಕೆಗೆ ಖಂಡಿತವಾಗಿಯೂ ವಿರೋಧ ಮಾಡುವವರೇ ಇದ್ದಾರೆ. ಆದ್ದರಿಂದ, ಸಂಸತ್ತಿನಲ್ಲಿ ಹಿಂದೂ ರಾಷ್ಟ್ರಕ್ಕಾಗಿ ಒತ್ತಾಯಿಸುವ ಕನಿಷ್ಠ 50 ಹಿಂದುತ್ವನಿಷ್ಠ ಸಂಸದರನ್ನು ಚುನಾಯಿಸುವುದು ಅವಶ್ಯಕವಾಗಿದೆ ಎಂದು ತೆಲಂಗಾಣ ರಾಜ್ಯದ ಗೋಶಾಮಹಲ ಮತಕ್ಷೇತ್ರದ ಪ್ರಖರ ಹಿಂದುತ್ವನಿಷ್ಠ ಶಾಸಕ ಶ್ರೀ.ಟಿ.ರಾಜಾಸಿಂಹ ಇವರು ಕರೆ ನೀಡಿದರು. ಅವರು ಗೋವಾದಲ್ಲಿ ನಡೆದ ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ ‘ಹಿಂದೂ ರಾಷ್ಟ್ರಕ್ಕಾಗಿ ಸರ್ವಸ್ವದ ತ್ಯಾಗ ಆವಶ್ಯಕ’ ಎಂಬ ವಿಷಯದ ಕುರಿತು ಮಾತನಾಡುತ್ತಿದ್ದರು.
ಶಾಸಕ ಶ್ರೀ. ಟಿ. ರಾಜಾಸಿಂಗ್ ಅವರು ತಮ್ಮ ಮಾತನ್ನು ಮುಂದುವರಿಸಿ, ತೆಲಂಗಾಣದ ಹಲವು ಜಿಲ್ಲೆಗಳು ಅಲ್ಪಸಂಖ್ಯಾತ ಬಾಹುಳ್ಯವಿರುವ ಕ್ಷೇತ್ರಗಳಾಗಿವೆ; ಆದರೆ ಶ್ರೀರಾಮ ನವಮಿಯಂದು ಮಾತ್ರ ಲಕ್ಷಗಟ್ಟಲೆ ಹಿಂದೂಗಳು ಕೇಸರಿ ಧ್ವಜವನ್ನು ಹಿಡಿದು ಬರುತ್ತಾರೆ. ಹೀಗಾಗಿ ಅಲ್ಲಿನ ಮುಖ್ಯಮಂತ್ರಿಗಳಿಗೂ ನಮ್ಮ ವಿಚಾರ ಮಾಡಬೇಕಾಗುತ್ತದೆ. ಭಾರತ ಸ್ವತಂತ್ರವಾದಾಗಿನಿಂದ ದೇಶವನ್ನು ಇಸ್ಲಾಮೀಕರಣಗೊಳಿಸುವ ಷಡ್ಯಂತ್ರ ನಡೆಯುತ್ತಿದೆ. ಆಡಳಿತದಲ್ಲಿರುವ ಹಿರಿಯ ಅಧಿಕಾರಿಗಳು ಮತ್ತು ನಾಯಕರು ಹಿಂದುತ್ವದ ವಿರುದ್ಧವಾಗಿದ್ದಾರೆ. ಹೀಗಾಗಿ ಇವರಿಂದ ಹಿಂದುತ್ವನಿಷ್ಠರಿಗೆ ತೊಂದರೆಯಾಗುತ್ತಿದೆ. ಇದಕ್ಕೆ ತಕ್ಕ ಉತ್ತರ ನೀಡಲು ಹಿಂದುತ್ವನಿಷ್ಠ ಯುವಕರಿಗೆ ಉತ್ತಮ ಶಿಕ್ಷಣವನ್ನು ನೀಡಿ, ಉನ್ನತ ಹುದ್ದೆಗಳಿಗೆ ತಲುಪಲು ಸಹಾಯ ಮಾಡಿರಿ. ಇದರಿಂದ ಅವರು ಹಿಂದೂ ರಾಷ್ಟ್ರದ ಸ್ಥಾಪನೆಗೆ ಕೊಡುಗೆ ನೀಡಬಹುದು. ಮುಂಬರುವ ಕಾಲ ಬಹಳ ಕಠಿಣವಾಗಿದೆ. ಹಿಂದೂ ರಾಷ್ಟ್ರಕ್ಕಾಗಿ ಧಾರ್ಮಿಕ ಕಾರ್ಯಗಳನ್ನು ಮಾಡುವುದಿದ್ದರೆ, ಭಯಪಡಬಾರದು. ಸಂತರು, ಸಾಧನೆಯಿಂದ ವಾತಾವರಣವನ್ನು ಬದಲಾಯಿಸಬಹುದು. ಇದರಿಂದ ಅಖಂಡ ಹಿಂದೂ ರಾಷ್ಟ್ರಕ್ಕಾಗಿ ಸಾಧನೆ ಮಾಡುವುದು ಆವಶ್ಯಕವಾಗಿದೆ ಎಂದರು.
ಅಧಿವೇಶನದಲ್ಲಿ ಸಹಭಾಗಿಯಾದ ಹಿಂದುತ್ವನಿಷ್ಠರು