ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ವವದ ಪತ್ರಿಕಾ ಪ್ರಕಟಣೆ !
ನ್ಯಾಯವಾದಿ ವಿನೀತ ಜಿಂದಾಲ್ , ಉಚ್ಚ ಮತ್ತು ಸರ್ವೋಚ್ಚ ನ್ಯಾಯಾಲಯ
ಭಾರತದಲ್ಲಿ ಕ್ರಿಕೆಟ್ ಒಂದು ಆಟವೆಂದು ಆಡುತ್ತಾರೆ, ಆದರೆ ಪಾಕಿಸ್ತಾನ್-ಭಾರತ ಪಂದ್ಯ ಇದು ಪಾಕಿಸ್ತಾನಿಗಳಿಗೆ ಯುದ್ಧದಂತಾಗಿರುತ್ತದೆ. ಪಾಕಿಸ್ತಾನದ ಮಾಜಿ ಕ್ರಿಕೆಟ ಕ್ಯಾಪ್ಟನ್ ಮತ್ತು ಮಾಜಿ ಪ್ರಧಾನಿ ಇಮ್ರಾನ್ ಖಾನ್ ಇವರು, `ಭಾರತಕ್ಕಾಗಿ ಕ್ರಿಕೆಟ್ ಆಟವಾಗಿರಬಹುದು; ಆದರೆ ನಮಗಾಗಿ ಅದು ಜಿಹಾದ್ ಆಗಿದೆ’, ಎಂದಿದ್ದರು. ಇದರಿಂದ ಜಗತ್ತಿನಲ್ಲಿ `ಕ್ರಿಕೆಟ್ ಜಿಹಾದ್’ ಅಸ್ತಿತ್ವದಲ್ಲಿ ಇದೆ, ಎಂದು ಉಚ್ಚ ನ್ಯಾಯಾಲಯ ಮತ್ತು ಸರ್ವೋಚ್ಚ ನ್ಯಾಯಾಲಯಗಳ ನ್ಯಾಯವಾದಿ ವಿನೀತ ಜಿಂದಾಲ್ ಇವರು ‘ವೈಶ್ವಿಕ ಹಿಂದೂ ರಾಷ್ಟ್ರ ಮಹೋತ್ಸವ’ದಲ್ಲಿ , `ಕ್ರಿಕೆಟ್ ಜಿಹಾದ’ ವಿರುದ್ಧ ಮಾಡಿರುವ ನ್ಯಾಯಾಂಗ ಕಾರ್ಯ’, ಈ ವಿಷಯದ ಬಗ್ಗೆ ಮಾತನಾಡುವಾಗ ಹೇಳಿದರು.
`ಕ್ರಿಕೆಟ್ ಜಿಹಾದ್’ಅನ್ನು ಇನ್ನಷ್ಟು ಸ್ಪಷ್ಟ ಪಡಿಸಿದ ವಿನೀತ ಜಿಂದಾಲ್ ಇವರು, “೧೯೭೮ ರಲ್ಲಿ ಭಾರತ-ಪಾಕಿಸ್ತಾನದ ನಡುವೆ ನಡೆದ ಹಾಕಿ ಪಂದ್ಯದಲ್ಲಿ ಪಾಕಿಸ್ತಾನವು ಗೆದ್ದ ನಂತರ ಅಲ್ಲಿಯ ಆಟಗಾರರು ಮೈದಾನದಲ್ಲಿ ಸಾಮೂಹಿಕ ನಮಾಜು ಪಠಣ ಮಾಡಿದ್ದರು ಮತ್ತು `ನಾವು ಹಿಂದೂಗಳನ್ನು ಸೋಲಿಸಿದ್ದೇವೆ’, ಎಂದು ಹೇಳಿದ್ದರು. ಇತ್ತೀಚಿಗೆ ಪಾಕಿಸ್ತಾನದ ಓರ್ವ ಬ್ಯಾಟ್ಸ್ಮನ್ ಅವನ ಶತಕ ಪ್ಯಾಲೆಸ್ಟೈನ್.ಗೆ ಅರ್ಪಿಸಿದ್ದನು ಹಾಗೂ ಹಿಂದೆ ವೆಸ್ಟ್ ಇಂಡೀಸ್ ನ ಜನಪ್ರಿಯ ಬ್ಯಾಟ್ಸ್ಮನ್ ಬ್ರೈನ್ ಲಾರಾ ಇವರಿಗೆ ಪಾಕಿಸ್ತಾನದ ಆಟಗಾರರು ಇಸ್ಲಾಂ ಸ್ವೀಕರಿಸಲು ಹೇಳಿದ್ದರು. ಈ ರೀತಿ ಪಾಕಿಸ್ತಾನವು ನಿರಂತರ ಕ್ರಿಕೇಟ್ ಜಿಹಾದಿಗೆ ಪ್ರೋತ್ಸಾಹ ನೀಡುತ್ತಿದೆ. ಕ್ರಿಕೇಟ್ ಎಷ್ಟು ವ್ಯಾವಹಾರೀಕರಣವಾಗಿದೆ ಎಂದರೆ, ಈ ಜಿಹಾದನ್ನು ಅಂತರಾಷ್ಟ್ರೀಯ ಕ್ರಿಕೆಟ್ ಸಂಘಟನೆ ಸಂಪೂರ್ಣವಾಗಿ ನಿರ್ಲಕ್ಷಿಸುತ್ತಿದೆ. ಈ ಜಿಹಾದ್ ನಿಲ್ಲಿಸುವುದಕ್ಕಾಗಿ ನಾನು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಮತ್ತು ಅಂತರಾಷ್ಟ್ರೀಯ ಕ್ರಿಕೆಟ್ ಸಂಘಟನೆ ಜೊತೆಗೆ ಪತ್ರ ವ್ಯವಹಾರ ನಡೆಸಿದ್ದೇನೆ’ ಎಂದು ಹೇಳಿದರು.
೨೦೨೩ ರಲ್ಲಿ ವಿಶ್ವಕಪ್ ಪಂದ್ಯದ ವೇಳೆ ಪಾಕಿಸ್ತಾನದ ಆಂಕರ್ ಜೈನಬ್ ಅಬ್ಬಾಸ್ ಭಾರತಕ್ಕೆ ಬಂದಿದ್ದಳು. ಆ ಸಮಯದಲ್ಲಿ ಆಕೆ ಹಿಂದೂಗಳ ದೇವತೆಗಳು ಮತ್ತು ಸಚಿನ್ ತೆಂಡೂಲ್ಕರ್ ಇವರ ವಿರುದ್ಧ ಅವಮಾನಕಾರಿಯಾಗಿ ಟೀಕೆ ಮಾಡಿದ್ದಳು. ಅದರ ವಿರುದ್ಧ ನಾನು ದೆಹಲಿಯಲ್ಲಿ ಸೈಬರ್ ದೂರು ದಾಖಲಿಸಿದೆ. ಅನಂತರ ಜೈನಬ್ ಹೆದರಿ ದುಬೈಗೆ ಪಲಾಯನ ಮಾಡಿದಳು. ಆ ಸಮಯದಲ್ಲಿ ಓರ್ವ ಕ್ರಿಕೆಟ್ ಆಟಗಾರನು ಮೈದಾನದಲ್ಲಿ ನಮಾಜು ಪಠಣ ಮಾಡಿದ್ದನು. ಚಪ್ಪಲಿ ಧರಿಸಿ ನಮಾಜು ಪಠಣ ಮಾಡುವುದು ಇಸ್ಲಾಂ ವಿರೋಧಿ ಆಗಿದ್ದರೂ ಕೂಡ ಅವನ ಜನರು ಇದನ್ನು ನಿರ್ಲಕ್ಷಿಸಿದರು. ಇದರಿಂದ ಮೈದಾನದಲ್ಲಿ ನಮಾಜು ಪಠಣ ಮಾಡುವುದರ ಹಿಂದಿನ ಉದ್ದೇಶ ಇಸ್ಲಾಮಿನ ಪ್ರಚಾರ ಮಾಡುವುದೇ ಆಗಿದೆ’ ಎಂದು ನ್ಯಾಯವಾದಿ ವಿನೀತ ಜಿಂದಾಲ್ ಇವರು ಹೇಳಿದರು.
ಅಧಿವೇಶನದಲ್ಲಿ ಸಹಭಾಗಿಯಾದ ಹಿಂದುತ್ವನಿಷ್ಠರು