Menu Close

ಬೆಂಗಳೂರು ಸೇರಿದಂತೆ ದೇಶದ 70 ಕ್ಕೂ ಹೆಚ್ಚು ಕಡೆಗಳಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ !

ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ ! – ಶ್ರೀ. ಮೋಹನ್ ಗೌಡ, ರಾಜ್ಯ ವಕ್ತಾರರು, ಹಿಂದೂ ಜನಜಾಗೃತಿ ಸಮಿತಿ

ಬೆಂಗಳೂರು : `ರಾಮರಾಜ್ಯಕ್ಕಾಗಿ ಸಾಧನೆ ಮಾಡುವುದರ ಜೊತೆಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ’ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ವಕ್ತಾರರಾದ ಶ್ರೀ. ಮೋಹನ ಗೌಡ ಇವರು ಕರೆ ನೀಡಿದ್ದಾರೆ. ಅವರು ಸಮಿತಿಯ ವತಿಯಿಂದ ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್ ನಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. ಸಮಿತಿಯಿಂದ ದಿನಾಂಕ 21, ಜುಲೈ 2024, ಭಾನುವಾರ ಬಸವನಗುಡಿಯ ಭವಾನಿ ಕಲ್ಯಾಣ ಮಂಟಪ, ಯಲಹಂಕದ ಆರ್ ವಿ ಕಲ್ಯಾಣ ಮಂಟಪ ಹಾಗೂ ಚಂದಾಪುರದ ಯಾರಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಸೇರಿದಂತೆ ದೇಶದಾದ್ಯಂತ 71 ಕ್ಕೂ ಅಧಿಕ ಕಡೆಗಳಲ್ಲಿ ಗುರುಪೂರ್ಣಿಮಾ ಮಹೋತ್ಸವವು ಸಂಪನ್ನವಾಯಿತು. 600 ಕ್ಕೂ ಅಧಿಕ ಜನರು ಈ ಕಾರ್ಯಕ್ರಮದ ಲಾಭ ಪಡೆದರು.

ಶ್ರೀ. ಮೋಹನ ಗೌಡ ಇವರು ಮುಂದೆ ಮಾತನಾಡಿ, `ವೈಯಕ್ತಿಕ ಜೀವನದಲ್ಲಿ ಆಧ್ಯಾತ್ಮಿಕ ಸಾಧನೆಯಿಂದ ಅಂತರಂಗದಲ್ಲಿ ರಾಮರಾಜ್ಯದ ಸ್ಥಾಪನೆ ಮಾಡಬಹುದು; ಆದರೆ ಸಾಮಾಜಿಕ ಮತ್ತು ರಾಷ್ಟ್ರೀಯ ಜೀವನದಲ್ಲಿ ರಾಮರಾಜ್ಯದ ಸ್ಥಾಪನೆಗಾಗಿ ನಾವು ಕರ್ತವ್ಯನಿಷ್ಠರಾಗಿ ನಿಭಾಯಿಸುವುದರೊಂದಿಗೆ ಭ್ರಷ್ಟಾಚಾರ, ಅನೈತಿಕತೆ ಮತ್ತು ಅರಾಜಕತೆಯ ವಿರುದ್ಧ ಹೋರಾಡಬೇಕಿದೆ. ನಮ್ಮ ಆಚಾರ-ವಿಚಾರಗಳು ಹಿಂದೂ ಸಂಸ್ಕೃತಿಗನುಸಾರ ಇರಬೇಕು. ‘ಹಲೋ’ ಬದಲಾಗಿ ‘ನಮಸ್ಕಾರ’ ಅಥವಾ ‘ರಾಮ ರಾಮ’ ಹೇಳಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ; ‘ಟಿವಿ’ಯಲ್ಲಿ ಧಾರಾವಾಹಿ ನೋಡದೆ, ‘ಕೀರ್ತನೆ-ಭಜನೆ’ ನೋಡಬೇಕು, ಇದು ನಮ್ಮ ಸಂಸ್ಕೃತಿಯಾಗಿದೆ, ಯಾರೋ ನಟನಲ್ಲ, ‘ರಾಮ-ಕೃಷ್ಣ’ ನಮ್ಮ ಆದರ್ಶವಾಗಿದ್ದಾರೆ. ನಮ್ಮ ನಿತ್ಯ ವ್ಯವಹಾರದಲ್ಲಿ ನಮ್ಮ ಸಂಸ್ಕೃತಿಯ ರಕ್ಷಣೆ ಮತ್ತು ಪಾಲನೆ ಮಾಡಬೇಕು ಎಂದು ಕರೆ ನೀಡಿದರು.

ಈ ಮಹೋತ್ಸವದಲ್ಲಿ ರಾಷ್ಟ್ರ ಧರ್ಮ ಸಂಘಟನೆಯ ಸಂಸ್ಥಾಪಕರಾದ ಶ್ರೀ. ಸಂತೋಷ ಕೆಂಚಾಂಬ, ಅಖಿಲ ಭಾರತ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ. ಬಿ.ಎನ್ ಮಹೇಶ್, ಆನೇಕಲ್ ನ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸೋಮೇಶ್ ರೆಡ್ಡಿ ಹಾಗೂ ರಾಜರಾಜೇಶ್ವರಿನಗರದ ಶ್ರೀ ರಾಜರಾಜೇಶ್ವರಿ ದೇವಸ್ಥಾನದ ಟ್ರಸ್ಟಿಗಳಾದ ಶ್ರೀ. ಶಶಾಂಕ ಆಚಾರ್ ಇವರೂ ಭಾಗಿಯಾಗಿದ್ದರು. ಈ ದಿನ ಬೆಳಿಗ್ಗೆ ಶ್ರೀ ವ್ಯಾಸ ಪೂಜೆ ಮತ್ತು ಪರಮಪೂಜ್ಯ ಭಕ್ತರಾಜ ಮಹಾರಾಜರ ಪ್ರತಿಮೆಯ ಪೂಜೆ ನೆರವೇರಿಸಲಾಯಿತು.

ರಾಷ್ಟ್ರಧರ್ಮ ಸಂಘಟನೆಯ ಶ್ರೀ. ಸಂತೋಷ್ ಕೆಂಚಾಂಬ ಇವರು ಮಾತನಾಡಿ, `ಇಂದಿನ ಶಿಕ್ಷಣ ವ್ಯವಸ್ಥೆಯು ಕೇವಲ ಆರ್ಥಿಕ ಸಮೃದ್ಧಿಯ ಮೂಲ ಉದ್ದೇಶದಿಂದ ಕಾರ್ಯನಿರತವಾಗಿದೆ. ನಮ್ಮ ಭಾರತ ದೇಶ ವಿಶ್ವಗುರು ಆಗಬೇಕಾದರೆ ಗುರುಗಳ ಪರಿಕಲ್ಪನೆ ಬಹಳ ಮುಖ್ಯವಾದದ್ದು. ಭಾರತದಲ್ಲಿ ಗುರು ಶಿಷ್ಯ ಪರಂಪರೆ ಇರುವುದರಿಂದ ಹಿಂದೆ ಅನೇಕ ವಿಶ್ವವಿದ್ಯಾಲಯಗಳು ಇದ್ದವು ಹಾಗೂ ವಿದೇಶಗಳಿಂದ ಭಾರತಕ್ಕೆ ವಿಧ್ಯಾಭ್ಯಾಸಕ್ಕಾಗಿ ಬರುತ್ತಿದ್ದರು, ಅವರ ಸೆಳೆತಕ್ಕೆ ಗುರುಶಿಷ್ಯ ಪರಂಪರೆ ಕಾರಣವಾಗಿತ್ತು. ಇಂದು ಗುರುಗಳ ಮಾರ್ಗದರ್ಶನ ಇಲ್ಲದ ಕಾರಣ ಎಲ್ಲಾ ಕ್ಷೇತ್ರಗಳಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ. ವೈಯಕ್ತಿಕ, ಸಾಮಾಜಿಕ, ದೇಶದ ಹಾಗೂ ವಿಶ್ವದ ಅಭಿವೃದ್ದಿಗಾಗಿ ಗುರುಗಳ ಮಾರ್ಗದರ್ಶನದ ಅತ್ಯವಶ್ಯಕವಾಗಿದೆ’ ಎಂದರು. ವಿಶ್ವದಾದ್ಯಂತದ ಜನತೆಗೆ ಗುರುಪೂರ್ಣಿಮೆಯ ಲಾಭವಾಗಬೇಕೆಂದು ಸಮಿತಿಯು ಗುರುಪೂರ್ಣಿಮಾ ಮಹೋತ್ಸವದ ಲೈವ್ ಪ್ರಸಾರವನ್ನೂ ಮಾಡಿದೆ. ಕಾರಣಾಂತರಗಳಿಂದ ಯಾರಿಗಾದರೂ ಪ್ರತ್ಯಕ್ಷ ಕಾರ್ಯಕ್ರಮದಲ್ಲಿ ಸಹಭಾಗಿಯಾಗಲು ಅಡಚಣೆಯುಂಟಾಗಿದ್ದಲ್ಲಿ ಸಮಿತಿಯ ಯೂಟ್ಯೂಬ್ ಚಾನೆಲ್ @HJSKarnataka ಗೆ ಭೇಟಿ ನೀಡಿ Recorded Live ವೀಕ್ಷಿಸಬಹುದೆಂದು ಕರೆ ನೀಡಿದೆ.

ಬಸವನಗುಡಿಯ ಭವಾನಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದ ಛಾಯಾಚಿತ್ರಗಳು

ಆನೇಕಲ್ ನ ಶ್ರೀ ಚೌಡೇಶ್ವರಿ ದೇವಸ್ಥಾನದ ಅಧ್ಯಕ್ಷರಾದ ಶ್ರೀ. ಸೋಮೇಶ್ ರೆಡ್ಡಿ

ಚಂದಾಪುರದ ಯಾರಂಡಳ್ಳಿಯ ಸಾಯಿಬಾಬಾ ಯೋಗ ಕೇಂದ್ರದಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದ ಛಾಯಾಚಿತ್ರಗಳು

ಕಾಮಾಕ್ಷಿಪಾಳ್ಯದ ಧನಂಜಯ ಪ್ಯಾಲೇಸ್ ನಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದ ಛಾಯಾಚಿತ್ರಗಳು

ಶ್ರೀ. ಬಿ.ಎನ್ ಮಹೇಶ್ ಕುಮಾರ್ ಇವರನ್ನು ಸತ್ಕರಿಸುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ನಾಗರಾಜ ನಾಯ್ಕ

ಯಲಹಂಕದ ಆರ್.ವಿ ಕಲ್ಯಾಣ ಮಂಟಪದಲ್ಲಿ ಆಯೋಜಿಸಲಾದ ಗುರುಪೂರ್ಣಿಮಾ ಮಹೋತ್ಸವದ ಛಾಯಾಚಿತ್ರಗಳು

Related News