ಮೈಸೂರು: ಗಣೇಶೋತ್ಸವದಲ್ಲಿನ ಪರಿಸರ ಮಾಲಿನ್ಯದ ನೆಪವನ್ನು ಹೇಳಿ ‘ಕೃತಕ ಟ್ಯಾಂಕ್ ಮತ್ತು ‘ಅರಿಶಿನ ಗಣಪತಿ, ಗೋಮಯ ಗಣಪತಿ ’ಎಂಬ ಧರ್ಮಬಾಹಿರ ಹಾಗೂ ಅಯೋಗ್ಯ ಸಂಕಲ್ಪನೆಯನ್ನು ನಡೆಸಿ ಗಣೇಶಮೂರ್ತಿಯ ಘೋರ ಅಪಮಾನ ಮಾಡುವುದನ್ನು ನಿಲ್ಲಿಸಬೇಕೆಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮೈಸೂರು ಮಹಾನಗರಪಾಲಿಕೆಯ ಆಯುಕ್ತರಿಗೆ ಮನವಿ ನೀಡಲಾಯಿತು.ಈ ಸಂದರ್ಭದಲ್ಲಿ ಸಮಿತಿಯ ಕಾರ್ಯಕರ್ತರಾದ ಶ್ರೀ. ಅಶೋಕ್ ಕಪೂರ್, ಶ್ರೀ. ನಗಿನ್, ಶ್ರೀ. ರಮೇಶ್ ಶ್ರೀರಂಗಾಚಾರ್, ಸೌ. ಕಾವ್ಯ ಶ್ರೀ ಪಾಟೀಲ್ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ಶಿವರಾಮ್ ಇವರು ಮಾತನಾಡಿ ಕರ್ನಾಟಕ ಸರ್ಕಾರದ ಪರಿಸರ ಇಲಾಖೆಯು ಜೇಡಿ ಮಣ್ಣಿನಿಂದ ತಯಾರಿಸಿದ ಮೂರ್ತಿಯಿಂದ ಪರಿಸರ ಮಾಲಿನ್ಯವಾಗುತ್ತದೆಯೆಂದು ಅರಿಶಿನ ಗಣೇಶ ಮೂರ್ತಿ ಮಾಡಲು ಜನರಿಗೆ ಕರೆ ನೀಡಿದೆ. ಅದಕ್ಕಾಗಿ ಈ ವರ್ಷ ೧೦ ಲಕ್ಷ ಅರಿಶಿನ ಗಣಪತಿ ಮೂರ್ತಿ ನಿರ್ಮಾಣ ಮಾಡುವ ಅಭಿಯಾನ ಮಾಡುತ್ತಿದೆ. ಇದು ಧರ್ಮಶಾಸ್ತ್ರಕ್ಕೆ ವಿರುದ್ಧವಾಗಿದೆ. ಯಾಕೆಂದರೆ ಶ್ರೀಗಣೇಶನ ತತ್ವಗಳು ಆವೇಮಣ್ಣಿನಿಂದ ಮಾಡಿದ ಮೂರ್ತಿಯಲ್ಲಿ ಸಂಗ್ರಹವಾಗುತ್ತದೆ ಮತ್ತು ಪ್ರಕ್ಷೇಪಣೆಯಾಗುತ್ತದೆ ಹಾಗೂ ಎಲ್ಲಾ ಭಕ್ತರಿಗೆ ಗಣೇಶ ತತ್ವದ ಲಾಭವಾಗುತ್ತದೆ. ಇದರಿಂದ ಭಕ್ತರಿಗೆ ಆಧ್ಯಾತ್ಮಿಕ ಲಾಭವಾಗುತ್ತದೆ. ಇಂದು ಸರ್ಕಾರ ಮತ್ತು ಪರಿಸರವಾದಿಗಳು ವರ್ಷದಲ್ಲಿ ಒಂದು ಸಲ ಜರಗುವ ಗಣೇಶೋತ್ಸವದಿಂದ ಪ್ರದೂಷಣೆಯಾಗುತ್ತದೆ ಹಿಂದೂ ಧರ್ಮಾಚರಣೆಯ ವಿಷಯದಲ್ಲಿ ಮೂಗು ತೋರಿಸುತ್ತದೆ ಹಾಗೂ ಗಣೇಶಮೂರ್ತಿಯನ್ನು ಹರಿಯುವ ನೀರಿನಲ್ಲಿ ಪಾರಂಪರಿಕ ಪದ್ಧತಿಯಲ್ಲಿ ವಿಸರ್ಜಿಸಲು ವಿರೋಧಿಸುತ್ತಾರೆ. ಗಣೇಶಭಕ್ತರು ಕೃತಕ ಟ್ಯಾಂಕ್‌ದಲ್ಲಿ ವಿಸರ್ಜನೆ ಮಾಡಬೇಕಾದ ಪರಿಸ್ಥಿತಿ ಬಂದೆರಗಿದೆ. ಕೃತಕಟ್ಯಾಂಕ್‌ದಲ್ಲಿ ವಿಸರ್ಜಿಸಲಾದ ಗಣೇಶಮೂರ್ತಿಗಳನ್ನು ಪುನಃ ನದಿ, ಸಮುದ್ರ, ಕೆರೆ, ಕಸದ ಡಬ್ಬಿ ಮುಂತಾದ ಅಯೋಗ್ಯ ಕಡೆಗಳಲ್ಲಿಎಸೆಯಲಾಗುತ್ತದೆ. ಹಾಗಾಗಿ ಇದು ಪರಿಸರ ರಕ್ಷಣೆಯ ತೋರಿಕೆಯಾಗಿದೆಯೋ ಅಥವಾ ನಿಜವಾಗಿಯೂ ಪರಿಸರ ರಕ್ಷಣೆಯಾಗಬೇಕು ಎಂಬ ಭೂಮಿಕೆಯು ಆಡಳಿತಕ್ಕಿದೆಯೇ ಎಂಬ ಬಗ್ಗೆ ಸಂದೇಹ ಮೂಡುತ್ತದೆ. ಪಾಲಿಕೆಗಳಗೆ ಕೃತಕ ಟ್ಯಾಂಕ/ ಕೊಳಗಳಲ್ಲಿ ಗಣೇಶಮೂರ್ತಿ ವಿಸರ್ಜಿತಗೊಂಡ ಅಥವಾ ದಾನ ಪಡೆದ ಗಣೇಶಮೂರ್ತಿಗಳು ಮುಂದೆ ಏನಾಗುತ್ತವೆ? ಅದನ್ನು ಎಲ್ಲಿ ವಿಸರ್ಜಿಸಲಾಗುತ್ತದೆ ಇದರ ಬಗ್ಗೆ ಪಾಲಿಕೆಯ ಸಭೆಯಲ್ಲಿ ಏನಾದರೂ ನಿರ್ಧಾರ. ನಿರ್ಣಯಗಳು ಆಗಿವೆಯೇನು? ಎಂಬ ಪ್ರಶ್ನೆಯನ್ನು ನಾವು ಮಾಹಿತಿ ಹಕ್ಕು ಅಧಿಕಾರದ ಅಡಿಯಲ್ಲಿ ವಿಚಾರಿಸಿದಾಗ, ಅದಕ್ಕೆ ಇಲ್ಲ ಎಂಬ ಉತ್ತರವು ಬಂದಿದೆ. ಪರಿಣಾಮವಾಗಿ ಗಣೇಶ ಭಕ್ತರು ವಿಶ್ವಾಸವಿಟ್ಟು ನೀಡಿದ ಗಣೇಶ ಮೂರ್ತಿಯ ಪಾವಿತ್ರ್ಯವನ್ನು ಕಾಪಾಡಿ ವಿಸರ್ಜನೆಯನ್ನು ಮಾಡುವುದು ಅಪೇಕ್ಷಿತವಿದೆ. ಆದರೆ ಹಾಗೆ ಮಾಡದ ಕಾರಣ ಅನೇಕ ಕಡೆಗಳಲ್ಲಿ ಅದರ ಪಾಲನೆಯಾಗುತ್ತಿರುವುದು ಕಾಣಿಸುತ್ತಿಲ್ಲ.
ಹಾಗಾಗಿ ಈ ವಿಷಯದಲ್ಲಿ ನಮ್ಮ ಬೇಡಿಕೆಗಳು ಮುಂದಿನಂತಿವೆ
೧. ಪ್ರತಿವರ್ಷ ಲಕ್ಷ-ಕೋಟಿಗಟ್ಟಲೆ ರೂಪಾಯಿಗಳನ್ನು ಖರ್ಚು ಮಾಡಿ ಕೃತಕ ಕೆರೆಗಳನ್ನು ತಯಾರು ಮಾಡಬಾರದು. ಅದರ ಬದಲು ಮೂರ್ತಿ ವಿಸರ್ಜನೆಯ ವಿಷಯದಲ್ಲಿ ೨೦೧೦ ರಲ್ಲಿ ಕೇಂದ್ರೀಯ ಪ್ರದೂಷಣ ನಿಯಂತ್ರಣ ಮಂಡಳಿಯು ನೀಡಿದ ಸೂಚನೆಗನುಸಾರ ‘ಗಣೇಶಮೂರ್ತಿ ವಿಸರ್ಜನೆಗಾಗಿ ಜಲಾಶಯದಲ್ಲಿ ಅಥವಾ ಕೊಳದಲ್ಲಿ ಒಂದು ಮೂಲೆಯಲ್ಲಿ ಕಬ್ಬಿಣದ ತಂತಿಗಳಿಂದ ಕಟ್ಟಿದ ಬಲೆಗಳಿಂದ ಕಟ್ಟಿದ ಕಲ್ಲಿನ ಗೋಡೆಯನ್ನು ತಯಾರಿಸಿ ಅಲ್ಲಿ ಗಣೇಶಭಕ್ತರಿಗೆ ಗಣೇಶಮೂರ್ತಿಗಳನ್ನು ವಿಸರ್ಜಿಸಲು ಹೇಳಬೇಕು. ಯಾವುದಾದರೊಂದು ತಂತಿಯ ಬಲೆಯ ಛಿದ್ರಗಳಿರುವ ಗೋಡೆಯನ್ನು ಕಟ್ಟಿದರೆ ಅದು ದೀರ್ಘಕಾಲದವರೆಗೆ ಬಾಳ್ವಿಕೆ ಬರುತ್ತದೆ. ಹಾಗೂ ಪ್ರತಿವರ್ಷ ಪಾಲಿಕೆಯ ಲಕ್ಷಗಟ್ಟಲೆ ರೂಪಾಯಿಗಳ ಉಳಿತಾಯವಾಗುತ್ತದೆ.
೨. ಅನಾದಿ ಕಾಲದಿಂದ ನಡೆದು ಬಂದಂತಹ ರೂಢಿ-ಪರಂಪರೆಗನುಸಾರ ನೈಸರ್ಗಿಕ ಜಲಕ್ಷೇತ್ರದಲ್ಲಿ ವಿಸರ್ಜನೆಯನ್ನು ಮಾಡಲು ಆಕ್ಷೇಪಣೆಯನ್ನು ಎತ್ತಬಾರದು.
೩.‘ಪ್ಲಾಸ್ಟರ್ ಆಫ್ ಪಾರಿಸ್’, ರಾಸಾಯನಿಕ ಬಣ್ಣಗಳು, ವಿಘಟನೆಯಾಗದ ವಸ್ತುಗಳ ಬದಲು ಜೇಡಿಮಣ್ಣಿನ ಹಾಗೂ ನೈಸರ್ಗಿಕ ಬಣ್ಣಗಳಿಂದ ತಯಾರಿಸಿದ ಗಣೇಶಮೂರ್ತಿಯನ್ನು ತಯಾರಿಸಲು ಆಡಳಿತವು ಮೂರ್ತಿಕಾರರಿಗೆ ಪ್ರೋತ್ಸಾಹ ನೀಡಬೇಕು ಎಂದು ವಿನಂತಿಸಲಾಯಿತು.