ಬೆಂಗಳೂರು : ವಿಜಯನಗರದ ವಿವೇಕ ಮಂದಿರದಲ್ಲಿ ದಿನಾಂಕ ೦೧.೦೯.೨೦೨೪ ರಂದು ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾದ “ಶೌರ್ಯ ತರಬೇತಿ ಶಿಬಿರ” ಸಂಪನ್ನಗೊಂಡಿತು. ಇದರಲ್ಲಿ ೬೦ಕ್ಕೂ ಅಧಿಕ ಹಿಂದೂ ಯುವತಿಯರು ಶಿಬಿರದಲ್ಲಿ ಪಾಲ್ಗೊಂಡಿದ್ದರು.
ಭಾರತದಾದ್ಯಂತ ಕೆಲವು ವರ್ಷಗಳಿಂದ ಸಮಿತಿಯು ಇಂತಹ ಹಲವಾರು ತರಬೇತಿ ಶಿಬಿರವನ್ನು ಆಯೋಜಿಸುತ್ತಿದ್ದು ಸಾವಿರಾರು ಹಿಂದೂ ಯುವತಿಯರು ಇದರ ಲಾಭವನ್ನು ಪಡೆದುಕೊಳ್ಳುತ್ತಿದ್ದಾರೆ. ಇತ್ತೀಚಿನ ದಿನಗಳಲ್ಲಿ ಚಿಕ್ಕ ಹೆಣ್ಣು ಮಕ್ಕಳಿಂದ ಹಿಡಿದು ವಯಸ್ಸಾದವರ ತನಕ ಅತ್ಯಾಚಾರ, ದೌರ್ಜನ್ಯ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿದ್ದು ಇವರಿಗೆ ರಕ್ಷಣೆಯೇ ಇಲ್ಲದಾಗಿದೆ. ಕೆಲಸದ ಸ್ಥಳದಲ್ಲಿಯೂ ಸಹ ರಕ್ಷಣೆ ಇಲ್ಲದಂತಾಗಿದೆ. ಬೆಂಗಳೂರಿನಲ್ಲಿ ಹಾಡು ಹಗಲೇ ಕಾಲೇಜ್‌ಗೆ ಹೋಗಿರುವ ನೇಹಾ ಹಿರೇಮಠ್ ಎನ್ನುವ ಹುಡುಗಿಯನ್ನು ಕ್ರೂರವಾಗಿ ಹತ್ಯೆ ಮಾಡಲಾಯಿತು, ಕೊಲ್ಕತ್ತಾ ವೈದ್ಯೆಯ ಹತ್ಯೆ ಪ್ರಕರಣ, ಇಂತಹ ನೂರಾರು ಯುವತಿಯರ ಬರ್ಬರವಾದ ಹತ್ಯೆಯ ಪ್ರಕರಣಗಳು ನಡೆದಿದೆ. ಪ್ರತೀ ಬಾರಿ ಹೆಣ್ಣು ಮಕ್ಕಳ ಮೇಲೆ ದೌರ್ಜನ್ಯ ನಡೆದಾಗಲು ಪ್ರತಿಭಟನೆ ಮಾಡುವುದು, ಕ್ಯಾಂಡಲ್ ಹಚ್ಚುವುದರ ಬದಲು ಅಂತಹ ಸಮಯದಲ್ಲಿ ಹೆಣ್ಣುಮಕ್ಕಳು ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವಂತೆ ತರಬೇತಿ ನೀಡಿ ಶೌರ್ಯನಾರಿಯರಾಗಬೇಕು ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿ ಈ ಶೌರ್ಯ ತರಬೇತಿ ಶಿಬಿರ ಆಯೋಜನೆ ಮಾಡಿತ್ತು.
ವೈಶಿಷ್ಟ ಪೂರ್ಣ:
ಯುವತಿಯರಿಗಾಗಿ ಆಯೋಜಿಸಲಾಗಿದ್ದ ಶೌರ್ಯ ತರಬೇತಿ ಶಿಬಿರಕ್ಕೆ ಮುಕ್ತವಾಗಿ ನೋಂದಾಯಿಸಿಕೊಳ್ಳಲು ಸೋಶಿಯಲ್ ಮೀಡಿಯಾದಲ್ಲಿ ಪ್ರಸಾರ ಮಾಡಲಾಗಿತ್ತು. ಇದರಲ್ಲಿ 80ಕ್ಕೂ ಅಧಿಕ ಸಂಖ್ಯೆಯಲ್ಲಿ ಹಿಂದೂ ಯುವತಿಯರು ನೋಂದಾಯಿಸಿಕೊಂಡಿದ್ದರು.
ಈ ಶಿಬಿರದ ಉಪಸ್ಥಿತರಲ್ಲಿ ಅನೇಕರು ವೈದ್ಯರು, ಇಂಜಿನಿಯರ್, ವಕೀಲರು, ಪತ್ರಿಕಾ ವರದಿಗಾರರು ಬಂದಿದ್ದರು.
ಶಿಬಿರಾರ್ಥಿಯಾಗಿ ಬಂದಿದ್ದ ಒಬ್ಬರು ತಮ್ಮ ಮನೆಯ ಸುತ್ತಲೂ ಗೋಡನ್ ಗಳು ಜಾಸ್ತಿ ಇದೆ. ಲಾರಿಗಳು ಆ ಜಾಗದಲ್ಲಿ ಸಾಕಷ್ಟು ಓಡಾಡುತ್ತಿರುತ್ತವೆ. ಹಾಗಾಗಿ ತಂದೆ ಸಂಜೆ 6.00 ಮೇಲೆ ಮನೆಯಿಂದ ಆಚೆ ಹೋಗಲಿಕ್ಕೆ ಬಿಡುವುದಿಲ್ಲ. ಹೊರಗೆ ಹೋಗುವಾಗ ಸಹ ತನ್ನ ಅಣ್ಣನ ಜೊತೆ ಕಳಿಸಿಕೊಡುತ್ತಾರೆ. ಸುತ್ತಮುತ್ತಲಿನ ಪರಿಸರದಲ್ಲಿ ಭಯದ ವಾತಾವರಣವಿದೆ. ತಂದೆಯು ಮಗಳನ್ನು ಈ ಶಿಬಿರಕ್ಕೆ ಕಳುಹಿಸಿ, ತಮ್ಮ ಆತ್ಮರಕ್ಷಣೆ ಕಲೆಯನ್ನು ಕಲಿತು ಸ್ವಾವಲಂಬಿಯಾಗಿ ಇರಲು ಪ್ರೇರಣೆಯನ್ನು ನೀಡಿದರು. ಈ ಶಿಬಿರದ ಮಾಧ್ಯಮದಿಂದ ನನ್ನಲ್ಲಿ ಆತ್ಮವಿಶ್ವಾಸ, ವಿಪರೀತ ಪರಿಸ್ಥಿತಿಯನ್ನು ಎದುರಿಸುವ ಕ್ಷಮತೆ ಹೆಚ್ಚಾಯಿತು` ಎಂದು ಹೇಳಿದರು.