ಹಿಂದೂ ಜನಜಾಗೃತಿ ಸಮಿತಿಯಿಂದ ಬೆಂಗಳೂರಿನಲ್ಲಿ ಸೈನ್ ಪಿಟೀಷನ್ ಯಶಸ್ವಿ ಅಭಿಯಾನ !
ಬೆಂಗಳೂರು : ಕೇಂದ್ರದ ಭಾಜಪ ಸರಕಾರವು ೧೯೯೫ ರ ವಕ್ಫ್ ಬೋರ್ಡ್ ಕಾಯ್ದೆಯಲ್ಲಿ ಬದಲಾವಣೆಯನ್ನು ತರಲು ಮುಂದಾಗಿದ್ದು ‘ವಕ್ಫ್ ತಿದ್ದುಪಡಿ ಮಸೂದೆ ೨೦೨೪ ಜಂಟಿ ಸಂಸದೀಯ ಸಮಿತಿಯನ್ನು ರಚಿಸುವ ಮೂಲಕ ಸಾರ್ವಜನಿಕರು ತಮ್ಮ ಅಭಿಪ್ರಾಯವನ್ನು ತಿಳಿಸಲು ಮನವಿ ಮಾಡಿರುವ ಹಿನ್ನೆಲೆಯಲ್ಲಿ ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದೂ ಸಂಘಟನೆಯೊಂದಿಗೆ ಸಾರ್ವಜನಿಕರಿಂದ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿ ಇ-ಮೇಲ್ ಮೂಲಕ ತಮ್ಮ ಮತ ಸೂಚಿಸುವಂತೆ ಬೆಂಗಳೂರಿನ ವಿಜಯನಗರ, ಚಂದಾಪುರ, ಇನ್ನಿತರ ಕಡೆಗಳಲ್ಲಿ ಇಮೇಲ್ ಕಳುಹಿಸುವ ಅಭಿಯಾನ ಆಯೋಜಿಸಲಾಗಿತ್ತು. ಈ ಅಭಿಯಾನದಲ್ಲಿ ಅನೇಕ ಧರ್ಮಪ್ರೇಮಿಗಳು ಉತ್ಸಾಹದಿಂದ ಭಾಗವಹಿಸಿ ವಕ್ಫ್ ಬೋರ್ಡ್ ನ
ಲ್ಯಾಂಡ್ ಜಿಹಾದ್ ಷಡ್ಯಂತ್ರವನ್ನು ಸಾರ್ವಜನಿಕರಿಗೆ ಮನವರಿಕೆ ಮಾಡಿದರು. ಅಭಿಯಾನಕ್ಕೆ ಸಹಕರಿಸಿದ ಸಾರ್ವಜನಿಕರು ತಮ್ಮ ಬೆಂಬಲವನ್ನು ಸೂಚಿಸಿದರು.
ಹಿಂದೂ ಜನಜಾಗೃತಿ ಸಮಿತಿ ಕಳೆದ ಅನೇಕ ವರ್ಷಗಳಿಂದ ವಕ್ಫ್ ಬೋರ್ಡ್ ನಿಂದ ನಡೆಯುತ್ತಿರುವ ಲ್ಯಾಂಡ್ ಜಿಹಾದ್ ನ ಹಗರಣಗಳನ್ನು ಬಯಲಿಗೆಳೆಯಲು ನಿರಂತರ ಪ್ರಯತ್ನಿಸುತ್ತಿದೆ. ಇದರ ಅಡಿಯಲ್ಲಿ ಅನೇಕ ಜಿಲ್ಲಾಡಳಿತಗಳಿಗೆ ಮನವಿ ನೀಡುವುದು, ಬೆಂಗಳೂರು, ಬೆಳಗಾವಿ ಸೇರಿದಂತೆ ಮಹಾರಾಷ್ಟ್ರದ ಅನೇಕ ಗಡ-ದುರ್ಗಗಳಲ್ಲಿ ವಕ್ಫ್ ಬೋರ್ಡ್ ಅತಿಕ್ರಮಿಸಿಕೊಳ್ಳಲು ಪ್ರಯತ್ನಿಸಿದ್ದ ಜಮೀನುಗಳನ್ನು ತಡೆಯಲು ನಿರಂತರವಾಗಿ ಪ್ರಯತ್ನಿಸುತ್ತಿದೆ.