ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ
ಬೆಂಗಳೂರು : ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಭಕ್ತರ ಶ್ರದ್ಧಾಸ್ಥಾನವಾಗಿರುವ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದಲ್ಲಿನ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬನ್ನು ಬಳಸಲಾಗುತ್ತಿರುವುದು ಅತ್ಯಂತ ಗಂಭೀರ ವಿಷಯ ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಇವರು ಬಹಿರಂಗಪಡಿಸಿದ ನಂತರ ಜಗತ್ತಿನಲ್ಲಿನ ಹಿಂದೂ ಜನಾಂಗದಲ್ಲಿ ತೀವ್ರ ಆಕ್ರೋಶದ ಅಲೆ ಭುಗಿಲೆದ್ದಿದೆ. ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬನ್ನು ಸೇರಿಸುವುದು, ಇದು ಕೇವಲ ಕಲಬೆರಿಕೆ ಅಲ್ಲದೆ ಹಿಂದೂಗಳ ಧರ್ಮಶ್ರದ್ಧೆಯ ಮೇಲೆ ಪ್ರಯತ್ನ ಪೂರ್ವಕವಾಗಿ ಮಾಡಿರುವ ಧಾರ್ಮಿಕ ಆಘಾತವಾಗಿದೆ. ಇದು ಹಿಂದೂಗಳ ಜೊತೆಗೆ ಮಾಡಿರುವ ವಿಶ್ವಾಸ ಘಾತವೇ ಆಗಿದೆ. ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಇವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಇವರು ಮುಖ್ಯಮಂತ್ರಿ ಆಗಿರುವಾಗ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಡ್ಡು ತಯಾರಿಸುವ ಕಾಂಟ್ರಾಕ್ಟ್ ಒಂದು ಕ್ರೈಸ್ತ ಕಂಪನಿಗೆ ನೀಡಿದ್ದರು. ದೇವಸ್ಥಾನದ ಟ್ರಸ್ಟಿ ಸ್ಥಾನದಲ್ಲಿ ಕ್ರೈಸ್ತ ವ್ಯಕ್ತಿಯನ್ನು ನೇಮಿಸಿದ್ದರು. ದೇವಸ್ಥಾನ ಪರಿಸರದಲ್ಲಿ ಕ್ರೈಸ್ತ ಮಿಶಿನರಿಗಳ ಮತಾಂತರಕ್ಕೆ ಪ್ರೋತ್ಸಾಹ ನೀಡಿದ್ದರು ಮುಂತಾದ ಅನೇಕ ಪಾಪ ಕೃತ್ಯಗಳು ಆ ಕಾಲದಲ್ಲಿ ನಡೆದಿದ್ದವು. ಅದರದೇ ಮುಂದುವರೆದ ಭಾಗ ಎಂದರೆ ಈ ಪ್ರಸಾದದ ಲಡ್ಡುವಿನಲ್ಲಿ ಕೊಬ್ಬು ಸೇರಿಸಿ ಹಿಂದೂಗಳ ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ರಚಿಸಲಾಗಿತ್ತು, ಎಂದು ಹಿಂದೂ ಜನಜಾಗೃತಿ ಸಮಿತಿಯ ಬೆಂಗಳೂರು ಜಿಲ್ಲೆಯ ಸಮನ್ವಯಕರಾದ ಶ್ರೀ. ಶರತ್ ಕುಮಾರ್ ಇವರು ಪ್ರತಿಪಾದಿಸಿದ್ದಾರೆ. ಯಾರು ಈ ಮಹಾ ಪಾಪ ಮಾಡಿದ್ದಾರೆ, ಅವರ ಮೇಲೆ ಧಾರ್ಮಿಕ ಭಾವನೆಗೆ ಧಕ್ಕೆ ತಂದಿರುವ ಪ್ರಕರಣದಲ್ಲಿ ದೂರು ದಾಖಲಿಸಿ ಅವರನ್ನು ತಕ್ಷಣ ಬಂದಿಸಬೇಕು, ಎಂದು ಶರತ್ ಕುಮಾರ್ ಇವರು ಆಗ್ರಹಿಸಿದ್ದಾರೆ.
🛕 ಶ್ರೀ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿರುವುದು ಹಿಂದೂಗಳನ್ನು ಧರ್ಮಭ್ರಷ್ಟ ಮಾಡುವ ಷಡ್ಯಂತ್ರ ! – ಹಿಂದೂ ಜನಜಾಗೃತಿ ಸಮಿತಿ
ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಫ್ರೀಡಂ ಪಾರ್ಕ್ ನಲ್ಲಿ ಹಿಂದೂ ರಾಷ್ಟ್ರ ಜಾಗೃತಿ ಆಂದೋಲನ#TirupathiLaddu#tirumalatirupatidevasthanam pic.twitter.com/ePxwsqM1pc
— HJS Karnataka (@HJSKarnataka) September 30, 2024
ಈಗ ಕೇವಲ ಈ ಪ್ರಸಾದದ ಲಡ್ಡುವಿನ ಪ್ರಕರಣದಲ್ಲಿ ಅಷ್ಟೇ ಅಲ್ಲದೆ, ಜಗನ್ ಮೋಹನ್ ರೆಡ್ಡಿ ಸರಕಾರ ಮತ್ತು ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಇವರ ಕಾರ್ಯಕಾಲದಲ್ಲಿ ತಿರುಪತಿ ದೇವಸ್ಥಾನಕ್ಕೆ ಸಂಬಂಧಿತ ತೆಗೆದುಕೊಂಡುರುವ ಎಲ್ಲಾ ನಿರ್ಣಯದ ವಿಸ್ತೃತ ವಿಚಾರಣೆ ನಡೆಸಬೇಕು. ಇದರಲ್ಲಿ ಹಿಂದೂ ಧರ್ಮವಿರೋಧಿ ನಿರ್ಣಯ ತೆಗೆದುಕೊಂಡಿದ್ದರೆ, ಅವು ಎಲ್ಲವೂ ತಕ್ಷಣವೇ ರದ್ದು ಪಡಿಸಬೇಕೆಂದು ಹಿಂದೂ ಜನಜಾಗೃತಿ ಸಮಿತಿ ಆಂಧ್ರಪ್ರದೇಶ ಸರಕಾರಕ್ಕೆ ಆಗ್ರಹಿಸಿದೆ.
ಈ ಪ್ರಕರಣ ಎಂದರೆ ದೇವಸ್ಥಾನ ಸರಕಾರೀಕರಣದಿಂದ ಆಗಿರುವ ಎಲ್ಲಕ್ಕಿಂತ ದೊಡ್ಡ ದುಷ್ಪರಿಣಾಮ ಎಂದು ಹೇಳಬಹುದು. ದೇಶಾದ್ಯಂತದ ಎಲ್ಲಾ ದೇವಸ್ಥಾನದಲ್ಲಿ ಈ ರೀತಿಯ ಧರ್ಮಭ್ರಷ್ಟತೆ ಅಥವಾ ಹಿಂದೂ ಧರ್ಮ ವಿರೋಧಿ ಕೃತಿಗಳು ನಡೆಯುತ್ತಿಲ್ಲ ಅಲ್ಲವೇ? ಇದನ್ನು ಪರಿಶೀಲಿಸುವ ಸಮಯ ಬಂದಿದೆ. ಕೆಲವು ದಿನಗಳ ಹಿಂದೆ ಉತ್ತರ ಪ್ರದೇಶದಲ್ಲಿ ಕಾವಡ ಯಾತ್ರೆಯಲ್ಲಿ ಸಹಭಾಗಿ ಆಗುವ ಭಕ್ತರು ಯಾವ ಹೋಟೆಲ್ ಅಥವಾ ಡಾಬಾದಲ್ಲಿ ತಂಗುತ್ತಿದ್ದರೋ ಅಲ್ಲಿಯ ಭೋಜನದಲ್ಲಿ ಉಗುಳುವುದು, ಮೂತ್ರ ವಿಸರ್ಜನೆ ಮಾಡುವುದು ಮುಂತಾದ ವಿಕೃತಿ ಬೆಳಕಿಗೆ ಬಂದಿದ್ದವು. ಹಾಗೂ ಅನೇಕ ದೇವಸ್ಥಾನದ ಹೊರಗೆ ದೇವರಿಗೆ ಅರ್ಪಿಸುವ ಹೂವು ಮತ್ತು ಹೂವಿನ ಹಾರದ ಮೇಲೆ ಕೂಡ ಉಗುಳು ಹಚ್ಚುವ ಘಟನೆಗಳು ಬಹಿರಂಗವಾಗಿದ್ದವು. ಕೇವಲ ಉಗುಳು ಜಿಹಾದ್ ಅಷ್ಟೇ ಅಲ್ಲದೆ ಈಗ ಪ್ರಸ್ತುತ ಮುಂಬಯಿಯಲ್ಲಿನ ಶ್ರೀಸಿದ್ಧಿವಿನಾಯಕ ದೇವಸ್ಥಾನದಿಂದ ಕೇರಳದವರೆಗಿನ ಅನೇಕ ದೇವಸ್ಥಾನದಲ್ಲಿನ ದೇವರ ಪ್ರಸಾದವನ್ನು ಹಲಾಲ್ ಉತ್ಪಾದನೆಯಿಂದ ತಯಾರಿಸಿರುವ ಘಟನೆಗಳು ಬೆಳಕಿಗೆ ಬಂದಿವೆ. ಧರ್ಮ ಪರಾಯಣ ಹಿಂದೂಗಳು ಇದನ್ನು ಎಂದಿಗೂ ಸಹಿಸಲು ಸಾಧ್ಯವಿಲ್ಲ. ಭಾರತೀಯ ಸಂವಿಧಾನವು ಪ್ರತಿಯೊಬ್ಬರಿಗೂ ಧರ್ಮಾಚರಣೆಯ ಸ್ವಾತಂತ್ರ್ಯ ನೀಡಿದ್ದರೂ ಅದರಲ್ಲಿ ಈ ರೀತಿ ತೊಂದರೆ ತರುವುದು ಗಂಭೀರ ಅಪರಾಧವಾಗಿದೆ. ಹಿಂದೂಗಳ ಧಾರ್ಮಿಕ ಅಧಿಕಾರದ ರಕ್ಷಣೆ ಮಾಡುವುದು ಸರಕಾರದ ಜವಾಬ್ದಾರಿ ಆಗಿದೆ. ದೇವಸ್ಥಾನದಲ್ಲಿ ನೀಡುತ್ತಿರುವ ಪ್ರಸಾದವು ಸಾತ್ವಿಕ, ಶುದ್ಧ, ಪವಿತ್ರ ಇರಲೇಬೇಕು, ಆದರೆ ಅದನ್ನು ತಯಾರಿಸುವುದರಿಂದ ಹಿಡಿದು ವಿತರಣೆ ವ್ಯವಸ್ಥೆಯಲ್ಲಿನ ಪ್ರತಿಯೊಬ್ಬರೂ ಧರ್ಮಪರಾಯಣ ಹಿಂದೂಗಳೇ ಆಗಿರಬೇಕು, ಎಂದು ಆಗ್ರಹಿಸುವ ಸಮಯ ಬಂದಿದೆ. ಇದಕ್ಕಾಗಿ ಹಿಂದೂ ಸಮಾಜವು ಎಚ್ಚರಗೊಂಡು ನಮ್ಮ ದೇವಸ್ಥಾನ ಸಂಸ್ಕೃತಿ, ಭ್ರಷ್ಟ ಆಗದಂತೆ ರಕ್ಷಿಸಬೇಕು’ ಎಂದು ಶರತ್ ಕುಮಾರ್ ಇವರು ಆಗ್ರಹಿಸಿದರು.
👉 Animal fat in #Tirupatiladdu Prasad: A conspiracy to corrupt Hindus!
Hurting religious sentiments won't be tolerated!
– @santoshken Rashtra Dharma Media
🚩 Hindu Rashtra-Jagruti Andolan at Freedom Park, Bengaluru
Demanding immediate arrest & action against the culprits ! pic.twitter.com/T7cC6iQrH2
— HJS Karnataka (@HJSKarnataka) September 30, 2024
ಈ ವೇಳೆ ರಾಷ್ಟ್ರಧರ್ಮ ಸಂಘಟನೆಯ ಶ್ರೀ. ಸಂತೋಷ್ ಕೆಂಚಾಂಬ, ರಾಷ್ಟ್ರೀಯ ಅಸಂಘಟಿತ ಪುರೋಹಿತ ಕಾರ್ಮಿಕ ಪರಿಷತ್‌ನ ಕಾರ್ಯದರ್ಶಿಗಳಾದ ಡಾ. ಮಹೇಶ್ ಕುಮಾರ್ ಬಿ.ಎನ್, ಆಜಾದ್ ಬ್ರಿಗೇಡ್‌ನ ಅಧ್ಯಕ್ಷರಾದ ಶ್ರೀ. ಗಜೇಂದ್ರ ಸಿಂಗ್, ರಾಷ್ಟ್ರೀಯ ಹಿಂದೂ ಪರಿಷತ್‌ನ ಉಪಾಧ್ಯಕ್ಷರಾದ ಶ್ರೀ. ಸುರೇಶ ಗೌಡ, ಹಿಂದೂ ಮುಖಂಡರಾದ ವೆಂಕಟಸ್ವಾಮಿ ರೆಡ್ಡಿ, ಜ್ಯೋತಿ ಗೌಡ ಹಾಗೂ ಹಲವಾರು ಹಿಂದುತ್ವ ನಿಷ್ಠರು, ವೆಂಕಟೇಶ್ವರನ ಭಕ್ತರು ಭಾಗವಹಿಸಿದ್ದರು.
🛕 तिरुपति मंदिर के प्रसाद में पशुओं की चर्बी मिलाना हिंदुओं को भ्रष्ट करने की साजिश है ! – @HinduJagrutiOrg
दोषियों के विरुद्ध कानूनी कार्रवाई की मांग करते हुए बेंगलुरु के फ़्रीडम पार्क में हिंदू राष्ट्र-जागृति आंदोलन।
🗞️ 🗞️ @rpbreakingnews' रिपोर्ट अवश्य पढ़े।#TirupatiLaddu pic.twitter.com/Y6wTbBRG5M
— HJS Karnataka (@HJSKarnataka) September 30, 2024