ಫೌಂಡೇಶನ್ ನ ಕಾರ್ಯಕ್ಕೆ ಸಮಿತಿಯ ಪೂರ್ಣ ಬೆಂಬಲವಿದೆ ! – ಶ್ರೀ. ವಿಜಯ ಕುಮಾರ್, ಹಿಂದೂ ಜನಜಾಗೃತಿ ಸಮಿತಿ
ಉದ್ಘಾಟನೆ ಮಾಡುತ್ತಿರುವ ಹಿಂದೂ ಜನಜಾಗೃತಿ ಸಮಿತಿಯ ಶ್ರೀ. ವಿಜಯ ಕುಮಾರ್
ಭಟ್ಕಳ : ಜಾಲಿ ಗ್ರಾಮದಲ್ಲಿ ಸಮಾಜ ಸೇವೆಗಾಗಿ ಯುವಕರು ಒಗ್ಗೂಡಿರುವುದು ಶ್ಲಾಘನೀಯ, ಸ್ವಾಮಿ ವಿವೇಕಾನಂದ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಆದರ್ಶ ಇಟ್ಟುಕೊಂಡು ನಮ್ಮ ಕಾರ್ಯ ನಡೆಯಬೇಕಿದೆ, 90 ಕ್ಕೂ ಅಧಿಕ ಕಾರ್ಯಕರ್ತರು ಸಮಾಜ ಸೇವೆಗಾಗಿ ಸಕ್ರಿಯರಾಗಿ ಕೈಜೋಡಿಸಿದ್ದಾರೆ. ಭಗವಂತನ ಅಧಿಷ್ಠಾನದೊಂದಿಗೆ ಸಂಸ್ಥೆಯ ಕಾರ್ಯವು ಮುನ್ನಡೆಯಲಿ,ಸಾಮಾಜಿಕ ಕಾರ್ಯದೊಂದಿಗೆ ಧರ್ಮದ ಕಾರ್ಯವನ್ನು ಮಾಡಬೇಕೆಂದು ಕರೆ ನೀಡುತ್ತಾ ಈ ಸಂಘಟನೆಗೆ ಹಿಂದೂ ಜನಜಾಗೃತಿ ಸಮಿತಿಯಿಂದ ಸಂಪೂರ್ಣ ಸಹಕಾರವನ್ನು ಕೊಡುತ್ತೇವೆ ಮತ್ತು ನಾವೂ ನಿಮ್ಮೊಂದಿಗೆ ಇದ್ದೇವೆ ಎಂದು ಸಮಿತಿಯ ಶ್ರೀ. ವಿಜಯ ಕುಮಾರ್ ಇವರು ಭರವಸೆ ನೀಡಿದರು. ಅವರು 14 ಅಕ್ಟೋಬರ್ ಸೋಮವಾರದಂದು ಜಾಲಿಯಲ್ಲಿ ಸ್ವಾಮಿ ವಿವೇಕಾನಂದ ಜನಸ್ಪಂದನ ಫೌಂಡೇಶನ್ ಆಯೋಜಿಸಿದ್ದ ಉದ್ಘಾಟನಾ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು.
ಸಭೆಯಲ್ಲಿ ಉಪಸ್ಥಿತರು
ಶ್ರೀ. ವಿಜಯ್ ಕುಮಾರ್ ಮತ್ತು ಸಂಸ್ಥೆಯ ಇತರ ಗಣ್ಯರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮದ ಉದ್ಘಾಟನೆ ಮಾಡಿದರು. ಕಾರ್ಯಕ್ರಮದಲ್ಲಿ ಫೌಂಡೇಶನ್ ನ ನಾಮಫಲಕವನ್ನು ಅನಾವರಣಗೊಳಿಸಲಾಯಿತು. ನಂತರ ಆನಂದಮಯ ಜೀವನಕ್ಕಾಗಿ ಅಧ್ಯಾತ್ಮ ಮಕ್ಕಳಲ್ಲಿ ಸುಸಂಸ್ಕಾರ ಹೇಗೆ ಮೂಡಿಸಬೇಕು, ಹೆಣ್ಣುಮಕ್ಕಳ ರಕ್ಷಣೆ ಹೇಗೆ ಮಾಡಬೇಕು ಇದರಲ್ಲಿ ಪಾಲಕರ ಪಾತ್ರ ಈ ವಿಚಾರದ ಮಾರ್ಗದರ್ಶನ ಮಾಡಲಾಯಿತ. ಮುಂದೆ ಇಲ್ಲಿ ಪ್ರತಿ ವಾರ ಧರ್ಮದ ಬಗ್ಗೆ ಶಿಕ್ಷಣ ನೀಡಬೇಕೆಂದು ಸಂಘಟಕರು ಬೇಡಿಕೆ ನೀಡಿದರು. ಸಭೆಯಲ್ಲಿ ಸುಮಾರು 250 ಕ್ಕು ಅಧಿಕ ಜಾಲಿಯ ಗ್ರಾಮಸ್ಥರು ಉಪಸ್ಥಿತರಿದ್ದರು
ಭಗವದ್ಗೀತೆಯೊಂದಿಗೆ ಶ್ರೀ. ವಿಜಯ್ ಕುಮಾರ್ ಅವರನ್ನು ಸತ್ಕರಿಸಿದ ಕ್ಷಣ