Menu Close

ಹಿಂದೂ ಜನಜಾಗೃತಿ ಸಮಿತಿಯಿಂದ ದೊಡ್ಡಬಳ್ಳಾಪುರದಲ್ಲಿ ಹಿಂದೂ ರಾಷ್ಟ್ರ-ಜಾಗೃತಿ ಸಭೆ ಸಂಪನ್ನ !

ದೀಪಪ್ರಜ್ವಲನೆ – ಎಡದಿಂದ ಸನಾತನ ಸಂಸ್ಥೆಯ ಸೌ. ಶಾರದಾ ಯೋಗೇಶ್, ಶ್ರೀರಾಮ ಸೇನೆಯ ಬೆಂಗಳೂರು ಗ್ರಾಮಾಂತರ ಗೌರವ ಅಧ್ಯಕ್ಷರಾದ ಶ್ರೀ. ಶ್ರೀನಿವಾಸ ಗುರೂಜಿ, ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ

ದೊಡ್ಡಬಳ್ಳಾಪುರ : ಅಖಂಡ ಭಾರತವನ್ನು ಹಿಂದೂ ರಾಷ್ಟ್ರ ಎಂದು ಘೋಷಿಸಲು ಸ್ವಾತಂತ್ರ್ಯ ಪೂರ್ವದಲ್ಲಿ ಚಿಂತನೆಯಾಗಿತ್ತು, ಆದರೆ ಸ್ವಾತಂತ್ರ್ಯದ ನಂತರ ಭಾರತವನ್ನು ೩ ಭಾಗಗಳಾಗಿ ಧರ್ಮದ ಆಧಾರದ ಮೇಲೆ ವಿಭಜನೆ ಮಾಡಿದರು. ಪಾಕಿಸ್ತಾನ ಮತ್ತು ಬಾಂಗ್ಲಾದೇಶವನ್ನು ಮುಸ್ಲಿಂ ದೇಶಗಳಾಗಿ ವಿಂಗಡಿಸಿದರು ಆದರೆ ಭಾರತವನ್ನು ಜ್ಯಾತ್ಯತೀತ ದೇಶವೆಂದು ಘೋಷಣೆ ಮಾಡಿದರು. ಈಗ ನಾವು ಯಾವ ಸ್ಥಿತಿಗೆ ಬಂದಿದ್ದೇವೆ ಎಂದರೆ ಜಾತಿ ಜಾತಿಗಳ ನಡುವೆ ವೈಷಮ್ಯ ಸೃಷ್ಟಿಸಿ ಜಾತಿಗಳಿಂದ, ಜಾತಿಗಳಿಗಾಗಿ, ಜಾತಿಗಳಿಗೋಸ್ಕರ ನಮ್ಮ ದೇಶವನ್ನು ಆಳುವಂತೆ ಮಾಡಿಕೊಂಡಿದ್ದಾರೆ ಮತ್ತು ಹಿಂದೂ ರಾಷ್ಟ್ರ ಸ್ಥಾಪನೆಗಾಗಿ ಹೋರಾಟ ನಡೆಸಬೇಕೆಂದು ಶ್ರೀರಾಮ ಸೇನೆಯ ಬೆಂಗಳೂರು ಗ್ರಾಮಾಂತರ ಗೌರವ ಅಧ್ಯಕ್ಷರಾದ ಶ್ರೀ. ಶ್ರೀನಿವಾಸ ಗುರೂಜಿ ಅವರು ಪ್ರತಿಪಾದಿಸಿದರು . ಅವರು ದೊಡ್ಡಬಳ್ಳಾಪುರದ ಶ್ರೀರಾಮಾಂಜನೇಯ ಕಲ್ಯಾಣ ಮಂಟಪದಲ್ಲಿ ಹಿಂದೂ ಜನಜಾಗೃತಿ ಸಮಿತಿಯಿಂದ ಆಯೋಜಿಸಲಾದ ಹಿಂದೂ ರಾಷ್ಟ್ರ-ಜಾಗೃತಿ ಸಭೆಯನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಈ ವೇಳೆ ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ ಹಾಗೂ ಸನಾತನ ಸಂಸ್ಥೆಯ ಸೌ. ಶಾರದಾ ಯೋಗೇಶ್ ಸೇರಿದಂತೆ ೧೫೦ ಕ್ಕೂ ಹೆಚ್ಚು ಧರ್ಮಾಭಿಮಾನಿಗಳು ಸಭೆಯಲ್ಲಿ ಉಪಸ್ಥಿತರಿದ್ದರು.

ಹಿಂದೂ ಜನಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕ ಜಿಲ್ಲೆಗಳ ಸಮನ್ವಯಕರಾದ ಶ್ರೀ. ಚಂದ್ರ ಮೊಗವೀರ ಇವರು ಮಾತನಾಡಿ ನಮ್ಮ ಪವಿತ್ರ ಭಾರತ ಭೂಮಿ ಶ್ರೀರಾಮನ ರಾಮರಾಜ್ಯ, ಪಾಂಡವರ ಧರ್ಮರಾಜ್ಯ, ಶಿವಾಜಿ ಮಹಾರಾಜರ ಹಿಂದವಿ ಸ್ವರಾಜ್ಯ ನೋಡಿದೆ ಈಗ ಈ ಭೂಮಿ ಹಿಂದೂರಾಷ್ಟ್ರದ ದಾರಿ ನೋಡುತ್ತಿದೆ ಎಂದರು. ಕ್ರಿಶ್ಚಿನ್‌ನ್ನರಿಗೆ ೧೫೦ ದೇಶ, ಮುಸ್ಲಿಂರಿಗೆ ೫೦ಕ್ಕೂ ಹೆಚ್ಚು ದೇಶ, ಬೌದ್ಧರಿಗೆ ೧೨ ರಾಷ್ಟ್ರಗಳಿದ್ದು ಆದರೆ ೧೦೦ ಕೋಟಿ ಹಿಂದೂಗಳಿಗೆ ಒಂದೇ ಒಂದು ಸಹ ಹಿಂದೂ ರಾಷ್ಟ್ರವಿಲ್ಲ ಅದಕ್ಕಾಗಿ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಿಸಬೇಕೆಂದು ಆಗ್ರಹಿಸಿದರು.

ಶ್ರೀರಾಮ ಸೇನೆಯ ಬೆಂಗಳೂರು ಗ್ರಾಮಾಂತರ ಗೌರವ ಅಧ್ಯಕ್ಷರಾದ ಶ್ರೀ. ಶ್ರೀನಿವಾಸ ಗುರೂಜಿ

ಅವರು ಮಾತನ್ನು ಮುಂದುವರಿಸಿ, ಈ ದೇಶದಲ್ಲಿ ಸರ್ ತನ್ ಸೇ ಜುದಾ , ಭಾರತವನ್ನು ತುಂಡು ತುಂಡು ಮಾಡುತ್ತೇನೆ ಎಂದವರಿಗೆ ಯಾವುದೇ ಕ್ರಮವನ್ನು ಸರಕಾರಗಳು ಕೈಗೊಳ್ಳುವುದಿಲ್ಲ ಆದರೆ ಹಿಂದೂ ಸಂಘಟನೆಗಳು ಜೈ ಶ್ರೀ ರಾಮ್ ಎಂದರೆ ಅವರ ಮೇಲೆ ದೂರುಗಳನ್ನು ಹಾಕುತ್ತಾರೆ. ದೇಶದಲ್ಲಿ ಲವ್ ಜಿಹಾದ್, ಹಲಾಲ್ ಜಿಹಾದ್, ಲ್ಯಾಂಡ್ ಜಿಹಾದ್ ಗಳ ವಿರುದ್ಧ ಹಿಂದುಗಳೆಲ್ಲ ಒಂದಾಗಿ ಹೋರಾಡಬೇಕಾಗಿದೆ. ಕರ್ನಾಟಕದಲ್ಲಿ ೩೪,೦೦೦ ದೇವಸ್ಥಾನಗಳು ಸರಕಾರಗಳು ವಶದಲ್ಲಿದ್ದು ಅದರ ನಿರ್ವಹಣೆಯನ್ನು ಸರಿಯಾಗಿ ನಡೆಸುತ್ತಿಲ್ಲ ಎಂದು ಅವರು ಆಗ್ರಹಿಸಿದರು. ಸಂವಿಧಾನದ ೨೮ ಪರಿಚ್ಚೆದದಲ್ಲಿ ಯಾವುದೇ ಶಿಕ್ಷಣ ಸಂಸ್ಥೆ ಸರಕಾರದಿಂದ ಅನುದಾನ ಪಡೆದು ನಡೆಸುತ್ತಿದ್ದರೆ ಅದು ಧರ್ಮ ಪ್ರಚಾರ ನಡೆಸುವಂತಿಲ್ಲ ಹಾಗೂ ೩೦ ನೆ ಪರಿಚ್ಛೇದ ಅಲ್ಪಸಂಖ್ಯಾತರು ಸರಕಾರದಿಂದ ಅನುದಾನ ಪಡೆದು ಮದರಸ, ಕಾನ್ವೆಂಟ್‌ಗಳನ್ನು ನಡೆಸಬಹುದು ಇದು ಹಿಂದೂಗಳು ನಡೆಸಿದರೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳುತ್ತಾರೆ ಇದರಲ್ಲಿ ಸಮಾನತೆ ಎಲ್ಲಿದೆ ಆದ್ದರಿಂದ ಸಮಾನತೆಯಿಂದ ನೋಡುವ ಹಿಂದೂ ರಾಷ್ಟ್ರ ಬೇಕಾಗಿದೆ. ಈಗಾಗಲೇ ಅನೇಕ ಸಂತ ಮಹಾತ್ಮರು ಭಾರತದಲ್ಲಿ ಶೀಘ್ರ ಹಿಂದೂ ರಾಷ್ಟ್ರದ ಉದಯವಾಗಲಿದೆ ಎಂದು ತಮ್ಮ ಭವಿಷ್ಯವಾಣಿಯಲ್ಲಿ ನುಡಿದಿದ್ದಾರೆ, ಅದರಂತೆ ೨೦೨೫ ರ ಯುಗಾದಿಗೆ ನಾವು ಭಾರತದಲ್ಲಿ ’ಹಿಂದೂ ರಾಷ್ಟ್ರ’ದ ಧ್ವಜವನ್ನು ಸ್ಥಾಪಿಸಲು ಈಶ್ವರನ ಸಂಕಲ್ಪನೆಯ ಕಾರ್ಯದಲ್ಲಿ ಯಥಾಶಕ್ತಿ ಎಲ್ಲವನ್ನೂ ದಾನ ಮಾಡಲು ದೃಢನಿಶ್ಚಯವನ್ನು ಮಾಡಿಕೊಳ್ಳಬೇಕು‘ ಎಂದರು.

ಸನಾತನ ಸಂಸ್ಥೆಯ ಸೌ. ಶಾರದಾ ಯೋಗೇಶ್ ಇವರು ಮಾತನಾಡಿ ಈಗ ನಡೆಯುತ್ತಿರುವ ಭೀಕರವಾದ ಯುದ್ಧದ ಸಂದರ್ಭದಲ್ಲಿ ಶಾರೀರಿಕ ಬಲ, ಮಾನಸಿಕ ಬಲದ ಜೊತೆಗೆ ಆಧ್ಯಾತ್ಮಿಕ ಬಲವನ್ನು ವೃದ್ಧಿಸಿ ಕೊಳ್ಳಬೇಕು ಇದಕ್ಕಾಗಿ ಇಂದಿನಿಂದಲೇ ಪ್ರಾರಂಭಿಸೋಣ ಎಂದರು.

ಉಪಸ್ಥಿತರು

Related News