ಮುಧೋಳದಲ್ಲಿ ಬಾಗಲಕೋಟೆ ಜಿಲ್ಲಾ ಅಧಿವೇಶನ ಸಂಪನ್ನ !
ಎಡದಿಂದ ನ್ಯಾ. ಬಲದೇವ ಸಣ್ಣಕ್ಕಿ, ವಕೀಲರು, ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠ, ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ ಮತ್ತು ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ, ಕರ್ನಾಟಕ
ಸಂವಿಧಾನದಲ್ಲಿ ಜಾತ್ಯಾತೀತವೆಂಬ ಶಬ್ದ ತೆಗೆದು ಹಿಂದೂರಾಷ್ಟ್ರದ ಶಬ್ದವನ್ನು ಸೇರಿಸಿ ಪುನಃ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಬೇಕು – ನ್ಯಾಯವಾದಿ ಬಲದೇವ ಸಣ್ಣಕ್ಕಿ
ನ್ಯಾಯವಾದಿ ಬಲದೇವ ಸಣ್ಣಕ್ಕಿ
ಮುಧೋಳ: ಸ್ವಾತಂತ್ರ್ಯದ ಪೂರ್ವದಲ್ಲಿ ಅಖಂಡವಾಗಿದ್ದ ಭಾರತವನ್ನು 1947ರ ನಂತರ ಧರ್ಮದ ಆಧಾರದ ಮೇಲೆ ಇಬ್ಬಾಗ ಮಾಡಿದಾಗ ಪಾಕಿಸ್ತಾನ ಇಸ್ಲಾಮಿಕ್ ರಾಷ್ಟ್ರವಾಯಿತು. ಆದರೆ ಭಾರತವನ್ನು ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಲಿಲ್ಲ ಅಷ್ಟೇ ಅಲ್ಲದೇ 1976 ರಲ್ಲಿ ಶ್ರೀಮತಿ. ಇಂದಿರಾ ಗಾಂಧಿಯವರು ಸಂವಿಧಾನದಲ್ಲಿ ಜಾತ್ಯಾತೀತವಾದ ಮತ್ತು ಸಮಾಜವಾದವೆಂಬ ಎರಡು ಶಬ್ದಗಳನ್ನು ಸೇರಿಸಿ ಹಿಂದೂಗಳಿಗೆ ಅನ್ಯಾಯ ಮಾಡಿದರು. ಈಗ ಅದೇ ಸಂವಿಧಾನದಲ್ಲಿ ಜಾತ್ಯಾತೀತವೆಂಬ ಶಬ್ದ ತೆಗೆದು ಹಿಂದೂರಾಷ್ಟ್ರದ ಶಬ್ದವನ್ನು ಸೇರಿಸಿ ಪುನಃ ಈ ದೇಶವನ್ನು ಹಿಂದೂ ರಾಷ್ಟ್ರವನ್ನಾಗಿಸಲು ನಾವೆಲ್ಲರೂ ಕಾನೂನು ಮಾರ್ಗದಲ್ಲಿ ಹೋರಾಟ ಮಾಡಬೇಕೆಂದು ನ್ಯಾಯವಾದಿ ಶ್ರೀ. ಬಲದೇವ ಸಣ್ಣಕ್ಕಿಯವರು ಹೇಳಿದರು. ಅವರು ದಿನಾಂಕ: 17-12-2024 ರಂದು ಮಂಗಳವಾರ ಮುಧೋಳದಲ್ಲಿ ಹಿಂದೂ ಜನಜಾಗೃತಿ ಸಮಿತಿಯು ಆಯೋಜಿಸಿದ ಜಿಲ್ಲಾ ಮಟ್ಟದ ಹಿಂದೂ ರಾಷ್ಟ್ರ ಅಧಿವೇಶನವನ್ನು ಉದ್ದೇಶಿಸಿ ಮಾತಾಡುತ್ತಿದ್ದರು. ಇವತ್ತಿನ ಕಾರ್ಯಕ್ರಮವನ್ನು ನ್ಯಾ. ಬಲದೇವ ಸಣ್ಣಕ್ಕಿ, ವಕೀಲರು, ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠ, ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ ಮತ್ತು ಶ್ರೀ. ಗುರುಪ್ರಸಾದ ಗೌಡ ಇವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಉದ್ಘಾಟನೆ ಮಾಡಿದರು.
ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ
ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿಯವರು ಮಾತನಾಡಿ ನಮ್ಮ ಧರ್ಮದಲ್ಲಿ ಪರಮೇಶ್ವರಿ ಶಕ್ತಿಯಿದೆ, ಮೆಸಪಟೋಮಿಯಾದಂತಹ ಅನೇಕ ಸಂಸ್ಕೃತಿಗಳು ಇತಿಹಾಸದ ಪುಟಗಳಿಂದಲೇ ಅಳಿಸಿ ಹೋದವು. ಜಗತ್ತಿನ ಅನೇಕ ಸಂಸ್ಕೃತಿಗಳು ನಾಶವಾದರೂ ಸಹ ನಮ್ಮ ಸಂಸ್ಕೃತಿ ಇನ್ನೂ ಜೀವಂತವಾಗಿಯೇ ಇದೆ. ಅಮೇರಿಕಾದಲ್ಲಿ ಜಗತ್ತಿನ ಎಲ್ಲಾ ನಾಗರೀಕರು ಇದ್ದಾರೆ. ಭಾರತದಲ್ಲಿ ಜಗತ್ತಿನ ಎಲ್ಲಾ ಪಂಥೀಯರು ಇದ್ದಾರೆ. ಎಲ್ಲರನ್ನು ಗೌರವಿಸುವ ನಮ್ಮ ಮೇಲೆ ಆಘಾತಗಳು ಆಗುತ್ತಿವೆ. ಅಂತಹ ಸಮಯದಲ್ಲಿ ಹಿಂದೂ ರಾಷ್ಟ್ರದ ಸೂರ್ಯ ಉದಯಿಸುತ್ತಿದ್ದಾನೆಂಬುದು ಈ ಅಧಿವೇಶನದಿಂದ ಅನುಭವಕ್ಕೆ ಬರುತ್ತಿದೆಂದು ಶ್ರೀ. ಜೀತೇಂದ್ರ ರಾಜೋಜಿರಾವ್ ಜಾಧವ ದೇಸಾಯಿ ಇವರು ಉದ್ಗರಿಸಿದರು.
ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠ
ವೇದಮೂರ್ತಿ ಶ್ರೀ. ದುಂಡಯ್ಯ ಶಂಕರಯ್ಯ ಹೀರೆಮಠರವರು ಮಾತನಾಡುತ್ತಾ ನಮ್ಮ ಭೂಮಿಯಲ್ಲಿ ಅಪಾರ ಸಂಪತ್ತಿದೆ. ಈ ಸಂಪತ್ತು ಮತ್ತು ಸಂಸ್ಕಾರಗಳನ್ನು ಲೂಟಿ ಮಾಡಲು ನಿರಂತರ ಪ್ರಯತ್ನಗಳಾಗುತ್ತಿವೆ. ಪ್ರಸ್ತುತ ಸಮಯದಲ್ಲಿ ನಾವೆಲ್ಲರೂ ಸಂಘಟಿತರಾಗಿರುವುದು ಬಹಳ ಮಹತ್ವದ್ದಿದೆ ಕಾರಣ ಸಂಘಟನೆಯಲ್ಲಿ ಶಕ್ತಿಯಿದೆ. ಆದರೆ ನಮ್ಮ ಮರ್ಯಾದೆ, ಗೌರವ ಎಂಬ ಪ್ರತಿಷ್ಠೆಯನ್ನಿಟ್ಟುಕೊಂಡು ಹಿಂದೂ ರಾಷ್ಟ್ರಕ್ಕಾಗಿ ಹೋರಾಡಲು ನಾವು ಮುಂದೆ ಬರುತ್ತಿಲ್ಲ, ಅದೇ ನಮಗೆ ಮುಳುವಾಗಿದೆ. ಈಗ ನಾವು ಪ್ರತಿಷ್ಠೆಯನ್ನು ಬಿಟ್ಟು ಸ್ವಂತದ ಉಳಿವಿಗಾಗಿ ಸಂಘಟಿತರಾಗೋಣವೆದು ಕರೆ ನೀಡಿದರು.
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ
ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡರವರು ಮಾತನಾಡುತ್ತಾ ಎಲ್ಲಾ ಹಿಂದೂ ಸಂಘಟನೆಗಳು ಹಿಂದೂ ರಾಷ್ಟ್ರದ ವಿಚಾರ ಬಂದಾಗ ತಮ್ಮ ತಮ್ಮ ಸಂಘಟನೆಯನ್ನು ಬದಿಗಿಟ್ಟು ಹಿಂದೂ ರಾಷ್ಟ್ರದ ಸ್ಥಾಪನೆಯ ಸಂಕಲ್ಪದೊದಿಗೆ ಒಗ್ಗಟ್ಟಾಗಿ ಹೋರಡಬೇಕಾಗಿದೆ. ಹಿಂದೂ ಜನಜಾಗೃತಿ ಸಮಿತಿಯು ಹಿಂದೂ ರಾಷ್ಟ್ರದ ಉದ್ಘೋಷಣೆಯೊಂದಿಗೆ ಕಳೆದ 12 ವರ್ಷಗಳಿಂದ ವೈಶ್ವಿಕ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಿ 800 ಕ್ಕೂ ಹೆಚ್ಚು ಹಿಂದೂ ಸಂಘಟನೆ ಪ್ರತಿನಿಧಿ ಮತ್ತು ಹಿಂದುತ್ವನಿಷ್ಠರನ್ನು ಒಟ್ಟಾಗಿ ರಾಷ್ಟಾçದ್ಯಾಂತ ಹಿಂದೂ ರಾಷ್ಟ್ರಕ್ಕಾಗಿ ಹೋರಾಟ ಪ್ರಾರಂಭವಾಗಿದೆ. 2023ರಲ್ಲಿ ಮಾನ್ಯ ಸುಪ್ರೀಂ ಕೋರ್ಟ ಯಾವುದೇ ಧರ್ಮವನ್ನು ಹೀಯಾಳಿಸಿದವರ ಮೇಲೆ ಸುಮೋಟೋ ಕೇಸ್ ದಾಖಲಿಸಬೇಕೆಂದು ಆದೇಶಿಸಿದರೂ ಸಹ ರಾಜಾರೋಷವಾಗಿ ಸನಾತನ ಧರ್ಮವನ್ನು ನಾಶ ಮಾಡಬೇಕೆನ್ನುವ ಉದಯ ನಿಧಿ ಸ್ಟಾಲಿನ್ ಮತ್ತು ಅರ್ಬನ್ ನಕ್ಸಲರ ಮೇಲೆ ಯಾವುದೇ ಕಾನೂನು ಕ್ರಮ ಆಗಲಿಲ್ಲ, ದೇಶದ ಭೂಮಿಯನ್ನು ಕಬಳಿಸುವ ವಕ್ಫ್ ಮಂಡಳಿಯ ಲ್ಯಾಂಡ್ ಜಿಹಾದ್, ಹಲಾಲ ಆರ್ಥಿಕ ಷಡ್ಯಂತ್ರ, ದೇವಸ್ಥಾನಗಳ ಸರಕಾರೀಕರಣದಿಂದ ಪಾವಿತ್ರತೆ ನಾಶವಾಗುತ್ತಿದೆ. ಇದಕ್ಕೆಲ್ಲಾ ಪರಿಹಾರ ಅಂದರೆ ಹಿಂದೂ ರಾಷ್ಟ್ರದ ಸ್ಥಾಪನೆ ಎಂದು ಅವರು ಹೇಳಿದರು.
ಇವತ್ತಿನ ಕಾರ್ಯಕ್ರಮದಲ್ಲಿ ವಿಜಯಪುರ, ನಿಡಗುಂದಿ, ಬಾದಾಮಿ, ಮುಧೋಳ, ಮಹಾಲಿಂಗಪೂರ, ಜಮಖಂಡಿ, ರಬಕವಿ ಬನಹಟ್ಟಿ, ರಾಯಬಾಗ, ಗೋಕಾಕ, ಕಾಗೋಡದಿಂದ 100 ಕ್ಕೂ ಹೆಚ್ಚು ಹಿಂದೂ ಸಂಘಟನೆಯ ಪ್ರತಿನಿಧಿಗಳು ಮತ್ತು ಹಿಂದುತ್ವನಿಷ್ಟರು, ವಕೀಲರು ಸಹಭಾಗಿಯಾಗಿದ್ದರು. ಈ ಅಧಿವೇಶನದ ನಂತರ ಮುಂದಿನ ದಿನಗಳಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಯ ನಿಟ್ಟಿನಲ್ಲಿ ಸಂಘಟನೆಗಳು ಒಟ್ಟಾಗಿ ಮಾಡಲಿರುವ ಕಾರ್ಯಗಳ ಕುರಿತು ಗುಂಪು ಚರ್ಚೆ ಮಾಡಲಾಯಿತು.