ದೀಪ ಪ್ರಜ್ವಲನೆ – ಎಡದಿಂದ ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನ, ಭಜರಂಗದಳದ ಶ್ರೀ. ದೀನದಯಾಳು, ಪ. ಪೂ. ಅಭಿನವ ಶಂಕರ ಭಾರತಿ ಮಹಾಸ್ವಾಮಿ,ಹಿಂದೂ ರಾಷ್ಟ್ರ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ. ಸಂದೀಪ್ ಜಿ, ಹಿಂದೂ ಜನಜಾಗೃತಿ ಸಮತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ
ಶಿವಮೊಗ್ಗ : ಹಿಂದೂ ಜನಜಾಗೃತಿ ಸಮಿತಿವತಿಯಿಂದ ಶಿವಮೊಗ್ಗದ ಬಿ. ಹೆಚ್ ರಸ್ತೆಯಲ್ಲಿರುವ ಬೆಕ್ಕಿನ ಕಲ್ಮಠದಲ್ಲಿ ದಿನಾಂಕ ೨೨.೧೨.೨೦೨೪ ರಂದು ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿತ್ತು. ಈ ಸಂಧರ್ಭದಲ್ಲಿ ಪ, ಪೂ. ಅಭಿನವ ಶಂಕರ ಭಾರತೀ ಮಹಾಸ್ವಾಮಿ, ಶ್ರೀಮದ್ ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನ, ಭಜರಂಗದಳದ ಶ್ರೀ. ದೀನದಯಾಳು, ಹಿಂದೂ ರಾಷ್ಟ್ರ ಸೇನೆಯ ರಾಜ್ಯಾಧ್ಯಕ್ಷರಾದ ಶ್ರೀ. ಸಂದೀಪ್ ಜಿ, ಹಿಂದೂ ಜನಜಾಗೃತಿ ಸಮಿತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ್ ಗೌಡ ಇವರು ದೀಪ ಪ್ರಜ್ವಲನೆ ಮಾಡುವುದರ ಮೂಲಕ ಅಧಿವೇಶನಕ್ಕೆ ಚಾಲನೆ ನೀಡಿದರು. ನಂತರ ವೇದಮಂತ್ರ ಪಠಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು.
ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರೂ ವೈಚಾರಿಕ ಚಿಂತನೆಯೊಂದಿಗೆ ಪ್ರಯತ್ನ ಮಾಡೋಣ-ಪ. ಪೂ. ಅಭಿನವ ಶಂಕರ ಭಾರತಿ ಮಹಾಸ್ವಾಮಿ.
ಪತಂಜಲಿ ಯೋಗ ಶಾಸ್ತ್ರವು ಕ್ರಮಬದ್ಧವಾಗಿದೆ, ಅದರಂತೆ ಹಿಂದೂ ರಾಷ್ಟ್ರ ಸ್ಥಾಪನೆಯ ವಿಷಯವೂ ಕ್ರಮಬದ್ಧವಾಗಿದೆ. ನಾವೆಲ್ಲರೂ ವಿಚಾರ ಸ್ತರದಲ್ಲಿ ತಿಳಿದುಕೊಂಡಿದ್ದೇವೆ, ವಿಚಾರ ವಿಮರ್ಶೆ ಮಾಡಿಕೊಂಡು ಅದರಂತೆ ಕೃತಿ ಮಾಡಿದರೆ ಖಂಡಿತವಾಗಿಯೂ ಹಿಂದೂ ರಾಷ್ಟ್ರ ಸ್ಥಾಪನೆಯಾಗುತ್ತದೆ. ಇಂದು ಅನೇಕ ಜನರು ಜಾತಿ ಪದ್ಧತಿಯನ್ನು ತೊಲಗಿಸಬೇಕು ಎಂದು ಹೇಳುತ್ತಾರೆ, ಆದರೆ ಕುಲಾಚಾರ – ಕುಲ ಧರ್ಮ ಎಂದು ಇದ್ದು ಇದನ್ನು ಸಧ್ಯದ ಸ್ಥಿತಿಯಲ್ಲಿ ಜಾತಿ ಪದ್ಧತಿಯನ್ನು ತೆಗೆದು ಹಾಕಲು ಸಾಧ್ಯವಿಲ್ಲ, ಬದಲಿಗೆ ಜಾತಿ ಪದ್ಧತಿ ಜೊತೆಗೆ ರಾಷ್ಟ್ರ ಮತ್ತು ಧರ್ಮದ ವಿಚಾರವನ್ನು ಹೇಗೆ ಜೋಡಿಸಿಕೊಳ್ಳಬೇಕು ಎಂದು ವಿಚಾರ ಚಿಂತನೆ ಮಾಡಬೇಕು. ಹಿಂದೆ ವಿದೇಶಿಯರು ಒಡೆದು ಆಳುವ ನೀತಿಯಿಂದ ಜಾತಿಗಳನ್ನು ನಿರ್ಮಿಸಿ ಜಾತಿಗಳ ನಡುವೆ ಅವಿಶ್ವಾಸ ನಿರ್ಮಿಸಿದರು, ಇದನ್ನು ತೆಗೆಯಬೇಕು, ಒಂದು ಜಾತಿಯನ್ನು ತೆಗೆದು ಹಾಕಿದರೆ ಮತ್ತೊಂದು ಜಾತಿ ಉಗಮವಾಗುತ್ತದೆ, ಆದ್ದರಿಂದ ಸಹಬಾಳ್ವೆ ಇಂದ ಹೇಗೆ ಹಿಂದೂ ರಾಷ್ಟ್ರ ಸ್ಥಾಪನೆಯನ್ನು ಹೇಗೆ ಮಾಡಬೇಕು ಎಂಬುದರ ಬಗ್ಗೆ ಪ್ರತಿಯೊಬ್ಬರೂ ವೈಚಾರಿಕ ಚಿಂತನೆಯೊಂದಿಗೆ ಪ್ರಯತ್ನ ಮಾಡೋಣ ಎಂದು ಉಪಸ್ಥಿತರಿಗೆ ಆಶೀರ್ವಚನ ಮಾಡಿದರು.
ಕೇವಲ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಾಣದೆ, ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರತ್ಯಕ್ಷ ಕೃತಿ ಮಾಡೋಣ- ಹಿಂದೂ ರಾಷ್ಟ್ರ ಸೇನೆಯ ಶ್ರೀ. ಸಂದೀಪ್ ಜಿ
ಇವರು ಮಾತನಾಡುತ್ತಾ, ನಾವೆಲ್ಲ ಜಾತಿ ಮತ್ತು ಮತದ ವಿಚಾರದಲ್ಲಿ ಒಡೆದು ಹೋಗಿದ್ದು ನಮ್ಮಲ್ಲಿ ಒಗ್ಗಟ್ಟಿನ ಕೊರತೆ ಎದ್ದು ಕಾಣುತ್ತಿದೆ, ಎಲ್ಲಾ ಮಠದ ಸ್ವಾಮೀಜಿಗಳು ಕೇವಲ ಜಾತಿಗೆ ಸೀಮಿತವಾಗದೆ, ಮೊದಲು ಧರ್ಮ – ರಾಷ್ಟ್ರ ಎಂಬ ವಿಚಾರ ಮಾಡಬೇಕಿದೆ, ಇದರ ಜೊತೆಗೆ ನಾವು ಕೇವಲ ಹಿಂದೂ ರಾಷ್ಟ್ರ ಸ್ಥಾಪನೆಯ ಕನಸು ಕಾಣದೆ ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರತಿಯೊಬ್ಬರೂ ಪ್ರತ್ಯಕ್ಷ ಕೃತಿ ಮಾಡೋಣ ಎಂದು ಹೇಳಿದರು.
ಧರ್ಮ ರಕ್ಷಣೆಗೆ ಎಲ್ಲರೂ ಮುಂದಾಗಬೇಕಿದೆ- ಶ್ರೀ. ದೀನದಯಾಳು ಭಜರಂಗದಳ, ಶಿವಮೊಗ್ಗ.
ಭಜರಂಗದಳದ ಶ್ರೀ. ದೀನದಯಾಳು ಮಾತನಾಡುತ್ತಾ, ದೇವಾನುದೇವತೆಗಳು ಹಿಂದೂ ರಾಷ್ಟ್ರದ ಸ್ಥಾಪನೆಗಾಗಿ ಹಿಂದೂ ಸಂಘಟನೆಗಳ ರೂಪದಲ್ಲಿ ಅವತಾರ ತಾಳಿ ಕಾರ್ಯ ಮಾಡುತ್ತಿದ್ದಾರೆ, ಆದ್ದರಿಂದ ಶಕ್ತಿಯಜೊತೆಗೆ ಭಕ್ತಿಯನ್ನು ಮಾಡಬೇಕು, ಇದರ ಜೊತೆಗೆ ಯುಕ್ತಿಯನ್ನು ಸೇರಿಸಿ ಹಿಂದೂ ಸಂಘಟನೆಯ ಕಾರ್ಯ ಮಾಡೋಣ ಮುಂದೆ ಮಾತನಾಡುತ್ತಾ, ನಮ್ಮ ಮಾತೃಭೂಮಿಯ ಜೊತೆಗೆ ಮಾತೃ ಧರ್ಮದ ರಕ್ಷಣೆಗೂ ಕಾರ್ಯ ಮಾಡಬೇಕಿದೆ ಎಂದು ಉಪಸ್ಥಿತರಿಗೆ ಕರೆ ನೀಡಿದರು.
ಕಾನೂನಾತ್ಮಕ ಹಿಂದೂ ರಾಷ್ಟ್ರ ಸ್ಥಾಪನೆಗೆ ಸಂಘತರಾಗಿ ಹೋರಾಡಬೇಕಿದೆ-ಶ್ರೀ. ಗುರುಪ್ರಸಾದ್ ಗೌಡ.
ಈ ಅಧಿವೇಶನದಲ್ಲಿ ಹಿಂದೂ ಜನಜಾಗೃತಿ ಸಮತಿಯ ಕರ್ನಾಟಕ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಅಧಿವೇಶನದ ಉದ್ದೇಶವನ್ನು ತಿಳಿಸುತ್ತಾ, ಇಂದು ಹಿಂದೂಗಳ ಮೇಲೆಗುತ್ತಿರುವ ಆಘಾತಗಳ ಮೇಲೆ ಹೋರಾಡಲು ಅನೇಕ ಸಂಘಟನೆಗಳು ಕಾರ್ಯನಿರತವಾಗಿವೆ, ಈ ಎಲ್ಲಾ ಸಂಘಟನೆಗಳನ್ನು ಒಗ್ಗೂಡಿಸಿಕೊಂಡು ಎಲ್ಲರೂ ಸಂಘಟಿತರಾಗಿ ಕಾರ್ಯ ಮಾಡಬೇಕಾಗಿದೆ, ಇದಕ್ಕೆ ಭಗವಂತನ ಸ್ಮರಣೆ ಮಾಡುವುದು ಮತ್ತು ಸಂತರ ಆಶಿರ್ವಾದ ಪಡೆದು ಕೃತಿ ಮಾಡಿದರೆ ನಮಗೆ ಯಶಸ್ಸು ಸಿಗುವುದು ನಿಶ್ಚಿತವಾಗಿದೆ. ಇದರ ಜೊತೆಗೆ ಪ್ರಸ್ಥುತ ಕಾನೂನಾತ್ಮಕ ಹಿಂದೂ ರಾಷ್ಟ್ರ ಬೇಡಿಕೆ ಇಡುವುದು ಅತ್ಯವಶ್ಯಕವಾಗಿದೆ. ಆದ್ದರಿಂದ ನಾವೆಲ್ಲರೂ ಸಂಘಟಿತರಾಗಿ ಕಾನೂನು ಮಾರ್ಗದಲ್ಲಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಕಾರ್ಯನಿರತರಾಗೋಣ ಎಂದು ಹೇಳಿದರು. ಈ ಉದ್ದೇಶದಿಂದ ಹಿಂದೂ ಜನಜಾಗೃತಿ ಸಮಿತಿವತಿಯಿಂದ ಗೋವಾದ ರಾಮನಾಥಿಯಲ್ಲಿ ಪ್ರತಿ ವರ್ಷ ಅಂತರರಾಷ್ಟ್ರೀಯ ಸ್ಥರದ ವೈಶ್ವಿಕ ಹಿಂದೂ ರಾಷ್ಟ್ರ ಅಧಿವೆಶನವನ್ನು ನಡೆಸುತ್ತಿದೆ, ಇದರಿಂದ ಪ್ರೇರಣೆಪಡೆದು ಹಿಂದೂ ರಾಷ್ಟ್ರ ಸಮನ್ವಯ ಸಮಿತಿ ವತಿಯಿಂದ ಹಿಂದೂಗಳ ಮೇಲಾಗುವ ಅಘಾತಗಳಿಗೆ ರಾಷ್ಟ್ರೀಯ ಸ್ಥರದಲ್ಲಿ ಮನ್ನಣೆ ಸಿಗಲು ರಾಷ್ಟ್ರೀಯಸ್ಥರದಲ್ಲಿ ಆಂದೋಲನಗಳನ್ನು ಮಾಡುತ್ತಿದೆ, ರಾಷ್ಟ್ರಾಧ್ಯಂತ ಧರ್ಮಶಿಕ್ಷಣವರ್ಗ, ಪ್ರಶಿಕ್ಷಣ, ಪ್ರಥಮೋಪಚಾರ, ಬಾಲಸಂಸ್ಕಾರಗಳು ಹೀಗೇ ಅನೇಕ ಉಪಕ್ರಮಗಳ ಮಾಧ್ಯಮದಿಂದ ಹಿಂದೂಗಳು ಸಂಘಟಿತರಾಗಿ ಹೋರಾಡಲು ಪ್ರಾರಂಭಿಸಿದ್ದಾರೆ, ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಟಿ.ವಿ.ಚಾಲನಲ್ ಗಳಲ್ಲಿ ಹಿಂದೂಗಳ ಧ್ವನಿಗೆ ಸ್ಪಂದಿಸುವಂತಾಗಿದೆ ಹಾಗೂ ಹಿಂದೂಗಳಿಗೆ ಯಶಸ್ಸು ಸಿಗಲು ಪ್ರಾರಂಭವಾಗಿದೆ.
ಈ ಎಲ್ಲಾ ವಿಷಯಗಳನ್ನು ಗಮನದಲ್ಲಿಟ್ಟುಕೊಂಡು, ರಾಜ್ಯ, ಪ್ರಾಂತೀಯ ಮತ್ತು ಜಿಲ್ಲಾಸ್ಥರದಲ್ಲಿ ಹಿಂದೂ ರಾಷ್ಟ್ರ ಅಧಿವೇಶನವನ್ನು ಮಾಡಲಾಗುತ್ತಿದೆ. ಇದರ ಅಂಗವಾಗಿ ಇಂದು ಶಿವಮೊಗ್ಗದಲ್ಲಿ ಈ ಹಿಂದೂ ರಾಷ್ಟ್ರ ಅಧಿವೇಶನವನ್ನು ಆಯೋಜಿಸಲಾಗಿದೆ. ಇಂದು ರಾಮ ರಾಜ್ಯ ಸ್ಥಾಪನೆ ಮಾಡಿ ರಾಮ ರಾಜ್ಯದ ಕಡೆ ನಡೆಯುತ್ತಿದ್ದೇವೆ, ವಿದೇಶಗಳಲ್ಲಿ ಹಿಂದೂ ಧರ್ಮದ ಆಚರಣೆಯನ್ನು ಮಾಡಲು ಪ್ರಾರಂಭಿಸಿದ್ದಾರೆ – ಹಿಂದೂ ಧರ್ಮವನ್ನು ಸ್ವೀಕಾರ ಮಾಡುತ್ತಿದ್ದಾರೆ, ಇದರಿಂದ ಹಿಂದೂ ರಾಷ್ಟ್ರ ಸ್ಥಾಪನೆಯು ದೂರವಿಲ್ಲ, ಹಿಂದೂ ರಾಷ್ಟ್ರ ಸ್ಥಾಪನೆಯು ಸ್ಥಾಪನೆ ಆಗುವುದೇ ಇದೆ, ಹಿಂದೂ ರಾಷ್ಟ್ರವನ್ನು ಯಾರೋ ಸ್ಥಾಪನೆ ಮಾಡುತ್ತಾರೆ ಎಂದು ಕೂರುವುದಲ್ಲ, ಪ್ರತಿಯೊಬ್ಬರೂ ಹಿಂದೂ ರಾಷ್ಟ್ರ ಸ್ಥಾಪನೆ ಮಾಡಲು ಪ್ರತಿಯೊಬ್ಬರೂ ಪ್ರಯತ್ನ ಮಾಡೋಣ ಎಂದು ಉಪಸ್ಥಿತರಿಗೆ ಕರೆ ನೀಡಿದರು, ಮುಂದೆ ಮಾತನಾಡುತ್ತಾ ಇಂದು ವಕ್ಫಬೋರ್ಡ್ ನಿಂದ ಕಂಡ ಕಂಡ ಆಸ್ತಿಗಳನ್ನು ತಮ್ಮದು ಎಂದು ಹೇಳುತ್ತಿದ್ದಾರೆ, ಹೀಗೆ ಆದರೆ ಕಾಶ್ಮೀರದಲ್ಲಿ ಅಗಿರುವ ಸ್ಥಿತಿಯೇ ಎಲ್ಲಾ ಕಡೆಗಳಲ್ಲೂ ಆಗುತ್ತದೆ ಆದ್ದರಿಂದ ಪ್ರತಿಯೊಬ್ಬರೂ ಸಂಘಟಿತರಾಗಿ ಹಿಂದೂ ರಾಷ್ಟ್ರ ಸ್ಥಾಪನೆಗೆ ಪ್ರಯತ್ನ ಮಾಡೋಣ ಎಂದು ಹೇಳಿದರು.
ಈ ಸಂದರ್ಭದಲ್ಲಿ ಈ ಅಧಿವೇಶನಕ್ಕೆ ಶಿವಮೊಗ್ಗ, ದಾವಣಗೇರೆ, ಚಿಕ್ಕಮಗಳೂರು ಜಿಲ್ಲೆಗಳ ಸಂಘಟನೆಗಳಾದ ಧರ್ಮ ಜಾಗರಣೆವೇದಿಕೆ, ಬಜರಂಗದಳ, ವಿಶ್ವ ಹಿಂದೂ ಪರಿಷತ್, ಹಿಂದೂರಾಷ್ಟ್ರ ಸೇನಾ, ಹಿಂದೂ ಜಾಗರಣ ವೇದಿಕೆ, ಕ್ಷತ್ರಿಯ ಮರಾಠ ಪರಿಷತ್, ಶಿವಾಜಿ ಸೇನೆ, ವಿಶ್ವಕರ್ಮ ಯುವಕ ಸಂಘ, ಸೇರಿದಂತಿ ೩೦ ಕ್ಕೂ ವಿವಿಧ ಹಿಂದುತ್ವ ವಾದಿ ಸಂಘಟನೆಯ ಪ್ರಮುಖರು ಸಂಘಟನೆಯ ೧೮೦ ಕ್ಕೂ ಹೆಚ್ಚು ಹಿಂದುತ್ವನಿಷ್ಟರು,ಪದಾಧಿಕಾರಿಗಳು ಉಪಸ್ಥಿತರಿದ್ದರು.
ಉಪಸ್ಥಿತರು