Menu Close

ಹಿಂದೂರಾಷ್ಟ್ರ ಸ್ಥಾಪನೆಗಾಗಿ ಹಮ್ಮಿಕೊಂಡಿದ್ದ ಜಿಲ್ಲಾ ಅಧಿವೇಶನ ಹುಬ್ಬಳ್ಳಿಯಲ್ಲಿ ಸಂಪನ್ನ!

ದೀಪ ಪ್ರಜ್ವಲನೆ:ಎಡಗಡೆಯಿಂದ ಶ್ರೀ.ಮಹಾದೇವ ಸಾಗರೆಕರ,ರಿಟೈರ್ಡ್ ಅಕೌಂಟಿಂಗ್ ಆಫೀಸರ್ , ವೇ.ಮೂ ಶ್ರೀ ಇಂದ್ರಾಚಾರ್ಯ, ಧರ್ಮಾಧಿಕಾರಿಗಳು ,ಶಿರಸಂಗಿ ಕ್ಷೇತ್ರ, ಶ್ರೀ. ರಾಜಣ್ಣ ಕೊರವಿ, ಕಾರ್ಪೊರೇಟರ್, ಉಣಕಲ್, ಹುಬ್ಬಳ್ಳಿ ಶ್ರೀ. ಗುರುಪ್ರಸಾದಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹುಬ್ಬಳ್ಳಿ: ಸನಾತನ ಧರ್ಮವನ್ನು ಹೇಗಾದರೂ ಮಾಡಿ ನಾಶಮಾಡಬೇಕೆಂದು ನಿರಂತರ ಪ್ರಯತ್ನಗಳ ಮಧ್ಯೆ ಈ ರೀತಿ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಹಿಂದೂಗಳನ್ನು ಒಗ್ಗೂಡಿಸುವ ಕಾರ್ಯ ಬಹಳ ಮುಖ್ಯ, ಎಂದು ಶ್ರೀ. ರಾಜಣ್ಣ ಕೊರವಿ ತಿಳಿಸಿದರು.ಅವರು ದಿನಾಂಕ 29.12.2024 ರಂದು ಭಾನುವಾರ ಹುಬ್ಬಳ್ಳಿಯಲ್ಲಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ಆಯೋಜಿಸಿದ್ದ ಜಿಲ್ಲಾ ಹಿಂದೂರಾಷ್ಟ್ರ ಅಧಿವೇಶನವನ್ನು ಉದ್ದೇಶಿಸಿ ಮಾತನಾಡುತ್ತಿದ್ದರು, ದಿನೇ ದಿನೇ ಹಿಂದೂರಾಷ್ಟ್ರದ ಕೂಗು ಎಲ್ಲೆಡೆ ಕೇಳುತ್ತಿದೆ ದಿನೇ ದಿನೇ ಅದು ಹೆಚ್ಚಾಗುತ್ತಿದೆ, ಈ ಸಂದರ್ಭದಲ್ಲಿ ನಾವೆಲ್ಲರೂ ಒಗ್ಗಟ್ಟಾಗಿ ಇರುವುದು ಅವಶ್ಯವಾಗಿದೆ, ಯುವಪೀಳಿಗೆಗೆ ನಾವು ಒಳ್ಳೆಯ ಸಂಸ್ಕಾರ,ಧರ್ಮದ ಬಗ್ಗೆ ಜ್ಞಾನ ಕೊಡುವುದು ತುಂಬಾ ಅವಶ್ಯಕ ಎಂದರು.

ಶಿರಸಂಗಿಯ ಶ್ರೀ ಕಾಳಿಕಾ ದೇವಸ್ಥಾನದ ಧರ್ಮಾಧಿಕಾರಿಗಳಾದ ಬ್ರಹ್ಮರ್ಷಿ ವೇ ಮೂ ಶ್ರೀ ಇಂದ್ರಾಚಾರ್ಯರು ಮಾತನಾಡಿ ಮನೆಯಲ್ಲಿರುವ ಮಕ್ಕಳನ್ನು ಕುಟುಂಬದವರನ್ನು ಧರ್ಮಯೋಧರನ್ನಾಗಿ ಮಾಡೋಣ ಹಿಂದೂರಾಷ್ಟ್ರ ಸ್ಥಾಪನೆಯ ದಿಶೆ ಕಡೆ ಸಾಗೋಣ ಎಂದು ತಿಳಿಸಿದರು.

ಶ್ರೀ. ಮಹಾದೇವ ಸಾಗರೇಕರ್ , ನಿವೃತ್ತ ಅಕೌಂಟಿಂಗ್ ಆಫೀಸರ್ ಮಾತನಾಡಿ ಧರ್ಮಕಾರ್ಯ ಮಾಡುವಾಗ ಸಂಘಟನೆ ಅವಶ್ಯಕತೆ, ಬಲಿಷ್ಠ ಸಂಘಟನೆ ಇದ್ದರೆ ಜಾತಿ ಉಪಜಾತಿಗಳಲ್ಲಿ ಮರೆಮಾಚಿರುವ ನಮ್ಮ ಧರ್ಮವನ್ನು ಯಾವ ರೀತಿಯಾಗಿ ಬಲಪಡಿಸಬಹುದು ಎಂದು ತಿಳಿಸಿಕೊಟ್ಟರು.

ಶ್ರೀ. ಗುರುಪ್ರಸಾದ ಗೌಡ, ರಾಜ್ಯ ಸಮನ್ವಯಕರು, ಹಿಂದೂ ಜನಜಾಗೃತಿ ಸಮಿತಿ

ಹಿಂದೂ ಜನಜಾಗೃತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾತನಾಡಿ, ಧರ್ಮ ಸಂಸ್ಥಾಪನೆ ಅನ್ನೊಂದು ಕಾಲ ಮಹಾತ್ಮೆಗೆ ಸಂಭಂದಪಟ್ಟ ವಿಷಯವಾಗಿದೆ ಸಮಯ ಬಂದಾಗ ಹಿಂದೂರಾಷ್ಟ್ರ ಸ್ಥಾಪನೆಯಾಗಲಿಕ್ಕೆ ಇದೆ, ಯಾರು ಕೂಡ ದುಸ್ಸಾಹಸಕ್ಕೆ ಕೈ ಹಾಕುವುದು ಬೇಡ ಎಂದರು.ಛತ್ರಪತಿ ಶಿವಾಜಿ ಮಹಾರಾಜರ ಹಿಂದವೀ ಸ್ವರಾಜ್ಯ ಸ್ಥಾಪನೆಯ ಸಂದರ್ಭದಲ್ಲಿ ಉಪಯೋಗಿಸಿದ ತಂತ್ರಗಾರಿಕೆಯನ್ನು ನಾವು ಈಗ ಕೂಡ ಮಾಡುವುದು ಅವಶ್ಯಕ ಇದೆ, ಇದರ ಜೊತೆಗೆ ಆಧ್ಯಾತ್ಮಿಕ ಸಾಧನೆ ಮಾಡುವುದು ತುಂಬಾ ಅವಶ್ಯಕವಾಗಿದೆ ಎಂದರು

ಈ ಸಂದರ್ಭದಲ್ಲಿ ಸಮಾಜದಲ್ಲಿ ಲವ್ ಜಿಹಾದ್,ಮತಾಂತರ ತಡೆಗಟ್ಟಲು ಹೋರಾಟ ಮಾಡುತ್ತಿರುವ ಬಗ್ಗೆ ಮತ್ತು ವಿವಿಧ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಜಾಗೃತಿ ಮೂಡಿಸುತ್ತಿರುವ ಹಲವಾರು ಸಂಘಟನೆಗಳ ಪ್ರಮುಖರು ತಮ್ಮ ಅನುಭವ ಕಥನವನ್ನು ಹಂಚಿಕೊಂಡರು

ವಕ್ಫ್ ಬೋರ್ಡನ ಕರಾಳತೆ, ಹಿಂದೂರಾಷ್ಟ್ರದ ಅವಶ್ಯಕತೆ, ಹಿಂದೂರಾಷ್ಟ್ರ ಸಮನ್ವಯದ ಅವಶ್ಯಕತೆ ಮತ್ತು ಇತರ ಪ್ರಮುಖ ವಿಷಯಗಳ ಬಗ್ಗೆ ಧರ್ಮಪ್ರೇಮಿಗಳು ಹಾಗೂ ಸಂಘಟನೆಗಳ ಪ್ರಮುಖರು ತಮ್ಮ ಅನುಭವಕಥನ ಹಂಚಿಕೊಂಡರು..

ಈ ಸಂದರ್ಭದಲ್ಲಿ ಹಿಂದುತ್ವನಿಷ್ಠರಾದ ಶ್ರೀ. ಶ್ರೀಧರ್, ಶ್ರೀ. ಮಲ್ಲಿಕಾರ್ಜುನ ತೆಗ್ಗಿನ, ಶ್ರೀ. ಬಾಬು ಬಾಕಳೆ, ಸೌ.ರೇಣುಕಾ ಕಬಾಡಿ, ಶ್ರೀ. ನಿಂಗಪ್ಪ ಕೋಟಗಿ, ಶ್ರೀ. ರುದ್ರಗೌಡ ಎಸ್ ಪಾಟೀಲ, ಶ್ರೀ. ಅಪ್ಪಣ್ಣ ಹೀರಗಣ್ಣನವರ, ದಾಮೋದರ ದೇಶಪಾಂಡೆ, ಮುರಳೀಧರ್ ಹೇಬಸೂರು, ದಶರಥ ಕಲಾಲ, ನ್ಯಾಯವಾದಿಗಳಾದ ಶ್ರೀ. ನಾರಾಯಣ ಯಾಜಿ, ಡಾ. ರವಿ ನಂದಿ ಮತ್ತು ಇತರ ಪ್ರಮುಖರು ಸೇರಿ ಒಟ್ಟು 134 ಧರ್ಮಪ್ರೇಮಿಗಳು ಉಪಸ್ಥಿತರಿದ್ದರು.

ಅಧಿವೇಶನದಲ್ಲಿ 130ಕ್ಕಿಂತ ಹೆಚ್ಚು ಧರ್ಮಪ್ರೇಮಿಗಳ ಉಪಸ್ಥಿತಿ.

Related News