ಅಧಿವೇಶನದ ಉದ್ಘಾಟನೆಯನ್ನು ಮಾಡಲಿರುವ ಜಗತ್ಪ್ರಸಿದ್ಧ ಕಥಾವಾಚಕರಾದ ಪೂ. ದೇವಕೀ ನಂದನ ಠಾಕುರ್ !
‘ಕರ್ನಾಟಕ ಮಂದಿರ ಮಹಾಸಂಘ’ದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ, ಕಥಾವಾಚಕರಾದ ಪೂ. ದೇವಕೀ ನಂದನ ಠಾಕುರ್, ಮಂದಿರ ಮಹಾಸಂಘದ ರಾಷ್ಟ್ರೀಯ ಸಂಘಟಕರಾದ ಶ್ರೀ. ಸುನೀಲ ಘನವಟ
ಬೆಂಗಳೂರು : ದೇವಸ್ಥಾನಗಳ ಸಂಸ್ಕೃತಿಯ ರಕ್ಷಣೆಗಾಗಿ ಕರ್ನಾಟಕ ಮಂದಿರ ಮಹಾಸಂಘ ಮತ್ತು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ‘ಕರ್ನಾಟಕ ರಾಜ್ಯ ದ್ವಿತೀಯ ಮಂದಿರ ಅಧಿವೇಶನ’ ವು ಜನವರಿ 4 ಮತ್ತು 5 2025 ರಂದು ಬೆಂಗಳೂರಿನಲ್ಲಿ ಆಯೋಜಿಸಲಾಗಿದೆ. ಈ ಅಧಿವೇಶನದಲ್ಲಿ ರಾಜ್ಯದಾದ್ಯಂತದ 1000 ಕ್ಕೂ ಅಧಿಕ ದೇವಸ್ಥಾನ ವಿಶ್ವಸ್ಥರು, ಪ್ರತಿನಿಧಿಗಳು, ಪುರೋಹಿತರು, ದೇವಸ್ಥಾನದ ರಕ್ಷಣೆಗಾಗಿ ಹೋರಾಡುವ ನ್ಯಾಯವಾದಿಗಳು ಮುಂತಾದವರು ಸಹಭಾಗಿಯಾಗುವರು.
ಉತ್ತರ ಪ್ರದೇಶದ ಪ್ರಸಿದ್ಧ ಕಥಾವಾಚಕರು ಮತ್ತು ಸಂಸ್ಥಾಪಕರು ವಿಶ್ವ ಶಾಂತಿ ಸೇವಾ ಟ್ರಸ್ಟ್ ನ ಪೂ. ದೇವಕೀ ನಂದನ ಥಾಕುರ್ ಇವರ ಕರಕಮಲಗಳಿಂದ ಕಾರ್ಯಕ್ರಮದ ಉದ್ಘಾಟನೆ ಮಾಡಲಾಗುವುದು. ಈಗಾಗಲೇ ಪೂ. ದೇವಕೀ ನಂದನ ಥಾಕುರ್ ಇವರು ದೇವಸ್ಥಾನಗಳನ್ನು ಸರಕಾರಿಕರಣದಿಂದ ಮುಕ್ತಗೊಳಿಸಲು ದಿಲ್ಲಿಯಲ್ಲಿ ನಡೆದ ಧರ್ಮಸಂಸದಿನ ನಂತರ ‘ಸನಾತನ ಬೋರ್ಡ’ ಗೆ ಚಾಲನೆಯನ್ನು ನೀಡಿದ್ದಾರೆ.
ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ ಸಂಸದ ಮತ್ತು ಬಿಜೆಪಿ ಯುವ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ತೇಜಸ್ವಿ ಸೂರ್ಯ, ಯುವ ಬ್ರಿಗೇಡ್ ಸಂಘಟನೆಯ ಸಂಸ್ಥಾಪಕರಾದ ಶ್ರೀ ಚಕ್ರವರ್ತಿ ಸೂಲಿಬೆಲೆ ವಾಗ್ಮಿ ಇವರ ಪ್ರಭಾವಶಾಲಿ ಉಪಸ್ಥಿತಿ ಇರುವುದು. ಈ ಅಧಿವೇಶನಕ್ಕೆ ಹರಿಹರಪುರ ಮಠದ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮೀಜಿಗಳು, ಧಾರ್ಮಿಕ ದತ್ತಿ ಇಲಾಖೆಯ ಮಾಜಿ ಆಯುಕ್ತರಾದ ಶ್ರೀ. ನಂದಕುಮಾರ ಐಎಎಸ್, ಹಿರಿಯ ವಕೀಲರಾದ ಅರುಣ ಶ್ಯಾಮ್, ಪ್ರಮೀಳಾ ನೇಸರ್ಗಿ, ಕೂಡಲಿ ಶೃಂಗೇರಿ ಮಹಾಸಂಸ್ಥಾನದ ಶ್ರೀ ಅಭಿನವ ಶಂಕರ ಭಾರತಿ ಮಹಾಸ್ವಾಮೀಜಿ, ಮುಂತಾದ ಗಣ್ಯರು ಸಹಭಾಗಿಯಾಗುವರು.
ಈ ಅಧಿವೇಶನ ಕೇವಲ ಆಮಂತ್ರಿತರಿಗಾಗಿ ಇದ್ದು, ಇದರಲ್ಲಿ ದೇವಸ್ಥಾನಕ್ಕೆ ಸಂಬಂಧಿತ ವಿವಿಧ ವಿಷಯಗಳ ಕುರಿತು ಚರ್ಚೆಗಳು ನಡೆಯಲಿದೆ.
ಹಿಂದೂ ಬಾಂಧವರು ನೇರಪ್ರಸಾರವನ್ನು ವೀಕ್ಷಿಸಲು ಈ ಜಾಲತಾಣಕ್ಕೆ ಭೇಟಿ ನೀಡಿ : Hindujagruti.org/Kannada