Menu Close

ಬೆಂಗಳೂರಿನಲ್ಲಿ ನಡೆಯುತ್ತಿರುವ ‘ದ್ವಿತೀಯ ರಾಜ್ಯ ಮಂದಿರ ಅಧಿವೇಶನ ನಿಮಿತ್ತದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸಂದೇಶ ! ರಾಷ್ಟ್ರ ಮತ್ತು ಧರ್ಮ ರಕ್ಷಣೆಗಾಗಿ ಮಂದಿರ ಸಂಸ್ಕೃತಿಯ ಪುನರುಜ್ಜೀವನ ಅನಿವಾರ್ಯ !

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು ಸನಾತನ ಸಂಸ್ಥೆ.

‘ಕರ್ನಾಟಕ ಮಂದಿರ ಅಧಿವೇಶನದಲ್ಲಿ ಉಪಸ್ಥಿತ ಎಲ್ಲ ಭಕ್ತರಿಗೆ ನನ್ನ ನಮಸ್ಕಾರ ! ಭಾರತವು ಪ್ರಾಚೀನ ಕಾಲದಲ್ಲಿ ಸಮೃದ್ಧ ಹಾಗೂ ಸಂಪದ್ಭರಿತ ದೇಶವಾಗಿತ್ತು. ಅಂದಿನ ಜನರು ಆನಂದ ಹಾಗೂ ಸಮಾಧಾನದಲ್ಲಿದ್ದರು. ಅಲ್ಲಿ ಲೌಕಿಕ ಹಾಗೂ ಪಾರಲೌಕಿಕ ವಿದ್ಯೆ ಹಾಗೂ ಕಲೆ ಪ್ರವಹಿಸುತ್ತಿತ್ತು. ಇದರ ಕಾರಣವೆಂದರೆ ಪ್ರಾಚೀನ ಕಾಲದಲ್ಲಿ ದೇವಾಲಯಗಳು ನಿಜವಾಗಿಯೂ ಸನಾತನ ಧರ್ಮದ ಆಧಾರಶಿಲೆಯಾಗಿದ್ದುವು. ಸನಾತನ ಧರ್ಮದ ಜ್ಞಾನದ ಪ್ರಸಾರ, ಪ್ರಚಾರ ಮತ್ತು ಸಂವರ್ಧನೆ ಮಾಡುವ ಕಾರ್ಯ ದೇವಾಲಯಗಳ ಮೂಲಕ ಮಾಡಲಾಗುತ್ತಿತ್ತು. ಅದರಿಂದ ಧರ್ಮಪರಾಯಣರು, ರಾಷ್ಟ್ರನಿಷ್ಠರು, ವಿದ್ವಾಂಸರು ಹಾಗೂ ತೇಜಸ್ವೀ ಪೀಳಿಗೆ ನಿರ್ಮಾಣವಾಗುತ್ತಿತ್ತು.
ಸಂಕ್ಷಿಪ್ತದಲ್ಲಿ ಹೇಳುವುದಾದರೆ, ಮಂದಿರ ಸಂಸ್ಕೃತಿಯ ಸಂವರ್ಧನೆಯಲ್ಲಿ ವ್ಯಕ್ತಿಯ ಆಧ್ಯಾತ್ಮಿಕ ವಿಕಾಸ ಮಾತ್ರವಲ್ಲ, ರಾಷ್ಟ್ರದ ಸರ್ವಾಂಗೀಣ ವಿಕಾಸವೂ ಸಮಾವೇಶವಾಗಿದೆ.
ದುರದೃಷ್ಠವಶಾತ್ ಇಂದು ಮಂದಿರಗಳ ವೈಭವಶಾಲಿ ವಂಶಾಧಿಕಾರ ಕ್ಷೀಣವಾಗಿದೆ. ಮಂದಿರಗಳ ಮೂಲಕ ದೇವರ ಭಕ್ತಿ ಮಾಡುವುದು ಕಾಣಿಸುವುದಿಲ್ಲ; ರಾಷ್ಟ್ರಭಕ್ತಿ ಹಾಗೂ ಧರ್ಮಶಕ್ತಿ ನಿರ್ಮಾಣದ ಕಾರ್ಯ ನಡೆಯುವುದು ಕಾಣಿಸುವುದಿಲ್ಲ. ರಾಮಮಂದಿರ ಸಿದ್ಧವಾಯಿತು; ಆದರೂ ರಾಮರಾಜ್ಯ ಬಾಕಿಯಿದೆ. ಆದ್ದರಿಂದ ಭಾರತದಲ್ಲಿ ನಿಜವಾಗಿಯೂ ರಾಮರಾಜ್ಯವನ್ನು ತರಲಿಕ್ಕಿದ್ದರೆ, ಪ್ರತಿಯೊಂದು ಮಂದಿರವೂ ರಾಷ್ಟ್ರ ಹಾಗೂ ಧರ್ಮ ರಕ್ಷಣೆಗಾಗಿ ಆವಶ್ಯಕವಾಗಿರುವ ಮಂದಿರ ಸಂಸ್ಕೃತಿಯನ್ನು ಪುನರುಜ್ಜೀವನಗೊಳಿಸುವುದು ಅಪರಿಹಾರ್ಯವಾಗಿದೆ.’

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ, ಸಂಸ್ಥಾಪಕರು ಸನಾತನ ಸಂಸ್ಥೆ. (೨೪.೧೨.೨೦೧೪)

Related News