ಹಿಂದೂಗಳ ಮೇಲೆ ಅಮಾನವೀಯ ದಾಳಿ ಖಂಡಿಸಿ ಜಾಗೃತಿ !
ವಿಜಯಪುರ : ಬಾಂಗ್ಲಾದೇಶದಲ್ಲಿ ಹಿಂದೂ ಸಮುದಾಯದ ಮೇಲೆ ನಿರಂತರ ದಾಳಿಗಳು ನಡೆಯುತ್ತಿವೆ. ಇಲ್ಲಿಯವರೆಗೆ 230 ಜನರು ಸಾವನ್ನಪ್ಪಿದ್ದಾರೆ. ಬಾಂಗ್ಲಾದೇಶದ 64 ಜಿಲ್ಲೆಗಳ ಪೈಕಿ 52 ಜಿಲ್ಲೆಗಳಲ್ಲಿ ಹಿಂದೂ ವಿರೋಧಿ ಹಿಂಸಾಚಾರದ ಘಟನೆಗಳು ನಡೆದಿವೆ. ಶೇಖ್ ಹಸೀನಾ ಸರಕಾರ ರಾಜೀನಾಮೆ ನೀಡಿದ ನಂತರ ಹಿಂದೂಗಳ ಮೇಲಿನ ಹಲ್ಲೆಗಳು ಹೆಚ್ಚಾಗುತ್ತಿವೆ. ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಹಿಂಸಾಚಾರ ಹೆಚ್ಚಾಗಿದೆ. ಇಲ್ಲಿ ಹಿಂದೂ ಸಮುದಾಯವು ಭಯದ ವಾತಾವರಣದಲ್ಲಿ ಜೀವನ ನಡೆಸುತ್ತಿದೆ. ಇತ್ತೀಚೆಗೆ, ಹಿಂದೂ ಯುವಕ, ಉತ್ಸವ್ ಮಂಡಲನನ್ನು ತಥಾಕಥಿತ ಧರ್ಮನಿಂಧನೆಯ ಆರೋಪದ ಮೇಲೆ ಜಿಹಾದಿ ಜನಸಮೂಹವು ನೇರವಾಗಿ ಪೊಲೀಸ್ ಠಾಣೆಗೆ ನುಗ್ಗಿ ಆ ಯುವಕನ ಎರಡೂ ಕಣ್ಣುಗಳನ್ನು ಕಿತ್ತು ಹೊಸಕಿ ಹಾಕಿದೆ. ಬಾಂಗ್ಲಾದೇಶದಲ್ಲಿ ಅಲ್ಲಿನ ಕಟ್ಟರವಾದಿ ಜಿಹಾದಿಗಳು ಹಿಂದೂಗಳನ್ನು ರಾಜಾರೋಷವಾಗಿ ಕೊಲ್ಲುತ್ತಾರೆ, ಹಿಂದೂ ಮನೆಗಳನ್ನು ಸುಡುತ್ತಾರೆ, ಹಿಂದೂ ದೇವಸ್ಥಾನಗಳನ್ನು ಧ್ವಂಸ ಮಾಡುತ್ತಾರೆ, ಭೂಮಿಯನ್ನು ಕಬಳಿಸುತ್ತಾರೆ, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ಮಾಡುತ್ತಾರೆ. ಮುಸ್ಲಿಂ ಸಮುದಾಯದ ಮೇಲಿನ ಯಾವುದೇ ದಾಳಿಗಳಾದರೆ ಇತರ ಮುಸ್ಲಿಂ ರಾಷ್ಟ್ರಗಳು ಬಲವಾಗಿ ವಿರೋಧಿಸುವಂತೆ, ಭಾರತವು ಬಾಂಗ್ಲಾದೇಶದ ಹಿಂದೂಗಳ ರಕ್ಷಣೆಗೆ ಮುಂದಾಗಬೇಕು ಮತ್ತು ಬಾಂಗ್ಲಾದೇಶಿ ನುಸುಳುಕೋರರನ್ನು ದೇಶದಿಂದ ಹೊರಹಾಕಬೇಕು, ಬಾಂಗ್ಲಾದೇಶಿ ಉತ್ಪನ್ನಗಳನ್ನು ಬಹಿಸ್ಕರಿಸಿ, ಬಾಂಗ್ಲಾದೇಶದ ಆಕ್ರಮಣಕಾರರಿಗೆ ಸಹಾಯ ಮಾಡುವವರ ಮೇಲೆ ರಾಷ್ಟ್ರದ್ರೋಹದ ಅಪರಾಧ ದಾಖಲಿಸಬೇಕೆಂದು ಹಲವು ಫಲಕಗಳನ್ನು ಹಿಡಿದುಕೊಂಡು ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಮಂಜುನಾಥ, ಸುಪ್ರೀತ ಸಾಲುಂಕೆ, ಅಭಿಷೇಕ ಕಾಂಬ್ಳೆ, ಅಕ್ಷಯ ಕಾಂಬ್ಳೆ, ಸಂತೋಷ ವಿಶ್ವಕರ್ಮ, ಸಚಿನ ರಜಪೂತ, ಸಾಗರ ರಜಪೂತ, ಸಚಿನ ಪೂಜಾರಿ, ರೋಹಿತ ರಜಪೂತ ಮತ್ತು ಹಿಂದೂ ಜನಜಾಗೃತಿ ಸಮಿತಿಯ ಶಿವಪುತ್ರ ತಾಳಿಕೋಟಿ, ಎಸ್,ಬಿ. ಪಾಟೀಲ, ರಘು ಕದಂ, ಸಾಗರ ದಳವಾಯಿ,ಕವಿತಾ ಕೋಲಾರ ಇತರರು ಇದ್ದರು.