ಸನಾತನ ಧರ್ಮಶಿಕ್ಷಾ ಪ್ರದರ್ಶಿನಿಯಿಂದ ಅಧ್ಯಾತ್ಮಪ್ರಸಾರ ಮಾಡುವುದು ಮಹತ್ವಪೂರ್ಣ ಹಾಗೂ ದೊಡ್ಡ ಧರ್ಮಕಾರ್ಯವಾಗಿದೆ ! – ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜರು
ಕುಂಭಮೇಳದಲ್ಲಿ ಸನಾತನ ಸಂಸ್ಥೆಯ ಪ್ರದರ್ಶಿನಿಯನ್ನು ಉದ್ಘಾಟಿಸುತ್ತಿರುವ ಎಡದಿಂದ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಮಹಾನಿರ್ವಾಣಿ ಅಖಾಢಾದ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜರು, ಭಾಜಪದ ಮಾಜಿ ಶಾಸಕರಾದ ಡಾ. ಸಂದೀಪ್ ಧುರ್ವೆ ಮತ್ತಿತರ ಗಣ್ಯರು
ಪ್ರಯಾಗರಾಜ – ಸನಾತನ ಧರ್ಮದ ಚಿಕ್ಕ ಚಿಕ್ಕ ಕೃತಿಗಳನ್ನು ಆಚರಣೆಗೆ ತರುವ ದೃಷ್ಟಿಯಿಂದ ಸನಾತನ ಧರ್ಮಶಿಕ್ಷಾ ಪ್ರದರ್ಶಿನಿ ಉಪಯುಕ್ತವಾಗಿದೆ. ಸನಾತನ ಸಂಸ್ಥೆಯಿಂದ ಆಯೋಜಿತ ‘ಸನಾತನ ಧರ್ಮಶಿಕ್ಷಾ ಪ್ರದರ್ಶಿನಿಯ ಮಾಧ್ಯಮದಿಂದ ನಡೆಯುವ ಅಧ್ಯಾತ್ಮಪ್ರಸಾರವು ಮಹತ್ವಪೂರ್ಣ ಹಗೂ ದೊಡ್ಡ ಧರ್ಮಕಾರ್ಯವಾಗಿದೆ. ಈ ಕಾರ್ಯಕ್ಕೆ ನಮ್ಮ ಆಶೀರ್ವಾದ ನಿರಂತರವಾಗಿದೆ. 6 ವರ್ಷಗಳಿಂದ ಉಜ್ಜೈನಲ್ಲಿನ ಕುಂಭಮೇಳದಲ್ಲಿ ಸನಾತನ ಸಂಸ್ಥೆಯೊಂದಿಗೆ ನಾನು ಜೋಡಿಸಿಕೊಂಡಿದ್ದೇನೆ. ನಾನು ಸನಾತನದ ಸದಸ್ಯನೇ ಆಗಿದ್ದೇನೆ ಎಂದು ಇಂದೂರಿನ ಮಹಾನಿರ್ವಾಣಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿಯವರು ಉದ್ಗಾರ ತೆಗೆದರು.
12 ಜನವರಿಯಂದು ಪ್ರಯಾಗರಾಜದಲ್ಲಿನ ಕುಂಭಮೇಳದಲ್ಲಿನ ‘ಸನಾತನ ಧರ್ಮಶಿಕ್ಷಾ ಪ್ರದರ್ಶಿನಿ’ ದೀಪ ಪ್ರಜ್ವಲನೆಯೊಂದಿಗೆ ಉದ್ಘಾಟನೆಯಾದ ನಂತರ ಅವರು ಮಾರ್ಗದರ್ಶನ ಮಾಡುತ್ತಿದ್ದರು. ಸ್ವಾಮಿ ಪ್ರಣವಾನಂದ ಸರಸ್ವತಿ ಮಹಾರಾಜರು ಆದಿವಾಸಿ ಕ್ಷೇತ್ರಗಳಲ್ಲಿ ನಡೆಯುವ ಮತಾಂತರಗಳನ್ನು ತಡೆಯುವುದು ಹಾಗೂ ಆದಿವಾಸಿ ಮಕ್ಕಳಿಗೆ ಗುರುಕುಲಗಳಲ್ಲಿ ಶಿಕ್ಷಣ ನೀಡುವ ಕಾರ್ಯ ಮಾಡುತ್ತಾರೆ. ಈ ವೇಳೆ ಪ್ರಮುಖ ಅತಿಥಿಗಳಾಗಿ ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಮಹಾರಾಷ್ಟ್ರದ ಯಾವತಮಾಳನ ಭಾಜಪದ ಮಾಜಿ ಶಾಸಕರಾದ ಡಾ. ಸಂದೀಪ ಧುರ್ವೆ ಉಪಸ್ಥಿತರಿದ್ದರು. ಈ ವೇಳೆ ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ ಇವರು ಪ. ಪೂ. ಮಹಾರಾಜರಿಗೆ ಸಂಪೂರ್ಣ ಪ್ರದರ್ಶಿನಿ ತೋರಿಸಿದರು.
ಪ್ರದರ್ಶಿನಿಯಲ್ಲಿ ಅಧ್ಯಾತ್ಮದ ಕುರಿತ ಗ್ರಂಥಪ್ರದರ್ಶಿನಿ !
ಸನಾತನ ಸಂಸ್ಥೆಯ ಪ್ರದರ್ಶಿನಿಯ ಉದ್ಘಾಟನೆ ನಂತರ ಮಾತನಾಡುತ್ತಿರುವ (ಎಡದಿಂದ) ಸನಾತನ ಸಂಸ್ಥೆಯ ವಕ್ತಾರರಾದ ಶ್ರೀ. ಚೇತನ ರಾಜಹಂಸ, ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕರಾದ ಸದ್ಗುರು (ಡಾ.) ಚಾರುದತ್ತ ಪಿಂಗಳೆ, ಮಹಾನಿರ್ವಾಣಿ ಅಖಾಡಾದ ಮಹಾಮಂಡಲೇಶ್ವರ ಸ್ವಾಮಿ ಪ್ರಣವಾನಂದ ಸರಸ್ವತಿ, ಹಾಗೂ ಮಾಜಿ ಶಾಸಕರಾದ ಡಾ. ಸಂದೀಪ ಧುರ್ವೆ
ಸನಾತನ ಧರ್ಮಶಿಕ್ಷಾ ಪ್ರದರ್ಶಿನಿಯು ಕುಂಭಮೇಳದ ಸೆಕ್ಟರ್ 19 ರ ಮೋರಿ ಮಾರ್ಗ-ಮುಕ್ತಿ ಮಾರ್ಗ ಚೌಕ್‌ನಲ್ಲಿ ಆಯೋಜಿಸಲಾಗಿದೆ. 12 ಜನವರಿಯಿಂದ 15 ಫೆಬ್ರವರಿ ವರೆಗೆ ಬೆಳಿಗ್ಗೆ 9 ರಿಂದ ರಾತ್ರಿ 9 ರ ತನಕ ಪ್ರದರ್ಶಿನಿ ಎಲ್ಲರಿಗಾಗಿ ತೆರೆದಿರುತ್ತದೆ. ಇಲ್ಲಿ ಅಧ್ಯಾತ್ಮ, ಆಯುರ್ವೇದ ಹಾಗೂ ಧರ್ಮಶಿಕ್ಷಣ ನೀಡುವ ಗ್ರಂಥಗಳು ಹಾಗೂ ಫಲಕಗಳ ಭವ್ಯ ಪ್ರದರ್ಶಿನಿಯನ್ನು ಆಯೋಜಿಸಲಾಗಿದೆ. 13 ಭಾಷೆಗಳಲ್ಲಿ 366 ಕ್ಕೂ ಅಧಿಕ ಗ್ರಂಥಗಳಿದ್ದು ಹಿಂದೂ ಜೀವನಪದ್ಧತಿ, ಸಂಸ್ಕೃತಿ, ಧರ್ಮ, ಅಧ್ಯಾತ್ಮ, ರಾಷ್ಟ್ರಕ್ಕೆ ಸಂಬಂಧಿಸಿದ ಅಮೂಲ್ಯ ಜ್ಞಾನವು ಭಾವಿಕರಿಗೆ ಸಿಗಲಿದೆ.
ಈ ವೇಳೆ ಸನಾತನದ ವಕ್ತಾರರಾದ ಶ್ರೀ. ಚೇತನ ರಾಜಹಂಸ ಮಾತನಾಡಿ ಕುಂಭಮೇಳಕ್ಕೆ ಬಂದಿರುವ ಮತ್ತು ಬರಲಿರುವ ಭಾವಿಕರು ಧರ್ಮಮಯ ದಿನಚರ್ಯ, ಸನಾತನ ಧರ್ಮದ ಸುಲಭ ಆಚರಣೆ, ಧಾರ್ಮಿಕ ಕೃತಿಗಳ ಶಾಸ್ತ್ರ, ಹಾಗೂ ಆನಂದಿ ಜೀವನಕ್ಕಾಗಿ ಅಧ್ಯಾತ್ಮ ಕಲಿಯಲು ಸನಾತನ ಸಂಸ್ಥೆಯು ಆಯೋಜಿಸಿದ ಸನಾತನ ಧರ್ಮಶಿಕ್ಷಾ ಪ್ರದರ್ಶಿನಿಯ ಲಾಭ ಪಡೆಯಿರಿ ಎಂದು ಕರೆ ನೀಡಿದರು.