Menu Close

Sign Petition : ಬಾಂಗ್ಲಾದೇಶದ ಹಿಂದೂಗಳು ಮತ್ತು ದೇವಸ್ಥಾನಗಳ ರಕ್ಷಣೆಗಾಗಿ ಭಾರತ ಸರಕಾರ ತಕ್ಷಣ ಕ್ರಮ ಕೈಗೊಳ್ಳಬೇಕು !

ಬಾಂಗ್ಲಾದೇಶದಲ್ಲಿ ಮೀಸಲಾತಿ ವಿಷಯದಿಂದ ಶುರುವಾಗಿರುವ ಹಿಂಸಾಚಾರ ಈಗ ತುತ್ತತುದಿ ತಲುಪಿದೆ. ಹಿಂಸಾಚಾರ ಈಗ ಅರಾಜಕತೆಯಲ್ಲಿ ಬದಲಾಗಿದೆ. ಸರಕಾರ ವಿರೋಧಿ ಪ್ರತಿಭಟನೆ ಈಗ ಹಿಂದುಗಳ ವಿರುದ್ಧ ಆರಂಭವಾಗಿದೆ. ಪ್ರಯತ್ನಪೂರ್ವಕವಾಗಿ ಹಿಂದುಗಳನ್ನು ಗುರಿ ಮಾಡುವುದು ಮತ್ತು ಬಹಿರಂಗವಾಗಿ ಅವರ ಹತ್ಯೆ ಮಾಡುವುದು, ಹಿಂದೂಗಳ ಮನೆಯ ಮೇಲೆ ದಾಳಿ ನಡೆಸುವುದು, ಹಿಂದುಗಳ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದುಗಳ ದೇವಸ್ಥಾನಗಳನ್ನು ಧ್ವಂಸ ಮಾಡುವುದು ಮತ್ತು ಸುಟ್ಟು ಹಾಕುವುದು, ಹಿಂದೂ ಮಹಿಳೆಯರ ಮೇಲೆ ಬಲಾತ್ಕಾರ ನಡೆಸುವುದು, ಹಿಂದೂಗಳನ್ನು ಸ್ಥಳಾಂತರಿಸುವುದು ಮುಂತಾದ ದೌರ್ಜನ್ಯ ನಡೆಯುತ್ತಿವೆ. ಎಲ್ಲಾ ಘಟನೆಗಳಿಂದ ಅಲ್ಲಿಯ ಅಲ್ಪಸಂಖ್ಯಾತ ಹಿಂದುಗಳಲ್ಲಿ ಬಹಳಷ್ಟು ಭಯದ ವಾತಾವರಣವಿದೆ. ಈ ಸಂದರ್ಭದಲ್ಲಿ, ಬಾಂಗ್ಲಾದೇಶದ ಸೈನ್ಯ ಹಿಂದುಗಳಿಗೆ ರಕ್ಷಣೆ ನೀಡುವುದಾಗಿ ಆಶ್ವಾಸನೆ ನೀಡಿದೆ, ಆದರೆ ಭಾರತ ಸರಕಾರ ಅವರ ಮೇಲೆ ವಿಶ್ವಾಸ ಇಡಬಾರದು ಮತ್ತು ಹಿಂದೂ ಜನಾಂಗ ಮತ್ತು ಅಲ್ಲಿನ ದೇವಸ್ಥಾನಗಳ ರಕ್ಷಣೆಗಾಗಿ ತಕ್ಷಣ ಕ್ರಮ ಕೈಗೊಳ್ಳಬೇಕು. ಎಂದು ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಮಾನ್ಯ ಪ್ರಧಾನಮಂತ್ರಿ ನರೇಂದ್ರ ಮೋದಿ ಇವರಿಗೆ ಆಗ್ರಹಿಸಲಾಗಿದೆ.

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ದೌರ್ಜನ್ಯದ ಭಯಾನಕ ವಿಡಿಯೋ ಸೋಶಿಯಲ್ ಮೀಡಿಯಾದ ಮೂಲಕ ಬೆಳಕಿಗೆ ಬರುತ್ತಿವೆ, ಇದರಿಂದ ಭಾರತ ಸರಕಾರ ಕೂಡಲೇ ಅದರ ಕಡೆಗೆ ಗಮನ ನೀಡದಿದ್ದರೆ, ಬಾಂಗ್ಲಾದೇಶ ಎರಡನೆಯ ಪಾಕಿಸ್ತಾನವಾಗುವುದೆ ಎಂಬ ಆತಂಕ ನಿರ್ಮಾಣವಾಗಿದೆ. ಈ ಹಿಂಸಾಚಾರವನ್ನು ಗಮನಿಸಿ ಹಿಂದೂ ಜನಜಾಗೃತಿ ಸಮಿತಿ ಸರಕಾರಕ್ಕೆ ಈ ಬೇಡಿಕೆಗಳನ್ನು ಸಲ್ಲಿಸುತ್ತಿದೆ.

ಹಿಂದೂ ಜನಜಾಗೃತಿ ಸಮಿತಿಯ ಬೇಡಿಕೆಗಳು

1

ಮೊಟ್ಟ ಮೊದಲು ಬಾಂಗ್ಲಾದೇಶದ ಹಿಂದುಗಳ ಮೇಲಿನ ದಾಳಿಗಳು, ಮನೆಯ ಲೂಟಿ, ದೇವಸ್ಥಾನಗಳ ಮೇಲಿನ ದಾಳಿ, ಮೂರ್ತಿಗಳು ಧ್ವಂಸಗೊಳಿಸುವುದು, ಮಹಿಳೆಯರ ಮೇಲೆ ನಡೆಯುತ್ತಿರುವ ಬಲಾತ್ಕಾರ ತಡೆಯಲು ಅಲ್ಲಿಯ ಸೈನ್ಯಶಕ್ತಿಗೆ ಕಠೋರ ಆದೇಶ ನೀಡಬೇಕು.

2

ಸದ್ಯ ಸುಮಾರು 5 ಕೋಟಿ ಬಾಂಗ್ಲಾದೇಶಿ ನುಸುಳುಕೋರರು ಭಾರತದಲ್ಲಿ ನುಸುಳಿದ್ದಾರೆ, ಈ ಘಟನೆಯ ನಂತರ ಇಲ್ಲಿ ನುಸುಳುವಿಕೆಯು ಮತ್ತೆ ಹೆಚ್ಚಾಗುವ ಅನುಮಾನ ಇರುವುದರಿಂದ ಭಾರತೀಯ ಗಡಿಯಲ್ಲಿ ಕಠಿಣ ಬಂದೋಬಸ್ತ್ ಮಾಡಬೇಕು.

3

ಬಾಂಗ್ಲಾದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದಿಂದ ಅಲ್ಲಿಂದ ಸ್ಥಳಾಂತರವಾಗಲು ಬಯಸುತ್ತಿರುವ ಹಿಂದೂಗಳನ್ನು ಭಾರತ ಸರಕಾರ ನಾಗರಿಕ ಸಂಶೋಧನಾ ಅಧಿನಿಯಮದ (ಸಿ ಎ ಎ) ಮೂಲಕ ಅವಕಾಶ ನೀಡಬೇಕು.

4

ಅಲ್ಲಿನ ಹಿಂದುಗಳ ಮೇಲಿನ ದಾಳಿಗಳು ಹೆಚ್ಚುತ್ತಿರುವುದರಿಂದ ಅವರನ್ನು ಸುರಕ್ಷಿತ ಸ್ಥಾನಕ್ಕೆ ತಲುಪಿಸುವುದು ಮತ್ತು ಅವರಿಗೆ ತಕ್ಷಣ ರಕ್ಷಣೆ ನೀಡಬೇಕು.

5

ಬಾಂಗ್ಲಾದೇಶದಲ್ಲಿನ ಹಿಂದುಗಳ ಜೀವ ಮತ್ತು ಸಂಪತ್ತಿನ ನಷ್ಟಕ್ಕೆ ತಕ್ಷಣ ಪರಿಹಾರ ನೀಡಬೇಕು.

6

ಭಾರತ ಸರಕಾರ ತಕ್ಷಣ ಈ ವಿಷಯವನ್ನು ವಿಶ್ವಸಂಸ್ಥೆಯ ಮುಂದಿಟ್ಟು ಅಲ್ಲಿನ ಪ್ರತಿನಿಧಿಗಳನ್ನು ಬಾಂಗ್ಲಾದೇಶದ ಪರ್ಯಟನೆ ಮತ್ತು ಅಮಾಯಕರ ರಕ್ಷಣೆಗೆ ಕಳಿಸಬೇಕು.

ಹಿಂದೂ ಜನಜಾಗೃತಿ ಸಮಿತಿಯ ಪ್ರಯತ್ನಗಳು

ಸಮಿತಿಯು ಈ ಕೆಳಗಿನ ವಿಷಯಗಳ ಕುರಿತು ಆತಂಕ ವ್ಯಕ್ತ ಪಡಿಸಿದೆ !

೧. ಬಾಂಗ್ಲಾದೇಶದಲ್ಲಿ ಹಿಂದೂಗಳ ಸಾಮೂಹಿಕ ನರಸಂಹಾರ ಹಾಗೂ ಹೆಚ್ಚಿನ ಪ್ರಮಾಣದಲ್ಲಿ ಹಿಂಸಾಚಾರ ನಡೆಯುವ ಆತಂಕವಿದೆ.

೨. ಈ ಘಟನೆಯ ನಂತರ ಕಟ್ಟರ ಜಿಹಾದಿ ಭಯೋತ್ಪಾದಕರ ಮನೋಧೈರ್ಯ ಹೆಚ್ಚಾಗುವುದು ಮತ್ತು ಅವರು ತಮ್ಮ ತೆರೆಮರೆಯಲ್ಲಿರುವ ಬೆಂಬಲಿಗರ ಸಹಾಯದಿಂದ ಭಾರತದಲ್ಲಿಯೂ ಹಿಂಸಾಚಾರ ನಡೆಸುವ ಸಂಶಯವಿದೆ.

೩. ಸಂಭಾವ್ಯ ಅಪಾಯನ್ನು ಎದುರಿಸಲು ಭಾರತೀಯ ಪೊಲೀಸ್ ವ್ಯವಸ್ಥೆ, ಸರಕಾರ ಜೊತೆಗೆ ಎಲ್ಲಾ ಭಾರತೀಯರು ಸತರ್ಕರಾಗಿರಬೇಕು.

೪. ಸಮಾಜವು ಆತ್ಮರಕ್ಷಣೆಗಾಗಿ ಸಜ್ಜಿತ ಮತ್ತು ತಯಾರಿಯಲ್ಲಿರಬೇಕಾಗುವುದು.

ಬಾಂಗ್ಲಾದೇಶದಲ್ಲಿನ ಹಿಂದೂ ಜನಾಂಗದ ರಕ್ಷಣೆ ಮತ್ತು ನಮ್ಮ ದೇಶದ ಸುರಕ್ಷೆಗಾಗಿ ಭಾರತ ಸರಕಾರ ತಕ್ಷಣ ಮತ್ತು ನಿರ್ಣಾಯಕ ಕಾರ್ಯಾಚರಣೆ ನಡೆಸಲು ಹಿಂದೂ ಜನಜಾಗೃತಿ ಸಮಿತಿ ಕರೆ ನೀಡಿದೆ.

ಬಂಡಾಯ ಶೇಖ್ ಹಸೀನಾ ಸರಕಾರದ ವಿರುದ್ಧ; ಆದರೆ ಗುರಿಯಾಗಿದ್ದು ಹಿಂದೂ ಸಮಾಜ !

ಬಾಂಗ್ಲಾದೇಶದಲ್ಲಿ ಹಿಂದೂಗಳ ಮನೆ, ಅಂಗಡಿ, ದೇವಸ್ಥಾನಗಳ ಧ್ವಂಸ, ಲೂಟಿಗಳು ನಡೆಯುತ್ತಿವೆ. ಅರಾಜಕತೆ ನಿಲ್ಲುವ ಲಕ್ಷಣಗಳೇ ಕಾಣುತ್ತಿಲ್ಲ. ಯಾವ ಜನರು ಶೇಖ ಹಸೀನಾರನ್ನು ಅಧಿಕಾರದಿಂದ ಹೊರಗಿರಿಸಲು ಕಾರ್ಯನಿರತವಾಗಿದ್ದರೋ, ಅವರೇ ಈಗ ಅಲ್ಲಿಯ ಹಿಂದುಗಳ ಮೇಲೆ ದಾಳಿ ನಡೆಸುತ್ತಿದ್ದಾರೆ. ವಿರೋಧ ಪ್ರತಿಭಟನೆಯ ಮರೆಯಲ್ಲಿ ಇಲ್ಲಿಯವರೆಗೆ 100 ಕ್ಕು ಹೆಚ್ಚು ಜನರು ಸಾವನ್ನಪ್ಪಿದ್ದಾರೆ. ಅಲ್ಲಿನ ವರದಿಗನುಸಾರ ಹಿಂದುಗಳ ಮನೆಗಳು ಮತ್ತು ದೇವಸ್ಥಾನಗಳನ್ನು ಗುರಿ ಮಾಡುತ್ತಿರುವುದು ಬೆಳಕಿಗೆ ಬಂದಿದೆ. ಇಸ್ಕಾನ್ ಮತ್ತು ಕಾಳಿ ದೇವಸ್ಥಾನದ ಮೇಲೆಯೂ ದಾಳಿಗಳು ನಡೆದಿವೆ. ಅದರ ನಂತರ ಹಿಂದೂಗಳು ಪ್ರಾಣ ರಕ್ಷಿಸಿಕೊಳ್ಳಲು ಅಡಗಿ ಕುಳಿತಿದ್ದಾರೆ. ಅದರಲ್ಲಿ ಕೆಲವು ಹಿಂದುಗಳ ಹತ್ಯೆಯೂ ನಡೆದಿದೆ.

ಬಾಂಗ್ಲಾದೇಶದ ಮೇಹರುಪುರ ಇಸ್ಕಾನ್ ದೇವಸ್ಥಾನಕ್ಕೂ ಬೆಂಕಿ ಹಚ್ಚಲಾಗಿದೆ. ಬಾಂಗ್ಲಾದೇಶದಲ್ಲಿ ಹಿಂದೂ ಮಂದಿರಗಳನ್ನು ಗುರಿ ಮಾಡುತ್ತಿರುವುದು ಮೊದಲ ಬಾರಿಯೇನಲ್ಲ. ಇದಕ್ಕಿಂತ ಹಿಂದೆ ೨೦೨೧, ೨೦೨೨ ಮತ್ತು ಈಗ ೨೦೨೪, ಕಳೆದ ನಾಲ್ಕು ವರ್ಷದಲ್ಲಿ ಬಾಂಗ್ಲಾದೇಶದ ಇಸ್ಕಾನ್ ದೇವಸ್ಥಾನದ ಮೇಲೆ ಮೂರು ಬಾರಿ ದಾಳಿ ನಡೆದಿದೆ. ಹಿಂಸಾಚಾರದ ನಡುವೆ 54 ಜಿಲ್ಲೆಯಲ್ಲಿನ ಅಲ್ಪಸಂಖ್ಯಾತ ಹಿಂದೂ ಜನಾಂಗದ ಮೇಲೆ ಗುರಿ ಇಡಲಾಗಿದೆ.

Related News