ಬಂಗಾಲದ ಗಂಗಾ ನದಿಯ ದಡದಲ್ಲಿರುವ ನವದ್ವೀಪ ಊರಿನಲ್ಲಿ ಬೇವಿನ ಮರದ ಪರ್ಣಕುಠಿಯಲ್ಲಿ ೧೪೩೩ ಫಾಲ್ಗುಣ ಶುಕ್ಲ ಪೂರ್ಣಿಮೆಯಂದು ಜಗನ್ನಾಥ ಮತ್ತು ಶುಚಿದೇವಿಗೆ ಪುತ್ರ ಜನಿಸಿದನು.ಮಗುವಿಗೆ ವಿಶ್ವಂಭರ ಎಂದು ನಾಮಕರಣ ಮಾಡಲಾಯಿತು.ಅವರ ತಾಯಿ ಅವನಿಗೆ ನಿಮಾಈ ಎಂದು ಕರೆಯುತ್ತಿದ್ದರು. ಅವರೆ ಚೈತನ್ಯ ಮಹಾಪ್ರಭು!
ಅವರು ಪಂಡಿತ ಗಂಗಾರಾಮರ ಹತ್ತಿರ ಸಂಸ್ಕೃತ ಮತ್ತು ನ್ಯಾಯಶಾಸ್ತ್ರ ಅಧ್ಯಯನ ಮಾಡಿದರು. ಇದಾದಮೇಲೆ ಸ್ವಥಃ ಅವರೆ ಪಾಠಶಾಲೆಯನ್ನು ಸ್ಥಾಪನೆ ಮಾಡಿದರು. ಅವರ ಗಣನೆಯನ್ನು ಶ್ರೇಷ್ಟ ಪಂಡಿತರಂತೆ ಮಾಡಲಾಗುತ್ತಿತ್ತು. ನಿಮಾಈಯವರು ಬೃಹಸ್ಪತಿ ಸಮಾನ ಅಲೌಕಿಕ ತೆಜಸ್ವೀಪುರುಷರಾಗಿದ್ದರು. ಅವರಿಗೆ ವಿದ್ಯಾಸಾಗರ ಎಂಬ ಪದವಿ ಪ್ರಾಪ್ತಿಯಾಗಿತ್ತು. ಪಂಡಿತ ವಲ್ಲಭಾಚಾರ್ಯರ ಸುವಿಧ್ಯಾ ಕನ್ಯಾ ಲಕ್ಷ್ಮಿ ಜೊತೆಗೆ ಅವರ ವಿವಾಹವಾಯಿತು. ಜ್ಯೇಷ್ಠ ಪಂಡಿತರ ಸಹಿತ ಅವರು ಪೂರ್ವ ಬಂಗಾಲಕ್ಕೆ ಹೋಗಿದ್ದರು. ಆಗ ಅವರ ಪತ್ನಿಯು ಸರ್ಪದೋಶದಿಂದ ಮೃತ್ಯು ಹೊಂದಿದರು. ತಾಯಿಯ ಆಗ್ರಹದ ಕಾರಣ ಅವರು ವಿಷ್ನುಪ್ರಿಯ ರಾಜಪಂಡಿತರ ಕನ್ಯೆಯ ಜೊತೆ ಮತ್ತೆ ಮದುವೆ ಆದರು. ಅದೆ ಸಮಯದಲ್ಲಿ ನಿಮಾಈಯವರು ಕೇಶವಪಂಡಿತರನ್ನು ನ್ಯಾಯಶಾಸ್ತ್ರದಲ್ಲಿ ಪರಾಭವಗೊಳಿಸಿ "ಆಚಾರ್ಯ" ಪದವಿಯನ್ನು ಗಳಿಸಿದರು. ವ್ಯಾಕರಣ ಶಾಸ್ತ್ರದಲ್ಲಿ ಅವರು ದೊಡ್ಡ ಗ್ರಂಥ ಬರೆದರು ಮತ್ತು ನ್ಯಾಯಶಾಸ್ತ್ರದಮೇಲೆಯೂ ಗ್ರಂಥ ಬರೆದರು.
ನಿಮಾಈಯವರಿಗೆ ಶ್ರೀ ಕೃಷ್ಣನಮೇಲೆ ಪೂರ್ಣ ಶ್ರದ್ಧೆಯಿತ್ತು. ಶ್ರೀ ಕೃಷ್ಣನ ಭಜನೆ ಹಾಡುತ್ತ ನೃತ್ಯ ಮಾಡುತ್ತ ಭಕ್ತಿಚಿಂತನೆಯಲ್ಲಿ ಏಕಾಗ್ರರಾಗುತ್ತಿದ್ದರು. ಭಕ್ತಿಸಾಧನೆಯಲ್ಲಿ ಅವರ ವೈರಾಗ್ಯ ಹೆಚ್ಚುತ್ತಾ ಹೋಯಿತು. ಅವರ ಮನಸ್ಸಿನಲ್ಲಿ ಸಂನ್ಯಾಸತ್ವ ತೆಗೆದುಕೊಳ್ಳುವ ಪ್ರಭಲ ಇಚ್ಛೆ ಉತ್ಪನ್ನವಾಯಿತು. ಮನೆ–ಸಂಸಾರ ಬಿಟ್ಟು ಕಾಠವ ಗ್ರಾಮಕ್ಕೆ ಹೋದಾಗ ಕೇಶವ ಭಾರತಿ ಗುರುಗಳ ಭೇಟಿ ಆಯಿತು. ಅವರು ನಿಮಾಈಗೆ ಸಂನ್ಯಾಸ ಧೀಕ್ಷೆ ಕೊಟ್ಟು "ಶ್ರೀ ಕೃಷ್ಣ ಚೈತನ್ಯ" ಎಂದು ನಾಮಕರಣ ಮಾಡಿದರು. ಮುಂದೆ ಅವರು "ಚೈತನ್ಯ ಮಹಾಪ್ರಭು" ಎಂದು ಪ್ರಚಲಿತರಾದರು. "ಚೈತನ್ಯ ಮಹಾಪ್ರಭುಗಳು ಎಲ್ಲರಿಗೂ "ಶ್ರೀ ಕೃಷ್ಣನ" ನಾಮಜಪ ಮಾಡಲು ಹೇಳುತ್ತಿದರು. "ಶ್ರೀ ಕೃಷ್ಣ ಭಕ್ತಿಯೇ ಸತ್ಯವಾದ ಪರಮಾರ್ಥ. ಶ್ರೀ ಕೃಷ್ಣನ ನಾಮವೇ ಎಲ್ಲ ಶಾಸ್ತ್ರಗಳ ಸಾರ. "ಹರೇ ಕೃಷ್ಣ ಹರೇ ಕೃಷ್ಣ ಕೃಷ್ಣ ಕೃಷ್ಣ ಹರೇ ಹರೇ" ಈ ನಾಮಸಂಕೀರ್ತನೆ ಲೋಕಪ್ರಿಯವಾಯಿತು. ಎಲ್ಲಾಧರ್ಮದ ಜನರು ಅವರ ಭಕ್ತರಿದ್ದರು. ಅವರು ಕೃಷ್ಣ ಭಕ್ತಿಯನ್ನು ಪ್ರಸಾರ ಮಾಡಿ ಸಾಮಾನ್ಯ ಜನರಿಗೆ ಜೀವನಮುಕ್ತಿಯ ಮಾರ್ಗವನ್ನು ಉಪಲಬ್ಧ ಮಾಡಿದರು.