ಶ್ಲೋಕಗಳು

ಪ್ರತಿದಿನ ಮಾಡಬೇಕಾದ ನಮಸ್ಕಾರಗಳು ಮತ್ತು ಹೇಳಬೇಕಾದ ಶ್ಲೋಕಗಳು

ಕರದರ್ಶನ

ನಮ್ಮ ಅಂಗೈ ಮತ್ತು ಹತ್ತು ಬೆರಳುಗಳಲ್ಲಿ ದೇವರು ವಾಸಿಸುತ್ತಾರೆ. ಅದೇ ಕೈಯಿಂದ ನಾವು ನಮ್ಮ ದೈನಂದಿನ ಜೀವನದ ವ್ಯವಹಾರವನ್ನು ಮಾಡುತ್ತೇವೆ. ಬೆಳಗ್ಗೆ ಪ್ರಥಮವಾಗಿ ಅಂಗೈಯ ದರ್ಶನ ಪಡೆಯುವುದರಿಂದ ಎಲ್ಲ ದೇವತೆಗಳು ನಮಗೆ ದಿನವಿಡೀ ಸಹಾಯ ಮಾಡುತ್ತಾರೆ. ಆದುದರಿಂದ ನಾವು ಅಂಗೈಯ ದರ್ಶನ ಮಾಡುವಾಗ ಮುಂದಿನ ಶ್ಲೋಕವನ್ನು ಹೇಳಬೇಕು.

ಕರಾಗ್ರೇವಸತೇಲಕ್ಷ್ಮೀಕರಮಧ್ಯೆಸರಸ್ವತಿ|
ಕರಮೂಲೇತುಗೋವಿಂದಃಪ್ರಭಾತೇಕರದರ್ಶನಂ||

ಅರ್ಥ :ನಾನು ಬೆಳಗ್ಗೆ ಕೈ ತುದಿಯಲ್ಲಿರುವ ಲಕ್ಷ್ಮೀಯ, ಕೈ ಮಧ್ಯಭಾಗದಲ್ಲಿರುವ ಸರಸ್ವತಿ ಮತ್ತು ಕೈ ಮೂಲದಲ್ಲಿರುವ ಗೋವಿಂದನ ದರ್ಶನವನ್ನು ಪಡೆಯುತ್ತೇನೆ. ಅವರಿಗೆ ವಂದಿಸುತ್ತೇನೆ.

ಭೂಮಿವಂದನೆ

ಪೃಥ್ವಿ, ಆಪ, ತೇಜ, ವಾಯು ಮತ್ತು ಆಕಾಶ ತತ್ತ್ವಗಳಿಂದ ನಮ್ಮ ಶರೀರವು ತಯಾರಾಗಿದೆ. ಅದರಲ್ಲಿ ಪೃಥ್ವಿ ತತ್ತ್ವದ ಪ್ರಭಾವವು ಹೆಚ್ಚಿರುತ್ತದೆ, ಆದುದರಿಂದ ನಮ್ಮ ಎಲ್ಲ ಶುಭ ಕಾರ್ಯಗಳಲ್ಲಿ ಭೂಮಿಯ ಪೂಜೆಯನ್ನು ಮಾಡಲಾಗುತ್ತದೆ. ದಿನವಿಡೀ ನಮ್ಮ ಭಾರವು ಪೃಥ್ವಿಯ ಮೇಲಿರುತ್ತದೆ, ಆದುದರಿಂದ ಬೆಳಗ್ಗೆ ಎದ್ದ ತಕ್ಷಣ ಭೂಮಿಯ ಮೇಲೆ ಕಾಲಿಡುವ ಮೊದಲು ಮುಂದಿನ ಶ್ಲೋಕವನ್ನು ಹೇಳಬೇಕು.

ಸಮುದ್ರವಸನೇದೇವಿಪರ್ವತಸ್ತನಮಂಡಲೇ|
ವಿಷ್ಣುಪತ್ನಿನಮಸ್ತುಭ್ಯಂಪಾದಸ್ಪರ್ಶಕ್ಷಮಸ್ವಮೇ||

ಅರ್ಥ :ಸಮುದ್ರರೂಪಿ ವಸ್ತ್ರವನ್ನು ಧರಿಸಿದವಳಿಗೆ, ಪರ್ವತರೂಪಿ ಸ್ತನಗಳಿರುವ ಮತ್ತು ಭಗವಾನ ವಿಷ್ಣುವಿನ ಪತ್ನಿಯಾಗಿರುವ ಹೇ ಪೃಥ್ವಿದೇವಿ, ನಾನು ನಿನಗೆ ನಮಸ್ಕಾರ ಮಾಡುತ್ತೇನೆ. ನಾನು ಕಾಲಿನಿಂದ ನಿನ್ನನ್ನು ಸ್ಪರ್ಶಿಸುತ್ತೇನೆ, ಇದಕ್ಕಾಗಿ ನೀನು ನನ್ನನ್ನು ಕ್ಷಮಿಸು.

ಗಣೇಶ ವಂದನೆ

ಯಾವುದೇ ಶುಭಕಾರ್ಯವನ್ನು ಶ್ರೀ ಗಣೇಶನ ಪೂಜೆಯಿಂದ ಆರಂಭಿಸಲಾಗುತ್ತದೆ, ಏಕೆಂದರೆ ಗಣಪತಿಯು ಎಂಟು ದಿಕ್ಕುಗಳ ಸ್ವಾಮಿಯಾಗಿದ್ದಾನೆ, ಅದೇ ರೀತಿ ಗಣಪತಿಯು ವಿಘ್ನಹರ್ತಾ ಮತ್ತು ವಿದ್ಯೆಯ ದೇವತೆಯಾಗಿರುವುದರಿಂದ ಮೊದಲು ಅವನ ಆರಾಧನೆಯನ್ನು ಮಾಡಬೇಕು. ಅದಕ್ಕಾಗಿ ಮುಂದಿನ ಶ್ಲೋಕವನ್ನು ಹೇಳಬೇಕು.

ವಕ್ರತುಂಡಮಹಾಕಾಯಸೂರ್ಯಕೋಟಿಸಮಪ್ರಭ|
ನಿರ್ವಿಘ್ನಂಕುರುಮೇದೇವಸರ್ವಕಾರ್ಯೇಷುಸರ್ವದಾ||

ಅರ್ಥ :ವಕ್ರವಾದ ಸೊಂಡಿಲು, ದೊಡ್ಡ ಆಕಾರದ ಶರೀರ ಮತ್ತು ಕೋಟಿ ಸೂರ್ಯರ ಪ್ರಕಾಶದ ತೇಜವು ಯಾರಲ್ಲಿದೆಯೋ, ವಿಘ್ನಹರ್ತಾ ಶ್ರೀ ಗಜಾನನನಿಗೆ ಕಾರ್ಯಸಿದ್ಧಿಯಾಗಲು ನಾನು ನಮಸ್ಕರಿಸುತ್ತೇನೆ.

ಗುರುವಂದನೆ

ಯಾವುದೇ ಮಾರ್ಗದಿಂದ ಸಾಧನೆ ಮಾಡಿದರೂ, ಗುರುಕೃಪೆಯ ವಿನಃ ಮೋಕ್ಷವಿಲ್ಲ, ಆದುದರಿಂದ ಗುರುಗಳ ಬಗ್ಗೆ ಕೃತಜ್ಞತೆಯನ್ನು ವ್ಯಕ್ತ ಪಡಿಸಲು ಮುಂದಿನ ಶ್ಲೋಕವನ್ನು ಹೇಳಬೇಕು.

ಗುರುಬ್ರಹ್ಮಾಗುರುರ್ವಿಷ್ಣುಃಗುರುರ್ದೇವೋಮಹೇಶ್ವರಃ|
ಗುರುಃಸಾಕ್ಷಾತ್ಪರಬ್ರಹ್ಮತಸ್ಮೈಶ್ರೀಗುರವೇನಮಃ||

ಅರ್ಥ :ಅಂದರೆ ಗುರುಗಳೇ ಸಾಕ್ಷಾತ್ ಬ್ರಹ್ಮ, ವಿಷ್ಣು ಮತ್ತು ಮಹಾದೇವ ಆಗಿದ್ದಾರೆ. ಗುರುವೆಂದರೆ ಸಾಕ್ಷಾತ್ ಪರಬ್ರಹ್ಮ. ಇಂತಹ ಪರಿಪೂರ್ಣರಿರುವ ಗುರುವರ್ಯರಿಗೆ ನಾನು ನಮಸ್ಕಾರ ಮಾಡುತ್ತೇನೆ.

Leave a Comment