ಸ್ವಧರ್ಮೆ ನಿಧನಂ ಶ್ರೇಯಃ

ಓರ್ವ ಬಾಲವೀರನು ಧರ್ಮಕ್ಕಾಗಿ ಬಲಿದಾನ ಮಾಡಿಸ್ವಧರ್ಮೆ ನಿಧನಂ ಶ್ರೇಯಃ ವಚನದ ಪಾಲನೆಯನ್ನು ಮಾಡಿರುವುದರ ಬಗ್ಗೆ ತಿಳಿದುಕೊಳ್ಳೋಣ. ಹಕಿಕತರಾಯನು ಸಿಯಾಲಕೊಟದಲ್ಲಿನ ಹದಿಮೂರು ಹದಿನಾಲ್ಕು ವರ್ಷದ ಶಾಲೆಯ ಹುಡುಗ, ಅವನಿಗೆ ಸ್ವಧರ್ಮದ ಮೇಲೆ ಎಷ್ಟು ಅಭಿಮಾನವಿತ್ತೆಂದರೆ ದೇವರನ್ನು ಹೀಯಾಳಿಸಿದ ಮುಸಲ್ಮಾನ ಮಕ್ಕಳ್ಳಿಗೆ ಅವನು ಒಳ್ಳೆಯ ರೀತಿಯಿಂದ ಬುದ್ಧಿ ಕಲಿಸಿದನು. ಮೌಲ್ವಿಗಳ ಹಾಗೂ ತಂದೆ ತಾಯಿಯ ಒತ್ತಡದಿಂದಲೂ ಧರ್ಮಾಂತರನಾಗದೇ ಸ್ವಧರ್ಮಕ್ಕಾಗಿ ಬಲಿದಾನವನ್ನು ಮಾಡಿದನು.

ಒಂದು ದಿನ ಯವನ (ಮುಸಲ್ಮಾನ) ಹುಡುಗರು ಹಕಿಕತರಾಯನಿಗೆ ಕೆಟ್ಟದಾಗಿ ಬೈದರು. ಇಷ್ಟು ಹುಡುಗರೊಂದಿಗೆ ಎರಡು ಕೈ ಮಾಡುವುದು ಸಾಧ್ಯವಿಲ್ಲವೆಂದು ಅರಿವಾಗಿ ಅವನು ಸುಮ್ಮನೆ ಉಳಿದನು. ಆಗ ಹುಡುಗರು ಮತ್ತಷ್ಟು ರೊಚ್ಚಿಗೆದ್ದರು. ಉನ್ಮತ್ತರಾದ ಹುಡುಗರು ಹಿಂದೂಗಳ ದೇವತೆಗಳ ಬಗ್ಗೆ ಕೆಟ್ಟದಾಗಿ ಹೇಳಲಾರಂಭಿಸಿದರು. ಹಕಿಕತರಾಯನು ಅವರಿಗೆ ಪ್ರತ್ಯುತ್ತರ ನೀಡಿದಾಗ ಅವರು ಮತ್ತಷ್ಟು ಸಿಟ್ಟಾದರು, ಹಕಿಕತರಾಯನಿಗೆ ತಮ್ಮ ಮೇಲೆ ಸಿಟ್ಟು ಬರಲಿ ಹಾಗೂ ಅವನು ಕೈ ಎತ್ತಿದಾಗ ಅವನನ್ನು ಒಳ್ಳೆಯ ರೀತಿಯಿಂದ ಥಳಿಸಬೇಕು ಎಂಬ ವಿಚಾರ ಮಾಡಿ ಉನ್ಮತ್ತ ಹುಡುಗರು ಹಿಂದೂಗಳ ದೇವತೆಗಳ ಬಗ್ಗೆ ಕೆಟ್ಟದಾಗಿ ನುಡಿಯಲಾರಂಭಿಸಿದರು. ವೀರ ಬಾಲಕನಿಗೆ ತನ್ನ ದೇವತೆ ಹಾಗೂ ಧರ್ಮದ ಬಗ್ಗೆ ಆದಂತಹ ಅಪಮಾನವನ್ನು ಸ್ವಲ್ಪವೂ ಸಹಿಸಲಾಗಲಿಲ್ಲ, ಅವನು ಸಿಟ್ಟಾಗಿಒಂದು ಶಬ್ಧವನ್ನು ಮುಂದೆ ಹೇಳಿದರೆ, ಜಾಗ್ರತೆ! ನಾನು ನನ್ನ ಅಪಮಾನವನ್ನು ಒಂದುವೇಳೆ ಸಹಿಸಿಕೊಂಡೇನು, ಆದರೆ ನನ್ನ ಧರ್ಮ ಹಾಗೂ ನನ್ನ ಪ್ರಿಯ ದೇವತೆಗಳ ಬಗ್ಗೆ ಕೆಟ್ಟದಾಗಿ ಹೇಳಿದಿರೋ ಅದನ್ನು ನಾನು ಸಹಿಸುವುದಿಲ್ಲ. ದೇವರು ನನಗೂ ಬಾಯಿಯನ್ನು ನೀಡಿದ್ದಾರೆ. ನಾನೂ ನಿಮ್ಮ ಬಗ್ಗೆ ಬಾಯಿಗೆ ಬಂದಂತೆ ಮಾತಾನಾಡಬಹುದು". ಆಗ ಉದ್ಧಟ ಮಕ್ಕಳು ಮತ್ತಷ್ಟು ಹೆಚ್ಚು ಸಿಟ್ಟಾದರು ಹಾಗೂಅರೇ ನಮ್ಮ ವಿರುದ್ಧ ಮಾತಾನಾಡಿ ತೋರಿಸು ನಂತರ ನಾವು ನಿನ್ನನ್ನು ಏನು ಮಾಡುತ್ತೇವೆ ನೋಡು!" ಎಂದು ಹೇಳಿದರು. ಆಗ ಹಕಿಕತರಾಯನು ಕೂಡ ಅವರಿಗೆ ಕೆಲವು ಕಹಿ ವಾಕ್ಯಗಳನ್ನು ಹೇಳಿದನು.

ಆಗ ಯವನ ಹುಡುಗನು ಇದನ್ನು ಬಂಡವಾಳ ಮಾಡಿಕೊಂಡನು ಹಾಗೂ ಮುಲ್ಲಾ ಮೌಲ್ವಿಯ ಕಡೆಗೆ ಹಕಿಕತರಾಯನ ಬಗ್ಗೆ ತಕರಾರನ್ನು ಮಾಡಿದನು. ಅವನು ಹೇಳಿದ ವೃತ್ತಾಂತವನ್ನು ಕೇಳಿ ಮುಲ್ಲಾ ಮೌಲ್ವಿಗಳ ಪಿತ್ತವು ನೆತ್ತಿಗೇರಿತು. ಇವನು ಇಸ್ಲಾಮಿನ ವಿರೋಧಕನಾಗಿದ್ದಾನೆ ಎಂದು ತಕರಾರನ್ನು ಮಾಡಿ ಅವರು ಸಣ್ಣ ಹುಡುಗನನ್ನು ಕಾರಾಗೃಹಕ್ಕೆ ತಳ್ಳಿದರು.

ಕೆಲವು ದಿವಸಗಳ ನಂತರ ಮೊಘಲ ಶಾಸಕನಿಂದ ಹಕಿಕತರಾಯನ ಹೆಸರಿನಲ್ಲಿ ಒಂದು ಆಜ್ಞೆಯನ್ನು ಜಾರಿಗೊಳಿಸಿದರು ಅದರಲ್ಲಿನೀವು ಮುಸಲ್ಮಾನರಾದರೆ, ನಿಮ್ಮನ್ನು ಕ್ಷಮಿಸಲಾಗುವುದು, ಇಲ್ಲದಿದ್ದರೆ ಮರಣವನ್ನಪ್ಪಲು ತಯಾರಾಗಿರು" ಎಂದು ಅದರಲ್ಲಿ ಬರೆಯಲಾಗಿತ್ತು. ಅದನ್ನು ಕೇಳಿ ಹಕಿಕತರಾಯನ ಮಾತಾಪಿತರಿಗೆ ಕಾಲ ಕೆಳಗಿನ ನೆಲವೇ ಸರಿಯಿತು. ಅವರು ಅವನನ್ನು ಭೇಟಿಯಾದರು ಹಾಗೂಮಗನೇ ನೀನು ಮುಸಲ್ಮಾನನಾಗು ನೀನು ಜೀವಂತವಾಗಿ ಉಳಿದರೆ ಜೀವಿಸುವುದಕ್ಕೆ ಏನಾದರೂ ಅರ್ಥ ಉಳಿಯಬಹುದು". ಎಂದು ಹೇಳಿದರು. ಆಗ ಹಕಿಕತರಾಯನುನಾನು ಮುಸಲ್ಮಾನನಾದರೂ ಇಂದಲ್ಲ ನಾಳೆ ಸಾಯುವೆನು, ನಮ್ಮ ಧರ್ಮದಲ್ಲಿ ಉಳಿದೇ ಮರಣವನ್ನು ಸ್ವೀಕರಿಸಿದರೆ ಏನು ಕೆಟ್ಟದಾಗುವುದು? ನನಗೆ ಏನಾಗುವುದೋ ಅದು ಆಗಲಿ, ಆದರೆ ಜೀವಂತವಿರುವವರೆಗೆ ನಾನು ಇನ್ನೊಬ್ಬರ ಧರ್ಮವನ್ನು ಸ್ವೀಕರಿಸಲಾರೆನು" ಎಂದು ಹೇಳಿದನು. ಹಕಿಕತರಾಯನ ನಿರ್ಧಾರದಿಂದ ತಂದೆ ತಾಯಿ ಹತಾಶರಾದರು. ಸೆರೆಮನೆಯ ಮುಸಲ್ಮಾನ ಅಧಿಕಾರಿಗಳು ಅವನನ್ನು ಹಾಲಾಹಲ ಮಾಡಿ ಸಾಯಿಸುವ ಬೆದರಿಕೆಯನ್ನು ಹಾಕಿದರು ಆದರೆ ಅವನ ದೃಢ ನಿಶ್ಚಯದ ಎದುರು ಏನೂ ನಡೆಯಲಿಲ್ಲ.

ಕೊನೆಗೆ ಮೊಘಲ ಶಾಸಕನು ಅವನಿಗೆ ಅನೇಕ ಪ್ರಲೋಭನೆಯನ್ನು ತೋರಿಸಿ ಅವನ ಮನಸ್ಸನ್ನು ತಿರುಗಿಸುವ ಪ್ರಯತ್ನವನ್ನು ಮಾಡಿದನು, ಆದರೆ ಅದು ನಿಷ್ಫಲವಾಯಿತು. ಆಗ ಅವನ ಶಿರಚ್ಛೇದವನ್ನು ಮಾಡಲು ಆದೇಶವನ್ನು ನೀಡಲಾಯಿತು. ಮೃತ್ಯುವಿನ ಸಮಯದಲ್ಲಿ ಜಲ್ಲಾದನ ಕೈಯಲ್ಲಿನ ಹೊಳೆಯುವ ತಲವಾರನ್ನು ನೋಡಿ ಹಕಿಕತನು ವಿಚಲಿತನಾಗಲಿಲ್ಲ. ಕ್ರೂರ ಕಾಝೀಯು ಜಲ್ಲದಾನಿಗೆ ತಲವಾರನ್ನು ಚಲಾಯಿಸುವ ಆದೇಶವನ್ನು ಮಾಡಿದನು, ಆಗ ನಿರಾಗಸ, ನಿರ್ದೋಷ ಬಾಲಕನನ್ನು ನೋಡಿ ಅವನ ಧೈರ್ಯಗುಂದಿತು.

ಅವನ ನಡುಗುವ ಕೈಯಿಂದ ಅವನ ತಲವಾರು ಕೆಳಗೆ ಬಿದ್ದಿತು. ಆಗ ಸಿಟ್ಟಾದ ಕಾಝೀಯು ಅವನ ಕಿವಿ ಊದಿದನು. ಆಗ ಹಕಿಕತರಾಯನು ತಲವಾರನ್ನು ಸ್ವತಃ ಜಲ್ಲಾದನ ಕೈಯಲ್ಲಿ ಕೊಟ್ಟನು ಹಾಗೂ ದೇವರ ಚಿಂತನೆಯನ್ನು ಮಾಡಲಾರಂಭಿಸಿದನು. ಮತ್ತೊಂದು ಕ್ಷಣದಲ್ಲಿಯೇ ಜಲ್ಲಾದನ ಹೊಡೆತದಿಂದ ಹಕಿಕತರಾಯನ ತಲೆಯು ಶರೀರದಿಂದ ಬೇರೆಯಾಯಿತು.

ರೀತಿ ಓರ್ವ ಬಾಲವೀರನು ಧರ್ಮಕ್ಕಾಗಿ ಬಲಿದಾನವನ್ನು ನೀಡಿದನುಸ್ವಧರ್ಮೇ ನಿಧನಂ ಶ್ರೇಯಃ ವಚನವನ್ನು ಪಾಲಿಸಿದನು. ಬಲಿದಾನದಿಂದ ಹಕಿಕತರಾಯನ ಹೆಸರು ಇತಿಹಾಸದಲ್ಲಿ ಅಜರಾಮರವಾಯಿತು’.
(
ಜಯ ಹನುಮಾನ, ೧೪..೨೦೧೦)

Leave a Comment